ಬೆಂಗಳೂರು: ಮಹಾರಾಜ ಟ್ರೋಫಿಯು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಗುರುವಾರ ಮೈಸೂರು ವಾರಿಯರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ನಡುವಿನ ಎರಡನೇ ಕ್ವಾಲಿಫಯರ್ ಪಂದ್ಯ ಹಾಗೂ ಆ.27ರಂದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಎರಡನೇ ಕ್ವಾಲಿಫಯರ್ ಗೆಲ್ಲುವ ತಂಡದ ನಡುವೆ ಫೈನಲ್ ಪಂದ್ಯ ಜರುಗಲಿದೆ.
ಆ.7ರಂದು ಆರಂಭವಾಗಿದ್ದ ಮಹಾರಾಜ ಟ್ರೋಫಿ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದ್ದು, ಇದಕ್ಕೂ ಮುನ್ನ ಮಹಿಳಾ ಮಹರಾಜ ಟ್ರೋಫಿ ಟಿ ಟ್ವೆಂಟಿ ಲೀಗ್ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ತೀರ್ಮಾನಿಸಿದೆ.
ಹುಬ್ಬಳ್ಳಿ ಟೈಗರ್ಸ್ ವುಮೆನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ವುಮೆನ್ಸ್ ತಂಡಗಳು ಒಟ್ಟು ಎರಡು ಪಂದ್ಯಗಳಲ್ಲಿ ಸೆಣಸಾಡ ಲಿದ್ದು ಪ್ರಥಮ ಪಂದ್ಯ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ.
ಇನ್ನು ಹುಬ್ಬಳ್ಳಿ ಟೈಗರ್ಸ್ ವನಿತೆಯರ ತಂಡವನ್ನು ಮೋನಿಕಾ ಪಟೇಲ್ ನಾಯಕಿಯಾಗಿ ಮುನ್ನಡೆಸಿದರೆ, ಬೆಂಗಳೂರು ಬ್ಲಾಸ್ಟರ್ಸ್ ವನಿತೆಯರ ತಂಡವನ್ನು ವೇದಾ ಕೃಷ್ಣ ಮೂರ್ತಿ ನಾಯಕಿಯಾಗಿ ಮುನ್ನಡೆಸಲಿದ್ದಾರೆ.
ಬೆಂಗಳೂರು ಬ್ಲಾಸ್ಟರ್ಸ್ ವನಿತೆಯರ ತಂಡ: ಶುಭಾ ಸತೀಶ್, ಕೃಷಿಕಾ ರೆಡ್ಡಿ, ಶಿಶಿರಾ ಗೌಡ, ವೇದಾ ಕೃಷ್ಣಮೂರ್ತಿ, ಅನಘಾ ಮುರಳಿ, ಸವಿ ಸುರೇಂದ್ರ, ಶ್ರೇಯಾಂಕಾ ಪಾಟೀಲ್, ಪ್ರೇರಣಾ ರಾಜೇಶ್, ಪ್ರತ್ಯೂಷಾ ಕುಮಾರ್, ಸೌಮ್ಯ ವರ್ಮಾ, ಹರ್ಷಿತಾ ಶೇಖರ್, ಮೋನಿಕಾ ಪಟೇಲ್, ರಾಮೇಶ್ವರಿ ಗಾಯಕ್ವಾಡ್, ರೀಮಾ ಫರೀದ್ ಮತ್ತು ರೋಹಿತಾ ಚೌದ್ರಿ.
ಹುಬ್ಬಳ್ಳಿ ಟೈಗರ್ಸ್ ವನಿತೆಯರ ತಂಡ: ಸಲೋನಿ ಪಿ, ದಿವ್ಯಾ ಜ್ಞಾನಾನಂದ, ಶ್ಲೋಕಾ ಕಿಶೋರ್ ಬಾಬು, ವೃಂದಾ ದಿನೇಶ್, ಮಿಥಿಲಾ ವಿನೋದ್, ಪೂಜಾ ಧನಂಜಯ್, ಪೂಜಾ ಕುಮಾರಿ, ರಕ್ಷಿತಾ ಕೃಷ್ಣಪ್ಪ, ಸಂಜನಾ ಬಟ್ನಿ, ತಿಮ್ಮಯ್ಯ ನೇತ್ರಾವತಿ, ಅದಿತಿ ರಾಜೇಶ್, ಚಂದು ವೆಂಕಟೇಶಪ್ಪ, ನಿರ್ಮಿತಾ, ಮತ್ತು ಸಹನಾ ಪವಾರ್, ಸೌಮ್ಯ ಎಂ ಮಂಜುನಾಥ್.
ಆಗಸ್ಟ್ 25, ಗುರುವಾರ
ಬೆಂಗಳೂರು ಬ್ಲಾಸ್ಟರ್ಸ್ ಮಹಿಳಾ vs ಹುಬ್ಬಳ್ಳಿ ಟೈಗರ್ಸ್ ಮಹಿಳೆಯರು, ಮಧ್ಯಾಹ್ನ 2.00
ಆಗಸ್ಟ್ 26, ಶುಕ್ರವಾರ
ಬೆಂಗಳೂರು ಬ್ಲಾಸ್ಟರ್ಸ್ ಮಹಿಳಾ vs ಹುಬ್ಬಳ್ಳಿ ಟೈಗರ್ಸ್ ಮಹಿಳೆಯರು, ಮಧ್ಯಾಹ್ನ 2.00
ವನಿತೆಯರ ತಂಡಗಳ ನಡುವಿನ ಪ್ರಥಮ ಪಂದ್ಯ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಈ ಪಂದ್ಯ ಮುಕ್ತಾಯವಾದ ನಂತರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಹಾಗೂ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟು ಭಾನುವಾರ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸೆಣಸಾಟ ನಡೆಸಿದರೆ, ಸೋಲುವ ತಂಡ ಟೂರ್ನಿಯಿಂದ ಹೊರ ಬೀಳಲಿದೆ.