Monday, 30th January 2023

ಅಪಾಯಕಾರಿಯಾಗುತ್ತಿರುವ ಆನ್‌ಲೈನ್ ಆಟದ ಗೀಳು

ಪ್ರಚಲಿತ

ಶಶಿಧರ ಹಾಲಾಡಿ
ಎಚ್ಚರಿಕೆಯ ಗಂಟೆ ಎಲ್ಲೆೆಡೆ ಬಾರಿಸುತ್ತಿಿದೆ; ಆಧುನಿಕ ಮಾನವ ಎಂಬ ಎರಡು ಕಾಲಿನ ಜೀವಿಯನ್ನು ದಾರಿ ತಪ್ಪದಿರು ಎಂದು ಎಚ್ಚರಿಸುತ್ತಿಿದೆ – ಹಳಿ ತಪ್ಪುುತ್ತಿಿರುವ ದಿನಚರಿಯನ್ನು ಸರಿಪಡಿಸಿಕೋ, ಇಲ್ಲವಾದರೆ ಸಂಸ್ಕೃತಿ ಮತ್ತು ನಾಗರಿಕತೆಯ ತಳಪಾಯವೇ ಸಡಿಲಗೊಳ್ಳಬಹುದು ಎಂಬ ವಾರ್ನಿಂಗ್ ದೊರೆಯುತ್ತಿಿದೆ. ಆಧುನಿಕ ಮಾನವ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ದಾರಿ ತಪ್ಪುುತ್ತಿಿರುವ ನವ ನಾಗರಿಕತೆಯನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳ ಸಾಮಾಜಿಕ ವಾತಾವರಣ ಬಿಗಡಾಯಿಸಬಹುದು!

ಬೆಳಗಾವಿ ಜಿಲ್ಲೆೆಯ ಕಾಕತಿಯಲ್ಲಿ ನಿನ್ನೆೆ ನಡೆದ ಒಂದು ದಾರುಣ ಹತ್ಯೆೆಯನ್ನು ಎಚ್ಚರಿಕೆ ಗಂಟೆ ಎಂದೇ ಪರಿಗಣಿಸಬೇಕು. ಆಧುನಿಕ ಯುಗದ ಕೂಸುಗಳಾದ ಮತ್ತು ನಮ್ಮ ದಿನಚರಿಯಲ್ಲಿ ಇನ್ನಿಿಲ್ಲದಂತೆ ಬೆರೆಯುತ್ತಿಿರುವ ಸ್ಮಾಾರ್ಟ್‌ಪೋನ್ ಮತ್ತು ಅಗ್ಗದ ಡಾಟಾ (ಇಂಟರ್ನೆಟ್)ನ ದುರುಪಯೋಗದಿಂದಾಗಿ, ಆ ಒಬ್ಬ ತಂದೆಯ ಜೀವ ಹಾರಿಹೋಯಿತು. ನಿವೃತ್ತ ರಕ್ಷಣಾ ಸಿಬ್ಬಂದಿಯಾಗಿದ್ದ ಆ ತಂದೆ ಮಾಡಿದ್ದಾಾದರೂ ಏನು? ಆನ್‌ಲೈನ್ ಮೊಬೈಲ್ ಗೇಮ್‌ನಲ್ಲಿ ತನ್ನ ಬದುಕನ್ನೇ ಮೂರಾಬಟ್ಟೆೆ ಮಾಡಿಕೊಳ್ಳಲು ಹೊರಟಿದ್ದ ಮಗನಿಗೆ, ಕಟುವಾದ ಮಾತಿನಲ್ಲಿ ಬುದ್ಧಿಿ ಹೇಳಿದ್ದು.

ಅಷ್ಟಕ್ಕೇ ಅಡಿಕ್ಟಿಿವ್ ಗೇಮ್ (ಗೀಳು ಹಿಡಿಸುವ ಆಟ)ಗಳಿಗೆ ದಾಸನಾಗಿದ್ದ, ನಿರಂತರವಾಗಿ ಅಂತಹ ಆಟದಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕ ಸ್ಥಿಿಮಿತ ಕಳೆದುಕೊಂಡಿದ್ದ ಆ ಮಗ, ಕತ್ತಿಿ ಹಿಡಿದು ತನ್ನ ತಂದೆಯನ್ನೇ ಕತ್ತರಿಸಿ ಹಾಕಿದ. ದಿನಗಟ್ಟಲೆ, ಗಂಟೆಗಟ್ಟಲೆ ಹಿಂಸೆ ತುಂಬಿದ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಿಿದ್ದ ಆ ಯುವಕ, ಅದೇ ಆಟದ ಪಟ್ಟುಗಳನ್ನು ನಿಜ ಜೀವನಕ್ಕೂ ಆರೋಪಿಸಿಕೊಂಡು, ತಂದೆಯನ್ನೇ, ಆಟದಲ್ಲಿನ ಎದುರಾಳಿಯಂತೆ, ಸಾಯಿಸಿಬಿಟ್ಟ.

ಆ ಪರಿಯ ಹಿಂಸೆಯನ್ನು ಒಳಗೊಂಡಿರುವ ಆಟದ ಪಟ್ಟುಗಳೇ ಅಂತಹವು. ಎದುರಾಳಿಯನ್ನು, ಕೊನೆಕೊನೆಗೆ ಗೆಳೆಯರೆನಿಸಿಕೊಂಡವರನ್ನೂ ಗುಂಡಿಟ್ಟು ಸಾಯಿಸುವ ‘ಪಬ್‌ಜಿ (ಪ್ಲೇಯರ್ ಅನ್‌ನೋನ್‌ಸ್‌ ಬ್ಯಾಾಟಲ್‌ಗ್ರೌೌಂಡ್)’ ಆಟದಲ್ಲಿ, ಹೆಚ್ಚು ಮಂದಿಯನ್ನು ಸಾಯಿಸಿದಷ್ಟೂ ಆಟದಲ್ಲಿ ಪ್ರಗತಿ! ಪ್ಯಾಾರಾಶೂಟ್ ಬಳಸಿ, ದ್ವೀಪವೊಂದರಲ್ಲಿ ಇಳಿಯುವ ನೂರು ಮಂದಿ ಆಟಗಾರರು, ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯಿಸುವ ಆಟ ಇದು- ಸಾಯಿಸಲ್ಪಟ್ಟವನ ಆಯುಧಗಳು ಕೊಂದವರ ವಶಕ್ಕೆೆ; ದ್ವೀಪದ ಜಾಗ ಕ್ರಮೇಣ ಚಿಕ್ಕದಾಗುವುದರಿಂದಾಗಿ, ಬಂದೂಕುಧಾರಿಗಳಾದ ಒಬ್ಬರನ್ನೊೊಬ್ಬರು ಎದುರಿಸುವ ಸಂದರ್ಭ ಜಾಸ್ತಿಿಯಾಗುತ್ತಲೇ ಹೋಗುತ್ತದೆ. ಎಲ್ಲರನ್ನೂ ಸಾಯಿಸುವಾತ ಕೊನೆಗೆ ವಿಜಯಿ. ಹಿಂಸೆಯೇ ಬಂಡವಾಳ ಎನಿಸಿರುವ ಈ ಆನ್‌ಲೈನ್ ಗೇಮ್‌ನಲ್ಲಿ, ವಿವಿಧ ರೀತಿಯ ಡ್ರೆೆಸ್ ಮತ್ತಿಿತರ ಆಕರ್ಷಣೆಗಳನ್ನು ಮಾರುವ ಮೂಲಕ, ಆಟಗಾರರ ಸಮಾವೇಶ ನಡೆಸಿ, ಸ್ಪರ್ಧೆ ಏರ್ಪಡಿಸಿ ಸಂಸ್ಥೆೆ ಲಾಭ ಗಳಿಸುತ್ತದೆ.

ಕಾಕತಿಯಲ್ಲಿ ತಂದೆಯನ್ನೇ ಸಾಯಿಸಿದ ಆ ಮಗ, ದಿನವಿಡೀ ಪಬ್‌ಜಿ ಆಟವಾಡುವ ಗೀಳಿಗೆ ಬಿದ್ದಿದ್ದ. ರಾತ್ರಿಿ-ಹಗಲು ಎನ್ನದೇ, ಗಂಟೆಗಟ್ಟಲೆ ಆಟದಲ್ಲೇ ಮುಳುಗಿದ್ದ ಆ ಯುವಕ, ಮನಸ್ಸಿಿನೊಳಗೆ ಹಿಂಸೆಯನ್ನೇ ಮನೆ ಮಾಡಿಕೊಂಡಿದ್ದ. ಕೆಲವೇ ದಿನಗಳ ಹಿಂದೆ ತನ್ನ ಮನಸ್ಸಿಿನ ಉದ್ವೇಗ ತಾಳಲಾರದೇ, ಪಕ್ಕದ ಮನೆಗೆ ಕಲ್ಲು ಹೊಡೆದು ರಂಪಾಟ ಮಾಡಿದ್ದ. ಹಾಗಂತ, ಆತ ಅವಿದ್ಯಾಾವಂತನಲ್ಲ; ಡಿಪ್ಲೊೊಮಾ ತನಕ ಓದಿದ್ದು, ಸೂಕ್ತ ಕೆಲಸ ದೊರೆಯದೇ, ಹಿಂಸಾತ್ಮಕ ಮೊಬೈಲ್ ಗೇಮ್‌ಗಳ ದಾಸನಾಗಿದ್ದ. ಇನ್ನೊೊಂದು ರೀತಿಯಲ್ಲಿ ಹೇಳಬಹುದಾದರೆ, ಪಬ್‌ಜಿಯಂತಹ ಮೊಬೈಲ್ ಆಟಗಳಿಗೆ ಅಡಿಕ್‌ಟ್‌ ಆಗಿದ್ದರಿಂದಲೇ, ಉದ್ಯೋೋಗ ಅರಸುವ ಕೆಲಸಕ್ಕೆೆ ತಿಲಾಂಜಲಿ ಇತ್ತಿಿದ್ದ, ಆ ಯುವಕ. ನಮ್ಮ ನಾಗರಿಕತೆಗೆ ದೊರೆಯುತ್ತಿಿರುವ ಎಚ್ಚರಿಕೆ ಗಂಟೆಯ ಒಂದು ತರಂಗ ಇದು!

ಮೇ ತಿಂಗಳ ಕೊನೆಯ ವಾರದಲ್ಲಿ ಮಧ್ಯ ಪ್ರದೇಶದಲ್ಲಿ, 16 ವರ್ಷದ ಯುವಕನೋರ್ವ ಪಬ್‌ಜಿಗೆ ಬಲಿಯಾದದ್ದು ಸುದ್ದಿಯಾಯಿತು. ಈ ಯುವಕ ನಿರಂತರವಾಗಿ ಪಬ್‌ಜಿ ಆಟವಾಡಿ, ರಕ್ತದೊತ್ತಡವನ್ನು ಹೆಚ್ಚಿಿಸಿಕೊಂಡು, ಹೃದಯಾಘಾತಕ್ಕೆೆ ಬಲಿಯಾದ ಘಟನೆ, ಎಲ್ಲರ ಕಣ್ಣು ತೆರೆಯಿಸಬೇಕಿತ್ತು. ಗಂಟೆಗಟ್ಟಲೆ ಆ ಆಟಕ್ಕೆೆ ದಾಸರಾಗುವಂತಹ ರೋಚಕತೆ ಅದರಲ್ಲಿ ತುಂಬಿರುವುದು ಒಂದು ಮಟ್ಟದ ಆತಂಕ ತಂದರೆ, ಆಟವಾಡುತ್ತಲೇ, ಹೃದಯವನ್ನೇ ಸ್ತಂಭನಗೊಳಿಸುವ ಸ್ಥಿಿತಿಯನ್ನು ಅದು ತರಬಹುದೆಂಬ ವಾಸ್ತವ ಇನ್ನೊೊಂದೆಡೆ. ಆ ಯುವಕ ಆ ಸ್ಥಿಿತಿ ತಲುಪಲು ಅದೆಷ್ಟೋೋ ದಿನಗಳ ಕಾಲ, ಸರಿಯಾಗಿ ನಿದ್ರೆೆ ಮಾಡದೇ, ಆನ್‌ಲೈನ್‌ನಲ್ಲಿ ಮುಳುಗಿರಲು ಸಾಕು; ಊಟ, ತಿಂಡಿ, ಅಧ್ಯಯನ, ಸಾಮಾಜಿಕ ಜೀವನ, ಸಹೃದಯ ಮಾತುಕತೆಗಳಿಗೆ ತಿಲಾಂಜಲಿ ಇಟ್ಟು, ಒಬ್ಬರನ್ನೊೊಬ್ಬರು ಕೊಲ್ಲುವ ಸನ್ನಿಿವೇಶವನ್ನು ಮೊಬೈಲ್‌ನಲ್ಲಿ ಅದೆಷ್ಟೋೋ ಸಾವಿರ ಬಾರಿ ಅನುಭವಿಸಿರಬೇಕು; ಆ ಪಾಟಿ ಮಾನಸಿಕ ಒತ್ತಡ ತಾಳಲಾರದೇ, ಆ ಯುವಕನ ಹೃದಯವೇ ನಿಂತುಹೋಯಿತು.

ಹಾಗೆ ನೋಡಹೋದರೆ, ಹಲವು ಆನ್‌ಲೈನ್ ಆಟಗಳಲ್ಲಿ ಮತ್ತು ವಿಡಿಯೋ ಗೇಮ್‌ಗಳಲ್ಲಿ, ಅಡಿಕ್ಷನ್‌ಗೆ ದೂಡುವ ಗುಣವಿದೆ; ಅಡಿಕ್ಷನ್ ಹುಟ್ಟಿಿಸುವ ಮೂಲಭೂತ ಅಂಶವೇ ಅಂತಹ ಆಟಗಳ ಜನಪ್ರಿಿಯತೆಯನ್ನು ಹೆಚ್ಚಿಿಸುತ್ತವೆ ಮತ್ತು ಗೇಮ್‌ನ ಯಶಸ್ಸಿಿನ ಮಾನದಂಡ ಎನಿಸುತ್ತದೆ. ಪಬ್‌ಜಿ 2017ರಲ್ಲಿ ಬಿಡುಗಡೆಯಾದನಂತರ, ಅತಿ ಜನಪ್ರಿಿಯ ಸ್ಥಾಾನ ಪಡೆಯುವಲ್ಲೂ ಸಹ ಇದೇ ಮಾನದಂಡ ಕೆಲಸ ಮಾಡಿದೆ. ಅದರಲ್ಲಿ ಅಡಕಗೊಂಡಿರುವ ಹಿಂಸೆ, ಶೂಟಿಂಗ್, ರೋಚಕ ಸನ್ನಿಿವೇಶ, ಅನಿರೀಕ್ಷಿಿತ ತಿರುವುಗಳೇ, ಆ ಆಟವನ್ನು ಅತಿ ಹೆಚ್ಚು ಅಡಿಕ್ಟಿಿವ್ ಮಾಡಿವೆ; ಆಟವಾಡಿದವರ ಸಮಯ ಹಾಳುಗೆಡವುದರ ಜತೆಯಲ್ಲೇ, ಮಾನಸಿಕ ಸ್ಥಿಿತಿಯನ್ನೇ ಏರುಪೇರು ಮಾಡುವ ಶಕ್ತಿಿ ಹೊಂದಿವೆ.

ಡಿಸೆಂಬರ್ 2017ರಲ್ಲಿ- ಅಂದರೆ ಬಿಡುಗಡೆಯಾಗಿ ನಾಲ್ಕು ತಿಂಗಳುಗಳಲ್ಲಿ ಪಬ್‌ಜಿ ಆಟವಾಡಿದವರ ಅಂಕಿಸಂಖ್ಯೆೆಗಳನ್ನು ನೋಡಿದರೆ, ಆ ಅವಧಿಯಲ್ಲಿ 10 ಮಿಲಿಯನ್ ರೌಂಡ್ ಆಟ ನಡೆದಿದೆ-ಅಂದರೆ ಸುಮಾರು 25,000 ಮಾನವ ವರ್ಷದಷ್ಟು ಸಮಯ ಅದನ್ನು ಆಡಲಾಗಿತ್ತು. ಒಮ್ಮೆೆ ಡೌನ್‌ಲೋಡ್ ಮಾಡಿಕೊಂಡು, ಆಡಲು ಆರಂಭಿಸಿದರೆ, ಮನವನ್ನೇ ಆಕ್ರಮಿಸುವ ಪಬ್‌ಜಿ ಆಟದ ಸುಳಿಗೆ ಸಿಕ್ಕವರು, ಹೊರಬರಲು ಹರಸಾಹಸ ಮಾಡಬೇಕು; ಡಿ ಅಡಿಕ್ಷನ್ ಕೇಂದ್ರಗಳಿಗೆ ಹೋಗಬೇಕು; ಪಬ್‌ಜಿ ಅಂತಹ ಗೇಮ್‌ಗಳಿಗೆ ದಾಸರಾಗುವುದೆಂದರೆ, ಡ್ರಗ್ ವ್ಯಸನಕ್ಕೆೆ ಗುರಿಯಾದಂತೆ ಎಂದಿದ್ದಾಾರೆ ಮಾನಸಿಕ ತಜ್ಞರು. ಇಂತಹ ಆಟಗಳಿಗೆ ವಿದ್ಯಾಾರ್ಥಿಗಳು ಬಲಿಯಾದರೆ, ಅವರ ಶೈಕ್ಷಣಿಕ ಪ್ರಗತಿಗೆ ತಿಲಾಂಜಲಿ ಇಟ್ಟಂತೆ. ಅದಕ್ಕೆೆಂದೇ ಕಳೆದ ವರ್ಷ ರಾಜಸ್ಥಾಾನ ಮತ್ತು ಇತರ ರಾಜ್ಯಗಳು ಪರೀಕ್ಷೆೆಯ ಸಮಯದಲ್ಲಿ ಪಬ್‌ಜಿ ಆಟವನ್ನು ನಿಷೇಧಿಸಿದ್ದವು. ಇದರಲ್ಲಿ ಅಡಕಗೊಂಡಿರುವ ಹಿಂಸೆಯ ಹಿನ್ನೆೆಲೆಯಲ್ಲಿ ದೂರದ ಜೋರ್ಡಾನ್ ದೇಶದಲ್ಲೂ ಪಬ್‌ಜಿ ನಿಷೇಧಗೊಂಡಿದೆ. 13 ವರ್ಷಕ್ಕಿಿಂತ ಕಡಿಮೆ ವಯಸ್ಸಿಿನವರಿಗೆ ಇದನ್ನ ಲಾಕ್ ಮಾಡಿದ್ದೇವೆ ಎಂದು ಪಬ್‌ಜಿ ಸಂಸ್ಥೆೆಯವರು ಘೋಷಿಸಿದ್ದಾಾರೆ.

