Saturday, 23rd November 2024

ಡಾಲರ್ ವಿರುದ್ಧ ರೂಪಾಯಿ ಮೌಲ್ಯ 83.06

ನವದೆಹಲಿ: ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಪತನ ಕಂಡಿದೆ.

ಬೆಳಗ್ಗೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 83.06ಕ್ಕೆ ತಲುಪಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿಯೇ ರೂಪಾಯಿ ಮೌಲ್ಯ 83ಕ್ಕೆ ಬಂದು ನಿಂತಿತ್ತು. ಇಂದು ಮತ್ತೆ 6 ಪೈಸೆ ಇಳಿಕೆಯಾಗಿದೆ.

ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 83.05 ಇದ್ದ ರೂಪಾಯಿ ಮತ್ತೆ ಕುಸಿತ ಕಂಡಿದೆ. ಒಂದು ಹಂತದಲ್ಲಿ 83.07ಕ್ಕೆ ಕುಸಿದಿತ್ತು. ಬಳಿಕ 83.06ಕ್ಕೆ ಬಂದಿದೆ. ಡಾಲರ್ ಮೌಲ್ಯ ಇತರ ಆರು ಕರೆನ್ಸಿಗಳ ವಿರುದ್ಧ ವೃದ್ಧಿಯಾಗಿದೆ. ಶೇ.0.07ರಷ್ಟು ವೃದ್ಧಿಯಾಗಿ 113.06 ಆಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.17 ಇಳಿಕೆಯಾಗಿ ಬ್ಯಾರಲ್​ಗೆ 92.25 ಡಾಲರ್ ಆಗಿದೆ. ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲದ ಬೆಲೆ ಬುಧವಾರ ಶೇ.0.25ರಷ್ಟು ಇಳಿಕೆಯಾಗಿ, ಬ್ಯಾರೆಲ್​ಗೆ 6,846 ರೂ. ಆಗಿತ್ತು.