Monday, 6th February 2023

ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಣಬೀರ್ ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ಖಚಿತಪಡಿಸಿ ದ್ದಾರೆ.

ಭಾನುವಾರ ಬೆಳಿಗ್ಗೆ, ಆಲಿಯಾ ಮತ್ತು ರಣಬೀರ್ ಮುಂಬೈನ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಆಗಮಿಸಿದ್ದರು.

ಇದಾಗಿ ಕೆಲವೇ ಗಂಟೆಗಳಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

”ಆಲಿಯಾ ಭಟ್ ಅವರಿಗೆ ಹೆಣ್ಣು ಮಗುವಾಗಿದೆ. ಅವರು ಬೆಳಗ್ಗೆ 7.30 ಕ್ಕೆ ಆಸ್ಪತ್ರೆಗೆ ಬಂದರು. ಅವರು ಕಳೆದ ಕೆಲವು ದಿನಗಳಿಂದ ನಿಯಮಿತವಾಗಿ 11 ರಿಂದ 12 ರವರೆಗೆ ಆಸ್ಪತ್ರೆಗೆ ಬರುತ್ತಿದ್ದಾರೆ” ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಭಾನುವಾರ ಚೊಚ್ಚಲ ಹೆಣ್ಣು ಮಗುವಿಗೆ ತಾಯಿಯಾಗಿರುವ ಬಗ್ಗೆ ಆಲಿಯಾ ಭಟ್ ಮುದ್ದಾದ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಸಿದ್ಧ ಬಾಲಿವುಡ್ ಜೋಡಿ ಈ ವರ್ಷ ಏಪ್ರಿಲ್‌ನಲ್ಲಿ ತಮ್ಮ ಮುಂಬೈ ನಿವಾಸದಲ್ಲಿ ವಿವಾಹವಾಗಿದ್ದರು.

error: Content is protected !!