Tuesday, 7th December 2021

ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ…ಪ್ಲೀಜ್‌…

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌, ಶಾರುಖ್‌ ಮತ್ತು ಗೌರಿ ಅವರ ವಿವಾಹ ವಾರ್ಷಿ ಕೋತ್ಸವ ಇದ್ದು, ಕೊನೆಯ ಪಕ್ಷ ಇದಕ್ಕಾದರೂ ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ ಎಂದು ಜೈಲು ಅಧಿಕಾರಿಗಳಿಗೆ ಆರ್ಯನ್‌ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.

ತಾಯಿ ಗೌರಿ ಖಾನ್‌ ಅವರ ಹುಟ್ಟುಹಬ್ಬವನ್ನು ಮಿಸ್‌ ಮಾಡಿಕೊಂಡಿದ್ದಾನೆ. ಇದೇ 8ರಂದು ಗೌರಿ ಅವರ ಹುಟ್ಟುಹಬ್ಬವಿತ್ತು. ಅದರೆ ಜೈಲಿನಲ್ಲಿ ಇದ್ದು ದರಿಂದ ಆರ್ಯನ್‌ಗೆ ವಿಷ್‌ ಮಾಡಲು ಸಾಧ್ಯವಾಗಲಿಲ್ಲ. ಆದರೆ ಸೋಮವಾರ (ಅ.25) ಇವರ 30ನೇ ವಿವಾಹ ವಾರ್ಷಿಕೋತ್ಸವ.

ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ ಮುಂದೆ ಬರುವ ಸಾಧ್ಯತೆ ಇದೆ. ಮುಂಬೈನ ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಆರ್ಯನ್‌ ಖಾನ್‌ ಪರವಾಗಿ ಮಾಜಿ ಅಟಾರ್ನಿ ಜನರಲ್‌ ಆಗಿರುವ ಮುಖುಲ್‌ ರೋಹಟಗಿ ಅವರು ವಾದ ಮಂಡಿಸಲಿದ್ದಾರೆ.