Tuesday, 26th October 2021

ಮಕ್ಕಳನ್ನು ಕರೋನಾದಿಂದ ರಕ್ಷಿಸಲು ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಘೋಷಣೆ

ಮಂಗಳೂರು: ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ 10ರವರೆಗೆ ಹತ್ತೇ ದಿನಗಳಲ್ಲಿ 505 ಜನರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಕ್ಕಳನ್ನು ಕರೋನಾದಿಂದ ರಕ್ಷಿಸುವುದಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ.

ರಾಜ್ಯಾದ್ಯಂತ ಕರೋನಾ 3ನೇ ಅಲೆಯ ಭೀತಿಯ ಸಂದರ್ಭದಲ್ಲಿಯೇ, ಮಕ್ಕಳನ್ನು ಕೋವಿಡ್ ನಿಂದ ರಕ್ಷಿಸುವು ದಕ್ಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಕ್ಕಳ ಐಸಿಯು ಸಂಖ್ಯೆ ಯನ್ನು ಹೆಚ್ಚಿಸಲು ಈಗಿರುವ ಐಸಿಯುವಿನಲ್ಲಿ ಶೇ.50ರಷ್ಟು ಮಕ್ಕಳಿಗಾಗಿಯೇ ಮೀಸಲಿಡಲು ನಿರ್ಧರಿಸಿರುವುದಕ್ಕೆ ತಿಳಿಸಿದ್ದಾರೆ.

ಮಕ್ಕಳಿಗೆ ಕರೋನಾ ಸೋಂಕಿನ ಚಿಕಿತ್ಸೆಗಾಗಿ ಆಯಾ ಪ್ರದೇಶದಲ್ಲಿಯೇ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳಿಗಾಗಿ ಐಸಿಯು ಆಸ್ಪತ್ರೆಗಳನ್ನು ಹೆಚ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಮಕ್ಕಳು ಕರೋನಾ ಸೋಂಕಿಗೆ ತುತ್ತಾಗ ದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನೂ ಮಕ್ಕಳನ್ನು ಕರೋನಾದಿಂದ ದೂರವಿಡಲು ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಸಲು, ಇಮ್ಯುನಿಟಿ ಸದೃಢಗೊಳಿಸುವಂತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮಕ್ಕಳನ್ನು ಕೋವಿಡ್ ಸೋಂಕಿನಿಂದ ದೂರ ಉಳಿಸಲು ಪ್ರತಿ ಗ್ರಾಮದಲ್ಲಿಯೂ ತಪಾಸಣೆಗೆ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಹೇಳುವ ಮೂಲಕ, ಮಹತ್ವದ ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *