Saturday, 23rd November 2024

ಮುಸ್ಲಿಂ ಪ್ರಧಾನ ಮಂತ್ರಿ ಬೇಕಂತೆ !

#AsaduddinOwaisi

ವೀಕೆಂಡ್ ವಿತ್ ಮೋಹನ್

camohanbn@gmail.com

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಯವರ ಮಗಳು ಅಕ್ಷತಾ ಅವರ ಮದುವೆ ಬೆಂಗಳೂರಿನ ಚಾಮರಾಜು ಕಲ್ಯಾಣ ಮಂದಿರದಲ್ಲಿ ನಡೆದಿತ್ತು. ಅಕ್ಷತಾ ವರಿಸಿದ ಭಾರತೀಯ ಮೂಲದ ರಿಷಿ ಸುನಕ್, ಸುಮಾರು 200 ವರ್ಷ ಭಾರತ ವನ್ನಾಳಿದ ಬ್ರಿಟನ್ ದೇಶದ ಪ್ರಧಾನಿಯಾಗುತ್ತಾ ರೆಂದು ಅಂದು ಮೂರ್ತಿ ದಂಪತಿ ಪ್ರಾಯಶಃ ಊಹಿಸಿರಲಿಕ್ಕಿಲ್ಲ.

ರಿಷಿ ಈ ಉನ್ನತ ಹುದ್ದೆಗೇರಿದ್ದು ‘ಮೆರಿಟ್’ ಮೇಲೆಯೇ ಹೊರತು, ಜಾತಿ ಅಥವಾ ಧರ್ಮದ ಆಧಾರದ ಮೇಲಲ್ಲ. ಅವರು ಪ್ರಧಾನಿಯಾಗಿದ್ದಕ್ಕೆ ಬ್ರಿಟಿಷರಿಗಿಂತ ಹೆಚ್ಚು ಖುಷಿಪಟ್ಟಿದ್ದು ಭಾರತೀಯರು. ಭಾರತದ ಅಗಾಧ ಸಂಪತ್ತನ್ನು ಲೂಟಿ ಹೊಡೆದು ತಮ್ಮ ದೇಶವನ್ನು ಕಟ್ಟಿಕೊಂಡ ಬ್ರಿಟಿಷರು ಇಂದು ತಮ್ಮ ದೇಶದ ಆರ್ಥಿಕತೆಯನ್ನು ನಿರ್ವಹಿಸಲಾಗದೆ ತೊಳಲಾಡು ತ್ತಿದ್ದಾರೆ. ರಿಷಿ ಬ್ರಿಟನ್ ಪ್ರಧಾನಿಯಾಗಿದ್ದಕ್ಕೆ ಒಂದೆಡೆ ಭಾರತೀಯರಿಗೆ ಖುಷಿಯಾಗಿದ್ದರೆ, ಎಡಚರ (ಎಡಪಂಥೀಯರ) ಗುಂಪೊಂದು ಯಥಾಪ್ರಕಾರ ಹೊಸದೊಂದು ಟೊಳ್ಳು ಚರ್ಚೆಯನ್ನು ಶುರುಮಾಡಿದೆ.

‘ಕ್ರಿಶ್ಚಿಯನ್ ಬಹುಸಂಖ್ಯಾತ ಬ್ರಿಟನ್‌ನಲ್ಲಿ ಭಾರತೀಯ ಮೂಲದ ಅಲ್ಪಸಂಖ್ಯಾತನೊಬ್ಬ ಪ್ರಧಾನಿಯಾಗುವುದಾದರೆ, ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರು ಯಾಕೆ ಪ್ರಧಾನಿಯಾಗಬಾರದು?’ ಎಂದು ಪಶ್ಚಿಮ ಬಂಗಾಳ ಮೂಲದ ಪತ್ರಿಕೆಯೊಂದು ಪ್ರಶ್ನಿಸಿದ್ದರೆ, ಇದಕ್ಕೆ ಪೂರಕವಾಗಿ ಶಶಿ ತರೂರ್ ಅವರು ತಮ್ಮ ಟ್ವಿಟರ್ ಸಂದೇಶದಲ್ಲಿ ‘ವಿಸಿಬಲ್ ಅಲ್ಪಸಂಖ್ಯಾತರು’ ಎಂಬ ಪದವನ್ನು ಬಳಸಿದ್ದಾರೆ.

