Saturday, 14th December 2024

ಪ್ರಪಾತಕ್ಕೆ ಉರುಳಿದ ಬಸ್: ನಾಲ್ವರ ಸಾವು

ವದೆಹಲಿ: ರಜೌರಿ ಜಿಲ್ಲೆಯ ಭಿಂಬರ್ ಗಲ್ಲಿ ಬಳಿ ಹಲವಾರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಆಳವಾದ ಪ್ರಪಾತಕ್ಕೆ ಉರುಳಿದ ಪರಿಣಾಮ ನಾಲ್ವರು ಗುರುವಾರ ಮೃತಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.

‘ರಜೌರಿಯಲ್ಲಿ ಸಂಭವಿಸಿದ ದುರಂತ ಅಪಘಾತದಿಂದ ಉಂಟಾದ ಜೀವಹಾನಿಯಿಂದ ದುಃಖಿತನಾಗಿದ್ದೇನೆ. ಈ ದುಃಖದ ಸಮಯ ದಲ್ಲಿ, ದುಃಖತಪ್ತ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಗೊಂಡವರು ಆದಷ್ಟು ಬೇಗ ಗುಣಮುಖ ರಾಗಲಿ. ಜಿಲ್ಲಾಡಳಿತವು ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತಿದೆ’ ಎಂದು ಲೆಫ್ಟಿನೆಂಟ್ ಗವರ್ನರ್ ಲ್ಜಿ ಕಚೇರಿ ತಿಳಿಸಿದೆ.