Thursday, 19th May 2022

ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಗರೊ0ದಿಗೆ ಪ್ರೊ.ಶಿವರಾಜ ಪಾಟೀಲ ಸೇರ್ಪಡೆ

ಕಲಬುರಗಿ: ನಗರದ ಹಿಂದು ಪ್ರಚಾರ ಸಭಾದಲ್ಲಿ ನಡೆದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಾಹಿತಿ ಹಾಗೂ ಚಿಂತಕ ಪ್ರೊ.ಶಿವರಾಜ ಪಾಟೀಲ ಸೇರ್ಪಡೆಗೊಂಡರು.

ನಗರ ಅಧ್ಯಕ್ಷ ಹಾಗೂ ಉತ್ತರ ಮತಕ್ಷೇತ್ರದ ಉಸ್ತುವಾರಿ ಸಜ್ಜಾದ ಅಲಿ ಇನಾಂದಾರ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಉಸ್ತುವಾರಿ ಸಿದ್ದು ಪಾಟೀಲ(ತೆಗನೂರ) ಆಳಂದ ಮತಕ್ಷೇತ್ರದ ಉಸ್ತುವಾರಿ ಚಂದ್ರಶೇಖರ ಹೀರೆಮಠ ಅವರ ನೇತೃತ್ವದಲ್ಲಿ ನಡೆದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರೊ.ಶಿವರಾಜ ಪಾಟೀಲ ಅವರು ತಮ್ಮ ಬೆಂಬಲಿಗ ರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಿದ್ದು ಪಾಟೀಲ ಮಾತನಾಡಿ,  ಅಧಿಕಾರದಲ್ಲಿರುವ ಪಕ್ಷ ಹಾಗೂ ವಿರೋಧ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದಂತೆ ಸಮಾಜ ದಲ್ಲಿ ಒಡೆದಾಳು ನೀತಿ ಅನುಸರಿಸಿ ಜನರಿಗೆ ಉದ್ಯೋಗ, ಅಭಿವೃದ್ಧಿ ಸೇರಿದಂತೆ ಎಲ್ಲಾ ರೀತಿಯ ವಂಚನೆಗಳು ಮಾಡುತ್ತಿವೆ. ಉತ್ತಮ ಆಡಳಿತ ನೀಡುವ ಬದಲು ಜನರಲ್ಲಿ ಗೊಂದಲದ ವಾತಾವರಣ ಸೃಷ್ಠಿಸಿ ಮತದಾರರಿಗೆ ಮೋಸ ಮಾಡುತ್ತಿವೆ ಎಂದು ಕಿಡಿಕಾರಿದರು.

ಆಮ್ ಆದ್ಮಿ ಪಕ್ಷದಲ್ಲಿ ಮೊದಲು ಜನರಿಗೆ ಬೇಕಾಗಿರುವ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಸಾಮಾನ್ಯ ವಕ್ತಿಗೆ ಬೇಕಾಗಿ ರುವ ಶುದ್ಧ ನೀರು, ವಿದ್ಯುತ್, ಹಾಗೂ ಉತ್ತಮ ಪರಿಸರ. ಹಾಗೂ ಉದ್ಯೋಗ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ ಕೇಜ್ರಿವಾಲ್ ಅವರ ಸರಳತೆ ಹಾಗೂ ಸರಳ ಪ್ರಣಾಳಿಕೆಯಿಂದಾಗಿ ಇಂದು ಎರಡು ರಾಜ್ಯಗಳಲ್ಲಿ ದಾಖಲೆಯ ಅಧಿಕ ಸ್ಥಾನಗಳೊಂದಿಗೆ ಅಧಿಕಾರ ನಡೆಸುತ್ತಿದೆ ಎಂದು ವಿವರಿಸಿದರು.

ನಗರಾಧ್ಯಕ್ಷ ಸಜ್ಜಾದ ಅಲಿ ಇನಾಂದಾರ ಅವರು ಮಾತನಾಡಿ ಇಂದು ಜನರಿಗೆ ಉತ್ತಮ ಆಡಳಿತ ಹಾಗೂ ಉತ್ತಮ ಚಾರಿತ್ರ್ಯ ಹೊಂದಿ ವಕ್ತಿಗಳು ರಾಜಕೀದಲ್ಲಿ ಬೇಕಾಗಿದೆ. ಹಾಗಾಗಿ ನಾವು ರಾಜಕೀಯ ಮಾಡುವದಕ್ಕಾಗಿ ಬಂದಿಲ್ಲಿ ರಾಜಕೀಯ ವ್ಯವಸ್ಥೆ ಬದಲಾಯಿಸುವ ದಕ್ಕಾಗಿ ಬಂದಿದೆ. ಸಾಮಾನ್ಯ ಜನರು ಹಣದ ಆಸೆಗೆ ಮತಗಳನ್ನು ಮಾರಾಟ ಮಾಡುವದನ್ನು ತಡೆಯಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಲ್ಲಿ ಕರೆ ನೀಡಿದರು.

ಕೇಂದ್ರ ಸಮಿತಿ ರಾಜ್ಯ ಉಸ್ತುವಾರಿ ಉಪ ಪ್ರಭಾರಿ ಉಪೇಂದ್ರ ಗಾಂವಕರ ಅವರು ಆಮ್ ಆದ್ಮಿ ಪಕ್ಷ ಇರುವ ಜನಸಾಮಾನ್ಯರ ಸೇವೆ ಗಾಗಿ ನಾವು ಇಲ್ಲಿ ಬಂದಿರುವುದು ಜನರ ಸೇವೆಗಾಗಿ ಎಂದು ತಿಳಿದ ಪಕ್ಷವನ್ನು ಕಟ್ಟಬೇಕು. ದೇಶದ ಸಂವಿಧಾನ ಆಶಯದೊಂದಿಗೆ ಕೆಲಸ ಮಾಡಬೇಕು. ಅಧಿಕಾರಕ್ಕಾಗಿ ಬರುವವರಿಗೆ ಪಕ್ಷದಲ್ಲಿ ಜಾಗವಿಲ್ಲ, ಸೇವಕನಾಗಿ ಪಕ್ಷದಲ್ಲಿ ದುಡಿಯಬೇಕು ಎಂದು ಕಾರ್ಯಕರ್ತರಲ್ಲಿ ಕರೆ ನೀಡಿದರು.

ವೇದಿಕೆ ಮೇಲೆ ಮುಖಂಡರಾದ ಕೇಂದ್ರ ಸಮಿತಿ ರಾಜ್ಯ ಉಸ್ತುವಾರಿ ವಿವೇಕಾನಂದ,  ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೀಶ ಬಳ್ಳಾರಿ, ಮುಖಂಡರಾದ ಚಂದ್ರಶೇಖರ ಹಿರೇಮಠ ಇದ್ದರು.

ಕಾರ್ಯಕ್ರಮದಲ್ಲಿ ಶೇಖರ ಸಿಂಗ್, ಮೋಶಿನ್, ಕಿರಣ ರಾಠೋಡ, ಸಚೀನ ಕೋಗನೂರ, ವಿವೇಕ ಕೋಗನೂರ, ಸಿದ್ದು ಕೋಗನೂರ, ಬಸವರಾಜ ಕಲೇಕರ ಸೇರಿದಂತೆ ಅನೇಕರು ಭಾಗವಹಸಿದ್ದರು.