ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಿಂದ (POPSKs) ಆನ್ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಳಿಗೆ (PCCs) ಅರ್ಜಿ ಸಲ್ಲಿಸಲು ಸಾಧ್ಯ ವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
28 ಸೆಪ್ಟೆಂಬರ್ ಬುಧವಾರದಿಂದ ಪ್ರಾರಂಭವಾಗುವ ಭಾರತದಾದ್ಯಂತ ಎಲ್ಲಾ ಆನ್ ಲೈನ್ POPSK ಗಳಲ್ಲಿ PCC ಸೇವೆಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಸೇರಿಸಲು ಸಚಿವಾಲಯವು ನಿರ್ಧರಿಸಿದೆ.
ಈ PCC ಅಪ್ಲಿಕೇಶನ್ ಸೌಲಭ್ಯವನ್ನು POPSK ಗಳಿಗೆ ವಿಸ್ತರಿಸುವಲ್ಲಿ ಸಚಿವಾಲಯವು ತೆಗೆದುಕೊಂಡ ಕ್ರಮವು ವಿದೇಶದಲ್ಲಿ ಉದ್ಯೋಗ ಬಯಸುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಶಿಕ್ಷಣ, ದೀರ್ಘಾವಧಿಯ ವೀಸಾ, ವಲಸೆ ಇತ್ಯಾದಿ ಗಳಂತಹ ಇತರ PCC ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸುತ್ತದೆ’ ಎಂದು ಹೇಳಿಕೆ ತಿಳಿಸಿದೆ.