Saturday, 10th April 2021

ಸೈಕಲ್‌ನಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ ನಟ ವಿಜಯ್‌

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿದೆ. ತಮಿಳು ಸೂಪರ್​ಸ್ಟಾರ್​ ಥಳಪತಿ ವಿಜಯ್ ಸೈಕಲ್​​​​ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್​ ಮಾಡಿ ಗಮನ ಸೆಳೆದಿದ್ದಾರೆ.

ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್​ ಇಂಟರ್​ನ್ಯಾಷನಲ್​ ಪ್ರಿ ಸ್ಕೂಲ್​ನ ಮತಗಟ್ಟೆಯಲ್ಲಿ ವಿಜಯ್ ಮತ ಚಲಾಯಿಸಿದರು. ವಿಜಯ್ ಸೈಕಲ್ ಸವಾರಿ ವೇಳೆ, ಕೆಲ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸುತ್ತಿದ್ದರು.

ತಮ್ಮ ಸಿಬ್ಬಂದಿಯೊಬ್ಬರ ವಾಹನದಲ್ಲಿ ಹಿಂದೆ ಕುಳಿತು ಪ್ರಯಾಣ ಮುಂದುವರಿಸಬೇಕಾಯ್ತು. ವಿಜಯ್ ಅವರ ಮತ್ತೋರ್ವ ಸಿಬ್ಬಂದಿ ಸೈಕಲ್​ ತೆಗೆದುಕೊಂಡು ಹೋದರು. ಇನ್ನು ಮತಗಟ್ಟೆ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು.

ವಿಜಯ್ ಅವರು ಮತಗಟ್ಟೆಗೆ ಸೈಕಲ್​ನಲ್ಲಿ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಟ ಬಿಸಿಲಿ ನಲ್ಲೂ, ಫೇಸ್​ ಮಾಸ್ಕ್​ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ಇನ್ನು ವಿಜಯ್ ಅವರು ಇಂಧನ ದರ ಏರಿಕೆ ಖಂಡಿಸಲು ಸೈಕಲ್​ನಲ್ಲಿ ಬಂದಿದ್ದಾರೆ ಎಂದು ಚರ್ಚೆಯಾಗುತ್ತಿದೆ.

Leave a Reply

Your email address will not be published. Required fields are marked *