ಇಂಡಿ: ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟೀಷರಿಂದ ಕ್ರೂರ ಶಿಕ್ಷೆ ಅನುಭವಿಸಿದ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ವೀರಸಾರ್ವಕರ ಒಬ್ಬರು. ಕಾಲಫಾಣಿ ಶಿಕ್ಷೆ ಅನುಭವಿಸಿದ ಸ್ವಾತಂತ್ರ‍್ಯ ಸೇನಾನಿ ವೀರ ಸಾರ್ವಕರ ಅವರು ಹಾಗೂ ಅವರ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಅನನ್ಯ.
ಹೀಗಾಗಿ ಬರುವ ಗಣೇಶ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ವೀರ ಸಾರ್ವಕರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಬೇಕು. ಸರ್ಕಾರ ವೀರ ಸಾರ್ವಕರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಇಂಡಿ ವಿಧಾನಸಭೆ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ದಯಾಸಾಗರ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಾಂಗ್ರೆಸ್ ಪಕ್ಷ ಜನರು,ಧರ್ಮದ ಮಧ್ಯ ವಿಷಬೀಜ ಬಿತ್ತಿ ಜಗಳ ಹಚ್ಚುವ ಕೆಲಸ ದೇಶದಲ್ಲಿ ಮಾಡುತ್ತಿದೆ ಎಂದು ಆರೋಪಿಸಿದ ಅವರು,ವೀರ ಸಾರ್ವಕರ ಭಾವಚಿತ್ರ ಮುಸ್ಲೀಮ ಪ್ರದೇಶದಲ್ಲಿ ಏಕೆ ಹಚ್ಚಬೇಕು ಎಂದು ಸಮರ್ಥಿಸಿಕೊಂಡ ಸಿದ್ದರಾಮಯ್ಯನವರ ನೀತಿ ಖಂಡನೀಯ. ಸ್ವಾತಂತ್ರ‍್ಯ ಸೇನಾನಿ ವೀರ ಸಾರ್ವಕರ ಅವರಿಗೆ ಕಾಂಗ್ರೆಸ್ ಅವಮಾನಿ ಸುತ್ತಿದೆ ಎಂದು ಆರೋಪಿಸಿದರು.
ಜವಾಹರಲಾಲ ನೆಹರು ಅವರ ಭಾವಚಿತ್ರವನ್ನು ಹಾಕಿರಿವುದಿಲ್ಲ ಎಂದು ತಗಾದೆ ತಗೆಯು ತ್ತಿರುವ ಕಾಂಗ್ರೆಸ್ಸಿನವರು, ಸ್ವಾತಂತ್ರ‍್ಯ ಸೇನಾನಿಗೆ ಅಗೌರವ ತೋರಿಸುತ್ತಿರುವುದು ಸರಿಯಾ ಗಿದೆಯೇ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರ‍್ಯದ ನಂತರ ಕಾಂಗ್ರೆಸ್ಸಿನವರು ಸ್ವಾತಂತ್ರ‍್ಯ ಸೇನಾನಿಗಳನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಿರುವುದಿಲ್ಲ.ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಕ್ಕೆ ಹೋಗುವುದು ಒಂದು ಪದ್ದತಿ ಇದೆ.
ಮಾಂಸ ತಿ೦ದು ದೇವಾಲಯಕ್ಕೆ ಹೋಗುವುದು ಹಿಂದೂ ಸಂಸ್ಕೃತಿ ಅಲ್ಲ .ಹಿಂದೂ ಧರ್ಮ ಹಾಗೂ ರಾಷ್ಟ್ರಕ್ಕೆ ತ್ಯಾಗ ಮಾಡಿ ದವರ ಬಗ್ಗೆ ಅಸಡ್ಡೆ ಭಾವನೆ ತೋರುತ್ತಿರುವುದು ಖಂಡನೀಯ.ದೇಶದ್ರೋಹ ಕೆಲಸ ಮಾಡುವವರನ್ನು ಕುಮ್ಮಕ್ಕು ನೀಡುತ್ತಿರು ವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿನವರು ಸ್ವಾರ್ಥಕ್ಕಾಗಿ ದೇಶ,ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ.ಹಿಂದಿನ ಚುನಾವಣೆ ಪೂರ್ವದಲ್ಲಿ ಹಿಂದೂ ಧರ್ಮವನ್ನು ಒಡೆದು ಲಿಂಗಾಯತ ಧರ್ಮ ಮಾಡಲು ಹೋಗಿ ಜನರಿಂದ ತಕ್ಕ ಪಾಠಕಲಿತ್ತಿದ್ದು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಸೋಮಶೇಖರ ದೇವರ,ವಿಜು ಮೂರಮನ, ಶ್ರೀಶೈಲಗೌಡ ಬಿರಾದಾರ,ಭೀಮಸಿಂಗ ರಾಠೋಡ,ಜಟ್ಟೆಪ್ಪ ಮರಡಿ,ಸಾಹೇಬಗೌಡ ಇಂಡಿ,ಮಲ್ಲನಗೌಡ ಬಿರಾದಾರ,ಮಲ್ಲು ಚಾಕುಂಡಿ,ನಾಗೇಶ ಶಿಂಧೆ,ಕುಮಾರ ರಾಠೋಡ,ರಮೇಶ ಧರೆನವರ,ಪ್ರಕಾಶ ಮಲಘಾಣ,ಶಂಕರಗೌಡ ಬಂಡಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.