Tuesday, 21st March 2023

ವ್ಯಕ್ತಿಯ ಆಯುಸ್ಸುನ್ನು ಬಿಂಬಿಸಬಲ್ಲುದೇ ಕಣ್ಣು ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ದೇಹದಲ್ಲಿ ತೀವ್ರವಾಗಿ ಏನೂ ಉಪಕರಣ ತೂರಿಸದೇ ಬರೀ ಸ್ಕ್ಯಾನಿಂಗ್‌ನಿಂದ ಜನತೆಯನ್ನು ಸ್ಕ್ರೀನ್ ಮಾಡುವ ಪರೀಕ್ಷೆಯಾಗಿ ಇಟ್ಟು ಕೊಳ್ಳಬಹುದು, ಅಕ್ಷಿಪಟಲದ ರಕ್ತ ನಾಳಗಳು ಇದರಲ್ಲಿ ನೇರವಾಗಿ ಕಾಣಿಸುವುದರಿಂದ ದೇಹದ ಆರೋಗ್ಯ ಪರಿಸ್ಥಿತಿ ಇದರಲ್ಲಿ ಗೊತ್ತಾಗು ತ್ತದೆ ಎಂದು ನೇತ್ರ ವೈದ್ಯರು ಅಭಿಪ್ರಾಯ ಪಡುತ್ತಾರೆ.

ದೇಹದ ಹಲವು ವಿಚಾರಗಳ ಬಗ್ಗೆ ಕಣ್ಣು ಖಚಿತ ಮಾಹಿತಿ ಒದಗಿಸಬಲ್ಲದು. ಈ ವಿಚಾರ ಹೆಚ್ಚಿನ ನೇತ್ರ ತಜ್ಞರಿಗೆ, ದೈಹಿಕ ಕಾಯಿಲೆಗಳ ನಾನಾ ತಜ್ಞರಿಗೆ ಈಗಾಗಲೇ ಮನವರಿಕೆಯಾಗಿದೆ.

ಇತ್ತೀಚೆಗೆ ಕಣ್ಣಿಗೆ ಸಂಬಂಧಿಸಿದ ಕೆಲವು ಮುಖ್ಯ ಸಂಶೋಧನೆಗಳಾಗಿವೆ. ಅವುಗಳ ಬಗೆಗಿನ ನೋಟವೇ ಈ ಬಾರಿಯ ಅಂಕಣ. ಕಣ್ಣು ಪರೀಕ್ಷೆ ಮಾಡುವ ವ್ಯಕ್ತಿಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣಿನ ಒಳಗಿನ ಅಕ್ಷಿಪಟಲ ಪರೀಕ್ಷಿಸುವ ಅಥವಾ Retinal Imaging
ಮಾಡುವ ಪದ್ಧತಿ ಇದೆ. ಇದು ಕಣ್ಣಿನ ಬಗ್ಗೆ ಹಲವಾರು ಮಾಹಿತಿಗಳನ್ನು ಒದಗಿಸುವು ದಲ್ಲದೇ, ವ್ಯಕ್ತಿಯ ದೇಹದಲ್ಲಿರಬಹುದಾದ ಡಯಾ ಬಿಟಿಸ್, ಏರು ರಕ್ತದೊತ್ತಡ, ಅನೀಮಿಯಾ, ಲ್ಯುಕೀಮಿಯಾ, ಕಣ್ಣಿನ ದೃಷ್ಟಿ ನರಕ್ಕೆ ಸಂಬಂಧಪಟ್ಟ ಕಾಯಿಲೆಗಳಾದ ಆಪ್ಟಿಕ್ ನ್ಯೂರೈಟಿಸ್, ಪ್ಯಾಪಿಡಿಮಾ – ಹೀಗೆ ಹಲವು ಕಾಯಿಲೆಗಳ ಬಗ್ಗೆ ನಿಖರ ಮಾಹಿತಿ ಒದಗಿಸುತ್ತದೆ.

ದೇಹದ ಬೇರೆ ಅಂಗಗಳಿಗಿಂತ ಇಲ್ಲಿ ತಜ್ಞ ವೈದ್ಯ ಕಣ್ಣಿನಲ್ಲಿ ಆದ ಬದಲಾವಣೆ, ಕಾಯಿಲೆಯ ಹಂತ ಹಂತದ ವ್ಯತ್ಯಾಸಗಳು ಹಾಗೂ ಕಣ್ಣಿನ ಅಕ್ಷಿಪಟಲದ ರಕ್ತ ನಾಳಗಳ ಆರೋಗ್ಯ, ಅವುಗಳಲ್ಲಿ ಆಗುವ ಬದಲಾವಣೆಗಳು – ಇವೆಲ್ಲವನ್ನೂ ನೇರವಾಗಿ ಈಕ್ಷಿಸಬಲ್ಲ.
ಇತ್ತೀಚಿಗೆ ಕಣ್ಣಿನ ಅಕ್ಷಿಪಟಲದ ಸ್ಕ್ಯಾನಿಂಗ್‌ನಿಂದ ವ್ಯಕ್ತಿ ಇಷ್ಟುದಿನ ಬದುಕಬಲ್ಲ, ಅವನ ಸಾವಿಗೆ ಕಾರಣವಾಗುವ ಅಂಶಗಳ್ಯಾವುವು ಎಂಬುದನ್ನೂ ಕಂಡುಕೊಳ್ಳಬಹುದು ಎಂದರೆ ಆಶ್ಚರ್ಯವಲ್ಲವೇ? ಚೀನಾ, ಆಸ್ಟ್ರೇಲಿಯಾ ಮತ್ತು ಜರ್ಮನಿಯ ತಜ್ಞರು ಈ ಅಕ್ಷಿಪಟಲದ ಸ್ಕ್ಯಾನಿಂಗ್ ನಿಂದ ಅಲ್ಲಿರುವ ಚಿತ್ರಗಳ ಸಹಾಯ ದಿಂದ ಅಕ್ಷಿಪಟಲದ ಆಯುಸ್ಸನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಝೂ ಮತ್ತು ಸಹೋದ್ಯೋಗಿಗಳು ಕೃತಕ ಬುದ್ಧಿಮತ್ತೆ (Artificial intelligence) ಮತ್ತು ಆಳವಾದ ಅಧ್ಯಯನದಿಂದ ಮೇಲ್ನೋಟಕ್ಕೆ ಕಂಡು ಬರುವ ಅಕ್ಷಿಪಟಲದ ವಯಸ್ಸು ಮತ್ತು ವ್ಯಕ್ತಿಯ ನಿಜವಾದ ವಯಸ್ಸು – ಇವುಗಳನ್ನು ಹೋಲಿಸಿದಾಗ ವ್ಯಕ್ತಿ ಎಷ್ಟು ಕಾಲ ಬದುಕಬಲ್ಲ ಎಂದು ಒಂದು ಅಂದಾಜನ್ನು ಮಾಡಬಹುದು ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸೇಂಟ್ ಜಾನ್ಸ್ ಆರೋಗ್ಯ ಕೇಂದ್ರದ ನೇತ್ರ ವಿಭಾಗದ ಪ್ರೊಫೆಸರ್ ಡಾ. ಹೋವರ್ಡ್ ಆರ್ ಕ್ರಾಸ್ ಅಭಿಪ್ರಾಯ ಪಡುತ್ತಾರೆ. ಈ ಅಧ್ಯಯನದಲ್ಲಿ ಯು ಕೆ ಬಯೋಬ್ಯಾಂಕ್ ನಲ್ಲಿ ಇರುವ ಮಾಹಿತಿಯ 35,913 ಜನರ ಅಕ್ಷಿಪಟಲದ ವಯಸ್ಸಿನ ಅಂತರವನ್ನು ಪರಿಶೀಲಿಸಲಾಯಿತು.

ಅಕ್ಷಿಪಟಲದ ಬಯಲಾಜಿಕಲ್ ಆಯುಸ್ಸು (ಕೆಲವು ಪರೀಕ್ಷೆಗಳಿಂದ ಇದನ್ನು ಕಂಡುಹಿಡಿಯಲಾಗುತ್ತದೆ) ಮತ್ತು ವ್ಯಕ್ತಿಯ ನಿಜವಾದ
ದೈಹಿಕ ವಯಸ್ಸು ಇವುಗಳ ನಡುವಿನ ಅಂತರವನ್ನೇ ಅಕ್ಷಿಪಟಲದ ವಯಸ್ಸಿನ ಅಂತರ ಎನ್ನುತ್ತಾರೆ. ಇದರಲ್ಲಿ ಧನಾತ್ಮಕ ಅಂಕಿ (Positive Value) ಬಂದರೆ ವ್ಯಕ್ತಿಯ ವಯಸ್ಸಿಗಿಂತ ಕಣ್ಣಿನ ಅಕ್ಷಿ ಪಟಲಕ್ಕೆ ಹೆಚ್ಚು ವಯಸ್ಸಾಗಿದೆ ಎಂದರ್ಥ. ಮೇಲಿನ ಅಧ್ಯಯನದಲ್ಲಿ ಜನರು ಮಧ್ಯ ವಯಸ್ಸಿನ ಅಥವಾ ಜಾಸ್ತಿ ವಯಸ್ಸಾದವರು ಇದ್ದರು. 40-49 ವಯಸ್ಸಿನವರು ಸರಾಸರಿ ವಯಸ್ಸು 52.6 ವರ್ಷಗಳು ಇದ್ದವು. ಇವರಲ್ಲಿ ಮುಂದಿನ 11 ವರ್ಷಗಳಲ್ಲಿ ಸಂಶೋಧಕರು ಸಾವಿನ ಪ್ರಮಾಣ ಲೆಕ್ಕ ಹಾಕಿದರು. ಆ ಅವಧಿಯಲ್ಲಿ 1871 ಜನರು ಅಂದರೆ ಸುಮಾರು ಶೇ.5.21 ಜನರು ಅಸು ನೀಗಿದರು.

ವ್ಯಕ್ತಿಗೆ ಆದ ವಯಸ್ಸಿಗಿಂತ ಅಕ್ಷಿಪಟಲಕ್ಕೆ ಆದ ವಯಸ್ಸು ಜಾಸ್ತಿ ಎಂದು ಬಂದಾಗ ಅಂತಹ ವ್ಯಕ್ತಿಗಳು ಒಂದಲ್ಲ ಒಂದು ಕಾರಣದಿಂದ ಅಸು
ನೀಗುತ್ತಾರೆ ಎನ್ನಲಾಗಿದೆ. ಅಕ್ಷಿಪಟಲದ ಅಂತರ ಜಾಸ್ತಿ ಆದಷ್ಟೂ ಅಂತಹ ವ್ಯಕ್ತಿಗಳ ಮರಣದ ರಿಸ್ಕ್ ಜಾಸ್ತಿ ಎನ್ನಲಾಗಿದೆ. ಹೀಗೆ ಅಕ್ಷಿ ಪಟಲದ ಅಂತರ ಜಾಸ್ತಿ ಇರುವವರು ಮಡಿಯುವುದು ಬೇರೆ ಬೇರೆ ಕಾರಣಗಳಿಂದ ಎನ್ನಲಾಗಿದೆ. ಆದರೆ ಇವುಗಳಲ್ಲಿ ಎರಡು ರೀತಿಯ
ಕಾಯಿಲೆಗಳನ್ನು ಬಿಡಬೇಕು ಎಂದು ತಜ್ಞರ ಅಭಿಪ್ರಾಯ. ಹೃದಯ ಮತ್ತು ರಕ್ತ ನಾಳಗಳ ಕಾಯಿಲೆಗಳು ಮತ್ತು ಕ್ಯಾನ್ಸರ್ ಕಾಯಿಲೆಗಳು.
ಇಂತಹ ವ್ಯಕ್ತಿಗಳಲ್ಲಿ ಶೇ.71.6 ರಷ್ಟು ವ್ಯಕ್ತಿಗಳು ಮಡಿದರು.

ಉಳಿದಂತೆ ಡಿಮೆನ್ಷಿಯಾ ಕಾರಣಗಳಿಂದ ಬರುವ ಸಾವು ಶೇ.49 – 67ರಷ್ಟು ಜಾಸ್ತಿ ಹೆಚ್ಚಿನ ಅಕ್ಷಿಪಟಲದ ವಯಸ್ಸಿನ ಅಂತರದಲ್ಲಿದ್ದವು.
ಈ ಸಂಶೋಧನೆಯಲ್ಲಿ ಹಲವಾರು ಮಿತಿಗಳಿವೆ ಎಂದು ಸಂಶೋಧಕರು ಒಪ್ಪಿಕೊಳ್ಳುತ್ತಾರೆ. ಈ ಅಧ್ಯಯನದಿಂದ ವ್ಯಕ್ತಿಯ ಮರಣದ ನಿಜವಾದ ಕಾರಣ ತಿಳಿಯಲು ಸಾಧ್ಯವಿಲ್ಲ. ಇದರಲ್ಲಿ ಒಳಗೊಂಡ ಎಲ್ಲರೂ ಸ್ವಯಂ ಸೇವಕರು ಮತ್ತು ಹೆಚ್ಚಿನವರು ಬಿಳಿಯರು. ಹಾಗಾಗಿ ಇದು ಎಲ್ಲಾ ಜನರಿಗೆ ಹೊಂದುವದೇ ಎಂದು ಹೇಳಲು ಸಾಧ್ಯವಿಲ್ಲ. ಈ ಅಧ್ಯಯನಕ್ಕೆ ಹಲವಾರು ಮಿತಿಗಳಿದ್ದರೂ ಇದೊಂದು ದೇಹದ ಒಳಗೆ ತೀವ್ರವಾಗಿ ಏನೂ ಉಪಕರಣ ತೂರಿಸದೇ ಬರೀ ಸ್ಕ್ಯಾನಿಂಗ್‌ನಿಂದ ಜನತೆಯನ್ನು ಸ್ಕ್ರೀನ್ ಮಾಡುವ ಪರೀಕ್ಷೆಯಾಗಿ ಇಟ್ಟು ಕೊಳ್ಳಬಹುದು ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಅಕ್ಷಿಪಟಲದ ರಕ್ತ ನಾಳಗಳು ಇದರಲ್ಲಿ ನೇರವಾಗಿ ಕಾಣಿಸುವುದರಿಂದ ಇಡೀ ದೇಹದ ಆರೋಗ್ಯ ಪರಿಸ್ಥಿತಿ ಇದರಲ್ಲಿ ಸೂಕ್ಷ್ಮವಾಗಿ
ಗೊತ್ತಾಗುತ್ತದೆ ಎಂದು ನೇತ್ರ ವೈದ್ಯರು ಅಭಿಪ್ರಾಯ ಪಡುತ್ತಾರೆ. ವಯಸ್ಸಾಗುವಿಕೆಯನ್ನು ತಿಳಿಯಲು ಮತ್ತು ಬೇರೆ ದೈಹಿಕ ಕಾಯಿಲೆ  ಗಳಿಂದ ಮರಣ ಹೊಂದುವ ಸಾಧ್ಯತೆ ತಿಳಿಯಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಜಗತ್ತಿನ ಹಲವು ನೇತ್ರ ತಜ್ಞರ ಅಭಿಪ್ರಾಯ. ಹಾಗಾಗಿ ಹೆಚ್ಚಿನವರು ಮೊದಲು ತಿಳಿದಂತೆ ಕಣ್ಣುಗಳು ನಮ್ಮ ಮೆದುಳಿಗೆ ನಿಜವಾಗಿ ಕಿಟಕಿಯಾಗಬಲ್ಲದು ಎಂದು
ಈ ತಜ್ಞರುಗಳ ಅಭಿಮತ.

ದೃಷ್ಟಿ ದೋಷಕ್ಕೆ ಔಷಧ !  
ಹೆಚ್ಚಿನವರಿಗೆ 40 ವರ್ಷದ ಆಸುಪಾಸು ಓದಲು, ಬರೆಯಲು ತೊಂದರೆಯಾಗುತ್ತದೆ, ಹೊಲಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ,
ಹತ್ತಿರದ ಗೆರೆಗಳು ಸರಿಯಾಗಿ ಕಾಣಿಸುವುದಿಲ್ಲ (ಮರಗೆಲಸ ಮಾಡುವ ಆಚಾರಿಗಳಿಗೆ ಹಾಗೂ ಚಿನ್ನದ ಕೆಲಸ ಮಾಡುವವರಿಗೆ), ಕಂಪ್ಯೂಟರ್ ಅಕ್ಷರಗಳು ಅಸ್ಪಷ್ಟವಾಗುತ್ತವೆ – ಎಂಬ ಕಣ್ಣಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಆಡು ಭಾಷೆಯಲ್ಲಿ ಚಾಳೀಸು ಎಂದು ಕರೆಯುತ್ತಾರೆ.

ಹೌದು ಈ ರೀತಿಯ ತೊಂದರೆ ಇದ್ದವರಿಗೆ ಹತ್ತಿರದ ಸೂಕ್ಷ್ಮ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಷ್ಟವಾಗುತ್ತದೆ. ಇಂತಹವರಿಗೆ
ಸಾಮಾನ್ಯವಾಗಿ ನಾವು ನೇತ್ರ ವೈದ್ಯರು ಕನ್ನಡಕ (Spectacle) ಧರಿಸಬೇಕೆಂದು ಸಲಹೆ ಮಾಡುತ್ತೇವೆ. ಈ ರೀತಿ ಹತ್ತಿರದ ದೃಷ್ಟಿ ಕಡಿಮೆಯಾದವರು ಜಗತ್ತಿನಾದ್ಯಂತ ದೃಷ್ಟಿ ಕೊಡುವ ಕನ್ನಡಕವನ್ನೇ (Near vision glasses) ಧರಿಸುತ್ತಿದ್ದಾರೆ. ಆದರೆ ಇಂತಹ ವರಿಗೆ ಅಮೆರಿಕದಲ್ಲಿ ಇತ್ತೀಚೆಗೆ ಹೊಸ ಚಿಕಿತ್ಸೆ ಲಭ್ಯವಾಗಿದೆ. ಹೌದು, ಹತ್ತಿರದ ದೃಷ್ಟಿ ತೊಂದರೆ ಇರುವವರಲ್ಲಿ ಇತ್ತೀಚೆಗೆ ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಕಣ್ಣಿಗೆ ಬಿಡುವ ಹನಿ ಔಷಧಕ್ಕೆ (Eye Drops) ಪರವಾನಗಿ ಕೊಟ್ಟಿದೆ.

uity ಎಂಬ ಈ ಕಣ್ಣಿನ ಔಷಧವನ್ನು ಅಕ್ಟೋಬರ್ 2020ರಲ್ಲಿಯೆ FDA ಒಪ್ಪಿ ಡಿಸೆಂಬರ್ 2020 ರ ಕೊನೆಯ ಹೊತ್ತಿಗೆ ಅಮೆರಿಕದಲ್ಲಿ ಜನರ ಉಪಯೋಗಕ್ಕೆ ಲಭ್ಯವಾಗಿದೆ. ಕಣ್ಣಿಗೆ ಈ ಔಷಧವನ್ನು ಹಾಕಿ 15 ನಿಮಿಷಗಳಲ್ಲಿ ತನ್ನ ಕೆಲಸ ಆರಂಭಿಸಿ 6 ರಿಂದ 10 ಗಂಟೆಗಳ ಕಾಲ ತೀಕ್ಷ್ಣವಾದ ಹತ್ತಿರ ದೃಷ್ಟಿ ಇರುವಂತೆ ಅದು ನೋಡಿಕೊಳ್ಳುತ್ತದೆ. ಪ್ರಪಂಚದಾದ್ಯಂತ 40 ವರ್ಷ ಮತ್ತು ಅದರ ನಂತರದ ವಯಸ್ಸಿನ ಹೆಚ್ಚಿನವರು ಹತ್ತಿರದ ದೃಷ್ಟಿ ತೊಂದರೆ ಇದ್ದವರು ಕನ್ನಡಕದ ಬದಲು ಇದರ ಉಪಯೋಗ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಸಾಮಾನ್ಯ ದೃಷ್ಟಿ ದೋಷ: 40 ವರ್ಷ ಮತ್ತು ನಂತರದ ವಯಸ್ಸಿನವರಲ್ಲಿ ಕಂಡುಬರುವ ಈ ದೃಷ್ಟಿದೋಷವನ್ನು Presbyopia ಎನ್ನುತ್ತೇವೆ. ಈ ರೀತಿಯ ಹತ್ತಿರದ ದೃಷ್ಟಿ ಈ ವಯಸ್ಸಿನವರಲ್ಲಿ ಕಂಡು ಬರಲು ಕಾರಣ ಎಂದರೆ – ಕಣ್ಣಿನೊಳಗಿನ ನೈಸರ್ಗಿಕ ಮಸೂರವು (Lens) ಗಟ್ಟಿಯಾಗಿ ಕಣ್ಣಿನ ಮಾಂಸಗಳಿಂದ ರೂಪಾಂತರಗೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಗ ಸಾಮಾನ್ಯವಾಗಿ ಪೀನ
ಮಸೂರವನ್ನು (Convex Lens) ಕನ್ನಡಕದ ರೂಪದಲ್ಲಿ ಕೊಡುವುದರಿಂದ ತೊಂದರೆಯನ್ನು ನಿವಾರಿಸಲಾಗುತ್ತದೆ.

