Saturday, 23rd November 2024

ನಿರಂತರ ಮಳೆ: ಉ.ಪ್ರದೇಶ, ಗುರ್ಗಾಂವ್‌’ನಲ್ಲಿ ಶಾಲೆ ಮುಚ್ಚುಗಡೆ

ನವದೆಹಲಿ: ನಿರಂತರ ಮಳೆ ಸುರಿದ ನಂತರ ಉತ್ತರ ಪ್ರದೇಶ ಮತ್ತು ಗುರ್ಗಾಂವ್‌ನ ಕನಿಷ್ಠ 10 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಕಚೇರಿ ಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಭಾರೀ ಮಳೆಯಿಂದಾಗಿ ದಿಲ್ಲಿಯ ಕೆಲವು ಭಾಗಗಳು ಜಲಾವೃತವಾಗಿವೆ.

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಫಿರೋ ಝಾಬಾದ್‌ನಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ.

ಅಲಿಘರ್‌ನಲ್ಲಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಸಿಡಿಲು ಬಡಿದು, ಗೋಡೆ ಮತ್ತು ಮನೆ ಕುಸಿದುಬಿದ್ದ ಘಟನೆ ಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ.

ಮಳೆಯಿಂದಾಗಿ ರಾಜ್ಯದ 10 ಜಿಲ್ಲೆಗಳ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.