ಪಬ್‌ಜಿ ಸೃಷ್ಟಿಿಸುವ ಅಡಿಕ್ಷನ್ ಪ್ರಮಾಣವನ್ನು ಅಳೆಯುವುದೇ ಕಠಿಣ. ಮನೋತಜ್ಞರು ಇಂತಹ ಗೀಳನ್ನು ಸಲೀಸಾಗಿ ಗುರುತಿಸುತ್ತಾಾರೆ, ಗುರುತಿಸಿದ್ದಾಾರೆ, ಎಚ್ಚರಿಸಿದ್ದಾಾರೆ, ಪರಿಹಾರವನ್ನೂ ಸೂಚಿಸಿದ್ದಾಾರೆ. ಡಿ ಅಡಿಕ್ಷನ್ ತಂತ್ರಗಳ ಕುರಿತು ಸೂಕ್ತ ಸಲಹೆ ನೀಡುತ್ತಾಾರೆ. ಮಕ್ಕಳಿಗೆ ಅಂತಹ ಆಟವಾಡಲು ಅವಕಾಶ ನೀಡಬೇಡಿ ಎಂಬ ಶಿಫಾರಸನ್ನೂ ಮಾಡುತ್ತಾಾರೆ.

ಇಂದು ಕಾಲ ಬದಲಾಗಿದೆ. ಒಂದೆರಡು ಕ್ಲಿಿಕ್ ಮಾಡಿದರೆ ಉಚಿತ ಗೇಮ್ ಡೌನ್‌ಲೋಡ್ ಮಾಡಿಕೊಳ್ಳಬಹುದು; ಇನ್ನೊೊಂದೆರಡು ಕ್ಲಿಿಕ್ ಮಾಡಿದರೆ ಪಬ್‌ಜಿಯಂತಹ ಪರಸ್ಪರ ಶೂಟ್ ಮಾಡಿಕೊಳ್ಳುವ, ಇಡೀ ದ್ವೀಪದಲ್ಲಿರುವ ಎಲ್ಲರನ್ನೂ ಶೂಟ್ ಮಾಡಲು ಪ್ರೇರೇಪಿಸುವ ಆಟದಲ್ಲಿ ಮುಳುಗಿಹೋಗಬಹುದು. ಹಿಂಸೆಯನ್ನು ತುಂಬಿಕೊಂಡಿರುವ, ಮನುಷ್ಯರ ಮೇಲೆ ಶೂಟಿಂಗ್ ಮಾಡುವುದನ್ನೇ ಪ್ರೇರೇಪಿಸುವ ಆಟಗಳನ್ನು ಆಡುವ ಮಕ್ಕಳು, ಯುವ ಜನಾಂಗ, ಸುತ್ತಲಿನ ಸಮಾಜವನ್ನು ನೋಡುವ ದೃಷ್ಟಿಿಯೇ ಕ್ರಮೇಣ ಬದಲಾಗುವ ಸಾಧ್ಯತೆ ಇಲ್ಲದಿಲ್ಲ. ಬೆಳೆಯುತ್ತಿಿರುವ ಮಕ್ಕಳು ಸಹ ಆಟಗಾರರನ್ನು ಸಾಯಿಸುವ ಆಟ, ನಿಯಮಿತವಾಗಿ ಆಡಿದರೆ, ಮುಂದೆ ಅವರ ಚಿಂತನಾ ಕ್ರಮವೇ ಬದಲಾಗಬಹುದಲ್ಲವೆ? ಸುತ್ತಲಿನ ಎಲ್ಲರನ್ನೂ ಮುಗಿಸಿ, ಸಾಯಿಸಿ, ವಿಜಯಿಯಾಗುವ ಮನೋಸ್ಥಿಿತಿ ನಿಜ ಜೀವನದಲ್ಲೂ ಅವರು ಅಳವಡಿಸಿಕೊಳ್ಳುವ ಸಾಧ್ಯತೆ ಅಧಿಕ. ಪರಸ್ಪರ ಸಹಕರಿಸಿ, ಅರಿತು, ಸಮಾಜವನ್ನು ಕಟ್ಟುವ ನಾಗರಿಕತೆಯ ಮೂಲಭೂತ ಅಂಶವನ್ನೇ ಮರೆಯುವ, ಹಿಂಸೆಯಿಂದಲೇ ಎಲ್ಲವನ್ನೂ ನೋಡುವ ನಾಗರಿಕರ ದಂಡೇ ಇದರಿಂದ ಸೃಷ್ಟಿಿಯಾದಂತಾಗುವುದಿಲ್ಲವೆ?

ಅದಕ್ಕೆೆಂದೇ, ಬೆಳಗಾವಿಯ ಕಾಕತಿಯಲ್ಲಿ ನಿನ್ನೆೆ ನಡೆದ ಘಟನೆಯನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು. ಅಂತರ್ಜಾಲದಿಂದ ಸುಲಲಿತವಾಗಿ ಡೌನ್‌ಲೋಡ್ ಆಗುವ ಪಬ್‌ಜಿಯಂತಹ ಹಿಂಸೆ ತುಂಬಿದ ಆಟಕ್ಕೆೆ ಮಕ್ಕಳು, ಯುಜನರು ಬಲಿಯಾಗದಂತೆ ಮಾಡಲು ಉಪಾಯಗಳನ್ನು ಯೋಚಿಸಬೇಕು. ಸರಕಾರ ಮನಸ್ಸು ಮಾಡಬೇಕು. ರಾಜಸ್ಥಾಾನ ಮೊದಲಾದ ರಾಜ್ಯಗಳು ಪಬ್‌ಜಿಯನ್ನು ತಾತ್ಕಾಾಲಿಕವಾಗಿ ನಿಷೇಧಿಸಿದ್ದವು. ಗುಂಡಿಟ್ಟು ಸಾಯಿಸುವ ಮನೋಸ್ಥಿಿತಿಯನ್ನು ಪಾಠಮಾಡುವ ಪಬ್‌ಜಿಯಂತಹ ಆಟಗಳನ್ನು ಶಾಶ್ವತವಾಗಿ ನಿಷೇಧಿಸುವ ಕ್ರಮವನ್ನು ಕರ್ನಾಟಕ ಸರಕಾರ ಸಹ ತೆಗೆದುಕೊಳ್ಳಲು ಇದೇ ಸಕಾಲ. ಚಲನಚಿತ್ರಗಳ ಬಿಡುಗಡೆಗೆ ಮುಂಚೆ ಸೆನ್ಸಾಾರ್ ಮಂಡಳಿ ಕೆಲಸ ಮಾಡುವಂತೆ, ನಾಗರಿಕ ಸಮಾಜದ ಚಿಂತನಾ ಕ್ರಮವನ್ನು ರಕ್ಷಿಿಸಲು, ಹಿಂಸೆಭರಿತ, ಮನುಷ್ಯರನ್ನು ಕೊಲ್ಲುವ ಸನ್ನಿಿವೇಶ ಇರುವ ವಿಡಿಯೋ ಮತ್ತು ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸರಕಾರ ಮುಂದಾಗಬೇಕು.

ಕಾಕತಿಯ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಹಿಂಸೆ ತುಂಬಿರುವ ಆನ್‌ಲೈನ್ ಆಟಗಳಿಗೆ ದಾಸರಾಗುವ ನಾಗರಿಕರು ಮತ್ತು ಯುವಜನತೆ ಆಟದ ಗೀಳಿನಿಂದಾಗಿ ತಂದೆಯನ್ನೇ ಏಕೆ, ಎಲ್ಲರ್ನೂ ಕೊಲ್ಲುವ ಮಟ್ಟಕ್ಕೆೆ ಇಳಿದಾರು.

error: Content is protected !!