Wednesday, 11th December 2024

ಎಲ್ಲರ ಕಾನೂನುಗಳ ತಾಯಿ ಸಂವಿಧಾನವನ್ನು ಓದಿ : ಹೈಕೋರ್ಟ್ ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್

ಹರಪನಹಳ್ಳಿ: ಎಲ್ಲರ ಕಾನೂನುಗಳ ತಾಯಿ ಸಂವಿಧಾನವನ್ನು ದೇಶದ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಹಾಗೂ ದೇಶದ ಸಾರ್ವಜನಿಕರು ಡಾ|| ಬಿ.ಆರ್.ಅಂಬೇಡ್ಕರ್ ರವರು ಬರೆದಂತಹ ಸಂವಿಧಾನವನ್ನು ಓದಿದಾಗ ಮಾತ್ರ ವಕೀಲರ ವೃತ್ತಿಗೆ ಸಾರ್ಥಕವಾಗುತ್ತದೆ. ಎಂದು ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಹೆಚ್. ಎನ್. ನಾಗಮೋಹನ್ ದಾಸ್ ಹೇಳಿದರು

ಪಟ್ಟಣದ ವಕೀಲರ ಸಂಘದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಾಮೂರ್ತಿಗಳಿಗಳಾದ ಹೆಚ್.ಎನ್ ನಾಗಮೋಹನ್ ದಾಸ್ ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ವಕೀಲರನ್ನು ಉದ್ದೇಶಿಸಿ ಮಾತನಾಡಿದ ವರು ನಮ್ಮನಿಮ್ಮರ ಕಾನೂನುಗಳ ತಾಯಿ ಸಂವಿಧಾನ ವನ್ನು ಓದಿ ಅರ್ಥಮಾಡಿಕೊಂಡು ಸಮಾಜವನ್ನು ತಿದ್ದುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ವಿಶ್ಲೇಷಿಸಿದರು.

ನ್ಯಾಯಾಲಯದಲ್ಲಿ ವಕೀಲರುಗಳ ಮತ್ತು ನ್ಯಾಯಾಧೀಶರುಗಳ ನಡುವಿನ ಸಂಬ೦ಧ ಪರಸ್ಪರ ಪ್ರೀತಿ ವಿಶ್ವಾಸದ ನಂಬಿಕೆಯ೦ತಿರಬೇಕು ವಕೀಲರು ಗಳು ನ್ಯಾಯಾಧೀಶರುಗಳ ಮೇಲೆ ನಂಬಿಕೆ ಇರಬೇಕು ನ್ಯಾಯಾಧೀಶರು ವಕೀಲರುಗಳ ಮೇಲೆ ಆತ್ಮವಿಶ್ವಾಸ ಇರಬೇಕು ಆಗ ಮಾತ್ರ ಅಜ್ಞಾನದಲ್ಲಿರುವ ಸಾರ್ವಜನಿಕ ಕಕ್ಷಿದಾರರಿಗೆ ನ್ಯಾಯ ದೊಕುವಂತಾಗುತ್ತದೆ. ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಮಾತನಾಡಿ ಸಮಾಜದಲ್ಲಿ ಕಾನೂನು ತಿಳುವಳಿಕೆ ಇಲ್ಲದೇ ಇರುವ ಸಾರ್ವಜನಿಕರಿಗೆ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅರಿವು ಮೂಡಿಸುವಂತಹ ಕಾರ್ಯವನ್ನು ನಾವು ನೀವು ಎಲ್ಲಾರೂ ಕೂಡಿ ಜಾಗೃತಿ ಮೂಡಿಸಬೇಕಾಗಿದೆ. ನಮಗೆ ಸ್ವಾತಂತ್ರö್ಯವಾಗಿ ಮಾತನಾಡುವ ಹಕ್ಕನ್ನು ನೀಡಿದ ಮಹಾನೀಯರನ್ನು ನಾವು ನೆನೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ, ವಕೀಲರ ಸಂಘದ ಅಧ್ಯಕ್ಷರಾದ ಕೆ. ಜಗಪ್ಪ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಜಂಟಿ ಕಾರ್ಯದರ್ಶಿ ಎಂ.ನಾಗೇ೦ದ್ರಪ್ಪ, ಖಂಜಾಚಿ ಹುಲಿಯಪ್ಪ, ಹಿರಿಯ ವಕೀಲರಾದ ಬಿ. ಕೃಷ್ಣಮೂರ್ತಿ, ಗಂಗಾಧರ ಗುರುಮಠ್, ಬಿ.ರೇವನಗೌಡ, ಆರ್, ರಾಮನಗೌಡ್ರು, ಎಸ್.ಎಂ.ರುದ್ರಮನಿ, ಕೆ. ಬಸವರಾಜ್, ಪಿ. ಜಗದೀಶ್ ಗೌಡ್ರು, ಕೆ. ಚಂದ್ರಗೌಡ್ರು, ಟಿ. ವೆಂಕಟೇಶ್, ಟಿ.ಎಂ. ಮಂಜುನಾಥ್, ದ್ರಕ್ಷಯಣಮ್ಮ, ಜೆ.ಸೀಮಾ, ರೇಣುಖಾ ಮೇಟಿ, ಬಿ. ಗೋಣಿಬಸಪ್ಪ, ಬಿ.ವಿ. ಬಸವನಗೌಡ, ಎಂ. ಮೃತಂಜಯ್ಯ, ಕೆ. ಪ್ರಕಾಶ್, ಮಂಜುನಾಥ್, ಕೆ.ಎಸ್.ಮಂಜ್ಯಾನಾಯ್ಕ, ಕೆ.ನಾಗರಾಜ್, ಬಿ. ಹಾಲೇಶ್ ಕೆ.ಸುರೇಶ್, ಸಿ.ದೇವರಾಜ್,ವಾಮದೇವಾ , ಮತ್ತು ಇತರರು ಇದ್ದರು.