Wednesday, 11th December 2024

ಬಸವ ಸಿದ್ದಲಿಂಗ ಮಹಾಸ್ವಾಮೀಜಿ ಆತ್ಮಹತ್ಯೆ ಇಡೀ ಮನ ಕುಲವೇ ತಲೆತಗ್ಗಿಸುವಂತೆ ಮಾಡಿದೆ

ಬಸವನಬಾಗೇವಾಡಿ: ಇತ್ತೀಚಿಗೆ ಚಿತ್ರದುರ್ಗದ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆ ಅಡಿ ಬಂಧನವಾಯಿತು.
ಅಂದಿನಿಂದ ದೃಶ್ಯ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹೆಣ್ಣು ಮಕ್ಕಳು ನಮ್ಮ ನಾಡಿನ ಅನೇಕ ಮಠಾ ಧೀಶರ ಹೆಸರನ್ನು ತೆಗೆದುಕೊಂಡು ಸಂಭಾಷಣೆ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಬಿಟ್ಟಂತ ಇಂತಹ ಇಬ್ಬರು ಮಹಿಳೆಯರನ್ನ ಕೂಡಲೇ ಬಂಧಿಸಬೇಕು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಯಾವುದೇ ಸಾಕ್ಷಿಗಳಿಲ್ಲದೆ ನಾಡಿನ ಅನೇಕ ಮಠಾಧೀಶರ ಹೆಸರನ್ನು ತೆಗೆದುಕೊಂಡು ಅವರ ಪೀಠಕ್ಕೆ ಅವರ ಘನತೆಗೆ ಭಕ್ತರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಈ ಇಬ್ಬರು ಮಹಿಳೆಯರು ಮಾಡಿದ್ದಾರೆ. ಈ ಮಹಿಳೆಯರು ಮಾಡಿದ ಆರೋಪದ ಮೇಲೆ ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಾಳ ಗ್ರಾಮದ ಬಸವ ಸಿದ್ದಲಿಂಗ ಮಹಾಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಮನ ಕುಲವೇ ತಲೆತಗ್ಗಿಸುವಂತೆ ಮಾಡಿದೆ.
ಇಂದು ಆತ್ಮಹತ್ಯೆ ಮಾಡಿಕೊಂಡಂತ ಶ್ರೀಗಳು ಬಸವ ತತ್ವ ನಿಷ್ಠರು ಕಾಯಕನಿಷ್ಠರು ಹೊಲಗದ್ದೆಗಳಲ್ಲಿ ತಾವೇ ಹೋಗಿ ಬೇಸಾಯವನ್ನು ಮಾಡುವುದರ ಜೊತೆಗೆ ಬಸವ ತತ್ವದ ಗಟ್ಟಿ ದ್ವನಿಯಾಗಿದ್ದರು ಆ ಇಬ್ಬರು ಹೆಣ್ಣು ಮಕ್ಕಳು ಮಾತನಾಡಿದ ಸಂಭಾಷಣೆಯಲ್ಲಿ ಲಿಂಗಾಯತ ಮಠಾಧೀಶರನ್ನು ಟಾರ್ಗೆಟ್ ಮಾಡಲಾಗಿದೆ ಇದೊಂದು ವ್ಯವಸ್ಥಿತ ಸಂಚಾಗಿದೆ.
2ಅ ಮೀಸಲಾತಿ ಹೋರಾಟದಲ್ಲಿ ಇರುವ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜಿಯವರ ಹೆಸರನ್ನು ಹರಿಹರ ಫೀಠದ ಜಗದ್ಗುರುಗಳ ಹೆಸರನ್ನು ಅಂಬಿಗರ ಚೌಡಯ್ಯ ಪೀಠದ ಜಗದ್ಗುರುಗಳನ್ನು ಭೋವಿ ಸಮಾಜದ ಜಗದ್ಗುರುಗಳ ಹೆಸರನ್ನು ಯಾವುದೇ ಸಾಕ್ಷಗಳಿಲ್ಲದೆ ಅವರ ಹೆಸರನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಬಿಟ್ಟ ಈ ಮಹಿಳೆಯರನ್ನ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.