ಕಾಂಗ್ರೆಸ್ಸಿನ ಡಬಲ್ ಸ್ಟಾಂಡರ್ಡ್ ಎದ್ದು ಕಾಣಿಸುವುದೇ ಇಲ್ಲಿ; ನೇರವಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಂದು ಹೇಳಲಾಗದೆ ಈ ಪದವನ್ನು ಬಳಸಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತರೆಂದರೆ ಸಿಖ್ಖರು, ಜೈನರು, ಪಾರ್ಸಿಗಳೂ ಇದ್ದಾರೆ. ಆದರೆ ಕಾಂಗ್ರೆಸ್ಸಿನ ಪ್ರಕಾರ ಅಲ್ಪಸಂಖ್ಯಾತರೆಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮಾತ್ರ. ಈ ಸಮುದಾಯಗಳನ್ನು ತನ್ನ ಮತಬ್ಯಾಂಕಿನಂತೆ ದಶಕಗಳ ಕಾಲ ಬಳಸಿಕೊಂಡ ಕಾಂಗ್ರೆಸ್ ಅವರ ಓಲೈಕೆ ರಾಜಕಾರಣದಲ್ಲೇ ತೊಡಗಿತ್ತು. ಲಕ್ಷಾಂತರ ಜನರಿಗೆ ಉದ್ಯೋಗವಿತ್ತ ಪಾರ್ಸಿ ಧರ್ಮದ ರತನ್ ಟಾಟಾ, ಭಾರತೀಯ ಸೇನೆಗೆ ಅತಿಹೆಚ್ಚು ಕೊಡುಗೆ ನೀಡಿದ ಸಿಖ್ಖರು
ಕಾಂಗ್ರೆಸ್ಸಿಗರಿಗೆ ಅಲ್ಪಸಂಖ್ಯಾತರಾಗಿ ಕಾಣಿಸಲಿಲ್ಲ.

ಶಶಿ ತರೂರ್ ಮಾತಿಗೆ ಹಗರಣಗಳ ಸರದಾರ ಪಿ. ಚಿದಂಬರಂ ಕೂಡ ದನಿಗೂಡಿಸಿದ್ದಾರೆ. ತಮ್ಮ ಪಕ್ಷದಲ್ಲಿ ನೆಹರು
ಕುಟುಂಬೇತರರನ್ನು ಪ್ರಧಾನಿಯಾಗಲು ಬಿಡದವರು, ಅಲ್ಪಸಂಖ್ಯಾತ ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ. ಸೋನಿಯಾ ಗಾಂಽಯವರು ತಮ್ಮ ಕುಟುಂಬದವರಲ್ಲದ ಮನಮೋಹನ್ ಸಿಂಗ್‌ರನ್ನು ಪ್ರಧಾನಿಯಾಗಿಸಿ ರಿಮೋಟ್ ಮೂಲಕ ತಮಗಿಷ್ಟ ಬಂದಂತೆ ಆಡಿಸಿದ್ದನ್ನು, ಕಾಂಗ್ರೆಸ್ ಅಧ್ಯಕ್ಷಗಿರಿಯನ್ನೂ ನೆಹರೂ ಕುಟುಂಬಿಕರೇ ಅನುಭವಿಸಿಕೊಂಡು ಬಂದಿದ್ದನ್ನು ಭಾರತ ನೋಡಿಯಾಗಿದೆ.

ಆದರೆ ಕೆಲ ಕಾಂಗ್ರೆಸ್ಸಿಗರು ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಒದಗಿರುವ ಆತಂಕಕಾರಿ ಸ್ಥಿತಿಯನ್ನು ಪ್ರಶ್ನಿಸುವ ಬದಲು ಅಲ್ಪಸಂಖ್ಯಾತ ಪ್ರಧಾನಿಗಳ ಬಗ್ಗೆ ಮಾತಾಡುತ್ತಿರುವುದು ವಿಪರ್ಯಾಸ! ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ ಸೇರಿದಂತೆ ಮೂವರು ಮುಸ್ಲಿಂ ರಾಷ್ಟ್ರಪತಿಗಳನ್ನು ಈಗಾಗಲೇ ಕಂಡಿರುವ ಭಾರತದಲ್ಲಿ ಜಾರ್ಜ್ ಫೆರ್ನಾಂಡಿಸ್ ರಕ್ಷಣಾ
ಮಂತ್ರಿಯಾಗಿದ್ದರು. ದೇಶದಲ್ಲಿಂದು ಮುಸ್ಲಿಮರು- ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರಾಗಿ ಉಳಿದಿಲ್ಲ, ಅವರ ಸಂಖ್ಯೆ ಗಣನೀಯವಾಗಿ ಏರಿದೆ. ನಮ್ಮ ಸಂವಿಧಾನದ ಪ್ರಕಾರ, ಜಾತಿ-ಧರ್ಮಗಳನ್ನು ಮೀರಿ ಯಾರು ಬೇಕಾದರೂ ಮತ್ತು ಜನರ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಯಾವುದೇ ವ್ಯಕ್ತಿ ಭಾರತದ ಪ್ರಧಾನಿಯಾಗಬಹುದು.

