ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ 67 ಪೈಸೆ ವೃದ್ಧಿಯಾಗಿ 82.14ರಲ್ಲಿ ವಹಿವಾಟು ನಡೆಸಿತು. ಮಂಗಳವಾರದ 7 ಪೈಸೆ ವೃದ್ಧಿಯಾಗಿ 82.81 ಆಗಿತ್ತು. ಬುಧವಾರ ಬಲಿಪಾಡ್ಯಮಿ ನಿಮಿತ್ತ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯಚರಣೆ ಮಾಡಿರಲಿಲ್ಲ.
ಡಾಲರ್ ಸೂಚ್ಯಂಕ 110ಕ್ಕಿಂತ ಕೆಳಮಟ್ಟಕ್ಕೆ ಕುಸಿದಾಗ ರೂಪಾಯಿ ಬಲಗೊಳ್ಳಲಾ ರಂಭಿಸಿತು ಎಂದು ಅನಿಲ್ ಕುಮಾರ್ ಬನ್ಸಾಲಿ ತಿಳಿಸಿದರು.
‘ಡಾಲರ್ ಸೂಚ್ಯಂಕವು ವಿಶ್ವದ ಇತರ ಪ್ರಮುಖ ಆರು ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವನ್ನು ಅಳೆಹಯುವ ಮಾಪನವಾಗಿದೆ. ಸೂಚ್ಯಂಕವು ಸದ್ಯ ಶೇಕಡಾ 0.06 ವೃದ್ಧಿಯಾಗಿ 109.76ರಲ್ಲಿ ವಹಿವಾಟು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 90 ಡಾಲರ್ ಇದ್ದುದು ಇದೀಗ 94 ಡಾಲರ್ಗೆ ಏರಿಕೆಯಾಗಿದೆ. ಇದೂ ಸಹ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಭಾರತದ ರೂಪಾಯಿ ಬಲಗೊಳ್ಳಲು ಕಾರಣವೆನ್ನ ಲಾಗಿದೆ.