Wednesday, 28th July 2021

ಅಣುಬಾಂಬ್ ಅಲಂಕಾರಕ್ಕಲ್ಲ ಎಂಬುದು ಭಾರತಕ್ಕೂ ಗೊತ್ತಿದೆ

ಪ್ರಚಲಿತ

ಪ್ರೀತಮ್ ಕೆಮ್ಮಾಯಿ

ಮಾತೆತ್ತಿಿದರೆ ‘ಅಣು ಬಾಂಬ್ ಇದೆ, ಹಾಕಿಯೇ ಬಿಡ್ತೀವಿ’ ಅಂತ ಪಾಕಿಸ್ತಾಾನ ಆಗಾಗ ಬೆದರಿಸುತ್ತಲೇ ಬಂದಿದೆ. ಮೂವತ್ತು ವರ್ಷಗಳಿಂದಲೂ ನೆರೆ ದೇಶಕ್ಕೆೆ ಅದೇ ಕೆಲಸ. ಆದರೆ, ಅದರ ಪರಿಣಾಮ ಏನಾದೀತು ಅನ್ನೋೋ ಕಲ್ಪನೆಯೂ ಅವರಿಗೆ ಇದ್ದಂತಿಲ್ಲ. ವ್ಯತಿರಿಕ್ತವಾಗಿ, ಭಾರತ ಯಾವತ್ತೂ ಅಣ್ವಸ್ತ್ರದ ಬೆದರಿಕೆ ಒಡ್ಡಿಿಲ್ಲ. ನಮ್ಮ ಅಣ್ವಸ್ತ್ರಗಳು ಅನಿವಾರ್ಯವೇ ಹೊರತು, ಯಾವ ಕಾರಣಕ್ಕೂ ಮೊದಲು ಬಳಸೋದಿಲ್ಲ ಅನ್ನೋೋ ಮಾತನ್ನು ಭಾರತ ವಿಶ್ವಸಮುದಾಯಕ್ಕೆೆ ಕೊಟ್ಟಾಾಗಿದೆ. ಅತ್ಯಂತ ಶಾಂತಿಪ್ರಿಿಯ ಪ್ರಧಾನಿ ಎಂದೇ ಕರೆಸಿಕೊಳ್ಳುವ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು, ಲೋಕಸಭೆಯಲ್ಲೇ ಭರವಸೆ ಕೊಟ್ಟಿಿದ್ದರು. ನಮ್ಮ ಆತ್ಮರಕ್ಷಣೆಗಾಗಿ, ನಾವು ಅಣ್ವಸ್ತ್ರ ತಯಾರಿಸುತ್ತೇವೆ.

ಅಕ್ಕಪಕ್ಕದ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಹೊಂದಿರುವಾಗ, ನಾವು ಶಾಂತಿಪ್ರಿಿಯರು ಅಂತ ಕೈ ಕಟ್ಟಿಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಆದರೆ, ನಾವು ಯಾವತ್ತೂ ಯಾರ ಮೇಲೂ ಅಣ್ವಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂದು ಘೋಷಿಸಿದ್ದರು. ವಾಜಪೇಯಿಯವರ ಮಾತನ್ನೇ ತಪ್ಪಾಾಗಿ ಅರ್ಥೈಸಿಕೊಂಡಿರುವಂತಿದೆ ಪಾಕಿಸ್ತಾಾನ. ನಾವು ಮೊದಲು ಬಳಸಲ್ಲ ಅಂದರೆ, ಬಳಸೋದೇ ಇಲ್ಲವೇನೋ ಎಂದು ಪಾಕಿಸ್ತಾಾನ ತಿಳಿದುಕೊಂಡಂತಿದೆ. ಅದರ ಉದ್ಧಟತನ ಎಷ್ಟಿಿದೆಯೆಂದರೆ, ತಾನು ಅಣುಬಾಂಬ್ ತಯಾರಿಸಿರುವುದೇ ಭಾರತದ ವಿರುದ್ಧ ಪ್ರಯೋಗಿಸಲು ಎಂದು ಘಂಟಾಘೋಷವಾಗಿ ಹೇಳಿದೆ. ವಾಜಪೇಯಿಯವರು ಅಣ್ವಸ್ತ್ರ ಪರೀಕ್ಷೆ ನಡೆಸಿ, ನಾವು ಮೊದಲು ಬಳಸಲ್ಲ ಅಂತ ಹೇಳಿ 20 ವರ್ಷಗಳೇ ಸಂದಿವೆ. ಈ 20 ವರ್ಷಗಳಲ್ಲಿ ಭಾರತ ಯಾವತ್ತೂ ಅಣ್ವಸ್ತ್ರ ಬಳಸುವ ಮಾತನ್ನಾಾಡಿಲ್ಲ. ಅಣ್ವಸ್ತ್ರ ಇದೆ ಯಾವತ್ತೂ ಬಾಯ್ಬಿಿಟ್ಟು ಹೇಳಿ ಯಾರನ್ನೂ ಹೆದರಿಸುವ ಪ್ರಯತ್ನ ಮಾಡಿಲ್ಲ.

