Wednesday, 1st December 2021

ಕರ್ನಾಟಕದಲ್ಲಿ ಅಮೇಜ್ ಇನ್ವರ್ಟರ್‌, ಬ್ಯಾಟರಿಗಳ ವಿತರಣಾ ಚಾನಲ್ ವಿಸ್ತರಣೆ

AMAZ Invertor

ಕರ್ನಾಟಕದಲ್ಲಿ ಅಮೇಜ್‌ನ ಬೆಳವಣಿಗೆಗೆ ಪ್ರಮುಖ ಕಾರ್ಯತಂತ್ರದ ಮಾರುಕಟ್ಟೆ

ಭಾರತದಾದ್ಯಂತ 300+ ವಿತರಕರು ಮತ್ತು 12000+ ವಿತರಕರು 

ಬೆಂಗಳೂರು: ಭಾರತದಲ್ಲಿ ಅತ್ಯಂತ ಕಿರಿಯ ಮತ್ತು ವೇಗವಾಗಿ ಬೆಳೆಯುತ್ತಿರುವ ಇನ್ವರ್ಟರ್ ಮತ್ತು ಇನ್ವರ್ಟರ್ ಬ್ಯಾಟರಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಅಮೇಜ್, ಬೆಂಗಳೂರಿನಲ್ಲಿ ತನ್ನ ವಿತರಣಾ ಚಾನೆಲ್ ಅನ್ನು ಮತ್ತಷ್ಟು ಬಲಪಡಿಸಲು ಶಿವಶಕ್ತಿ ಎಂಟರ್‌ಪ್ರೈಸ್‌ನೊಂದಿಗೆ ತನ್ನ ಪಾಲುದಾರಿಕೆ ಹೊಂದು covidತ್ತಿರುವುದಾಗಿ ಇಂದು ಪ್ರಕಟಿಸಿದೆ.

ಉದ್ಘಾಟನೆಯ ನಂತರ, ಬೆಂಗಳೂರಿನ ಸ್ಪ್ರಿಂಗ್ಸ್ ಹೋಟೆಲ್’ನಲ್ಲಿ ಅಮೇಜ್ ವಿತರಕರ ಸಭೆಯನ್ನು ನಡೆಸಿತು. ಕಳೆದ 3 ವರ್ಷಗಳಲ್ಲಿ ಬ್ರ್ಯಾಂಡ್‌ನ ಪ್ರಯಾಣ, ಅದರ ಪ್ರಚಂಡ ಬೆಳವಣಿಗೆ ಮತ್ತು ಮುಂದಿನ 3 ವರ್ಷಗಳ ಮಾರ್ಗಸೂಚಿಯ ಕುರಿತು ಆ ಪ್ರದೇಶದ 50ಕ್ಕೂ ಅಧಿಕ ಡೀಲರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.

ಪಾಲುದಾರಿಕೆ ಕುರಿತು ಮಾತನಾಡಿದ ಪವರ್ ಸೊಲ್ಯೂಷನ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಶ್ರೀ ಅಮಿತ್ ಶುಕ್ಲಾ, “ಕರ್ನಾಟಕವು ಅಮೇಜ್‌ಗೆ ಪ್ರಮುಖ ಮಾರುಕಟ್ಟೆಯಾಗಿದೆ. ಇದು ಕರ್ನಾಟಕದಲ್ಲಿ ಬ್ರ್ಯಾಂಡ್‌ಗೆ ಉತ್ತಮ ಬೆಳವಣಿಗೆ ಹೊಂದುವ ಸೂಚನೆಯಾಗಿದೆ. ದೃಢವಾದ ವಿತರಣಾ ಚಾನಲ್ ಮತ್ತು ಸೇವಾ ಕೇಂದ್ರಗಳ ಮೂಲಕ ಈ ಪ್ರದೇಶದಲ್ಲಿ ನಮ್ಮ ಬೆಳವಣಿಗೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ನಾವು ಬೆಳವಣಿಗೆಯ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಭಾರತದಾದ್ಯಂತ ನಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿದ್ದೇವೆ ಎಂದರು.

ಅಮೇಜ್, ಭಾರತೀಯ ಹವಾಮಾನ ಪರಿಸ್ಥಿತಿಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುವ ಇನ್ವರ್ಟರ್‌ಗಳು, ಬ್ಯಾಟರಿಗಳು ಮತ್ತು ಸೌರ ಉತ್ಪನ್ನಗಳನ್ನು ಒದಗಿಸುತ್ತಿದೆ. ಇವು ಅತ್ಯಾಧುನಿಕ ತಂ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಇನ್ವರ್ಟರ್‌ಗಳು ಮತ್ತು ಬ್ಯಾಟರಿಗಳು ಬಹುಬೇಗ ಚಾರ್ಜ್ ಆಗುತ್ತವೆ ಮತ್ತು ಪದೇ ಪದೇ ವಿದ್ಯುತ್ ವೈಫಲ್ಯವಾಗುವ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ. ಈ ಬ್ರ್ಯಾಂಡ್ ಇತ್ತೀಚೆಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯೊಂದಿಗೆ ತನ್ನ ಜಾಹಿರಾತು ಒಪ್ಪಂದವನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಿದೆ.

ಶಿವಶಕ್ತಿ ಎಂಟರ್‌ಪ್ರೈಸ್ ಬೆಂಗಳೂರು ಕರ್ನಾಟಕ ಮಾರುಕಟ್ಟೆಯಲ್ಲಿ ಬಲವಾದ ಹೆಜ್ಜೆ ಗುರುತನ್ನು ಮೂಡಿಸಿರುವ ವಿತರಣಾ ವಲಯದ ಪ್ರವರ್ತಕರಾ ಗಿದ್ದಾರೆ.

ಅಮೇಜ್, ಸಣ್ಣ ವಯಸ್ಸಿನ ಹಾಗೂ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇನ್ವರ್ಟರ್ ಮತ್ತು ಬ್ಯಾಟರಿ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅಮೇಜ್ 2018 ರಲ್ಲಿ ಈ ಕ್ಷೇತ್ರಕ್ಕೆ ಕಾಲಿಟ್ಟಿತು ಮತ್ತು ಇದು ಲಾಂಗ್ ಲಾಸ್ಟ್ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಉತ್ಪನ್ನವಾಗಿದೆ. ಕಂಪನಿಯು ದೀರ್ಘ ಮತ್ತು ಆಗಾಗ್ಗೆ ವಿದ್ಯುತ್ ಕಡಿತವನ್ನು ತಡೆದುಕೊಳ್ಳಲೆಂದೇ ವಿನ್ಯಾಸಗೊಳಿಸಲಾದ ಇನ್ವರ್ಟರ್‌ಗಳು ಮತ್ತು ಬ್ಯಾಟರಿಗಳ ಹಲವು ಶ್ರೇಣಿಗಳನ್ನು ಒದಗಿಸುತ್ತದೆ. ಅಲ್ಲದೆ, ಬ್ರ್ಯಾಂಡ್ ತನ್ನ ಸೌರ ಉತ್ಪನ್ನಗಳ ಪೋರ್ಟ್ಫೋಲಿಯೊದ ಭಾಗವಾಗಿ ಸೌರ ಇನ್ವರ್ಟರ್‌ಗಳು, ಸೌರ ಚಾರ್ಜ್ ನಿಯಂತ್ರಕಗಳು, ಸೌರ ಫಲಕಗಳು ಮತ್ತು ಸೌರ ಬ್ಯಾಟರಿಗಳನ್ನು ಪೂರೈಸುತ್ತದೆ. ಕಂಪನಿಯು ಹೆಚ್ಚಿನ ಕಾರ್ಯಕ್ಷಮತೆ ಮತ್ತು ಉತ್ತಮ ಗುಣಮಟ್ಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಭಾರತದಾದ್ಯಂತ ಹೆಚ್ಚಿನ ನಗರಗಳಲ್ಲಿ ಇರುವ ವಿತರಕರ ಜಾಲದ ಮೂಲಕ ತನ್ನ ಗ್ರಾಹಕರಿಗೆ ಪವರ್ ಬ್ಯಾಕ್ ಅಪ್ ಉತ್ಪನ್ನಗಳನ್ನು ಒದಗಿಸುತ್ತದೆ.