ಮೊದಲು ತಿಳಿಸಿದ Vuity (ವಿಯುಟಿ) ಔಷಧವು ಕಣ್ಣಿನ ಪಾಪೆಯನ್ನು ಕಿರಿದುಗೊಳಿಸಲು ಕಣ್ಣಿನ ನೈಸರ್ಗಿಕ ಸಾಮರ್ಥ್ಯವನ್ನೇ ಉಪಯೋಗಿಸುತ್ತದೆ. ಕಣ್ಣಿನ ಪಾಪೆ ( Pupil) ಕಿರಿದುಗೊಳಿಸುವುದರಿಂದ ಕಣ್ಣಿನ ಹತ್ತಿರಕ್ಕೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಬೇರೆ ಬೇರೆ ದೂರದಲ್ಲಿರುವ ವಸ್ತುಗಳ ಮೇಲೆ ಕಣ್ಣಿನ ದೃಷ್ಟಿ ಹಾಯಿಸಿ ನೋಡುವಾಗ ಸ್ಪಷ್ಟವಾಗಿ ಅಥವಾ ನಿಖರವಾಗಿ ಕಾಣಿಸುವಂತೆ
ಮಾಡುತ್ತದೆ – ಎಂದು ವಿಯುಟಿ ಔಷಧದ ಕ್ಲಿನಿಕಲ್ ಟ್ರಯಲ್ ನ ಮುಖ್ಯಸ್ಥ ಡಾ.ಜಾರ್ಜ್ ರಿಂಗ್ ಅವರು ನುಡಿಯುತ್ತಾರೆ.

ಆರಂಭದಲ್ಲಿ ಈ ಕಣ್ಣಿನ ಡ್ರಾಪ್ಸ್ ಉಪಯೋಗಿಸುವಾಗ ಬೇರೆ ಬೇರೆ ದೂರದ ವಸ್ತುಗಳ ಮೇಲೆ ದೃಷ್ಟಿ ಕೇಂದ್ರೀಕರಿಸುವುದು ಕಷ್ಟ ಎನಿಸ ಬಹುದು. ಕೆಲವರಲ್ಲಿ ಈ ಔಷಧ ತಲೆನೋವು, ಕಣ್ಣು ಕೆಂಪಾಗುವುದು – ಈ ತರಹದ ಪಾರ್ಶ್ವ ಪರಿಣಾಮಗಳು ಕಾಣಿಸಿಕೊಳ್ಳ ಬಹುದು. ಈ ಔಷಧವು ಕಡಿಮೆ ಮತ್ತು ಮಧ್ಯಮ ಪ್ರಮಾಣದ Presbyopia ದಲ್ಲಿ ಉಪಯೋಗವಾಗುತ್ತದೆ. ರಾತ್ರಿಯ ವೇಳೆಯಲ್ಲಿ ಡ್ರೈವಿಂಗ್ ಅಥವಾ ಬೇರೆ ಕೆಲಸ ಮಾಡುವಾಗ ಇದನ್ನು ಉಪಯೋಗಿಸಬಾರದು. ಅಲ್ಲದೆ ಇದು ಬೇರೆಯ ದೃಷ್ಟಿ ದೋಷಗಳಾದ ಸಮೀಪ ದೃಷ್ಟಿ (Myopia) ಮತ್ತು ದೂರದೃಷ್ಟಿ (Hyperme tropia) ಗಳಲ್ಲಿ ಉಪಯೋಗವಾಗುವುದಿಲ್ಲ.

