ಕೊಲ್ಹಾರ: ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತ ಸಂಘ ಹಸೀರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಕೊಲ್ಹಾರ ಯುಕೆಪಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ರಸ್ತೆ ತಡೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಸರಕಾರದ ವಿರುದ್ಧ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ವಿರುದ್ಧ ಘೋಷಣೆ ಕೂಗಿದರು.
ರೈತ ಮುಖಂಡ ನಂದಬಸಪ್ಪ ಚೌದ್ರಿ ಹಾಗೂ ಸೋಮು ಬಿರಾದಾರ ಮಾತನಾಡುತ್ತಾ ಪ್ರತಿ ಟನ್ ಕಬ್ಬಿಗೆ 3500 ರ ವರೆಗೆ ದರ ನಿಗದಿ ಮಾಡಬೇಕು ಅ.27 ರ ವರೆಗೆ ಸರಕಾರಕ್ಕೆ ಹಾಗೂ ಕಾರ್ಖಾನೆ ಮಾಲಿಕರಿಗೆ ಗಡುವು ನೀಡುತ್ತಿದ್ದು ಮುಂದೆ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಹೇಳಿದರು.
ಅಕ್ಟೋಬರ್ 27 ಕ್ಕೆ ಅವಳಿ ಜಿಲ್ಲೆಯ ರೈತರು ಕೊಲ್ಹಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಬೇಕು ಎಂದು ಈ ಸಂದರ್ಭ ದಲ್ಲಿ ಅವರು ವಿನಂತಿಸಿಕೊಂಡರು.
ರಾಷ್ಟ್ರೀಯ ಹೆದ್ದಾರಿ ತಡೆದ ಪರಿಣಾಮ ಕೆಲಕಾಲ ವಾಹನಗಳ ಸಾಲು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು ಸ್ಥಳಕ್ಕೆ ಪಿಎಸ್ಐ ಪ್ರೀತಮ್ ನಾಯಕ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅವಳಿ ಜಿಲ್ಲೆಯ ಅನೇಕ ರೈತರು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.