ಲಂಚಕ್ಕೆ ಬೇಡಿಕೆಯಿಟ್ಟು ಮಂಚಕ್ಕೆ ಕರೆದ ಪತ್ರಕರ್ತನಿಗೆ ಚಪ್ಪಲಿಯೇಟು
ತುಮಕೂರು: ಪತ್ರಕರ್ತ, ಮಾನವ ಹಕ್ಕು ಹೋರಾಟಗಾರರ ಸೋಗಿನಲ್ಲಿ ಪಾಲಿಕೆ ಮಹಿಳಾ ಸಿಬ್ಬಂದಿಗೆ ಬ್ಲ್ಯಾಕ್ ಮೇಲ್ ಮಾಡಿ ಒಂದು ರಾತ್ರಿ ಜತೆಯಲ್ಲಿ ಕಳೆಯುವಂತೆ ಒತ್ತಾಯಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ರಕರ್ತ ಸೇರಿ ನಾಲ್ವರು ಮಹಿಳೆಯರಿಗೆ ಚಪ್ಪಲಿಯೇಟಿನೊಂದಿಗೆ ಚೆನ್ನಾಗಿ ಗೂಸಾ ಬಿದ್ದಿದೆ.
ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಸಹೋದರ ಪ್ರದೀಪ್ ಪತ್ರಕರ್ತನೆಂದು, ಮಾನವ ಹಕ್ಕು ಹೋರಾಟಗಾರ್ತಿಯರೆನ್ನಲಾದ ನಾಲ್ವರು ಮಹಿಳೆಯರೊಂದಿಗೆ ಸೇರಿಕೊಂಡು ಪಾಲಿಕೆ ಮಹಿಳಾ ಸಿಬ್ಬಂದಿಗೆ 4 ಲಕ್ಷ ಲಂಚ ನೀಡುವಂತೆ ಬೇಡಿಕೆ ಯಿಟ್ಟಿದ್ದಾನೆ.
ಲಂಚ ಕೊಡಲು ನಿರಾಕರಿಸಿದಾಗ ಲಾಡ್ಜ್ ನಲ್ಲಿ ಒಂದು ರಾತ್ರಿ ಕಳೆಯುವಂತೆ ಒತ್ತಾಯಿ ಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನೊಂದ ಮಹಿಳಾ ಸಿಬ್ಬಂದಿ ವಿಚಾರ ವನ್ನು ಇತರ ಸಿಬ್ಬಂದಿಗಳಿಗೂ ತಿಳಿಸಿದಾಗ, ಪಾಲಿಕೆ ಆವರಣದಲ್ಲಿ ಪ್ರದೀಪ್ ಸೇರಿ ಮಾನವ ಹಕ್ಕು ಹೋರಾಟಗಾರ್ತಿಯರ ಸೋಗಿನಲ್ಲಿ ಬಂದಿದ್ದ ನಾಲ್ವರು ಮಹಿಳೆಯರಿಗೆ ಚಪ್ಪಲಿಯೇಟಿನೊಂದಿಗೆ ಚೆನ್ನಾಗಿ ಥಳಿಸಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪತ್ರಿಕೆಯೊಂದರ ಹೆಸರಿನಲ್ಲಿ ಹಲವು ಮಂದಿ ಸೇರಿಕೊಂಡು ವಸೂಲಿ ದಂಧೆ ಮಾಡು ತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಸಂಬಂಧಿಸಿದವರು ಕಠಿಣಕ್ರಮಕೈಗೊಳ್ಳಬೇಕೆಂದು ಹೆಸರೇಳದ ಪಾಲಿಕೆ ಸಿಬ್ಬಂದಿ ಗಳು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಕಲಿ ಪರ್ತಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯವಹಿಸಿವೆ.
ಮಹಿಳಾ ಸಿಬ್ಬಂದಿ ಲಂಚ ಕೊಡಲು ಒಪ್ಪಿದ್ದೇಕೆ? ಇವರು ಬ್ಲ್ಯಾಕ್ ಮೇಲ್ ಮಾಡಿದ್ದೇಕೆ? ಇವರ ಹಿಂದೆ ಇರುವ ವಸೂಲಿ ಪತ್ರ ಕರ್ತರು ಯಾರು?ಮಹಿಳೆಯನ್ನು ಲಾಡ್ಜ್ ಗೆ ಕರೆದಿದ್ದೇಕೆ? ಎಂಬುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.