Saturday, 23rd November 2024

ಕ್ಷಮಿಸಿ ಮೋದಿಜೀ, ಭ್ರಷ್ಟಾಚಾರವನ್ನು ನೀವು ಒಪ್ಪಬೇಕು !

ದಾಸ್ ಕ್ಯಾಪಿಟಲ್‌

dascapital1205@gmail.com

ಭ್ರಷ್ಟತೆ ಸಮಾಜದ್ದೇ ಸೃಷ್ಟಿ. ಆಂತರ್ಯದ ಏಕರೂಪಿ ಭ್ರಷ್ಟತೆಯು ಬಾಹ್ಯದ ಬಹುರೂಪಿ ನೆಲೆಯಲ್ಲಿ ವ್ಯಾಪ್ತಿ ವಿಸ್ತರಿಸಿ ಕೊಳ್ಳುತ್ತದೆ. ತನ್ನ ಧನದಾಹಿತ್ವದೊಳಗೆ ಬಿಟ್ಟುಕೊಳ್ಳುವಾಗಲೂ ಭ್ರಷ್ಟನೊಬ್ಬನಿಗೆ ಮೈಯೆಲ್ಲ ಕಣ್ಣಾಗಿರಬೇಕು. ಅಂತರಂಗದಲ್ಲಿ ಭ್ರಷ್ಟನಾದರೂ, ಬಹಿರಂಗದಲ್ಲಿ ಒಳ್ಳೆಯ ಬಟ್ಟೆ, ಅನೈಜ ಮಾತು, ವರ್ತನೆಯ ಮೂಲಕ ಭ್ರಷ್ಟಾಚಾರವೆಂಬ ಹಾದರವನ್ನು ಮುಚ್ಚಿಕೊಳ್ಳಲು ಅವನು ಯತ್ನಿಸುತ್ತಿರುತ್ತಾನೆ, ರಾಜಕಾರಣಿಗಳಂತೆ.

ತಾನೊಬ್ಬನೇ ತಿನ್ನಬೇಕೆನ್ನುವವ ಸಾಮಾನ್ಯವಾಗಿ ಯಾರನ್ನೂ ಹತ್ತಿರ ಬಿಟ್ಟುಕೊಳ್ಳ ಲಾರ. ನಾನೂ ತಿನ್ನುತ್ತೇನೆ, ನೀವೂ ತಿನ್ನಿ ಎನ್ನುವವನಿಂದ ವ್ಯವಸ್ಥೆಯೇ ಭ್ರಷ್ಟವಾ ಗುತ್ತದೆ. ಆದರೆ, ನಾನು ಮಾತ್ರ ತಿನ್ನುತ್ತೇನೆಂದರೆ, ಸಮಾಜ ಒಪ್ಪುವುದಿಲ್ಲ. ಭ್ರಷ್ಟತೆಗೆ
ಅವಕಾಶ ಮುಕ್ತವಾಗಿದ್ದರೆ ಭ್ರಷ್ಟತೆಯೇ ಬಹಿರಂಗವಾದ ತಥ್ಯವೂ ಆಚಾರವೂ ಆಗಿಬಿಡುತ್ತದೆ. ಕಾಲಕ್ರಮೇಣ ಇದು ಒಪ್ಪಿತ ವಾಗಿ ಹತ್ತಿಕ್ಕುವುದಾಗಲಿ ನಿಯಂತ್ರಣವಾಗಲಿ ಸಾಧ್ಯವಾಗುವುದಿಲ್ಲ.

ಭಾರತದಂಥ ರಾಷ್ಟ್ರಕ್ಕಂತೂ ಇದು ಅಸಾಧ್ಯ. ಅಧಿಕಾರಷಾಹಿ ವ್ಯವಸ್ಥೆಯಲ್ಲೇ ಭ್ರಷ್ಟಾಚಾರವಿದ್ದರೆ ಆ ದೇಶ/ ವ್ಯವಸ್ಥೆ ಉದ್ಧಾರ ವಾಗೋದು ಹೇಗೆ? ಆಗ ಜನರಿಗೆ ಏನೂ ಮಾಡಲಾಗದ ಸ್ಥಿತಿ! ವ್ಯವಸ್ಥೆಯೇ ಭ್ರಷ್ಟತೆಯಲ್ಲಿ ಮುಳುಗಿದರೆ ಯಾವುದು ತಹಬಂದಿಗೆ ಬಂದೀತು? ಹಣದ ಲೂಟಿ ಮಾತ್ರ ಭ್ರಷ್ಟಾಚಾರವಲ್ಲ. ಕೊಲೆ, ಸುಲಿಗೆ, ಅತ್ಯಾಚಾರ, ಬಾಸಿಸಂ, ಹೆರಾಸ್‌ಮೆಂಟ್, ಲೈಂಗಿಕ ಶೋಷಣೆ, ಸುಳ್ಳು ಹೇಳುವುದು, ವ್ಯಕ್ತಿತ್ವ ತೇಜೋ ವಧೆ, ಕಾಲೆಳೆಯುವುದು ಎಲ್ಲವೂ ಭ್ರಷ್ಟಾಚಾರದ ಮುಖಗಳೇ. ಸ್ವಾತಂತ್ರ್ಯಾ ನಂತರದ ಭಾರತವನ್ನು ಬಹುವಾಗಿ ಕಾಡುತ್ತಿರು ವುದು ರಾಜಕೀಯ ಭ್ರಷ್ಟಾಚಾರ ಮತ್ತು ಊರ್ಧ್ವಮುಖಿಯಾಗಿ ಬೆಳೆದು ಎಲ್ಲೆಡೆ ವ್ಯಾಪಿಸಿರುವ ಅದರ ಅನಂತ ಅವತಾರಗಳು!

ಇಂಥ ಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ಇವನ್ನು ತೊಡೆದು, ದುಷ್ಟರಿಂದ ಭಾರತವನ್ನು ಕಾಪಾಡುವಲ್ಲಿ ಅರ್ಧ ಯಶಸ್ವಿಯಾಗಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ! ಆದರೆ, ಭ್ರಷ್ಟಾಚಾರವನ್ನೇ ದೀರ್ಘಕಾಲ ಹಾಸಿ ಹೊದ್ದು ಮಲಗಿರುವವರಿಗೆ ಇದನ್ನು ಸಹಿಸಲಾಗುತ್ತಿಲ್ಲ! ಅವರ ಪ್ರಕಾರ, ಎಂಥದೇ ಭ್ರಷ್ಟಾಚಾರವನ್ನು ಮೋದಿ ಸಹಿಸಿಕೊಂಡು ಮೌನವಾಗಿ ಸಮ್ಮತಿಸ ಬೇಕು, ಅವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸ್ಥಾಪಿಸಲು ಅವಕಾಶ ನೀಡಬೇಕು.

ಭ್ರಷ್ಟಾಚಾರವೆಂಬುದು ಜನತೆಯ ಜನ್ಮಸಿದ್ಧ ಹಕ್ಕು; ಅವರವರ ಗ್ರಹಿಕೆಯಂತೆ ನಡೆಯುವ ಸಂಗತಿಯದು. ಅಧಿಕಾರಕ್ಕೆ ಯಾರೇ ಬರಲಿ ಈ ಭ್ರಷ್ಟಾಚಾರಕ್ಕೆ ತೊಂದರೆಯಾಗಬಾರದು. ಅರಣ್ಯಲೂಟಿ, ಹಣವಸೂಲಿ, ಕಮಿಷನ್, ಮಿತಿ ಮೀರಿದ ಶುಲ್ಕ, ಬೆಲೆ ಯೇರಿಕೆ, ಭೂಮಿ ಅತಿಕ್ರಮಣ, ಅಕ್ರಮ ಕಟ್ಟಡಗಳ ನಿರ್ಮಾಣ, ನಕಲಿ ಹೆಸರಿನಲ್ಲಿ ಗುತ್ತಿಗೆ, ಸುಳ್ಳು ಬಿಲ್, ರೌಡಿಸಂ ಮೂಲಕ ರಿಯಲ್ ಎಸ್ಟೇಟ್ ದಂಧೆ, ಕಡಿಮೆ ದಿನಗೂಲಿ, ಶಾಲಾ-ಕಾಲೇಜು-ವಿ.ವಿ.ಗಳ ಮೂಲಸೌಕರ್ಯ ನಿಧಿಗಳ ನುಂಗುವಿಕೆ, ಕಾಡು ಪ್ರಾಣಿಗಳ ಮಾರಾಟ, ಮರಗಳ ಕಳ್ಳಸಾಗಣೆ, ಲಂಚಾವತಾರ, ಬಜೆಟ್ಟಿನಲ್ಲಿ ಮೀಸಲಿಟ್ಟ ಹಣದ ಕೊಳ್ಳೆ, ಹಣ-ಹೆಂಡದಾಮಿಷ, ಭಯೋತ್ಪಾದಕರು-ನಕ್ಸಲರಿಗೆ ಬೆಂಬಲ ಹೀಗೆ ವೈವಿಧ್ಯಮಯ ಭ್ರಷ್ಟತೆ ಗುಪ್ತವಾಗಿಯೂ ಬಹಿರಂಗವಾಗಿಯೂ
ನಡೆಯು ತ್ತದೆ.

ಆದರೂ, ಮೋದಿಜೀ ನೀವು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ, ಬಾಯಿದ್ದೂ ಮೂಗರಂತೆ ಸುಮ್ಮನಿದ್ದು ಬಿಡಬೇಕು! ಏಕೆಂದರೆ, ನೀವು ಅಪ್ರತಿಮ ದೇಶಪ್ರೇಮಿಗಳು. ರಾಷ್ಟ್ರೀಯತೆ ನಿಮ್ಮ ರಕ್ತದ ಕಣಕಣಗಳಲ್ಲಿದೆ. ಹೀಗಾಗಿ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಒಯ್ಯಿರಿ, ಯಾರ ಅಭ್ಯಂತರವೂ ಇಲ್ಲ. ಎಲ್ಲ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವನ್ನು ಸೌಹಾರ್ದಯುತವಾಗಿಸಿ. ಅಂತಾರಾಷ್ಟ್ರೀಯ ವ್ಯಾಪಾರ-ವ್ಯವಹಾರದಲ್ಲಿ ದೇಶವನ್ನು ಅಗ್ರ ಪಂಕ್ತಿಯಲ್ಲಿರಿಸಿ.

ಜಗತ್ತಿನೆದುರು ಭಾರತದ ಸ್ವಾಭಿಮಾನವನ್ನು ಎತ್ತಿಹಿಡಿದು, ನಾವು ಸ್ವಾವಲಂಬಿಗಳೆಂದು ತೋರಿಸಿ. Of course ಈಗಾಗಲೇ ಇವನ್ನೆಲ್ಲ ಮಾಡಿದ್ದೀರಿ, ಅದನ್ನೇ ಬಲಗೊಳಿಸಿ. ಅನ್ಯರು ಭಾರತದ ಮೇಲೆ ಎರಗದಂತೆ ರಕ್ಷಿಸಿ. ಅಕ್ರಮ ನುಸುಳುಕೋರರನ್ನು ತಡೆಯಿರಿ, ಭಯೋತ್ಪಾದಕರ ಹುಟ್ಟಡಗಿಸಿ. ರಾಷ್ಟ್ರದೊಳಗಿರುವ ಭಾರಿಕಳ್ಳರ ಹೆಡೆಮುರಿ ಕಟ್ಟಿ ಸಾಕ್ಷಿ ಸಮೇತ ಕಟಕಟೆಗೆ ತನ್ನಿ, ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ.

ಆದರೆ, ನಾವು ಆದಾಯ/ವ್ಯಾಪಾರ ತೆರಿಗೆ ಕಟ್ಟುವುದಿಲ್ಲ, ನಮ್ಮ (ಅ)ವ್ಯವಹಾರಗಳಿಗೆ ಯಾವುದೇ ದಾಖಲೆಗಳಿರುವುದಿಲ್ಲ. ನೀವು ಅದ್ಯಾವುದನ್ನೂ ತನಿಖೆ ಮಾಡಿಸಬಾರದು, ಐಟಿ ರೈಡ್‌ಗೆ ಮುಂದಾಗಬಾರದು. ನಮಗೆ ಅಡ್ಡದಾರಿಯಲ್ಲಿ ಹಣ ಮಾಡೋದೇ ಇಷ್ಟ; ಬದುಕಿಗೆ ಬೇಕಾಗುವಷ್ಟಿದ್ದರೂ ದುರಾಸೆಯಿಂದ ಮತ್ತಷ್ಟು ಸಂಪತ್ತನ್ನು ಹೇಗಾದರೂ ಹೊಡೆಯುತ್ತೇವೆ, ಸಹಕರಿಸಿ. ನೀವೂ ಹಾಗೇ ಸಂಪಾದಿಸಿ, ನಾವು ಅಡ್ಡಿಪಡಿಸಲ್ಲ. ಇಲ್ಲಿಯವರೆಗೂ ನಡೆದದ್ದು ಹೀಗೇ ಅಲ್ಲವೆ? ನೀವ್ಯಾಕೆ ಆ ದಾರಿ ತುಳಿಯು ತ್ತಿಲ್ಲ? ನಮ್ಮಿಂದ ದೇಶಕ್ಕೆ ಏನುಪಯೋಗ ಎಂಬ ಚಿಂತೆ ನಮಗೆ ಅನಗತ್ಯ, ಅದು ನಿಮಗೇ ಇರಲಿ.

ನೀವು ದೇಶಕ್ಕಾಗಿ ದಿನದ 16 ತಾಸಾದರೂ ದುಡಿಯಿರಿ, ೧೮ ತಾಸಾದರೂ ದುಡಿಯಿರಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಲೂಟಿ ಹೊಡೆಯುವುದಷ್ಟೇ ನಮ್ಮ ಗುರಿ. ಪ್ರಧಾನಿಯ ಅಧಿಕಾರವ್ಯಾಪ್ತಿಯಲ್ಲಿ ನೀವೇನೇ ಮಾಡಿದರೂ ನಮಗದು ತೊಂದರೆಯಾಗ ಬಾರದು. ನಿಮ್ಮಂಥ ದೇಶನಿಷ್ಠೆ ನಮಗೆ ಸಾಧ್ಯವಿಲ್ಲ. ನಿಮಗೆ ವೋಟು ಹಾಕಿದ್ದೇವೆಂದ ಮಾತ್ರಕ್ಕೆ ನೀವು ಹೇಳಿದಂತೆ ಬದುಕನ್ನು ರೂಢಿಸಿಕೊಳ್ಳಲೂ ನಮಗಾಗದು.

ನಮ್ಮ ಪ್ರತಿ ನಿಧಿಯಾಗಿ ನೀವೇ ದೇಶದ ಬಗ್ಗೆ ಚಿಂತಿಸಬೇಕು. ಅದಕ್ಕೆ ನಮ್ಮ ಮತವೇ ಸಹಮತ. ನೀವು ಹೇಳುವ ಪ್ರಾಮಾಣಿಕತೆ,
ಪಾರದರ್ಶಕತೆಯೆಂಬ ಮೌಲ್ಯಕ್ಕೂ ನಮಗೂ ಅಂತರವಿದೆ. ಅಂಥ ಮೌಲ್ಯಗಳು ನಮಗೆ ಬೇಕಿಲ್ಲ. ನೀವು ರಾಮನಂತೆಯೇ
ಆದರ್ಶ ವ್ಯಕ್ತಿಯಾಗಿರಿ, ನಾವು ಮಾತ್ರ ಅಯೋಧ್ಯೆಯ ಪ್ರಜೆಯಾಗಲಾರೆವು. ನಿಮಗೋ ರಾಮರಾಜ್ಯದ ಕನಸು. ಸರಿ, ಶ್ರೀರಾಮ ಮಂದಿರವನ್ನು ಕಟ್ಟಿ. ಮಂದಿರ ನಿರ್ಮಾಣವಾದರೆ ಬಹುಸಂಖ್ಯಾತ ಹಿಂದೂಗಳಿಗೆ ಖುಷಿಯಾಗಬಹುದು. ಆದರೆ, ನಮಗಿದರಿಂದ ಯಾವ ಲಾಭವಿಲ್ಲ.

ಮಂದಿರವನ್ನು ನೀವು ಕಟ್ಟಿದರೆಷ್ಟು, ಬಿಟ್ಟರೆಷ್ಟು? ನಮಗೆ ರಾಮನಂಥ ರಾಜ ಬೇಕು ಆದರೆ, ರಾವಣ ಸ್ವರೂಪಿ ಸಮಾಜದಲ್ಲಿ ಬದುಕುವುದೇ ನಮಗಿಷ್ಟ, ಅರ್ಥಮಾಡಿಕೊಳ್ಳಿ! ಹಿಂದೂ ಭಾವನೆಗಳಿಗೆ ಧಕ್ಕೆಯಾದರೆ ಕೋಮುವಾದ ಹುಟ್ಟಿಕೊಂಡಿದೆ ಅಂತ ಎಡಪಂಥೀಯ ಗಂಜಿಗಿರಾಕಿಗಳ ದೊಂಬಿ-ಬೊಬ್ಬೆ ಸುರುವಾಗುತ್ತೆ. ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆಯಾದರೆ ಬುದ್ಧಿಹೀನರ ಆರ್ಭಟ ಹೆಚ್ಚುತ್ತದೆ. ಆಗ ನೀವು ಇಕ್ಕಟ್ಟಿಗೆ ಸಿಲುಕುತ್ತೀರಿ. ದೇಶದಲ್ಲಿ ಏನೇ ಆದರೂ ನಿಮ್ಮನ್ನು ಗುರಿಯಾಗಿಸುವ ಬೇಜವಾಬ್ದಾರಿ ವರ್ತನೆ ಹೆಚ್ಚುತ್ತಿದೆ.

ನೀವೇ ಬೇಕು, ನಿಮ್ಮಂಥವರೇ ಬೇಕೆಂದು ಮನಸು ಹೇಳುತ್ತದೆ; ಆದರೆ, ನೀವು ನಮ್ಮನ್ನು ನಾವಿದ್ದ ಹಾಗೆಯೇ ಸ್ವೀಕರಿಸಬೇಕೆಂಬ ಆಗ್ರಹವೂ ನಮ್ಮಲ್ಲಿದೆ. ಒಂದೊಮ್ಮೆ, ಗಾಂಧಿಯೀಗ ಇದ್ದಿದ್ದರೆ ನಿಮ್ಮಂತೆಯೇ ‘ಟಾರ್ಗೆಟ್’ ಆಗುತ್ತಿದ್ದರು. ನಿಮ್ಮಂಥವರು ಯಾರಿ ದ್ದರೂ ಇದೇ ಪಾಡಾಗುತ್ತಿತ್ತು. ನೈತಿಕತೆಯನ್ನೇ ಮೂಲಸತ್ತ್ವವನ್ನಾಗಿಟ್ಟುಕೊಂಡ ಗಾಂಧಿಯ ವೈಚಾರಿಕತೆಯು ಈ ಕಾಲಘಟ್ಟದ ಗಾಂಧಿ ಅನುಯಾಯಿಗಳಿಗಿಲ್ಲ.

ಆರೆಸ್ಸೆಸ್ಸಿನ ಬಹುಪಾಲು ವೈಚಾರಿಕತೆ ಗಾಂಧಿಯ ನೈತಿಕ ವೈಚಾರಿಕತೆಯನ್ನು ಸಮರ್ಥಿಸುತ್ತದೆ. ಆದರೆ, ಯಾವ ವೈಚಾರಿ ಕತೆಯೂ ನಿಮ್ಮನ್ನೇ ಗುರಿಯಾಗಿಸುತ್ತಿರುವುದಕ್ಕೆ ನಿಮ್ಮ ಸಾತ್ವಿಕತೆಯೇ ಕಾರಣವೇನೋ ಎನಿಸುತ್ತದೆ! ಕ್ಷಮಿಸಿ ಮೋದಿಜೀ, ನಮಗಂತೂ ನೀವು ಸುತರಾಂ ಅರ್ಥವಾಗಿಲ್ಲ. ನಮ್ಮ ಭ್ರಷ್ಟಾಚಾರ ಒಪ್ಪುವುದಾದರೆ ನಿಮ್ಮನ್ನು, ನಿಮ್ಮ ಪಕ್ಷವನ್ನು ಬೆಂಬಲಿಸು ತ್ತೇವೆ.

ನೀವೋ ನಿಮ್ಮಂಥವರೋ ಈ ದೇಶಕ್ಕೆ ಖಂಡಿತ ಬೇಕು; ಆದರೆ, ಭ್ರಷ್ಟಾಚಾರ ನಮಗೆ ಯಾವತ್ತೂ ಬೇಕು. ನೀವಂದಂತೆ ಪ್ರಾಮಾ ಣಿಕವಾಗಿ ಪಾರದರ್ಶಕವಾಗಿ ಬದುಕಬೇಕೆಂಬುದು ನಮಗೂ ಗೊತ್ತು. ಆದರೆ, ಈ ಕಾಲದಲ್ಲಿ ಅದು ಅಸಾಧ್ಯ. ನೀವು ದುರಾಸೆ ಅಂದರೂ ಸರಿಯೇ, ನಮಗೆ ಹಣ ಬೇಕೇ ಬೇಕು. ಅದಕ್ಕಾಗಿ ಭ್ರಷ್ಟಾಚಾರ ಬೇಕು. ಇಷ್ಟು ಸುದೀರ್ಘ ವರ್ಷಗಳಲ್ಲಿ ದೇಶ
ಸಾಧಿಸಲಾಗದ್ದನ್ನು ನೀವು ಪ್ರಧಾನಿಯಾಗಿ ಕೇವಲ ಎಂಟೇ ವರ್ಷಗಳಲ್ಲಿ ಸಾಧಿಸಿ ಭಾರತವನ್ನು ಅಭಿವೃದ್ಧಿ ಹೊಂದಿದ
ರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದರೂ (ಭಾಗಶಃ ಮಾಡಿಯೇಬಿಟ್ಟಿದ್ದರೂ), ನಮಗೆ ನಮ್ಮ ಸ್ವಾರ್ಥಕ್ಕಿಂತ ನೀವು ಪ್ರೀತಿಸುವ ದೇಶ ದೊಡ್ಡದಾಗಿ ಕಾಣಿಸುವುದಿಲ್ಲ.

ಅಂಥ ದೊಡ್ಡಮನಸ್ಸು ನಮಗಿಲ್ಲವೇನೋ! ಯಾರಿಗೆ ಬೇಕಾಗಿದೆ ದೇಶದ ಚಿಂತೆ? ಕ್ಷಮಿಸಿ ಮೋದಿಜೀ, ಹೀಗೆ ಹೇಳಿದ್ದಕ್ಕೆ.
ಭಾರತೀಯರಿಗೆ ನಿಮ್ಮ ಮೇಲೆ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ, ಭರವಸೆ, ಹೆಮ್ಮೆಯಿದೆ. ನೀವು ಧೈರ್ಯ-ಸ್ಥೈರ್ಯದ ಪ್ರತಿರೂಪವೆಂಬುದೂ ಗೊತ್ತಿದೆ. ಆದರೂ ನಿಮ್ಮನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಏನು ಮಾಡೋದು ಹೇಳಿ, ಅಧರ್ಮ, ಅನ್ಯಾಯವೆಂದು ಗೊತ್ತಿದ್ದರೂ ಭ್ರಷ್ಟಾಚಾರ ಮಾಡುವವರನ್ನೇ, ಮಾಡಲು ಬಿಡುವವರನ್ನೇ ಬೆಂಬಲಿಸಬೇಕಾಗಿದೆ. ಚುನಾವಣಾ ಪೂರ್ವದಲ್ಲಿ ನೀವು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ನಿಮ್ಮನ್ನೇ ದೋಷಿಯಾಗಿಸುವವರಿಗೆ ‘ತಾವು ಕೂಡ
ಹಿಂದೊಮ್ಮೆ ಹೀಗೆ ನೀಡಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದೀರಿ?’ ಎಂದರೆ ಕೇಳಿದರೆ ಉತ್ತರವಿಲ್ಲ!

ಆದರೂ ಹರಕೆ ಹೊತ್ತವರಂತೆ ನಿಮ್ಮನ್ನಷ್ಟೇ ದೂಷಿಸುತ್ತಿದ್ದಾರೆ. ರಾಜಕಾರಣದ ಗಂಧ-ಗಾಳಿಯಿಲ್ಲದ ರಾಹುಲ್ ಗಾಂಧಿಯ ವರಂಥ ವ್ಯಕ್ತಿಯನ್ನು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷದ ಅಧ್ಯಕ್ಷನ್ನಾಗಿಸಿದ್ದು, ನಿಮಗೆ ಪ್ರತಿಸ್ಪರ್ಧಿಯಾಗಿ ಪರಿಗಣಿಸಿದ್ದು ಬೇಸರದ ಸಂಗತಿ. ದೇಶಪ್ರೇಮ, ದೇಶಹಿತ, ದೇಶಕ್ಷೇಮ, ರಾಜಕೀಯ ದಕ್ಷತೆ, ದೂರದೃಷ್ಟಿ, ಸ್ವನಿರ್ಧಾರದ ಕ್ರಮ, ಇತಿಹಾಸ ಜ್ಞಾನಗಳ ವಿಷಯದಲ್ಲಿ ಅವರು ನಿಮಗೆ ಸರಿಸಾಟಿಯೇ? ರಾಜಕೀಯವೆಂದರೆ ಮಕ್ಕಳಾಟವೇ? ನಿಮ್ಮ ಮುತ್ಸದ್ದಿತನವೆಲ್ಲಿ, ರಾಹುಲರ ಎಳಸುಬುದ್ಧಿಯೆಲ್ಲಿ?! ಆದರೂ, ನೀವು ಮಾತ್ರ ಸರಿಯಿಲ್ಲವೆಂದು ಕೆಲವರು ಹುಯಿಲಿಡುತ್ತಿದ್ದಾರೆ. ಒಮ್ಮೊಮ್ಮೆ ಅದೂ ನಿಜವೆನಿಸುತ್ತದೆ.

ನೀವೂ ಆ ತೆರನಾಗಿಲ್ಲ! ಏಕೆಂದರೆ, ಜನತೆಯ ಕಣ್ಣಿಗೆ ಮಣ್ಣೆರಚುವ ಭರವಸೆ ನೀಡಿ, ಅಂಥದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭ್ರಷ್ಟಾಚಾರಕ್ಕೆ ಹೊಂದಿಕೆಯಾಗುವಂತೆ ಆಡಳಿತ ಮಾಡಿದ್ದರೆ ನೀವು ಇಷ್ಟೆಲ್ಲ ಹೇಳಿಸಿಕೊಳ್ಳಬೇಕಾಗಿರಲಿಲ್ಲ!