Monday, 8th March 2021

ಡೇವಿಡ್ ಮಲನ್‌’ಗೆ ನಿರಾಸೆ: ಬಿಕರಿಯಾಗದ ಅಲೆಕ್ಸ್ ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್

ಚೆನ್ನೈ: ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಡೇವಿಡ್ ಮಲನ್ ರಿಗೆ ನಿರಾಸೆಯಾಗಿದೆ. ಮಲನ್‌ರನ್ನು ಅತಿ ಹೆಚ್ಚು ಹಣಕ್ಕೆ ಖರೀದಿ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಮಲನ್ 1.5 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ.

ಅಲೆಕ್ಸ್ ಕ್ಯಾರಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಗೆ ಹಿನ್ನಡೆಯಾಗಿದೆ. ಶ್ರೀಲಂಕಾದ ಕುಸಲ್ ಪೆರೆರಾ, ಗ್ಲೆನ್ ಫಿಲಿಪ್ಸ್, ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಯಾವುದೇ ಫ್ರ್ಯಾಂಚೈಸ್ ಖರೀದಿಸಿಲ್ಲ.

ಆಸ್ಟ್ರೇಲಿಯಾದ ಝೈ ರಿಚರ್ಡ್‌ಸನ್‌ರನ್ನು ಪಂಜಾಬ್ ಕಿಂಗ್ಸ್ 14 ಕೋಟಿಗಳಿಗೆ ಖರೀದಿಸಿದೆ. ಈ ಆಟಗಾರನ ಮೂಲ ಬೆಲೆ 1.50 ಕೋಟಿಯಾಗಿತ್ತು. ಮುಂಬೈ ಇಂಡಿಯನ್ಸ್ ಆಡಮ್ ಮಿಲ್ನೆ ಅವರನ್ನು 3.2 ಕೋಟಿಗೆ ಖರೀದಿಸಿದೆ.

ನಾಥನ್ ಕೌಲ್ಟರ್-ನೈಲ್ ಅವರನ್ನು ಮುಂಬೈ ಇಂಡಿಯನ್ಸ್ 5 ಕೋಟಿಗೆ ಖರೀದಿಸಿದೆ. ಉಮೇಶ್ ಯಾದವ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 1 ಕೋಟಿ ಮೂಲ ಬೆಲೆಗೆ ಖರೀದಿಸಿದೆ.

Leave a Reply

Your email address will not be published. Required fields are marked *