Saturday, 14th December 2024

ಭಾರತದ ಹವಾಮಾನ ಮಹಿಳೆ ಅನ್ನಾ ಮಣಿಗೆ ಡೂಡಲ್ ಗೌರವ

ನವದೆಹಲಿ: ಹವಾಮಾನ ಉಪಕರಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿರುವ ಭಾರತೀಯ ಭೌತಶಾಸ್ತ್ರಜ್ಞ ಮತ್ತು ಹವಾಮಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ʻಅನ್ನಾ ಮಣಿʼ ಅವರ 140ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗೂಗಲ್ ವಿಶೇಷ ಡೂಡಲ್  ಅನ್ನು ಸಮರ್ಪಿಸಿದೆ.

1918 ರಲ್ಲಿ ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಅಣ್ಣಾ ಮಣಿ ಅವರು ಭೌತಶಾಸ್ತ್ರ ಮತ್ತು ಹವಾಮಾನ ಕ್ಷೇತ್ರಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಆಕೆಯ ಸಂಶೋಧನೆಯು ಭಾರತಕ್ಕೆ ನಿಖರ ವಾದ ಹವಾಮಾನ ಮುನ್ಸೂಚನೆಗಳನ್ನು ಮಾಡಲು ಸಾಧ್ಯವಾಗಿಸಿತು ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಬಳಸಿ ಕೊಳ್ಳಲು ರಾಷ್ಟ್ರಕ್ಕೆ ಅಡಿಪಾಯ ಹಾಕಿತು.

‘ಭಾರತದ ಹವಾಮಾನ ಮಹಿಳೆ’ ಎಂದೂ ಕರೆಯಲ್ಪಡುವ ಅನ್ನಾ ಮಣಿ ಅವರು ಕುಟುಂಬದ ಎಂಟು ಮಕ್ಕಳಲ್ಲಿ ಏಳನೆಯವ ರಾಗಿದ್ದರು. ಅವರು ಭೌತಶಾಸ್ತ್ರಜ್ಞ ಮತ್ತು ಪ್ರೊಫೆಸರ್ ಸಿ ವಿ ರಾಮನ್ ಅವರ ಅಡಿಯಲ್ಲಿ ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್ ಗುಣಲಕ್ಷಣಗಳನ್ನು ಸಂಶೋಧಿಸಿದರು. 1939 ರಲ್ಲಿ ಚೆನ್ನೈನ ಪಿ ಪಚ್ಚೈಯಪ್ಪಸ್ ಕಾಲೇಜಿನಿಂದ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರದಲ್ಲಿ ಬಿಎಸ್ಸಿ ಆನರ್ಸ್ ಪದವಿ ಪಡೆದ ಅವರು ಐದು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು.

ಅನ್ನಾ ಮಣಿ ತನ್ನ ಜೀವನದಲ್ಲಿ ಗಾಂಧಿ ಮೌಲ್ಯಗಳನ್ನು ಅನುಸರಿಸಿದರು ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರು 16ನೇ ಆಗಸ್ಟ್ 2001 ರಂದು ತಿರುವನಂತಪುರದಲ್ಲಿ ನಿಧನರಾದರು.