Monday, 16th May 2022

ಭೀಕರ ಅಪಘಾತದಲ್ಲಿ ತಾಯಿ ಸಾವು, ಮಕ್ಕಳ ಮೃತದೇಹ ಛಿದ್ರ

Hassan Accident

ಹಾಸನ: ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿ ಮಕ್ಕಳು ಸೇರಿದಂತೆ ಮೂವರು  ಮೃತ ಪಟ್ಟಿದ್ದಾರೆ.

ಒಂದೇ ಲಾರಿ 4 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳ ತಾಯಿ ಕೂಡ ಮೃತಪಟ್ಟರು. ಡಿಕ್ಕಿ ಬಳಿಕ ಬೈಕುಗಳನ್ನು 2 ಕಿ. ಮೀ. ದೂರದವರೆಗೆ ಲಾರಿ ಎಳೆದುಕೊಂಡು ಹೋಗಿದೆ. ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ. ಲಾರಿಯ ಟಯರ್‌ನಡಿ ಸಿಲುಕಿದ್ದ ಮಕ್ಕಳ ಮೃತದೇಹ ಛಿದ್ರವಾಗಿ ಹೋಗಿದೆ. ಅಪಘಾತದ ರಭಸಕ್ಕೆ ಮಕ್ಕಳ ದೇಹದ ಭಾಗಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದ್ದವು.

ಭೀಕರ ಅಪಘಾತದಲ್ಲಿ ಮೃತರನ್ನು ಹಾಸನದ ಗವೇನಹಳ್ಳಿಯ ಶಿವಾನಂದ್ ಪತ್ನಿ ಜ್ಯೋತಿ, ಮಕ್ಕಳಾದ ಪ್ರಣತಿ (3), ಪ್ರಣವ್(3) ಎಂದು ಗುರುತಿಸ ಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಿವಾನಂದ್ ಮತ್ತು ಜ್ಯೋತಿ ಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಜ್ಯೋತಿ ಮೃತಪಟ್ಟಿದ್ದಾರೆ.

ಶಿವಾನಂದ್‌ಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶಿವಾನಂದ್ ಆರೋಗ್ಯ ಸ್ಥಿತಿ ಸಹ ಗಂಭೀರವಾಗಿದೆ.