Wednesday, 11th December 2024

ಹಬ್ಬ ಹರಿದಿನಗಳಿಂದ ಸಾಮರಸ್ಯ ಮೂಡುತ್ತದೆ: ಬಿ.ಡಿ ಪಾಟೀಲ

ಇಂಡಿ: ಹಬ್ಬ ಹರಿದಿನಗಳು ಜಾತ್ರೆಗಳು ಆಚರಣೆ ಮಾಡುವುದರಿಂದ ಜನರಲ್ಲಿ ಸಾಮರಸ್ಯ ಹಾಗೂ ಸಹೋದರತ್ವದ ಗುಣ ಬೆಳೆದು ನಾವೇಲ್ಲಾ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.

ತಾಲೂಕಿನ ಮಾರ್ಸನ್ನಹಳ್ಳಿ ಗ್ರಾಮದ ಶ್ರೀಮಹಾಲಕ್ಷ್ಮೀ ದೇವಿಜಾತ್ರಾಮಹೋತ್ಸವದ ಅಂಗವಾಗಿ ದೇಶಿಯ ಆಟಗಳಲ್ಲಿ ಒಂದಾದ ಪಗಡಿ ಪಂದ್ಯಾವಳಿ ಹಾಗೂ ಧರ್ಮ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತ ಭಾವೈಕ್ಯತೆಯ ಬೀಡು ದೇಶದಲ್ಲಿ ವಿವಿಧ ಧರ್ಮ ವಿವಿಧ ಸಂಸ್ಕೃತಿ ಆಚಾರ ವಿಚಾರಗಳು ವೇಷಭೂಷಣಗಳಿಂದ ಭಿನ್ನ ವಾಗಿದ್ದರೂ ಕೂಡಾ ನಾವೇಲ್ಲಾ ಭಾರತೀ ಯರು. ಗ್ರಾಮೀಣ ಭಾಗದಲ್ಲಿ ಕಬ್ಬಡ್ಡಿ, ಖೋಖೋ, ಅಟ್ಯಾಪಟ್ಯಾ, ಸುರಮನಿ, ಕುಸ್ತಿ, ಪಗಡಿ ಇಂತಹ ಆಟಗಳು ಮನುಷ್ಯನ ದೈಹಿಕ ಸದೃಡ ಜೊತೆ ನೆನಪಿನ ಶಕ್ತಿ ಹೆಚ್ಚಿಸುತ್ತವೆ.

ಯುವ ಸಮುದಾಯ ದೇಶಿಯ ಕ್ರೀಡೆಗಳ ಬಗ್ಗೆ ಆಸಕ್ತಿ, ಅಭಿರುಚಿ ಇರಬೇಕು .ಆಟಗಳು ಮಾನಸಿಕ ದೈಹಿಕ ಬೆಳವಣಿಗೆಗೆ ಸಹಕಾರಿ ಯಾಗಿವೆ. ಸ್ಪರ್ಧೆಗಳು ಆರೋಗ್ಯಕರವಾಗಿ ನಡೆಯಬೇಕು ಸೋಲು ಗೆಲುವು ಸಮಾನವಾಗಿ ಹಂಚಿಕೊಳ್ಳಬೇಕು ಇಂತಹ ಗುಣ ಇದ್ದವರು ಮುಂಬರುವ ದಿನಗಳಲ್ಲಿ ಒಳ್ಳೇಯ ನಾಯಕರಾಗುತ್ತಾರೆ. ಗ್ರಾಮಗಳು ಕಲುಷಿತ ಮಾಡಿ ಕೊಳ್ಳಬೇಡಿ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಂದರ ಜೀವನ ಸಾಗಿಸಿ ಎಂದು ಕರೆ ನೀಡಿದರು. ಆನಂದ ಮಹಾರಾಜರು ಸಾನಿಧ್ಯ ವಹಿಸಿದರು.

ಸಿದ್ದ ಡಂಗಾ, ಶ್ರೀಶೈಲಗೌಡ ಪಾಟೀಲ , ದಯಾನಂದ ಮಠ, ದಸ್ತಗಿರ ಜಾಮಾದಾರ, ರಾವತಪ್ಪ ವಾಲೀಕಾರ, ಸುರೇಶ ಮಸಳಿ, ಎಮ್,ಎಸ್ ಹೋಸುರ, ಶರಣಗೌಡ ಪಾಟೀಲ, ಪಂಚಪ್ಪ ಬೇವನೂರ, ಮೌಲಾಲಿ ಮುಜಾವರ,ಉಮೇಶ ದೊಡಮನಿ, ಸಿದ್ದರಾಮ ಜಮಾದಾರ, ಜಟ್ಟಿಂಗರಾಯ ಜಮಾದಾರ, ಯಲ್ಲಾಲ್ಲಿಂಗ ಪೂಜಾರಿ, ಬುಡೇಸಾಬ ಪಾಸೋಡಿ, ಟಿ.ಎಸ್ ಪೂಜಾರಿ, ಈರಣ್ಣಾ ಜಮಾದಾರ ಇದ್ದರು.