Friday, 7th May 2021

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ: ನಾಲ್ಕು ಮಂದಿ ಸಾವು

ಹಾಸನ: ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಕ್ವಾಲೀಸ್‌ ಕಾರು ಮತ್ತು ಟಾಟಾ ಸುಮೋ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 14 ಮಂದಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಚಟ್ಟಳ್ಳಿ ಬಳಿ ಇದ್ದ ಹಂಪ್ಸ್‌ ಬಳಿ ಟಾಟಾಸುಮೋ ಚಾಲಕ ವಾಹನ ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿ ಹೊಡೆದಿದೆ. ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಟಾಟಾ ಸುಮೋ ಪಲ್ಟಿಹೊಡೆದಿದ್ದು, ಅದರಲ್ಲಿದ್ದ 10 ಮಂದಿಗೆ ಗಾಯಗಳಾಗಿವೆ.

ಟಾಟಾಸುಮೋದಲ್ಲಿದ್ದವರು ಮುಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗು ತ್ತಿದ್ದರು.

ಮೃತರನ್ನು ಸುನೀಲ್‌ ಕುಮಾರ್‌, ನವೀನ್‌ ಕುಮಾರ್‌, ಪ್ರದೀಪ್ ಕುಮಾರ್ ಹಾಗೂ ಚಂದ್ರಶೇಖರ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *