ಪರಿಶ್ರಮ
parishramamd@gmail.com
ಈ ಸಿನಿಮಾ ಗೆಲ್ಲಬೇಕು, ಕಾರಣ ಕರ್ನಾಟಕದ ಸಾಮಾನ್ಯ ಕುಟುಂಬದ ಹುಡುಗಿ ಗೆದ್ದ ಕಥೆಯಿದು. ಆಕೆಯ ಪ್ರಾಮಾಣಿಕತೆ ಗೆದ್ದಿದೆ, ಆಕೆಯ ಪ್ರಯತ್ನ ಗೆದ್ದಿದೆ, ಕನ್ನಡಿಗರ ಪ್ರೀತಿ ಗೆದ್ದಿದೆ. ಈ ಸಿನಿಮಾ ಗೆಲ್ಲಲೇಬೇಕು, ಕಾರಣ ಛಲ ತುಂಬಿದ ನವಯು ವಕರು ಪ್ರಯತ್ನ ಪಟ್ಟು ನಿರ್ದೇಶಿಸಿರುವ ಈ ಸಿನಿಮಾವನ್ನು ಹೃದಯವಂತ ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆ ನಮ್ಮದು.
ತನುಜಾ ಚಲನಚಿತ್ರದ ಪ್ರಮೋಷನ್ ಪೋಸ್ಟರ್ ಮೊನ್ನೆ ಶುಕ್ರವಾರ, ಆಗಸ್ಟ್ 26ರಂದು ಸಂಜೆ ಬೆಂಗಳೂರಿನಲ್ಲಿ ಬಿಡುಗಡೆ ಯಾಗಿದೆ. ಅದ್ಭುತವಾಗಿ ಮೂಡಿ ಬಂದಿದೆ. ಕರ್ನಾಟಕದ ಜನತೆಯಿಂದ ಪ್ರಶಂಸೆಗಳ ಸುರಿಮಳೆ.
ಬಡಕುಟುಂಬದ ಹುಡುಗಿ ವೈದ್ಯಳಾದ ರೋಚಕ ಕಥೆ ಇದು. ಸಾಮಾನ್ಯ ವರ್ಗದ ಅಪೂರ್ವ ಕನಸುಳ್ಳ ಹುಡುಗಿ ಮಾನವೀಯತೆಯುಳ್ಳ ಮನುಷ್ಯರ ಸಹಕಾರದಿಂದ ಪರೀಕ್ಷೆ ಬರೆದು ವೈದ್ಯಳಾದ ಕಥೆ ಇದು.
ತನುಜಾ ಅವರ ತಾಯಿ ಅಂದು ರಾತ್ರಿ 9.30ರ ಸುಮಾರಿಗೆ ನನಗೆ ಕರೆ ಮಾಡಿ, ‘ತನುಜಾ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಕೈ ತಪ್ಪಿಸಿಕೊಂಡಿದ್ದಾಳೆ. ಈಗ ಏನು ಮಾಡಬೇಕೋ ದಿಕ್ಕು ತೋಚುತ್ತಿಲ್ಲ ಸರ್, ತಾವು ಸಹಾಯ ಮಾಡಿ’ ಎಂದು ವಿನಂತಿಸಿದರು. ಆ ತಕ್ಷಣ ನನಗೂ ಏನೂ ತೋಚಲಿಲ್ಲ. ಆಗ ನನಗೆ ಹೊಳೆದಿದ್ದು ಒಂದೇ ಹೆಸರು ಶ್ರೀಯುತ ವಿಶ್ವೇಶ್ವರ ಭಟ್ಟರು. ನಾನು ತುಂಬಾ ಗೌರಸುವ ಮತ್ತು ಆರಾಧಿಸುವ ವ್ಯಕ್ತಿ ಅವರು. ಆ ಕೂಡಲೇ ಅವರಿಗೆ ಕರೆ ಮಾಡಿದೆ. ಆಗ ಅವರು ಅರ್ನಬ್ ಗೋಸ್ವಾಮಿ ಅವರ ಟಾಕ್‌ಶೋ (Talk show)ನಲ್ಲಿ ಪಾಲ್ಗೊಂಡಿ ದ್ದರು.
ಅದು ಮುಗಿದ ನಂತರ ನನಗೆ ಕಾಲ್ ಬ್ಯಾಕ್ ಮಾಡಿ ‘ಏನ್ ಪ್ರದೀಪ್’ ಎಂದು ಕೇಳಿದಾಗ, ನಾನು ಈ ಘಟನೆಯನ್ನು ವಿವರಿಸಿದೆ. ‘ಸರ್ ಹೇಗಾದರೂ ಮಾಡಿ ಮಾನ್ಯ ಮುಖ್ಯಮಂತ್ರಿಗಳ ಹಾಗೂ ಮಾನ್ಯ ಸಚಿವರ ಗಮನಕ್ಕೆ ತೆಗೆದುಕೊಂಡು ಬನ್ನಿ. ಈಗ ಕೇವಲ ಕೇಂದ್ರ ಸರಕಾರ ಮನಸ್ಸು ಮಾಡಿದರೆ ಮಾತ್ರ ಆ ಮಗು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯಬಹುದು’ ಎಂದು ಗೋಗರೆದೆ.
ಇದಕ್ಕೆ ಒಪ್ಪಿದ ವಿಶ್ವೇಶ್ವರ ಭಟ್ಟರು. ತಕ್ಷಣವೇ ಟ್ವೀಟ್ ಮಾಡಿದರು, ಜತೆಗೆ ‘ಮುಂಜಾನೆ ಕರೆ ಮಾಡುತ್ತೇನೆ’ ಎಂದು ಹೇಳಿದರು. ಒಮ್ಮೆ ನಾನು ಮರೆತರೂ ಮರುದಿನ ಮುಂಜಾನೆ ಕರೆ ಮಾಡು ಎಂದು ಹೇಳಿದರು. ಮುಂಜಾನೆ ನಾನು ಕರೆ ಮಾಡಿದಾಗ ಆಗಲೇ ವಿಶ್ವೇಶ್ವರ ಭಟ್ಟರು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ವೈದ್ಯಕೀಯ ಸಚಿವರ ಗಮನಕ್ಕೆ ಈ ಸಂಗತಿಯನ್ನು ತಂದಾಗಿತ್ತು. ಕೇಂದ್ರ ಸರಕಾರದಿಂದ ಪರೀಕ್ಷೆ ಬರೆಯಲು ಒಪ್ಪಿಗೆಯೂ ಸಿಕ್ಕಿತ್ತು. ತನುಜಾ ಎಂಬ ವಿದ್ಯಾರ್ಥಿ ನಿಗೆ ವೈದ್ಯಳಾಗುವ ಎಲ್ಲ ಅವಕಾಶಗಳು ಪುನಃ ಲಭ್ಯವಾಗಿತ್ತು, ಆದರೆ ಆಗಿನ್ನೂ ತನುಜಾ ಶಿವಮೊಗ್ಗದ ಮಲ್ಲೇನಹಳ್ಳಿಯಲ್ಲೇ ಉಳಿದು ಬಿಟ್ಟಿದ್ದಳು.
ಆಗ ಮುಂಜಾನೆ 8.30 ರಿಂದ 9.00 ಘಂಟೆ ಆಗಿರಬಹುದು, ಶಿವಮೊಗ್ಗದಿಂದ ಬೆಂಗಳೂರನ್ನು ಮಧ್ಯಾಹ್ನ 1.30ರ ಒಳಗೆ ತಲುಪಬೇಕಿತ್ತು. ತನುಜಾ ಅವರ ಮನೆಯಲ್ಲಿ ಕಾರು ಬೇರೆ ಇರಲಿಲ್ಲ. ಬಡಕುಟುಂಬದ ಹುಡುಗಿ ಆಗ ಬಾಡಿಗೆ ಕಾರು ಮಾಡಿ ಕೊಂಡು ಅಲ್ಲಿಂದ ಹೊರಟು ಮಧ್ಯಾಹ್ನ 1.30ರ ಒಳಗೆ ಬೆಂಗಳೂರು ತಲುಪುವುದು ಬಹಳ ಕಷ್ಟವಿತ್ತು.
ಅದೊಂದು ಕಡೆ ಆತಂಕ, ಮತ್ತೊಂದು ಕಡೆ ಬಸವನಗುಡಿಯಲ್ಲಿರುವ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕೇಂದ್ರ ಸರಕಾರದಿಂದ ನಮಗೆ ಒಪ್ಪಿಗೆ ಸಿಕ್ಕಿದೆ, ಆದರೆ ರಾಜ್ಯ ಸರಕಾರದಿಂದ ಮುಖ್ಯಮಂತ್ರಿಯವರ ಪತ್ರವೂ ಬೇಕೆಂದರು. ಇದು ಸಾಧ್ಯವೇ! ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು, ಮತ್ತೆ ವಿಶ್ವೇಶ್ವರ ಭಟ್ಟರ ಗಮನಕ್ಕೆ ಈ ವಿಚಾರವನ್ನು ತಂದೆ. ‘ಸರ್ ಮುಖ್ಯಮಂತ್ರಿಗಳಿಂದ ಪತ್ರ ಬೇಕು ಎನ್ನುತ್ತಿದ್ದಾರೆ ಏನು ಮಾಡೋದು?’ ಎಂದೆ.
ಆಗ ಅವರು ‘ಸರಿ ಪ್ರದೀಪ್ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ, ನೀವು ಮುಖ್ಯಮಂತ್ರಿ ಕಚೇರಿಗೆ ಹೊರಡಿ’ ಎಂದು ನಿರ್ದೇಶಿಸಿದರು. ನಾನು ಸಿಎಂ ಆಫೀಸ್‌ಗೆ ತಲುಪಿದಾಗ, ಮುಖ್ಯಮಂತ್ರಿಗಳ ಶೇಷ ಅಧಿಕಾರಿ ಡಾ.ಕಾರ್ತಿಕ್ ಸ್ಪಂದಿ ಸಿದ ರೀತಿ ಅದ್ಭುತವಾದದ್ದು. ‘ಪ್ರದೀಪ್ At any cost ತನುಜಾ ಅವರು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯಬೇಕು
ಎಂದು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.
ಅದಕ್ಕೆ ಯಾವ ರೀತಿ ಸಹಾಯ ಬೇಕೋ ಮುಖ್ಯಮಂತ್ರಿಗಳ ಕಚೇರಿಯಿಂದ ನಾವು ಮಾಡಲು ಸಿದ್ಧ, ಏನು ಬೇಕು ಹೇಳಿ?’ ಎಂದರು. ನಾನು ಪ್ರಸ್ತುತ ಸ್ಥಿತಿಯನ್ನು ವಿವರಿಸಿ ಆಕೆಗೆ ಸಂಬಂಧಪಟ್ಟ ಎಲ್ಲ ದಾಖಲೆಯನ್ನು ನೀಡಿ ಮುಖ್ಯಮಂತ್ರಿಗಳಿಂದ ಒಂದು ಪತ್ರವನ್ನು ಪಡೆದು, ನಂತರ ಬಸವನಗುಡಿಯ ಪರೀಕ್ಷಾ ಕೇಂದ್ರದ ಕಡೆಗೆ ಹೊರಟೆ. ಇದೆಲ್ಲ ಖಂಡಿತ ಸಾಧ್ಯವಾಗುತ್ತೆ, ಪರೀಕ್ಷಾ ಕೇಂದ್ರಕ್ಕೆ ನಾನು ತಲುಪುತ್ತೇನೆ ಹಾಗಂದುಕೊಂಡೆ ಅಷ್ಟೆ.
ಅಷ್ಟರಲ್ಲಿ ತನುಜಾ ಇನ್ನೂ ಬೆಂಗಳೂರು ತಲುಪಿರಲಿಲ್ಲ, ಏನಾಗತ್ತೋ ಎಂಬ ಆತಂಕ. ಸಮಯಕ್ಕೆ ತಲುಪುತ್ತಾಳೋ ಇಲ್ಲವೋ ಎಂಬ ಪ್ರಶ್ನೆ. ತಲುಪಿದರೂ ಆತಂಕದಲ್ಲಿ ಪರೀಕ್ಷೆ ಹೇಗೆ ಬರೆಯುತ್ತಾಳೋ ಎಂಬ ಭಯ. ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ವಿಶ್ವೇಶ್ವರ ಭಟ್ಟರು, ಡಾ.ಕಾರ್ತಿಕ್ ರವರು, ಮುಂಜಾನೆಯಿಂದ ಆಕೆಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಸಲೇಬೇಕೆಂದು ಪಣ ತೊಟ್ಟಿದ್ದರು. ಇಷ್ಟರ ನಡುವೆ ತನುಜಾ ಸೋತು ಬಿಟ್ರೆ, ಇವರಿಗೆಲ್ಲ ನಾನು ಹೇಗೆ ಉತ್ತರಿಸೋದು ಎಂಬ ಪ್ರಶ್ನೆ.
ಕೊನೆಗೂ ಸಮಯಕ್ಕೆ ಸರಿಯಾಗಿ ತನುಜಾ ಪರೀಕ್ಷಾ ಕೇಂದ್ರಕ್ಕೆ ತಲುಪಿದಳು. ‘ತನುಜಾ All the Best’ ಎಂದು ಒಳಗೆ ಕಳುಹಿಸಿದೆ. ಆಕೆ ಪರೀಕ್ಷೆ ಬರೆದ 3 ತಾಸು ನನ್ನೊಳಗೇ ಒಂದು ಪ್ರಶ್ನೆ- ಈ ಆತಂಕದಲ್ಲಿ ಪರೀಕ್ಷೆ ಸರಿಯಾಗಿ ಬರೆಯುತ್ತಾಳೋ ಇಲ್ಲವೋ, ಈ ಒತ್ತಡದಲ್ಲಿ ಆಯ್ಕೆಗೆ ಬೇಕಾಗಿರುವಷ್ಟು ಅಂಕಗಳನ್ನು ಪಡೆಯುತ್ತಾಳೋ ಇಲ್ಲವೋ ಎಂಬುದು ಪದೇ ಪದೇ ಕಾಡುತ್ತಿತ್ತು.
ಆಕೆ ಪರೀಕ್ಷೆ ಮುಗಿಸಿಕೊಂಡು ಸಂಜೆ 5.00 ಘಂಟೆಗೆ ಕೇಂದ್ರದಿಂದ ಹೊರ ಬಂದಾಗ, ‘ತನುಜಾ, ಪರೀಕ್ಷೆ ಹೇಗೆ ಬರೆದೆ?’ ಎಂದಾಗ ‘ಡಾಕ್ಟರ್ ಆಗ್ತೀನಿ ಸರ್’ ಎಂಬ ಅವಳ ವಿಶ್ವಾಸದ ಮಾತು ಕೇಳಿದಾಗ ಭಾವುಕತೆಯಿಂದ ಕಣ್ಣಂಚಲ್ಲಿ ಕಣ್ಣೀರು ತುಂಬಿ ಬಂತು. ಈ ಭಾವನಾತ್ಮಕ ಘಟನೆಯನ್ನು ವಿಶ್ವೇಶ್ವರ ಭಟ್ಟರಿಗೆ ಕರೆ ಮಾಡಿ ತಿಳಿಸಿದೆ- ‘ಸರ್, ತನುಜಾ ವೈದ್ಯಾಳಾಗು ತ್ತಿದ್ದಾಳೆ’.
