Monday, 8th March 2021

ಶಿರಸಿಯ ವಾದಿರಾಜ ಮಠ, ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ ರಾವ್

ಶಿರಸಿ : ಕರ್ನಾಟಕ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ಶಿರಸಿಯ ಪ್ರಸಿದ್ಧ ವಾದಿರಾಜ ಮಠ ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು.

ಭಾನುವಾರ ರಾತ್ರಿ ಶಿರಸಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾವ್, ಸೋಮವಾರ ದೇವರ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಸೂಕ್ಷ್ಮ ಸ್ಥಳಗಳಿರುವುದರಿಂದ ಕರಾವಳಿ ಕಾವಲಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ.

ಕರಾವಳಿ ಕಾವಲು ಪಡೆಗೆ ಉತ್ತಮ ಬೋಟ್ ಒದಗಿಸಿಕೊಡಬೇಕು ಎಂದು ಈಗಾಗಲೇ ರಾಜ್ಯದ ಗೃಹ ಸಚಿವರು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಕರಾವಳಿ ಕಾವಲಿಗೆ ಬೆಟಾಲಿಯನ್ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಕರಾವಳಿ ಭಾಗ ಸೂಕ್ಷ್ಮ ಪ್ರದೇಶ. ಅದು ಓಪನ್ ಆಗಿರುತ್ತದೆ. ಗಡಿ ಭಾಗದಿಂದ ಸಮುದ್ರದ ಮೂಲಕ ಯಾರು ಒಳಗೆ ಬಂದರು, ಯಾರು ಹೊರಗೆ ಹೋದರು, ಹೊರ ಹೋದವರೇ ಒಳ ಬಂದರೆ ಅಥವಾ ಬೇರೆಯವರು ಬಂದು ಸೇರಿಕೊಂಡರೆ ಎಂಬುದು ಕರಾವಳಿ ಸುರಕ್ಷತೆಯಲ್ಲಿ ದೊಡ್ಡ ಸಮಸ್ಯೆ ಎಂದರು.

ಕರಾವಳಿ ಕಾವಲು ಪಡೆಯನ್ನು ಇನ್ನಷ್ಟು ಆಧುನಿಕರಣಗೊಳಿಸಬೇಕಿದೆ. ಎತ್ತರದ, ಗುಣಮಟ್ಟದ ಹಾಗೂ ದೊಡ್ಡ ಅಲೆಗಳಿ ದ್ದರೂ ಅದನ್ನು ಬೇಧಿಸಿ ಸಾಗುವ ಬೋಟ್‍ಗಳನ್ನು ನೀಡುವ ಬಗ್ಗೆಯೂ ಚಿಂತನೆಯಿದೆ. 320ಕಿಮೀ ಉದ್ದದ ಸಮುದ್ರ ಕಾಯಲು ಪ್ರತ್ಯೇಕ ತರಬೇತಿ ಅಗತ್ಯವಿದೆ.

Leave a Reply

Your email address will not be published. Required fields are marked *