Wednesday, 11th December 2024

ನಿರ್ದೇಶಕ ಎಸ್ಮಾಯೆಲ್ ಶ್ರಾಫ್ ನಿಧನ

ಮುಂಬೈ: ನಿರ್ದೇಶಕ ಎಸ್ಮಾಯೆಲ್ ಶ್ರಾಫ್(62)ನಿಧನ ಹೊಂದಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಿರ್ದೇಶಕ ಎಸ್ಮಾಯೆಲ್ ಶ್ರಾಫ್ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆಂಧ್ರಪ್ರದೇಶ ಮೂಲದ ಎಸ್ಮಾಯಿಲ್ ಶ್ರಾಫ್ ಸುಮಾರು ಒಂದು ತಿಂಗಳ ಹಿಂದೆ ಹೃದಯಾಘಾತದ ಕಾರಣದಿಂದ ಆಸ್ಪತ್ರೆ ಸೇರಿದ್ದರು.

ಗೋವಿಂದ, ಪದ್ಮಿನಿ ಕೊಲ್ಹಾಪುರೆ ಮತ್ತು ಅಶೋಕ್ ಪಂಡಿತ್ ಈಗ ಅಗಲಿದ ಚಿತ್ರ ನಿರ್ದೇಶಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಹಿಸ್ತಾ ಅಹಿಸ್ತಾ, ಜಿದ್, ಅಗರ್, ಗಾಡ್ ಅಂಡ್ ಗನ್, ಪೋಲಿಸ್ ಪಬ್ಲಿಕ್, ಮಜ್ಧಾರ್, ದಿಲ್ ಅಖೀರ್ ದಿಲ್ ಹೈ, ಬುಲಂದಿ, ನಿಶ್ಚೈ, ಜುಟಾ ಸಚ್‌ ನಂತಹ ಅನೇಕ ಬಾಲಿವುಡ್ ಚಲನಚಿತ್ರಗಳನ್ನು ಎಸ್ಮಾಯೆಲ್ ಶ್ರಾಫ್ ನಿರ್ದೇಶಿಸಿದ್ದಾರೆ.

ನಿರ್ದೇಶಕರಾಗಿ ಅವರ ಕೊನೆಯ ಚಿತ್ರ ಥೋಡಾ ತುಮ್ ಬದ್ಲೋ ಥೋಡಾ ಹಮ್ 2004 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಆರ್ಯ ಬಬ್ಬರ್ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.