ಪಾಕಿಸ್ತಾಾನದ ಜನಕ ಜಿನ್ನಾಾರ ಸ್ವಾಾರ್ಥ, ಅವರ ಉತ್ತರಾಧಿಕಾರಿಗಳ ರಕ್ತದಲ್ಲೂ ಹರಿದು ಬಂದಿತ್ತು. ಅದು ಸೇನೆಗೂ ತಗುಲಿ, ಇಡೀ ಪಾಕಿಸ್ತಾಾನಕ್ಕೆೆ ವ್ರಣವಾಗಿ ಬಾಧಿಸ್ತಿಿದೆ. ಕೆರೆದಷ್ಟೂ ಗಾಯ ದೊಡ್ಡದಾಗೋದೇ ವಿನಾ ವಾಸಿಯಾಗಿದ್ದನ್ನು ಎಲ್ಲಾದರೂ ನೋಡಿದ್ದೀರಾ? ಕೆರೆದು ಕೆರೆದು ಕಳೆದ 70 ವರ್ಷಗಳಲ್ಲಿ ಪಾಕಿಸ್ತಾಾನದ ವ್ರಣದಲ್ಲಿ ಈಗ ಕೀವು ಸೋರುತ್ತಿಿದೆ. ಮುಲಾಮು ಎಲ್ಲೂ ಸಿಗ್ತಿಿಲ್ಲ. ಎಲ್ಲಿ ಪಾಕಿಸ್ತಾಾನದ ಸೋಂಕು ತಗುಲುತ್ತೋೋ ಅನ್ನೋೋ ಭಯ ವಿಶ್ವದ ಇತರ ರಾಷ್ಟ್ರಗಳನ್ನು ಕಾಡುತ್ತಿಿದೆ. ಹೀಗೆ ಜಗತ್ತಿಿನ ಮುಂದೆ ದೈನೇಸೀ ಸ್ಥಿಿತಿಯಲ್ಲಿ ಅಂಗಲಾಚಿ ನಿಂತಿರೋ ಪಾಕಿಸ್ತಾಾನಕ್ಕೆೆ ಮಾನ ಮುಚ್ಚಿಿಕೊಳ್ಳಲು ಬಟ್ಟೆೆ ಇಲ್ಲ. ಹೊಟ್ಟೆೆ ತುಂಬಿಕೊಳ್ಳಲು ಅನ್ನವಿಲ್ಲ. ಆದರೂ ಭಾರತದ ಮೇಲೆ ಕಣ್ಣು.