ನಂತರ -ಲಿತಾಂಶ ಬಂತು, -ಲಿತಾಂಶದಲ್ಲಿ ತನುಜಾಗೆ 586 ಅಂಕಗಳು ಲಭಿಸಿತ್ತು. ಈಗ ತನುಜಾ ಬೆಳಗಾವಿ ವೈದ್ಯಕೀಯ ಕಾಲೇಜಿನಲ್ಲಿ 2ನೇ ವರ್ಷದ MBBS ಓದುತ್ತಿದ್ದಾರೆ. ಕರ್ನಾಟಕದ ಬಡಕುಟುಂಬದ ಹುಡುಗಿಗೆ ಸಮಸ್ಯೆ ಎದುರಾದಾಗ ಸರಕಾರಗಳು ಸೂಕ್ತ ಸಮಯಕ್ಕೆ ಸ್ಪಂದಿಸಿದರೆ, ತನುಜಾಳಂತಹ ಅದೆಷ್ಟೋ ವಿದ್ಯಾರ್ಥಿಗಳು ವೈದ್ಯರಾಗುತ್ತಾರೆ. ಬಡಕುಟುಂಬದ ಹುಡುಗಿಯ ಬಾಳಿನಲ್ಲಿ ಬೆಳಕಾದ ಸರಕಾರಕ್ಕೆ, ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ, ಡಾ.ಕಾರ್ತಿಕ್ ರವರಿಗೆ
ಪದಗಳಲ್ಲಿ ಧನ್ಯವಾದಗಳು ಹೇಳಿದರೆ ಕಡಿಮೆ ಆಗುತ್ತೆ.
ಆಕೆಯ ಹೆಸರಿನಲ್ಲೇ ಬರುತ್ತಿರುವ ‘ತನುಜಾ’ ಚಲನಚಿತ್ರವನ್ನು ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಹರೀಶ್‌ರವರು ನಿರ್ದೇಶಿಸಿದ್ದಾರೆ. ಅವರ ಸ್ನೇಹಿ ತರೆಲ್ಲ ಸೇರಿ ಈ ಸಿನಿಮಾವನ್ನು ಗೆಲ್ಲಿಸಲೇಬೇಕೆಂಬ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ ತಪಸ್ಸಿನಂತೆ ಈ ಸಿನಿಮಾಗೋಸ್ಕರ ಕೆಲಸ ನಿರ್ವಹಿಸಿದ್ದಾರೆ. ಹಾಡುಗಳು ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಕರ್ನಾಟಕದ ಜನತೆ ಈ ಸಿನಿಮಾವನ್ನು ಖಚಿತವಾಗಿ ಕೈಡಿಯುತ್ತಾರೆ ಎಂಬ ಅಗಾಧ ನಂಬಿಕೆ ನನ್ನದು.
ಈ ಸಿನಿಮಾ ಗೆಲ್ಲಬೇಕು, ಕಾರಣ ಕರ್ನಾಟಕದ ಸಾಮಾನ್ಯ ಕುಟುಂಬದ ಹುಡುಗಿ ಗೆದ್ದ ಕಥೆಯಿದು. ಆಕೆಯ ಪ್ರಾಮಾಣಿಕತೆ
ಗೆದ್ದಿದೆ, ಆಕೆಯ ಪ್ರಯತ್ನ ಗೆದ್ದಿದೆ, ಕನ್ನಡಿಗರ ಪ್ರೀತಿ ಗೆದ್ದಿದೆ. ಈ ಸಿನಿಮಾ ಗೆಲ್ಲಲೇಬೇಕು, ಕಾರಣ ಛಲ ತುಂಬಿದ ನವಯು ವಕರು ಪ್ರಯತ್ನ ಪಟ್ಟು ನಿರ್ದೇಶಿಸಿರುವ ಈ ಸಿನಿಮಾವನ್ನು ಹೃದಯವಂತ ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆ
ನಮ್ಮದು.
ಮತ್ತೆ ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರಿಗೆ, ಸಚಿವ ಡಾ. ಕೆ. ಸುಧಾಕರ್ ರವರಿಗೆ Thank You So Much. ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಗೆ ತಾವು ಸೂಕ್ತ ಸಮಯದಲ್ಲಿ ಸಹಾಯ ಮಾಡಿ ಆಕೆಯ ಬದುಕಿಗೆ ಬೆಳಕಾದದ್ದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ತನುಜಾಳ ಪರಿಶ್ರಮ ಗೆದ್ದಿದೆ. ‘ತನುಜಾ’ ಸಿನಿಮಾ ಅತಿ ಶೀಘ್ರದಲ್ಲೇ ತೆರೆಗೆ ಬರಲಿದೆ, ನಿಮ್ಮ ಪ್ರೀತಿ ಇರಲಿ.