Friday, 19th August 2022

ಹಿರಿಯ ನಟಿ ಹೇಮಲತಾ ವಿಧಿವಶ

ಬೆಂಗಳೂರು: ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ವಿಧಿವಶ ರಾಗಿದ್ದಾರೆ. ಹೃದಯ ಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

70 ವರ್ಷದ ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಸೋಮೇಶ್ವರ ಲೇಔಟ್ ನಲ್ಲಿ ವಾಸಿಸು ತ್ತಿದ್ದು, ಹೇಮಲತಾ ಅವರ ಅಂತಿಮ ಇಚ್ಛೆಯಂತೆ ಕುಟುಂಬಸ್ಥರು ಅವರ ದೇಹವನ್ನು ಖಾಸಗಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಭರತನಾಟ್ಯ ಕಲಾವಿದೆ ಆಗಿದ್ದ ಹೇಮಲತಾ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಕಲ್ಯಾಣ್ ಕುಮಾರ್ ಅವರ ‘ಕಲಾವತಿ’ ಚಿತ್ರದಲ್ಲಿ ಹೇಮಲತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ 1966 ರಲ್ಲಿ ಬಿಡುಗಡೆಯಾದ ವರನಟ ಡಾ. ರಾಜಕುಮಾರ್ ಅವರ ‘ಎಮ್ಮೆ ತಮ್ಮಣ್ಣ’ ಚಿತ್ರದಲ್ಲೂ ಅಭಿನಯಿಸಿದ್ದರು.