Friday, 24th September 2021

ಆಕಡೆಯವರ ಜನುಮದಿನ ಈಕಡೆಯವರಿಂದ ಆಚರಣೆ!

ಎಸ್. ಷಡಕ್ಷರಿ
ಆಸಕ್ತಿ ಹುಟ್ಟಿಸುವ ಈ ಘಟನೆಯನ್ನು ಮ್ಯಾಾನೇಜ್‌ಮೆಂಟ್ ಶಿಬಿರವೊಂದರಲ್ಲಿ ತರಬೇತಿದಾರರಾದ ಶ್ರೀವಾಸ್ತವ ಅವರು ಹೇಳಿದ್ದು.

ಆಧುನಿಕ ಚೈನಾದಲ್ಲಿ ಎರಡು ಉದ್ಯಮಗಳು ಅಕ್ಕಪಕ್ಕದಲ್ಲಿದ್ದವಂತೆ. ಇಬ್ಬರದ್ದೂ ಒಂದೇ ಬಗೆಯ ಉತ್ಪನ್ನಗಳು. ಹಾಗಾಗಿ ಇಬ್ಬರಿಗೂ ಪರಸ್ಪರ ಪೈಪೋಟಿ. ಆದರೆ ಇಬ್ಬರ ಉತ್ಪನ್ನಗಳೂ ಒಳ್ಳೆೆಯ ಗುಣಮಟ್ಟವನ್ನು ಹೊಂದಿದ್ದವು. ಇಬ್ಬರೂ ಚೆನ್ನಾಾಗಿ ವ್ಯವಹಾರ ನಡೆಸುತ್ತಿಿದ್ದರು. ಇಬ್ಬರೂ ಯಶಸ್ವಿಿಯಾಗಿದ್ದವರು. ಅಪಾರವಾದ ವ್ಯಾಾಪಾರವನ್ನೂ, ಲಾಭವನ್ನೂ ಹೊಂದಿದ್ದವರು. ಹೊರಗಿನಿಂದ ನೋಡುವವರಿಗೆ ಇವರಿಬ್ಬರಲ್ಲಿ ಎಂತಹ ಪೈಪೋಟಿ ಎನಿಸುತ್ತಿಿತ್ತು. ಒಳಗೆ ಕೆಲಸ ಮಾಡುವವರಿಗೂ ಹಾಗೆಯೇ ಅನಿಸುತ್ತಿಿತ್ತು.

ಒಂದು ದಿನ ಈ ಕಡೆಯ ಉದ್ಯಮದ ಮಾಲೀಕ ತಮ್ಮ ಮ್ಯಾಾನೇಜರನ್ನೂ, ಕೆಲಸಗಾರರನ್ನೂ ಕರೆದರು. ತಮ್ಮ ಕಾರ್ಖಾನೆಯನ್ನು ತಳಿರು-ತೋರಣಗಳಿಂದ ಶೃಂಗರಿಸುವಂತೆ, ಒಂದು ದೊಡ್ಡ ಹಬ್ಬವನ್ನು ಆಚರಿಸುವಂತೆ ಹೇಳಿದರು.
ತಕ್ಷಣ ಅವರ ಕಾರ್ಖಾನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಯಿತು. ಹಬ್ಬವನ್ನು ಭವ್ಯವಾಗಿ ಆಚರಿಸಲಾಯಿತು. ಎಲ್ಲರಿಗೂ ಒಳ್ಳೆೆಯ ಊಟದ ವ್ಯವಸ್ಥೆೆ ಮಾಡಲಾಗಿತ್ತು. ಸಡಗರ ಸಂಭ್ರಮಗಳು ಮುಗಿದ ನಂತರ ಎಲ್ಲರೂ ಆರಾಮವಾಗಿ ಕುಳಿತುಕೊಂಡರು. ಆಗ ಮ್ಯಾಾನೇಜರ್ ಅವರು ಧೈರ್ಯ ಮಾಡಿ ಎಲ್ಲ ಚೆನ್ನಾಾಗಿ ಆಯಿತು, ಆದರೆ ಈ ಹಬ್ಬದ ಆಚರಣೆ ಏಕೆಂದು ನಮಗೆ ಯಾರಿಗೂ ಗೊತ್ತಾಾಗಲಿಲ್ಲ. ದಯವಿಟ್ಟು ತಿಳಿಸಿಕೊಡಿ ಎಂದು ಕೇಳಿಕೊಂಡರು.

ಆಗ ಆ ಉದ್ಯಮಿಯು ಗಟ್ಟಿಿಯಾಗಿ ನಕ್ಕು ‘ಇಂದು ಪಕ್ಕದ ಕಾರ್ಖಾನೆಯ ಮಾಲೀಕರಾದ ಉದ್ಯಮಿಯ ಜನ್ಮದಿನ! ಅದಕ್ಕಾಾಗಿ ನಮ್ಮಲ್ಲಿ ಹಬ್ಬದ ಆಚರಣೆ’ ಎಂದರು.

ಪರಸ್ಪರ ಹಾರ್ದಿಕ ಸಂಬಂಧವಿಲ್ಲದಿದ್ದರು ಇವರು ಅವರ ಹುಟ್ಟುಹಬ್ಬವನ್ನು ಭವ್ಯವಾಗಿ ಆಚರಿಸುವುದನ್ನು ಕಂಡು ಎಲ್ಲರಿಗೂ ಆಶ್ಚರ್ಯ. ಅದನ್ನು ಗಮನಿಸಿದ ಉದ್ಯಮಿ ಹೀಗೆ ಹೇಳಿದರು. ‘ನಿಮಗೆ ಗೊತ್ತಿಿಲ್ಲದೇ ಇರಬಹುದು. ನಾನು ಕೆಲವು ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡುತ್ತಿಿದ್ದೆ. ಅವರಿಂದಲೇ ವಿದ್ಯೆೆ ಕಲಿತೆ’. ಆಗ ಚಾಲ್ತಿಿಯಲ್ಲಿದ್ದ ಪರೀಕ್ಷೆಗಳಲ್ಲಿ ಉತ್ತೀರ್ಣನಾದೆ. ಜೀವನ ಪರ್ಯಂತ ಅವರೊಟ್ಟಿಿಗೇ ಇರಬೇಕೆಂದು ತೀರ್ಮಾನಿಸಿದ್ದೆ. ಆದರೆ ಒಂದು ದಿನ ಅವರು ನಾನು ಮಾಡಿದ ಒಂದು ಸಣ್ಣ ತಪ್ಪಿಿಗಾಗಿ ಅವರ ಉದ್ಯಮದಿಂದ ಹೊರಗೆ ಹಾಕಿದರು. ಅಂದು ನಾನು ಬಹಳ ಗೋಳಾಡಿದೆ. ನನ್ನ ಮೇಲೆ ಅವರೇಕೆ ನಿಷ್ಕರುಣಿಯಾದರೆಂದು ಕೊರಗಿದೆ. ಆದರೆ ಬೇರೆ ದಾರಿಯೇ ಇರಲಿಲ್ಲ. ಹೊರಗೆ ಬರಲೇಬೇಕಾಯಿತು. ಅವರೇ ಕಲಿಸಿದ ವಿದ್ಯೆೆ ಕೈಯ್ಯಲ್ಲಿತ್ತು. ಅದರ ಬಲದಿಂದ ಈ ಉದ್ಯಮ ಸ್ಥಾಾಪಿಸಿದೆ. ಅಭಿವೃದ್ಧಿಿ ಹೊಂದಿದೆ. ನನ್ನದೇ ಮಾರ್ಗವನ್ನು ಕಂಡುಕೊಂಡೆ. ಅವರು ಅಂದು ನನ್ನನ್ನು ಹೊರಗೆ ಹಾಕದಿದ್ದರೆ ನಾನು ಎಂದೆಂದೂ ಅವರ ಮೇಲೆಯೇ ಅವಲಂಬಿತನಾಗಿರುತ್ತಿಿದ್ದೆ. ನನ್ನ ಕಾಲ ಮೇಲೆ ನಿಲ್ಲುವ ಪ್ರಯತ್ನವನ್ನೂ ಮಾಡುತ್ತಿಿರಲಿಲ್ಲ.

ಅವರು ಆಗಾಗ ಹೇಳುತ್ತಿಿದ್ದ ‘ನಾವೆಲ್ಲ ಮರದ ಕೊಂಬೆಗಳ ಹಾಗಿರಬೇಕು. ಬೇರೆಬೇರೆ ಆಗಬೇಕು. ಬೆಳೆಯುತ್ತ ಹೋಗಬೇಕು. ಕೊಂಬೆಗಳು ಬೇರೆಬೇರೆ ಆಗದಿದ್ದರೆ ಮರ ಬೆಳೆಯುವುದೇ ಇಲ್ಲ’ ಎಂಬ ಮಾತು ನನ್ನ ಪಾಲಿಗೆ ನಿಜವಾಯಿತು.
ಅವರು ಅಂದು ನನ್ನನ್ನು ತಿರಸ್ಕರಿಸದೇ, ಹೊರಗೆ ಹಾಕದೇ ಇದ್ದಿದ್ದರೆ ನಾನು ಬೆಳೆಯುತ್ತಿಿರಲಿಲ್ಲ. ಅದಕ್ಕಾಾಗಿ ನಾನು ಪ್ರತಿವರ್ಷ ಅವರ ಹುಟ್ಟುಹಬ್ಬವನ್ನು ಆಚರಿಸಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಮಾತುಗಳು ಅಲ್ಲಿದ್ದವರ ಮೆಚ್ಚುಗೆಯನ್ನು ಗಳಿಸಿದವು. ಚಪ್ಪಾಾಳೆಯನ್ನೂ ಗಳಿಸಿದವು.

ಬದುಕಿನಲ್ಲಿ ನಮಗೂ ಸೋಲಿನ ಹೊಡೆತಗಳು ಬಿದ್ದಾಗ, ನೋವನ್ನೇ ನೆನೆನೆನೆದು ಗೋಳಾಡುವುದರ ಬದಲು ಅದು ಕಲಿಸಿದ ಪಾಠವನ್ನು ಗಮನಿಸಿದರೆ ನಾವೂ ಮುಂದೆ ಬೆಳೆಯಬಹುದೇನೋ? ಅನೇಕ ಬಾರಿ ನೂತನ ಅವಕಾಶಗಳು ನಮ್ಮ ಮುಂದೆ ಅನಪೇಕ್ಷಿತ ಅಡಚಣೆಗಳ ರೂಪದಲ್ಲಿ ಬಂದು ನಿಲ್ಲುತ್ತವೇನೋ? ನಮ್ಮ ಬದುಕಿನಲ್ಲೂ ಹೀಗೆ ಆಗಿದೆಯಾ?

Leave a Reply

Your email address will not be published. Required fields are marked *