Tuesday, 27th July 2021

ಮತ್ತೆ ಅಂಬ್ಯುಲೆನ್ಸ್ ಚಾಲಕರಾದ ರೇಣುಕಾಚಾರ್ಯ..

ದಾವಣಗೆರೆ : ಕರೋನಾ ಸೋಂಕಿಗೆ ಬಲಿಯಾದ‌ ಮುಸ್ಲಿಂ ಸಮಾಜದ ಯುವಕನ ಮೃತ ದೇಹ ಹೊತ್ತ ಅಂಬ್ಯುಲೆನ್ಸ್‌ ಅನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಚಾಲನೆ ಮಾಡಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಿಂದ ನ್ಯಾಮತಿಯ ಖಬರಸ್ಥಾನದ ವರೆಗೆ ಅಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಹೋದರು. ನ್ಯಾಮತಿ ಪಟ್ಟಣದ 34 ವರ್ಷದ ಮುಸ್ಲಿಂ ಸಮಾಜದ ಯುವಕ ಕರೋನಾದಿಂದ ಮೃತ ಪಟ್ಟಿದ್ದ.

ವಿಷಯ ತಿಳಿದು ಖುದ್ದು ಮೃತ ದೇಹ ಹೊತ್ತ ಅಂಬ್ಯುಲೆನ್ಸ್ ಅನ್ನು ಚಾಲನೆ ಮಾಡಿಕೊಂಡು ನ್ಯಾಮತಿಯ ಖಬರಸ್ಥಾನಕ್ಕೆ ತೆರಳಿದ‌ರು.

ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಇದೇ ವೇಳೆ ಶಾಸಕರು ಸಾಂತ್ವನ ಹೇಳಿದರು. ಶಾಸಕರ ಈ ಸೇವಾ ಮನೋಭಾವಕ್ಕೆ ಮುಸ್ಲಿಂ ಸಮಾಜದ ಬಂಧುಗಳು ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *