Saturday, 23rd November 2024

ಪುಣೆಯಲ್ಲಿ 39 ಹಂದಿ ಜ್ವರ ಪ್ರಕರಣ ದಾಖಲು

ಪುಣೆ: ಪುಣೆಯಲ್ಲಿ ಕಳೆದ ಏಳು ದಿನಗಳಲ್ಲಿ 39 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ 909 ಹಂದಿ ಜ್ವರದ ಕೇಸ್‍ಗಳು ದೃಢಪಟ್ಟಿವೆ.

ಎಲ್ಲಾ ವಯೋಮಾನದ ರೋಗಿಗಳಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು, ಇವರಲ್ಲಿ ಹಲವರು ಗಂಭೀರವಾಗಿದ್ದು, ಐಸಿಯುಗೆ ದಾಖಲಾಗಿದ್ದಾರೆ.

ಯಾವುದೇ ಕೊಮೊರ್ಬಿಡಿಟಿಗಳಿಲ್ಲದ ಅನೇಕ ರೋಗಿಗಳಿದ್ದಾರೆ. ಆದರೆ ಹಂದಿ ಜ್ವರಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿದೆ. ರೋಗವು ತೀವ್ರವಾಗಿರುವುದರಿಂದ ಎಲ್ಲಾ ವಯಸ್ಸಿನ ರೋಗಿಗಳನ್ನು ದಾಖಲಿಸಲಾಗಿದೆ. ಕೆಲವು ರೋಗಿಗಳಿಗೆ ತೀವ್ರ ನಿಗಾ ಘಟಕ ಆರೈಕೆಯಲ್ಲಿದ್ದಾರೆ ಎಂದು ನಗರ ಮೂಲದ ರೂಬಿ ಹಾಲ್ ಕ್ಲಿನಿಕ್‌ನ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ.ಪ್ರಾಚೀ ಸಾಠೆ ಹೇಳಿದ್ದಾರೆ.

ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಅಧಿಕಾರಿಗಳು ನಗರದಲ್ಲಿ ಇದುವರೆಗೆ 9,812 ರೋಗಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.