Saturday, 14th December 2024

ಬಿಜೆಪಿಯವರದು ಕುತಂತ್ರ ರಾಜಕಾರಣ: ಶಾಸಕ ಶಿವಾನಂದ ಪಾಟೀಲ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ: ಶಾಸಕರ ನೆತೃತ್ವದಲ್ಲಿ ಪ್ರತಿಭಟನೆ

ಬಸವನಬಾಗೇವಾಡಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿ ಮೇಲೆ ಮೊಟ್ಟೆ ಎಸಿದಿರುವ ಆರೋಪಿಗೆ ಕಠಿಣ ಶಿಕ್ಷ ನೀಡುವಂತೆ ಆಗ್ರಹಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಿ ತಹಶೀಲ್ದಾರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸಿದಿರುವ ಆರೋಪಿ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದರು ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತ ಎಂದು ಸುಳ್ಳು ಹೇಳುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ ಆದರೆ ಜನರ ಸಮಸ್ಯ ಕೇಳಲು ಕೊಡಗಿಗೆ ತೆರಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯುವ ಮೂಲಕ ಶಿಷ್ಟಾಚಾರವನ್ನು ಮುರಿದು ಅವಮಾನಿಸಿರುವದು ಖಂಡ ನೀಯ. ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಕಾರಿನ ಮೇಲೆ ಈ ರೀತಿಯಾದರೆ ಸಾಮನ್ಯ ಪ್ರಜೆಯ ಗತೀಯೆನು, ಇದೇ ರೀತಿಯಾಗಿ ಬಿಜೆಪಿ ಕಾರ್ಯಕರ್ತರ ಉದ್ಘಟತನ ಮುಂದು ವರೆದರೆ ಮುಂಭರುವ ದಿನದಲ್ಲಿ ಪ್ರದೇಶ ಕಾಂಗ್ರೇಸ್ ಸಮಿತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವದು. ಸೊಲಿನ ಭಯದಿಂದ ಬಿಜೆಪಿ ಇಂತಹ ಕೃತ್ಯವನ್ನು ಎಸುಗುತ್ತಿದೆ, ಮುಭರುವ ದಿನಗಳಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗೆಸ್ ಅಧ್ಯಕ್ಷ ಸುರೇಶ ಹಾರಿ ವಾಳ, ಕೊಲ್ಹಾರ ಬ್ಲಾಕ್ ಅಧ್ಯಕ್ಷ ರಫೀಕ ಪಕಾಲಿ, ಪುರಸಭೆ ಅಧ್ಯಕ್ಷೆ ರೇಖಾ ಬೆಕಿನಾಳ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೇವೇಂದ್ರ ಚವ್ಹಾಣ, ಶೇಕನಗೌಡ ಪಾಟೀಲ, ಸಂಗಮೇಶ ಒಲೇಕಾರ, ಬಸಣ್ಣ ದೇಸಾಯಿ, ರವಿ ರಾಠೋಡ, ಶೇಖರ ಗೊಳಸಂಗಿ, ಮುದಕು ಬಸರಕೋಡ, ಸಂಗಮೇಶ ವಾಡೇದ, ಸುರೇಶಗೌಡ ಪಾಟೀಲ, ಪ್ರವೀಣ ಪೂಜಾರಿ, ರವಿ ನಾಯ್ಕೊಡಿ, ರಾಜು ಲಮಾಣಿ, ಲೋಕನಾಥ ಅಗರವಾಲ, ಅಶೋಕ ಚಲವಾದಿ, ಪರಶುರಾಮ ಜಮಖಂಡಿ, ಕಲ್ಲು ಸೊನ್ನದ, ಉದಯ ಮಾಂಗೇಲೆಕ, ಅಜೀಜ ಭಾಗವಾನ, ಸೇರಿದಂತೆ ಮುಂತಾದವರು ಇದ್ದರು.