ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ಕರೋನಾ ವೈರಸ್ ಓಮಿಕ್ರಾನ್ ಉಪ ರೂಪಾಂತರಿ ವೈರಸ್ಗಳು ಮತ್ತೆ ಆರ್ಭಟಿಸಲು ಆರಂಭಿಸಿವೆ.
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಬಿಕ್ಯು 1 ಉಪ ರೂಪಾಂತರಿ ತಳಿಯ ಮೊದಲ ಪ್ರಕರಣ ವರದಿ ಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತೆ ಎದುರಾಗಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಗಂಟಲು ಕೆರೆತ, ಉಸಿರಾಟದ ಸಮಸ್ಯೆ ಕಾಡಿದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
ಏರ್ ಕಂಡೀಷನ್ ಇರುವ ಒಳಾಂಗಣ, ಗಾಳಿ, ಬೆಳಕು ಇಲ್ಲದ ಪ್ರದೇಶಗಳು, ಸಾರ್ವಜನಿಕ ಪ್ರದೇಶಗಳು, ಬಸ್ ಸ್ಟ್ಯಾಂಡ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ ತಪ್ಪದೇ ಮಾ ಧರಿಸಿ. ಎಲ್ಲಕ್ಕಿಂತ ಹೆಚ್ಚಾಗಿ ಕೋವಿಡ್ ಬೂಸ್ಟರ್ ಡೋಸ್ ಲಸಿಕೆಯನ್ನು ತಪ್ಪದೇ ಎಲ್ಲರೂ ಪಡೆಯಬೇಕು. ಹಬ್ಬಗಳ ಆಚರಣೆ ವೇಳೆ ಆದಷ್ಟೂ ಹೊರಾಂಗಣಗಳಲ್ಲಿ ಹಬ್ಬ ಆಚರಿಸಬೇಡಿ, ಜನದಟ್ಟಣೆ ಇರುವ ಪ್ರದೇಶಗಳಿಂದ ದೂರ ಇರಿ.
ಇನ್ನು ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿರುವವರು ಹಾಗೂ ಕ್ಯಾನ್ಸರ್ ನಿರೋಧಕ ಔಷಧ ತೆಗೆದುಕೊಳ್ಳುತ್ತಿರುವವರು ಬೂಸ್ಟರ್ ಡೋಸ್ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಕೆಮ್ಮುವಾಗ, ಸೀನುವಾಗ ಕರವಸ ಬಳಸಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಕೈಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿ. ಎಂದರಲ್ಲಿ ಉಗುಳಬೇಡಿ.
ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ಉಪ ರೂಪಾಂತರಿ ಬಿಕ್ಯು. 1 ಅತಿ ವೇಗದ ಪ್ರಸರಣ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಓಮಿಕ್ರಾನ್ನ ಹತ್ತು ಹಲವು ಉಪ ರೂಪಾಂತರಿಗಳು ವಿಶ್ವದ ಹಲವು ರಾಷ್ಟ್ರಗಳಲ್ಲಿ ಕರೋನಾ ಹೊಸ ಅಲೆ ಸೃಷ್ಟಿ ಯಾಗಲು ಕಾರಣವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಮತ್ತೊಂದು ಗಂಡಾಂತರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.