40-55 ವರ್ಷದವರಲ್ಲಿ ಇದು ಕೆಲಸ ಮಾಡುತ್ತದೆ. 65 ವರ್ಷಗಳ ನಂತರದಲ್ಲಿ ಇದು ಉಪಯೋಗವಾಗುವುದಿಲ್ಲ ಎನ್ನಲಾಗಿದೆ. 30 ದಿನ ಗಳ ಔಷಧಕ್ಕೆ 80 ಡಾರ್ಲ ಗಳ ಬೆಲೆ ಇರುವ ಈ Vuity ಔಷಧವು ಜಗತ್ತಿನ ಬೇರೆ ದೇಶಗಳಲ್ಲಿ ಕ್ರಮೇಣ ಲಭ್ಯವಾಗಬಹುದು. ಹೃದಯಕ್ಕೆ ಕನ್ನಡಿಯಾಗಬಲ್ಲದೇ ? ಕಣ್ಣಿನ ಅಕ್ಷಿಪಟಲದಲ್ಲಿನ ಸೂಕ್ಷ್ಮ ರಕ್ತನಾಳಗಳು ದೇಹದ ಇತರೆಡೆಯ ರಕ್ತನಾಳಗಳ ಹಾಗೂ ಹೃದಯದ ಆರೋಗ್ಯದ ಹಲವು ವಿಚಾರಗಳನ್ನು ತಿಳಿಸಬಹುದು ಎಂದು ಇತೀಚಿನ ಒಂದು ಸಂಶೋಧನೆ ತಿಳಿಸುತ್ತದೆ.

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದ ಈ ಸಂಶೋಧನೆಯಲ್ಲಿ ಆಳವಾದ ಕಲಿಯುವಿಕೆಯ ತಾಂತ್ರಿಕತೆ (Deep Learning Techniques )ಯನ್ನು ಉಪಯೋಗಿಸಿ ಕೃತಕ ಬುದ್ಧಿಮತ್ತೆ (Artificial intelligence) ವ್ಯವಸ್ಥೆಗೆ ತರಬೇತಿ ಕೊಡಲಾ ಯಿತು. ಈ ವ್ಯವಸ್ಥೆ ವ್ಯಕ್ತಿಯ ಕಣ್ಣಿನ ಅಕ್ಷಿಪಟಲದ ಸ್ಕ್ಯಾನ್ ಗಳನ್ನು ತನ್ನಿಂದ ತಾನೇ ವಿಶ್ಲೇಷಿಸಿ ಭವಿಷ್ಯದಲ್ಲಿ ಯಾರಲ್ಲಿ ಹೃದಯಾಘಾತ ವಾಗಬಹುದು ಎಂಬ ಮಾಹಿತಿಯನ್ನು ಕಂಡು ಕೊಳ್ಳುತ್ತದೆ. ಆಳವಾದ ಕಲಿಯುವಿಕೆಯ ಮಾಹಿತಿ ಎಂದರೆ ಲಭ್ಯವಿರುವ ಮಾಹಿತಿ ಕಲೆಹಾಕಿ ಕಂಪ್ಯೂಟರ್ ಆಲ್ಗಾರಿದಂ ಉಪಯೋಗಿಸಿ ಭವಿಷ್ಯದ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತದೆ.

ಇದು 70 – 80% ನಿಖರ ಮಾಹಿತಿಯಾಗಿದ್ದು, ಹೃದಯ ಮತ್ತು ರಕ್ತನಾಳಗಳ ಬಗ್ಗೆ ಮಾಡುವ ಉಳಿದ ಪರೀಕ್ಷೆಗಳ ನಂತರ ಎರಡನೇ ರೆ-ರಲ್ ವ್ಯವಸ್ಥೆ ಎಂದಿಟ್ಟುಕೊಳ್ಳಬಹುದು ಎಂದು ಸಂಶೋಧಕರ ಅಭಿಪ್ರಾಯ. ಹೃದಯ ಕಾಯಿಲೆಗಳ ಸ್ಕ್ರೀನಿಂಗ್ ನಲ್ಲಿ ಕಣ್ಣಿನ ಸ್ಕ್ಯಾನಿಂಗ್ ಭವಿಷ್ಯದಲ್ಲಿ ಕ್ರಾಂತಿ ಉಂಟುಮಾಡಬಲ್ಲದು.

error: Content is protected !!