Monday, 16th May 2022

ಬೈಕ್ ಗೆ ಲಾರಿ ಡಿಕ್ಕಿ: ವಕೀಲ ನಜೀರ್ ಅಹಮ್ಮದ್ ಸಾವು

ಹಾಸನ: ನಗರದ ಎನ್.ಆರ್.ವೃತ್ತದಲ್ಲಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಕೀಲರಾದ ನಜೀರ್ ಅಹಮ್ಮದ್(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಜೀರ್ ಅವರು ಮಂಗಳವಾರ ಬೆಳಿಗ್ಗೆ ಕೋರ್ಟ್ ಗೆ ತನ್ನ ಬೈಕಿನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯನ್ನು ಖಂಡಿಸಿ ವಕೀಲರು ನ್ಯಾಯಾಲದ ಕಲಾಪ ಖಂಡಿಸಿ ಎನ್ ಆರ್. ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.