Tuesday, 26th October 2021

ಬಿಜೆಪಿ ಮುಖಂಡರಿಂದ ದಿವಂಗತ ಅನಂತಕುಮಾರ್ ಜನ್ಮದಿನ ಸ್ಮರಣೆ

ಬೆಂಗಳೂರು: ಮಾಜಿ ಮುಖ್ಯ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಅವರು ಸೇರಿದಂತೆ ಕೆಲವು ಬಿಜೆಪಿ ಮುಖಂಡರು ಎರಡು ತಿಂಗಳು ನಂತರ ದಿವಂಗತ ಅನಂತಕುಮಾರ್ ಅವರ ಜನ್ಮದಿನವನ್ನು ಸ್ಮರಿಸಿದ್ದಾರೆ.

ರಾಜಕೀಯ ತಂತ್ರಗಾರಿಕೆ ಮತ್ತು ಪಕ್ಷದ ಸಂಘಟನೆ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಬೀರಿದ್ದ ಅನಂತ್‌ ಕುಮಾರ್ ಅವರ ಜನ್ಮದಿನ ಜುಲೈ 22 ಎಂದು ವಿಕಿಪೀಡಿಯಾದಲ್ಲಿದೆ. ಆದರೆ ಅವರ ನಿಜವಾದ ಹುಟ್ಟಿದ ಸೆಪ್ಟೆಂಬರ್ 22 ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಹೀಗಾಗಿ ಕೆಲವು ಬಿಜೆಪಿ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಂದೂ ಸಹ ಸೆಪ್ಟೆಂಬರ್ 22ಕ್ಕೆ ಅವರ ಜನ್ಮಜಯಂತಿಯ ಶುಭಾಶಯ ಕೋರಿದ್ದಾರೆ.

‘ಜನಪ್ರಿಯ ಹಿರಿಯ ನಾಯಕರು, ಕೇಂದ್ರದ ಮಾಜಿ ಸಚಿವರು, ಸ್ನೇಹಜೀವಿ, ಆದರ್ಶ ನೇತಾರ ಸನ್ಮಾನ್ಯ ಶ್ರೀ ಅನಂತಕುಮಾರ್ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ಪಕ್ಷ ಸಂಘಟನೆಯಲ್ಲಿ ಅವರ ನಿಷ್ಠೆ, ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಬದ್ಧತೆ, ಜನಸೇವೆಯಲ್ಲಿ ಅವರ ಸಾಧನೆಗಳು ನಮ್ಮೆಲ್ಲ ರಿಗೂ ಸದಾ ಸ್ಫೂರ್ತಿ ಯಾಗಿದೆ’ ಎಂದು ಬಿ. ವೈ. ವಿಜಯೇಂದ್ರ ಕೂ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವಗಳಿಂದ ಪ್ರೇರಿತರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸೇವೆ ಸಲ್ಲಿಸಿ, ಆ ಮೂಲಕ ಸಕ್ರಿಯ ರಾಜಕಾ ರಣ ಪ್ರವೇಶಿಸುವುದರೊಂದಿಗೆ ಕೇಂದ್ರ ಸಚಿವರಾಗಿ, ಶ್ರೇಷ್ಠ ಸಂಸದೀಯ ಪಟುವಾಗಿ, ಅತ್ಯುತ್ತಮ ವಾಗ್ಮಿಯಾಗಿ ಸೇವೆಸಲ್ಲಿಸಿದ ಶ್ರೀ ಅನಂತ್ ಕುಮಾರ್ ಅವರ ಜನ್ಮದಿನ ದಂದು ಗೌರವ ಪೂರ್ವಕ ನಮನಗಳು ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಕೂ ಮಾಡಿದ್ದಾರೆ.

ರಾಷ್ಟ್ರ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಧೀಮಂತ ರಾಜಕಾರಣಿ, ಮಾಜಿ ಕೇಂದ್ರ ಸಚಿವರು, ಅಪ್ರತಿಮ ಸಂಸದೀಯ ಪಟು ದಿವಂಗತ ಶ್ರೀ ಅನಂತ ಕುಮಾರ್ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ಶತಕೋಟಿ ನಮನಗಳು. ನಮ್ಮೆಲ್ಲರಿಗೂ ನಿಮ್ಮ ನೆನಪು ಅನಂತ, ಸ್ಪೂರ್ತಿ ಅದಮ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಕೂ ಮಾಡಿದ್ದಾರೆ.

ಕೇಂದ್ರ ಸಚಿವರು, ಶ್ರೇಷ್ಠ ಸಂಸದೀಯ ಪಟು, ಅತ್ಯುತ್ತಮ ವಾಗ್ಮಿ ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು ಎಂದು ಬಿಜೆಪಿ ಒಬಿಸಿ ಮೋರ್ಚಾ ಕೂ ಮಾಡಿದೆ.

Leave a Reply

Your email address will not be published. Required fields are marked *