ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಗಳ ಹೆಸರಿಗೆ 32 ಎಕರೆ ಭೂಮಿಯನ್ನು ನೋಂದಾಯಿಸ ಲಾಗಿದೆ. ಮಂಗಗಳು ಅಪರೂಪದ ಗೌರವಕ್ಕೆ ಪಾತ್ರವಾಗಿವೆ.
ಉಪ್ಲಾ ಗ್ರಾಮ ಪಂಚಾಯಿತಿಯಲ್ಲಿ ಪತ್ತೆಯಾದ ಭೂ ದಾಖಲೆಗಳಲ್ಲಿ 32 ಎಕರೆ ಜಮೀ ನನ್ನು ಗ್ರಾಮದಲ್ಲಿ ವಾಸಿಸುವ ಎಲ್ಲಾ ಮಂಗಗಳ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮಂಗಗಳಿಗೆ ಸೇರಿದ್ದು ಎಂದು ದಾಖಲೆಗಳು ಹೇಳುತ್ತಿದ್ದರೂ, ಪ್ರಾಣಿಗಳಿಗಾಗಿ ಯಾರು ಮಾಡಿದ್ದಾರೆ ಮತ್ತು ಅದನ್ನು ಯಾವಾಗ ನೋಂದಣಿ ಮಾಡಲಾಗಿದೆ ಎಂಬುದು ತಿಳಿದಿಲ್ಲ ಎಂದು ಗ್ರಾಮದ ಸರಪಂಚ ಬಪ್ಪ ಪಡವಾಲ್ ತಿಳಿಸಿದ್ದಾರೆ.
ಈ ಹಿಂದೆ ಗ್ರಾಮದಲ್ಲಿ ನಡೆಯುವ ಎಲ್ಲಾ ಆಚರಣೆಗಳಲ್ಲಿಯೂ ಮಂಗಗಳು ಭಾಗವಹಿಸುತ್ತಿದ್ದವು ಎಂದು ಗ್ರಾಮದ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.
ಮಂಗಗಳು ತಮ್ಮ ಮನೆಬಾಗಿಲಿನಲ್ಲಿ ಕಾಣಿಸಿಕೊಂಡಾಗ ಗ್ರಾಮಸ್ಥರು ಅವುಗಳಿಗೆ ಆಹಾರ ನೀಡುತ್ತಾರೆ. ಮಂಗಗಳಿಗೆ ಆಹಾರ ನೀಡದೆ ಯಾರು ವಾಪಸ್ ಕಳುಹಿಸುವುದಿಲ್ಲ ಎಂದಿದ್ದಾರೆ.