Wednesday, 11th December 2024

ಶ್ರೀವೆಂಕಟೇಶ್ವರ ಪ್ರೌಢಶಾಲೆಯ ಕ್ರೀಡಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹರಪನಹಳ್ಳಿ: ತಾಲೂಕಿನ ತೆಲಗಿ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟ ದಲ್ಲಿ ಗುಂಡಗತ್ತಿ ಗ್ರಾಮದಲ್ಲಿರುವ ಶ್ರೀ ವೆಂಟೇಶ್ವರ ಪ್ರೌಢಶಾಲೆಯ ಬಾಲಕರ ಮತ್ತು ಬಾಲಕಿಯರ ವಿಭಾಗದದಲ್ಲಿ ಕ್ರೀಡಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿ ಈಗ ಜಿಲ್ಲಾ ಮಟಕ್ಕೆ ಆಯ್ಕೆ ಆಗಿದ್ದಾರೆ.

ಥ್ರೋಬಾಲ್, ಹಾಗೂ ಇತರೆ ಕ್ರೀಡೆಯಲ್ಲಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡೆಗೆ ಆಯ್ಕೆ ಆಗಿದ್ದಾರೆ, ವಿವಿಧ ಕ್ರೀಡಾಗಳಲ್ಲಿ ಸ್ಪರ್ಧೆಸಿದ ಗುಂಡಗತ್ತಿ ಗ್ರಾಮದ ಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದಿಂದ ಈಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ಗುಂಡಗತ್ತಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಿಜೇತರಾದ ಕ್ರೀಡಾ ಪಟುಗಳಿಗೆ ಗ್ರಾಮದ ಗ್ರಾಮಪಂಚಾಯತಿ ಸರ್ವಸದಸ್ಯರು ಹಾಗೂ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವೈ.ಕಾಶೀನಾಥ್ ಅಧ್ಯಕ್ಷೆ ಉಷಾ ಕಾಶೀನಾಥ್, ಕ್ರೀಯಾಶೀಲ ಮುಖ್ಯ ಶಿಕ್ಷಕರಾದ ಹೆಚ್. ಎನ್ ನಾಗರಾಜ್ , ಸಂಸ್ಥೆಯ ನಿರ್ಧೇಶಕ ಜತಿನ್ ಕೆ. ಸೋನೆ ಹಾಗೂ ಶಿಕ್ಷಕರಾದ ಸಿ.ರುದ್ರಪ್ಪ, ಕೆ. ಕೆಂಚಪ್ಪ, ಬಿ.ಹೆಚ್. ಪ್ರಭಾಕರ್, ದೈ.ಹಿ.ಶಿ. ಡಿ. ಶಿವಶಂಕರ್, ಎಲ್. ರೇಖಾನಾಯ್ಕ, ಎಲ್. ನರ‍್ಯಾನಾಯ್ಕ, ಜಿ. ಪ್ರಕಾಶ್, ಎಲ್. ರಾಜಕುಮಾರ್ ನಾಯ್ಕ, ಹಾಗೂ ಶಾಲೆಯ ಸಿಬ್ಬಂಧಿಗಳು ವಿಜೇತರಾದ ಕ್ರೀಡಾಪುಟುಗಳಿಗೆ ಅಭಿನಂದನೆ ಸಲ್ಲಿಸಿದರು.