‘ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗಬೇಕು’ ಎಂದಿದ್ದಾನೆ ಅಸಾದುದ್ದೀನ್ ಒವೈಸಿ. ಹಿಜಾಬಿಗೂ, ಅಲ್ಪ ಸಂಖ್ಯಾತ ಪ್ರಧಾನಿಗೂ ಏನು ಸಂಬಂಧ? ಮುಸ್ಲಿಮರನ್ನು ಭಾರತದಲ್ಲಿ ಬಹುಸಂಖ್ಯಾತರನ್ನಾಗಿಸಿ ಪ್ರಧಾನಿಪಟ್ಟ ಗಿಟ್ಟಿಸುವುದು ಈತನ ಉದ್ದೇಶವೇ ಹೊರತು, ಸಂವಿಧಾನದ ಆಶಯಗಳ ಮೂಲಕ ಪ್ರಧಾನಿಯಾಗುವುದಲ್ಲ. ಸಂವಿಧಾನ ಕ್ಕಿಂತಲೂ ಧರ್ಮವೇ ಮುಖ್ಯವೆಂದು ಬಹಿರಂಗವಾಗಿ ಹೇಳುವ ಇಂಥವರಿಗೆ ಅಲ್ಪಸಂಖ್ಯಾತ ಪ್ರಧಾನಿಯ ಬಗ್ಗೆ ಮಾತಾಡುವ ನೈತಿಕತೆ ಯಿಲ್ಲ.

ಹಿಜಾಬ್ ವಿಷಯದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಗೌರವಿಸದೆ ಅದರ ವಿರುದ್ಧ ಮಾತಾಡುವ ಇಂಥವರಿಂದ ಮತ್ತಿನ್ನೇನು ನಿರೀಕ್ಷಿಸಲು ಸಾಧ್ಯ? ಮುಸ್ಲಿಂ ಹೆಣ್ಣುಮಕ್ಕಳನ್ನು ಗೌರವಿಸದೆ ದೂರವಾಣಿ ಕರೆ ಮೂಲಕ ತಲಾಕ್ ನೀಡುತ್ತಿದ್ದ ವರನ್ನು ಬೆಂಬಲಿಸುವವರು ದೇಶಮೆಚ್ಚುವ ನಾಯಕರಾಗಲಾರರು. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಹಿಂದುವೊಬ್ಬ ಮುಖ್ಯಮಂತ್ರಿಯಾಗುವುದನ್ನು ಒಪ್ಪುವ ತಾಕತ್ತು ಇವರಿಗಿಲ್ಲ.

ಮಮತಾ ಬ್ಯಾನರ್ಜಿ ತಮ್ಮ ಪಕ್ಷದಡಿ ಮುಸ್ಲಿಮರನ್ನೋ ಕ್ರೈಸ್ತರನ್ನೋ ಸಿಎಂ ಮಾಡುವ ಧೈರ್ಯ ತೋರಲಿ ನೋಡೋಣ! ಈ
ಸಮುದಾಯದವರನ್ನು ಮತಬ್ಯಾಂಕನ್ನಾಗಿಸಿಕೊಂಡಿರುವ ನಾಯಕರು, ಈಗಲೂ ಮತ ಕ್ರೋಡೀಕರಣದ ಭಾಗವಾಗಿ
ಈ ಮಾತುಗಳನ್ನಾಡಿದ್ದಾರೆ, ತನ್ಮೂಲಕ ಹೊಸದೊಂದು ‘ಟೂಲ್‌ಕಿಟ್’ ಶುರುಮಾಡಿದ್ದಾರೆ!

ಜಗತ್ತಿನಲ್ಲಿ ಅತಿಹೆಚ್ಚು ವರ್ಣಭೇದ ಸಮಸ್ಯೆಯನ್ನನು ಭವಿಸಿದ ದೇಶ ಅಮೆರಿಕ. ಇದರ ಅಧ್ಯಕ್ಷರಾಗಿ ಕಪ್ಪುಬಣ್ಣದ ಬರಾಕ್ ಒಬಾಮ ಆಯ್ಕೆಯಾದಾಗ ಅವರೆದುರು ಬೆಟ್ಟದಷ್ಟು ಸವಾಲುಗಳಿದ್ದವು. ಸಂಪೂರ್ಣ ಮೆರಿಟ್ ಆಧಾರದ ಮೇಲೆ ಅಧ್ಯಕ್ಷರಾಗಿದ್ದ ಅವರನ್ನು ಅಮೆರಿಕನ್ನರು ‘ಕರಿಯ ಜನಾಂಗದವ’ ಎಂದು ನೋಡಲೇ ಇಲ್ಲ. ಅಂತೆಯೇ, ಮೆರಿಟ್ ಆಧಾರದ ಮೇಲೆಯೇ ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರ ಮೂಲಧರ್ಮಕ್ಕೂ ಅವರ ಪ್ರಧಾನಿ ಪಟ್ಟಕ್ಕೂ ಸಂಬಂಧವಿಲ್ಲ.

ರಿಷಿ ಎದುರಲ್ಲೂ ಬಹಳಷ್ಟು ಸವಾಲುಗಳಿದ್ದು, ಅವನ್ನು ಮೆಟ್ಟಿನಿಲ್ಲುವ ತಾಕತ್ತು ಅವರಿಗಿದೆ. ಮುಸ್ಲಿಂ ಪ್ರಧಾನಿ ಬೇಕೆನ್ನುವವರಿಗೆ ಮೆರಿಟ್ ಆಧಾರದ ನಾಯಕ ಬೇಕಿಲ್ಲ. ಅಬ್ದುಲ್ ಕಲಾಂರನ್ನೇ ಮಹಾನಾಯಕರನ್ನಾಗಿ ಒಪ್ಪಿಕೊಳ್ಳದವರು ಪ್ರಧಾನಿ ಕನಸನ್ನು
ಹೇಗೆ ತಾನೇ ಕಾಣಲಾದೀತು? ತನ್ನ ಮತಾಂಧತೆಯ ಮೂಲಕ ಸಾವಿರಾರು ಜನರನ್ನು ಮತಾಂತರಿಸಿದ ಟಿಪ್ಪು ಸುಲ್ತಾನ್ ಇಂಥವರಿಗೆ ನಾಯಕನಾಗಿ ಕಾಣುತ್ತಾನೆ, ಅವನ ಹೆಸರಿನಲ್ಲಿ ಜಯಂತಿಯ ಆಚರಣೆಯಾಗುತ್ತದೆ. ಆದರೆ ಮಹೋನ್ನತ ಮುಸ್ಲಿಂ ನಾಯಕ ಅಬ್ದುಲ್ ಕಲಾಂರ ಜಯಂತಿ ಆಚರಿಸಿ ಮುಂದಿನ ಪೀಳಿಗೆಗೆ ಸೂರ್ತಿ ತುಂಬುವುದಿಲ್ಲ.

ಬದಲಿಗೆ ಟಿಪ್ಪುವನ್ನು ಆರಾಧಿಸುವ ಮೂಲಕ ಮುಂದಿನ ಪೀಳಿಗೆಯವರಿಗೆ ಮತ್ತಷ್ಟು ಹಿಂಸಾಚಾರ ಹೇಳಿಕೊಡುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿನ ಅಸಮಾನತೆ ಮತ್ತು ಬಡತನವನ್ನೇ ಗುರಿಯಾಗಿಸಿಕೊಂಡು ಇಂಗ್ಲೆಂಡಿನ ರಾಣಿ
೧೯ನೇ ಶತಮಾನದಲ್ಲಿ ಭಾರತದಲ್ಲಿ ಮತಾಂತರಕ್ಕೆ ಬೆಂಬಲಿಸಿದ್ದರು. ತನ್ಮೂಲಕ ಇಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಿಸುವ ದುರುದ್ದೇಶ ಇದರಲ್ಲಡಗಿತ್ತು. ಸೇವೆಯ ಹೆಸರಲ್ಲಿ ಮದರ್ ತೆರೇಸಾ ನಡೆಸಿದ ಮತಾಂತರದ ಕುರಿತಾಗಿ ಭಾರತದಲ್ಲಿ ಚರ್ಚೆಗಳಾಗಲೇ ಇಲ್ಲ, ಅವರ ಸೇವೆಯನ್ನಷ್ಟೇ ಹೊರಜಗತ್ತಿಗೆ ತಿಳಿಸಲಾಯಿತು, ಅವರು ನಡೆಸುತ್ತಿದ್ದ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳ ವಿಚಾರವನ್ನೂ ಮುಚ್ಚಿಹಾಕಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ನೊಬೆಲ್ ಪುರಸ್ಕಾರವೂ ಅವರಿಗೆ ದಕ್ಕಿತು. ಇದನ್ನು ಯಾವ ಕಾರಣಕ್ಕಾಗಿ ನೀಡಲಾಗಿ ತ್ತೆಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ, ನಿಮಗಾಗಲೇ ಅರ್ಥವಾಗಿರಬೇಕು. ‘ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರವಾಗಿದೆ, ಹೀಗಾಗಿ ನಮ್ಮವರೂ ಪ್ರಧಾನಿಯಾಗಬೇಕು’ ಎನ್ನುವವರು, ಸೇವೆಯ ಹೆಸರಲ್ಲಿ ನಡೆದ ಮತಾಂತರವನ್ನು ಭಾರತೀಯರು ಒಪ್ಪುವುದಿಲ್ಲವೆಂಬುದನ್ನು ಅರಿಯಬೇಕು.

ಯಾವುದೇ ಧರ್ಮದವರು ಭಾರತದ ಪ್ರಧಾನಿಯಾಗುವ ಅವಕಾಶವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಈ ಅವಕಾಶವನ್ನು ನಿರ್ಧರಿಸುವುದು ಸರ್ವಧರ್ಮೀಯ ಭಾರತೀಯರು. ಬ್ರಿಟನ್‌ನಲ್ಲಿ ಎಲ್ಲಿಯೂ ಹಿಂದೂಗಳು ಮತಾಂತರದ ಕಾರ್ಯದಲ್ಲಿ ತೊಡಗಿಸಿಕೊಂಡ, ಬ್ರಿಟಿಷರ ಮೇಲೆ ಆಕ್ರಮಣ ಮಾಡಿದ, ಚರ್ಚುಗಳನ್ನು ನಾಶಪಡಿಸಿ ದೇವಸ್ಥಾನ ಕಟ್ಟಿಸಿದ ಉದಾಹರಣೆ ಗಳಿಲ್ಲ. ಬ್ರಿಟನ್ ಪ್ರಜೆಗಳಿಗೆ ಹಿಂದೂಗಳು ಎಂದೂ ಅನ್ಯಾಯ ಮಾಡಿಲ್ಲ.

ಬದಲಾಗಿ ಭಾರತೀಯ ಮೂಲದವರನ್ನು ಪ್ರಧಾನಿ ಯಾಗಿಸುವ ಮೂಲಕ, ತಮ್ಮ ಪೂರ್ವಜರು ಮಾಡಿದ ಕರ್ಮಕ್ಕೆ ಬ್ರಿಟಿಷರು ಪ್ರಾಯಶ್ಚಿತ್ತ ಪಟ್ಟಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಹಿಂದೂ ಮಠಗಳು ನೀಡಿರುವ ಕೊಡುಗೆ ಕ್ರೈಸ್ತ ಮಿಷನರಿ ಗಳಿಗಿಂತ ಕಮ್ಮಿಯೇನಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ, ನೀಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠವನ್ನು ಮರೆಯಲಾದೀತೇ? ಈ ಮಠದಲ್ಲಿ ಧರ್ಮವನ್ನು ಮೀರಿದ ‘ದೈನಂದಿನ ಅನ್ನದಾಸೋಹ’ ದಶಕ ಗಳಿಂದಲೂ ನಡೆದುಕೊಂಡು ಬಂದಿದೆ.

ಕ್ರೈಸ್ತ ಮಿಷನರಿಗಳ ರೀತಿಯಲ್ಲಿ ಮಠಗಳಲ್ಲಿ ಮತಾಂತರದ ಉದ್ದೇಶದಿಂದ ಇಂಥ ದಾಸೋಹಗಳು ನಡೆಯುವುದಿಲ್ಲ.
ಬಲವಂತದ ಮತಾಂತರ ಕಾಯ್ದೆಯನ್ನು ವಿರೋಧಿಸುವವರು ತಮ್ಮ ಧರ್ಮದವರು ಯಾಕೆ ಪ್ರಧಾನಿಗಳಾಗಬಾರದೆಂದು ಪ್ರಶ್ನಿಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರು ರಚಿಸಿರುವ ಸಂವಿಧಾನವನ್ನು ಒಪ್ಪುವ ಈ ದೇಶದ ಯಾವುದೇ
ವ್ಯಕ್ತಿಯು ನಮ್ಮ ಪ್ರಧಾನಿಯಾಗಬಹುದು. ಸಂವಿಧಾನವನ್ನು ಸುಡಲು ಕರೆನೀಡುತ್ತೇನೆಂದು ಹೇಳಿದ್ದ ಪೆರಿಯಾರ್‌ನನ್ನು
ಬೆಂಬಲಿಸಿದ್ದ ಎಡಚರ ಬೆಂಬಲಿತ ಪತ್ರಿಕೆಯೊಂದು, ಮುಸ್ಲಿಮರು ಪ್ರಧಾನಿಯಾಗಬೇಕೆಂಬ ಚರ್ಚೆಯನ್ನು ಹುಟ್ಟುಹಾಕಿರುವುದು ಹಾಸ್ಯಾಸ್ಪದ.

ಮುಸ್ಲಿಂ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅವೈಜ್ಞಾನಿಕ ಪದ್ಧತಿಗಳನ್ನು ಬೆಂಬಲಿಸುವ ಅಸಾದುದ್ದೀನ್ ಒವೈಸಿ ಯಂಥವರು ತಮ್ಮ ಸಮುದಾಯದಲ್ಲಿ ನಡೆಯುತ್ತಿರುವ ಶೋಷಣೆಗಳತ್ತ ಮೊದಲು ಗಮನ ಹರಿಸಲಿ. ತಾವು ಮಾಡುತ್ತಿರುವ ದುರುದ್ದೇಶದ ಕೆಲಸಗಳು ತಮ್ಮ ಮುಂದಿನ ಪೀಳಿಗೆಯವರಿಗೆ ತಲುಪದಿರುವಂತೆ ಆತ ನೋಡಿಕೊಂಡರೆ ಸಾಕು, ಅದೇ ಆತ
ಮುಸ್ಲಿಮರಿಗೆ ಮಾಡುವ ಬಹುದೊಡ್ಡ ಉಪಕಾರ.

ಕಾಶ್ಮೀರದಲ್ಲಿ ನಡೆದ ಪಂಡಿತರ ಭೀಕರ ಹತ್ಯಾಕಾಂಡದ ರೂವಾರಿ ಯಾಸಿನ್ ಮಲಿಕ್‌ನನ್ನು ಬೆಂಬಲಿಸುವವರಿಗೆ ಸಂವಿಧಾನ ದಲ್ಲಿನ ಜಾತ್ಯತೀತತೆಯ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಪೌರತ್ವ ನೀಡುವ ಕಾಯ್ದೆಯನ್ನು ವಿರೋಧಿಸಿದವರು ಯಾವ ಮುಖವಿಟ್ಟುಕೊಂಡು ಪ್ರಧಾನಿಯಾಗುವ ಇಂಗಿತವನ್ನು ವ್ಯಕ್ತಪಡಿಸು ತ್ತಾರೆ? ಇಸ್ಲಾಮಿಕ್ ದೇಶಗಳಲ್ಲಿನ ಹಿಂದೂಗಳ ಹೀನಾಯ ಸ್ಥಿತಿಯನ್ನು ಕಂಡು ಮರುಗದ ಎಡಚರು, ಭಾರತದ ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ.

ಮೊದಲೇ ಹೇಳಿದಂತೆ, ನಮ್ಮ ಸಂವಿಧಾನದ ಆಶಯವನ್ನು ಗೌರವಿಸುವ ಯಾರು ಬೇಕಾದರೂ ಭಾರತದ ಪ್ರಧಾನಿ ಯಾಗಬಹುದು; ಆದರೆ ಅದಕ್ಕೂ ಮೊದಲು ಅವರು ನಮ್ಮ ಸಂವಿಧಾನವನ್ನು ಗೌರವಿಸುವುದನ್ನು ಕಲಿಯಲಿ.