Saturday, 10th April 2021

ಹಿರಿಯ ನಟಿ ಶಶಿಕಲಾ ನಿಧನ

ಮುಂಬೈ : ಹಿರಿಯ ನಟಿ ಶಶಿಕಲಾ(88) ಅವರು ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾದರು.

ಶಶಿಕಲಾ ಅವರು ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ದ್ದಾರೆ. ಅವರು 1932ರ ಆಗಸ್ಟ್ ನಲ್ಲಿ ಸೊಲ್ಲಾಪುರದ ಮಹಾರಾಷ್ಟ್ರದಲ್ಲಿ ಜನಿಸಿದರು. ಡಾಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ಮುಜ್ಸೆ ಶಾದಿ ಕರೋಗಿ, 1953ರಲ್ಲಿ ಬಿಡುಗಡೆಯಾದ ತೀನ್ ಬಟ್ಟಿ ಚಾರ್ ರಾಸ್ತಾ ಮತ್ತು ತೀನ್ ಬಹುರಾನಿಯನ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು.

ಜನಪ್ರಿಯ ಶೋಗಳಾದ ಸನ್ ಪರಿ ಮತ್ತು ಜೀನಾ ಇಸಿ ಕಾ ನಾಮ್ ಹೈ ನಲ್ಲೂ ನಡೆಸಿಕೊಟ್ಟಿದ್ದಾರೆ. ಭಾರತೀಯ ಚಿತ್ರರಂಗದ ಕೊಡುಗೆಗಾಗಿ ಶಶಿಕಲಾ ಅವರಿಗೆ 2007ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2009ರಲ್ಲಿ ವಿ.ಶಾಂತಾರಾಮ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *