ಲಲಿತ ಟ್ಯಾಗೆಟ್ ಅವರ ಅಂತ್ಯಕ್ರಿಯೆ ಚಾಮರಾಜನಗರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಜಿಲ್ಲೆಯ ಗಂಗಮತಸ್ಥರ ಬೀದಿಯಲ್ಲಿ ವಾಸವಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿರುವ ಲಲಿತಾ ಟಾಗೆಟ್ ಅವರ ಅಂತಿಮ ದರ್ಶನದಲ್ಲಿ ನೂರಾರು ಮಂದಿ ಭಾಗಿಯಾಗಲಿದ್ದಾರೆ.
ಲಲಿತಾ ಟಾಗೆಟ್ ಅವರು ತಮ್ಮ 14ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದ ಘೋಷಣೆಗಳಿಂದ ಸ್ಪೂರ್ತಿ ಪಡೆದು ಸ್ವಾತಂತ್ಯ ಸಂಗ್ರಾಮ ಚಳವಳಿಗೆ ಧುಮುಕಿದ್ದರು.
ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಲಲಿತಾ ಟಾಗೆಟ್ ಅವರನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಚಾಮರಾಜನಗರ ಜಿಲ್ಲಾಡಳಿತ ಸೇರಿದಂತೆ ಜನಾರ್ದನ ಪ್ರತಿಷ್ಠಾನ ಹಾಗೂ ಇತರ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದರು.