Tuesday, 21st March 2023

ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಶ್ಲಾಘಿಸಿದ ನಟಿ ಅನುಷ್ಕಾ

ನವದೆಹಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸಮಾಜ ಸೇವಕ ಹರೇಕಳ ಹಾಜಬ್ಬ ಅವರ ಪ್ರಯತ್ನವನ್ನು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಶ್ಲಾಘಿಸಿದ್ದಾರೆ.

68 ವರ್ಷದ ಹಣ್ಣು ಮಾರಾಟಗಾರ ಹಾಜಬ್ಬ ತಮ್ಮ ಗ್ರಾಮದಲ್ಲಿ ಶಾಲೆ ನಿರ್ಮಿಸುವ ಮೂಲಕ ಗ್ರಾಮೀಣ ಶಿಕ್ಷಣದಲ್ಲಿ ಕ್ರಾಂತಿ ಯನ್ನು ತಂದಿದ್ದಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.

ಅನುಷ್ಕಾ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಇನ್ ಸ್ಟಾಗ್ರಾಮ್ ನಲ್ಲಿ ಹಾಜಬ್ಬರನ್ನು ಪ್ರಶಂಸಿಸಿದರು. ಸಮಾಜಕ್ಕೆ ಹಾಜಬ್ಬ ಅವರ ಕೊಡುಗೆಯನ್ನು ಗುರುತಿಸಿ ದ್ದಾರೆ.

ಅನುಷ್ಕಾ ಸ್ವತಃ ಪ್ರಾಣಿ ಹಕ್ಕು ಕಾರ್ಯಕರ್ತೆಯಾಗಿದ್ದು, ವಿವಿಧ ಸಂದರ್ಭಗಳಲ್ಲಿ ಸಮಸ್ಯೆಗಳಿಗೆ ಧ್ವನಿ ಎತ್ತಿದ್ದಾರೆ. ಅನುಷ್ಕಾ ಹಾಗೂ ಅವರ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈನಲ್ಲಿ ಪ್ರಾಣಿಗಳ ಆಶ್ರಯ ನಡೆಸುತ್ತಿದ್ದಾರೆ.

ಕೋವಿಡ್ -19 ಸಂತ್ರಸ್ತರಿಗೆ ಸಹಾಯ ಮಾಡಲು ನಿಧಿ ಸಂಗ್ರಹಿಸಲು ಇಬ್ಬರೂ ಪ್ರಯತ್ನಗಳನ್ನು ಮಾಡಿದ್ದರು. ಅವರಿಬ್ಬರು ತಮ್ಮ ಚಾರಿಟಿಗೆ ಧನಸಹಾಯ ವನ್ನೂ ಮಾಡಿದ್ದರು.

error: Content is protected !!