Friday, 13th December 2024

ಸಮಾವೇಶ ಯಶಸ್ವಿಗೆ ಮನವಿ: ಸೆ.೧೫ ರಂದು ಕುರುಬ ಸಮಾಜದ ಸಂಘಟನಾ ಸಮಾವೇಶ

ಮುದ್ದೇಬಿಹಾಳ : ಸಮಾಜದಲ್ಲಿ ಸಂಘಟಿತರಾಗದಿದ್ದರೆ ಯಾವುದೇ ಸೌಲಭ್ಯಗಳು ಸಾಮಾಜಿಕವಾಗಿ ದೊರೆಯುವುದಿಲ್ಲ.ಈ ಹಿನ್ನೆಲೆಯಲ್ಲಿ ಸೆ.೧೫ ರಂದು ಹಮ್ಮಿಕೊಂಡಿರುವ ಕುರುಬ ಸಮಾಜದ ಸಂಘಟನಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು ಭಾಗಹಿಸಬೇಕು ಎಂದು ಕುರುಬರ ಸಂಘದ ಮಹಿಳಾ ಘಟಕದ ತಾಲೂಕಾಧ್ಯಕ್ಷ ಸವಿತಾ ಗುರುವಿನ ಹೇಳಿದರು.

ಪಟ್ಟಣದ ಹುಡ್ಕೋದಲ್ಲಿರುವ ತಾಲೂಕಾ ಕುರುಬರ ಸಂಘದ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದ ಸಂಘಟನೆಯಲ್ಲಿ ಮಹಿಳೆಯರ ಪಾತ್ರವೂ ಹಿರಿದಾಗಿದೆ. ಕುರುಬರ ಸಂಘದ ತಾಲೂಕಾ ಧ್ಯಕ್ಷ ಎಂ.ಎನ್.ಮದರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದ ಮಹಿಳೆಯರು ಆಗಮಿಸುವಂತೆ ವಿನಂತಿಸಿದರು.

ಘಟಕದ ಪ್ರಧಾನ ಕಾರ್ಯದರ್ಶಿ ಮಂಜುಳಾ ಕೆಸರಟ್ಟಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ. ನಮ್ಮ ಸಮಾಜ ದಲ್ಲೂ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಸಮಾಜ ಸಂಘಟನೆಗೆ ತೊಡಗುವುದು ಅವಶ್ಯಕವಿದೆ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು ಸಮಾವೇಶಕ್ಕೆ ಆಗಮಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಕರ್ನಾಟಕ ಅರ್ಬನ್ ಬ್ಯಾಂಕ್ ನಿರ್ದೇಶಕಿ ಶ್ರೀದೇವಿ ಮದರಿ,ಉಪಾದ್ಯಕ್ಷೆರಾದ ನರಸಮ್ಮ ಗುಬಚಿ, ರೇಖಾ

ಗುಡಿಹಾಳ, ಕಾರ್ಯಾದ್ಯಕ್ಷೆ ಅಕ್ಕ ಅಕ್ಕಮಹಾದೇವಿ ಹಾಲ್ಯಾಳ ಮತ್ತು ಮಹಾದೇವಿ ಪೂಜಾರಿ,ಶೋಭಾ ನಾಗೂರ, ಸಾವಿತ್ರಿ ಕುಂಟೋಜಿ, ಸುಮಿತ್ರಾ ಜೋಗಿ, ಪಲ್ಲವಿ ಬಿಜ್ಜೂರ, ಎಂ.ಎಚ್.ಪೂಜೇರಿ, ಸಿದ್ದಮ್ಮ ಮದರಿ, ಶಾಂತಮ್ಮ ವಡಗೇರಿ,ಶಾಂತಮ್ಮ ಹೊಕ್ರಾಣಿ, ರಶ್ಮಿ ಬ್ಯಾಲ್ಯಾಳ, ಕಸ್ತೂರಿ ಕರೇಕಲ್ಲ, ಶ್ರೀದೇವಿ ಬಿಸಲದಿನ್ನಿ, ಸರಸ್ವತಿ ಜೋಗಿನ, ಕಾವ್ಯಾ ನಾಯ್ಕೋಡಿ ಮೊದಲಾದವರು ಇದ್ದರು.