ಪಾಕಿಸ್ತಾಾನದ ಈಗಿನ ನಾಯಕನದೂ ಅದೇ ಕಥೆ. ಭಾರತ ದ್ವೇಷವನ್ನೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೊಡ್ಡದಾಗಿ ಮುದ್ರಿಿಸಿ ಪ್ರಧಾನಿಯಾದ ಕ್ರಿಿಕೆಟಿಗ ಇಮ್ರಾಾನ್ ಖಾನ್, ಮತ್ತೆೆ ಭಾರತವನ್ನು ಕೆಣಕುತ್ತಿಿದ್ದಾರೆ. ಕಾಶ್ಮೀರಕ್ಕಾಾಗಿ ಯುದ್ಧಕ್ಕೂ ಸಿದ್ಧ ಎಂದು ಘೋಷಿಸಿದ್ದಾರೆ. ಯುದ್ಧವೆಂದರೆ ಅದೇನು ಕ್ರಿಿಕೆಟ್ ಮೈದಾನದಲ್ಲಿ ಸಿಕ್ಸರ್ ಹೊಡೆದಂತೆ ಅಂದುಕೊಂಡಿದ್ದಾಾರೆಯೇ? ಕಾಶ್ಮೀರ ಬಿಡಿ, ಪಾಕಿಸ್ತಾಾನದ ಅಧೀನದಲ್ಲಿರೋ ಸಿಂಧ್, ಬಲೂಚಿಸ್ತಾಾನ, ಗಿಲ್ಗಿಿಟ್, ಬಾಲ್ಟಿಿಸ್ತಾಾನ್, ಪಖ್ತೂನಿಸ್ತಾಾನ್-ಯಾವುದೂ ಕೂಡಾ ಪಾಕಿಸ್ತಾಾನದ ವಶದಲ್ಲಿ ಉಳಿಯೋ ಲಕ್ಷಣಗಳು ಕಾಣ್ತಿಿಲ್ಲ. ಭಾರತದಲ್ಲಿ ಅಭಿವೃದ್ಧಿಿ ಕಂಡಿರೋ ಈ ಪ್ರಾಾಂತ್ಯದ ಜನತೆ ಅಲ್ಲಲ್ಲಿ ಪಾಕಿಸ್ತಾಾನದ ವಿರುದ್ಧ ಒಗ್ಗೂಡುತ್ತಿಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನೋೋ ಘೋಷಣೆಗಳು ಪಾಕಿಸ್ತಾಾನದ ಒಡಲಲ್ಲಿ ಮೊಳಗುತ್ತಿಿವೆ. ಅದು ಇಮ್ರಾಾನ್ ಖಾನ್ ಮಂದ ಕಿವಿಗೆ ಬಿದ್ದಂತಿಲ್ಲ.

ಆಗಸ್‌ಟ್‌ 14ರಂದು ಪಾಕಿಸ್ತಾಾನದ ಸ್ವಾಾತಂತ್ರ್ಯೋೋತ್ಸವ. ಅವತ್ತು ಭಾಷಣ ಮಾಡಿದ ಇಮ್ರಾಾನ್, ‘ಬಾಲಕೋಟ್‌ಗಿಂತಲೂ ದೊಡ್ಡ ದಾಳಿಗೆ ಭಾರತ ಸಿದ್ಧವಾಗಿದೆ ಅಂದರು. ಅಲ್ಲಿಗೆ ಎರಡು ವಿಚಾರ ಸ್ಪಷ್ಟವಾಯಿತು. ಒಂದು, ಬಾಲಕೋಟ್ ಮೇಲೆ ಭಾರತ ದೊಡ್ಡ ದಾಳಿ ನಡೆಸಿದ್ದನ್ನು ಪಾಕಿಸ್ತಾಾನವೇ ಒಪ್ಪಿಿಕೊಂಡಂತಾಗಿದೆ. ಮತ್ತೊೊಂದು, ಭಾರತದ ಮುಂದಿನ ದಾಳಿ ಹಿಂದಿಗಿಂತ ಭಯಾನಕವಾಗಿರಲಿದೆ ಎನ್ನುವುದು. 65 ವರ್ಷಗಳಲ್ಲಿ ಯುದ್ಧದಲ್ಲಿ ನಾಲ್ಕು ಬಾರಿ ಸೋತರೂ, ಅದು ಬುದ್ಧಿಿ ಕಲಿಯಲೇ ಇಲ್ಲ. ಕಲಿಯಲಿಲ್ಲ ಎನ್ನುವದಕ್ಕಿಿಂತ ನಾವು ಕಲಿಸಲಿಲ್ಲ ಎನ್ನುವುದೇ ಹೆಚ್ಚು ಅರ್ಥಪೂರ್ಣ. ವಾಜಪೇಯಿಯವರೂ ಅಷ್ಟೇ, ಕಾರ್ಗಿಲ್ಗೆ ದಂಡೆತ್ತಿಿ ಬಂದವರನ್ನು ಒದ್ದೋಡಿಸಿದರೇ ವಿನಾ, ಗಡಿ ದಾಟಿ ಬುದ್ಧಿಿ ಕಲಿಸುವ ಗೋಜಿಗೆ ಹೋಗಲಿಲ್ಲ.

ಪಾಕಿಸ್ತಾಾನದ ಪುಂಡಾಟಉಪಟಳ ಅತಿಯಾಯ್ತು, ಮುಗಿಸ್ಬೇಕು ಅಂತ ಭಾರತೀಯ ನಾಯಕತ್ವ ನಿರ್ಧರಿಸಿ ಉರಿ ದಾಳಿ ಬೆನ್ನಲ್ಲೇ ಸರ್ಜಿಕಲ್ ಸ್ಟ್ರೈಕ್ ನಡೆಸಿತು, ಭಾರತ. ಅವತ್ತೇ, ಗಡಿ ದಾಟಿ ಹೊಡೆಯಲು ಸಿದ್ಧ ಅಂತ ಪಾಕಿಸ್ತಾಾನಕ್ಕೆೆ ಮೊದಲ ಎಚ್ಚರಿಕೆ ನೀಡಿತ್ತು. ಆದರೂ ಪಾಕ್ ಎಚ್ಚೆೆತ್ತುಕೊಳ್ಳಲಿಲ್ಲ. ಈ ಮೂಲಕ ಭಾರತ ಎರಡು ವಿಚಾರಗಳನ್ನು ಪಾಕಿಸ್ತಾಾನಕ್ಕೆೆ ಸ್ಪಷ್ಟಪಡಿಸಿದೆ. ಒಂದು ಅವಶ್ಯಬಿದ್ದರೆ ನಮ್ಮ ಸೇನೆ ಮತ್ತೆೆ ಲಾಹೋರ್‌ಗೆ ನುಗ್ಗಲು ರೆಡಿಯಿದೆ. ಎರಡನೆಯದ್ದು, ನಮ್ಮ ವಾಯಪಡೆ ಇಸ್ಲಾಾಮಾಬಾದ್ ಮೇಲೆ ಆಕ್ರಮಣ ಮಾಡಲು ಸಿದ್ಧವಿದೆ. ಆದರೆ, ಪಾಕಿಸ್ತಾಾನಕ್ಕೆೆ ಈ ಎರಡೂ ವಿಚಾರಗಳು ಅರ್ಥವಾದಂತಿಲ್ಲ. ಕಾಶ್ಮೀರದ ಸ್ವಾಾಯತ್ತತೆ ರದ್ದುಪಡಿಸಿದ್ದೇ ತಡ, ಮತ್ತೆೆ ಕಾಲು ಕೆರೆಯತೊಡಗಿದೆ. ಅದೇ ಹಳಸಲು ಡೈಲಾಗ್ ಹೊಡೀತಿದೆ. ಅಣುಬಾಂಬ್ ಹಾಕ್ತೀವಿ ಅಂತ ಬೆದರಿಸ್ತಿಿದೆ.

ಕಾಶ್ಮೀರದಲ್ಲಿ ಕೂದಲೂ ಕೊಂಕದಂತೆ 370ನೇ ವಿಧಿ ರದ್ದು ಮಾಡಿರೋ ಮೋದಿ ಸರಕಾರಕ್ಕೆೆ, ಪಾಕಿಸ್ತಾಾನದ ಈ ಬೆದರಿಕೆ ದೊಡ್ಡ ವಿಚಾರವೇನಲ್ಲ. ಆದರೆ, ಅದಕ್ಕೊೊಂದು ಅಂತ್ಯ ಹಾಡಲೇ ಬೇಕಲ್ಲ. ಹೀಗಾಗಿ ಭಾರತ ಫೈನಲ್ ವಾರ್ನಿಂಗ್ ಕೊಟ್ಟಿಿದೆ. ಸಾಕು ಅತಿಯಾಯ್ತು. ಬಾಲ ಬಿಚ್ಚಿಿದ್ರೆೆ ಹುಷಾರ್. ಅಣು ಬಾಂಬ್ ನಮ್ಮಲ್ಲೂ ಇದೆ ಅಂತ ಪಾಕಿಸ್ತಾಾನದ್ದೇ ಧಾಟಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ಕೊಟ್ಟಿಿದ್ದಾರೆ. ನಾವು ಮೊದಲು ಅಣ್ವಸ್ತ್ರ ಪ್ರಯೋಗಿಸಲ್ಲ ಅನ್ನೋೋ ನೀತಿ ಇರೋದು ನಿಜ. ಆದರೆ, ಭವಿಷ್ಯದಲ್ಲಿ ಅದು ಬದಲಾಗಲ್ಲ ಎಂದೇನಿಲ್ಲ. ಸಂದರ್ಭ ನೋಡಿಕೊಂಡು ನೀತಿ ಬದಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಉದ್ಭವವಾಗುವ ಪರಿಸ್ಥಿಿತಿ ನೋಡಿಕೊಂಡು ‘ನೋ ಫಸ್‌ಟ್‌ ಯೂಸ್ ಪಾಲಿಸಿ’ ಬದಲಾಗುತ್ತದೆ ಎನ್ನುವ ಮೂಲಕ ಪಾಕಿಸ್ತಾಾನಕ್ಕೆೆ ವಾರ್ನಿಂಗ್ ಕೊಟ್ಟಿಿದ್ದಾರೆ ರಾಜನಾಥ್ ಸಿಂಗ್.

ಅಲ್ಲಿಗೆ, ಭಾರತ ಬದಲಾಗಿದೆ. ಕಾಶ್ಮೀರ ವಿಚಾರದಲ್ಲಿ ಇನ್ನಿಿಲ್ಲದ ಕಸರತ್ತು ನಡೆಸ್ತಿಿರೋ ಪಾಕಿಸ್ತಾಾನ, ಏನಾದರೂ ಯಾಮಾರಿ ಕೆಣಕಿದರೆ, ಕಥೆ ಮುಗಿಸೋಕ್ಕೆೆ ಭಾರತವೂ ರೆಡಿಯಾಗಿದೆ. ಚೀನಾ ಹೊರತುಪಡಿಸಿ ಇಡೀ ಜಗತ್ತೇ ಕೈಬಿಟ್ಟಿಿರೋ ಪಾಕಿಸ್ತಾಾನ, ಯುದ್ಧದಂತಹ ತೀವ್ರವಾದ ಹೆಜ್ಜೆೆ ಇಡಲು ಮುಂದಾಗೋದು ಸಾಧ್ಯವೇ ಇಲ್ಲ. ಒಂದು ವೇಳೆ ಅಂತಹ ದುಸ್ಸಾಾಹಸಕ್ಕೆೆ ಕೈ ಹಾಕಿದ್ರೆೆ, ಈ ಬಾರಿ ಶಾಸ್ತಿಗ್ಯಾರಂಟಿ.

One thought on “ಅಣುಬಾಂಬ್ ಅಲಂಕಾರಕ್ಕಲ್ಲ ಎಂಬುದು ಭಾರತಕ್ಕೂ ಗೊತ್ತಿದೆ

Leave a Reply

Your email address will not be published. Required fields are marked *