Tuesday, 10th December 2024

ನನ್ನ ಹೆಸರಲ್ಲಿ ಬರೆಯಲು ಭಟ್ಟರೇನು ಡಮ್ಮಿನಾ?

ನನ್ನ ಅನಿಸಿಕೆ ಸುಳ್ಳಾಾಯಿತು!
‘ವಿಶ್ವವಾಣಿ’ಯಲ್ಲಿ ಅದೇ ನನ್ನ ಕೊನೆ ಅಂಕಣ ಅಂದುಕೊಂಡಿದ್ದೆ. ಅದು ನನ್ನ ಮತ್ತು ಪತ್ರಿಿಕೆಯ ಸಂಬಂಧ ನಿರ್ಧರಿಸುವಂತಿತ್ತು. ಆದದ್ದಾಗಲಿ ಎಂದು ಕಳುಹಿಸಿದೆ. ಸಂಪಾದಕರಾದ ವಿಶ್ವೇಶ್ವರ ಭಟ್ಟರು ನನ್ನನ್ನು ಒಂದೂ ಮಾತು ಕೇಳದೇ, ಒಂದೇ ಒಂದು ಅಕ್ಷರ ಎಡಿಟ್ ಮಾಡದೇ ಯಥಾವತ್ತು ಅದನ್ನು ಪ್ರಕಟಿಸಿದರು. ಶುರುವಾಯಿತು ನೋಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಹಾಕಾರ! ಅದು ಈಗಲೂ ಮುಂದುವರಿದಿದೆ. ನಾನು ಪ್ರಸ್ತಾಾಪಿಸಿದ ವಿಷಯಗಳನ್ನು ಬಿಟ್ಟು ಮಿಕ್ಕೆೆಲ್ಲ ವಿಷಯಗಳ ಬಗ್ಗೆೆ ಚರ್ಚಿಸುತ್ತಲೇ ಇದ್ದಾರೆ. ಇವನ್ನೆೆಲ್ಲ ನೋಡಿ ನನಗೆ ಅನಿಸಿದ್ದೇನೆಂದರೆ, ದೇವರು ಇದ್ದಾನಾ ಇಲ್ಲವಾ ಎಂಬ ಪ್ರಶ್ನೆೆ ಬಿಟ್ಟರೆ, ಜನರಿಗೆ ಕಾಡಿದ ಮತ್ತೊೊಂದು ಮುಖ್ಯ ಪ್ರಶ್ನೆೆಯೆಂದರೆ ಜಯವೀರ ವಿಕ್ರಮ್ ಸಂಪತ್ ಗೌಡ ಇದ್ದಾನಾ ಇಲ್ಲವಾ ಎಂಬುದು. ಇರಲಿ, ನನ್ನ ಬಗ್ಗೆೆ ಇಷ್ಟೆೆಲ್ಲಾ ಜನರಿಗೆ ಆಸಕ್ತಿಿಯಿದೆಯಲ್ಲ, ಅದು ಸಂತಸದ ವಿಷಯವಲ್ಲವಾ?

ಸ್ವಲ್ಪ ವಿವರವಾಗಿ ಹೇಳುತ್ತೇನೆ. ಹಿಂದಿನವಾರ ನಾನು ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಎಂಬ ಅಂಕಣ ಬರೆದೆ. ಅದಕ್ಕೆೆ ಪ್ರೇರಣೆ ರಘುನಾಥ ಗುರೂಜಿ ಅವರ ಪ್ರಕರಣ. ಅವರು ಪುರೋಹಿತರ ಬಗ್ಗೆೆ ‘ವಿಶ್ವವಾಣಿ’ಯಲ್ಲಿ ಒಂದು ಲೇಖನ ಬರೆದಿದ್ದರು. ಪುರೋಹಿತರು ಹೇಗೆ ಮುಗ್ಧ ಜನರನ್ನು ಶಾಸ್ತ್ರದ ನೆಪದಲ್ಲಿ ದಾರಿ ತಪ್ಪಿಿಸುತ್ತಿಿದ್ದಾರೆ ಎಂದು ಸ್ವಾಾನುಭವದ ಮೂಲಕ ಬರೆದಿದ್ದರು. ಅಷ್ಟಕ್ಕೇ ಕೆಲವು ಬ್ರಾಾಹ್ಮಣರು ಅವರ ಮೇಲೆ ಮುಗಿಬಿದ್ದರು. ಪೊಲೀಸ್ ಠಾಣೆಯಲ್ಲಿ ಕೇಸು ಹಾಕಿದರು. ಕ್ಷಮೆ ಯಾಚಿಸದಿದ್ದರೆ ಎಫ್‌ಐಆರ್ ದಾಖಲಿಸುವಂತೆ ಪ್ರಭಾವ ಬೀರಿ ಅರೆಸ್‌ಟ್‌ ಮಾಡಿಸುತ್ತೇವೆ ಎಂದು ಧಮ್ಕಿಿ ಹಾಕಿದರು. ಬ್ರಾಾಹ್ಮಣರು ಗುಂಪುಗೂಡಿ ಠಾಣೆಗೆ ಬಂದರು. ಜತೆಗೂ ಅಧಿಕಾರಸ್ಥರನ್ನೂ ಕಲೆ ಹಾಕಿದರು. ಬ್ರಾಾಹ್ಮಣ ಸಮುದಾಯದ ಪ್ರಭಾವಿಗಳನ್ನು ಬಳಸಿಕೊಂಡರು. ಬ್ರಾಾಹ್ಮಣ ಸಂಘಟನೆಗಳ ಮುಖಂಡರೆನಿಸಿಕೊಂಡ ಕೆಲವರೂ ಗುರೂಜಿ ಅವರನ್ನು ಬಂಧಿಸುವಂತೆ ಮಸಲತ್ತು ಮಾಡಿದರು. ಆಗ ನಾನು ಗುರೂಜಿ ಅವರ ಪರವಾಗಿ ನನ್ನ ಅಂಕಣದಲ್ಲಿ (09.10.2019 ) ‘ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿಿ ಅಂದ್ರೆೆ ಬ್ರಾಾಹ್ಮಣ್ಯವನ್ನು ಟೀಕಿಸಿದಂತಲ್ಲ’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದೆ. ಕಾರಣ ಗುರೂಜಿಯವರೇನು *ಅಬ್ರಾಾಹ್ಮಣರಾಗಿರಲಿಲ್ಲ. ಅವರೂ ಬ್ರಾಾಹ್ಮಣರೇ. ಅದು ಪ್ರಕಟವಾಗಿದ್ದು ಕದಂಬರ ದೊರೆ ಮಯೂರವರ್ಮನ ಸಂಕುಲದ ಹವ್ಯಕ ಬ್ರಾಾಹ್ಮಣರೇ ಸಂಪಾದಕರಾಗಿರುವ ವಿಶ್ವವಾಣಿಯಲ್ಲಿ.

ಪುರೋಹಿತರ ಬಗ್ಗೆೆ ಗುರೂಜಿ ಬರೆದಿದ್ದರಲ್ಲ ತಪ್ಪಿಿರಲಿಲ್ಲ. ಅದರಲ್ಲಿರುವ ಒಂದೇ ಒಂದು ಅಂಶವನ್ನು ತಳ್ಳಿಿ ಹಾಕುವಂತಿರಲಿಲ್ಲ. ಅಷ್ಟಕ್ಕೂ ಗುರೂಜಿ ಅವರಿಗೆ ತಮ್ಮ ಅಭಿಪ್ರಾಾಯವನ್ನು ವ್ಯಕ್ತಪಡಿಸುವ ಅಧಿಕಾರವೂ ಇಲ್ಲವಾ? ಅದನ್ನು ಒಪ್ಪುುವುದು ಬಿಡುವುದು ಬೇರೆ ಪ್ರಶ್ನೆೆ. ಆದರೆ, ಕೆಲವು ವ್ಯಕ್ತಿಿಗಳು ಅವರ ವಿರುದ್ಧ ಕಿರುಕುಳ ಮುಂದುವರಿಸಿದರು. ಪತ್ರಿಿಕೆಯಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಅಂದರು. ಇದಕ್ಕೆೆ ಸಂಪಾದಕರು ಸುತರಾಂ ಒಪ್ಪಿಿರಲಿಲ್ಲ.

ಆದರೆ, ಗುರೂಜಿ ಅವರು ಒತ್ತಾಾಯ ಮಾಡಿ ಸಂಪಾದಕರ ಮನವೊಲಿಸಿ, ತಮ್ಮ ಕ್ಷಮಾಪಣೆ ಪತ್ರ ಪ್ರಕಟಿಸುವಂತೆ ಕೋರಿದರು. ಅದೂ ಪ್ರಕಟವಾಯಿತು. ಅಷ್ಟಾಾಗಿಯೂ ಸಮಾಧಾನವಾಗಲಿಲ್ಲ. ಬಹಿರಂಗ ಸಭೆಯಲ್ಲಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ಆ ಸಭೆಗೆ ನಾನು (ಮೂಕ) ಪ್ರೇಕ್ಷಕನಾಗಿ ಹೋಗಿದ್ದೆ. ಅಲ್ಲಿ ಕೆಲವು ಬ್ರಾಾಹ್ಮಣ ಮುಖಂಡರು, ತಾವು ಸಾಕ್ಷಾತ್ ಮೇಲಿಂದ ಇಳಿದು ಬಂದವರಂತೆ ಮಾತಾಡಿದರು. ಮಾತಾಡಿಕೊಳ್ಳಲಿ, ಅದು ಅವರಿಗೆ ಒಣ ಅಭಿಮಾನದ ಸಂಗತಿ. ಆದರೆ, ಅಲ್ಲೂ ಗುರೂಜಿ ಅವರಿಗೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಸಾಮರಸ್ಯ ಕಾಪಾಡುವ ಸದುದ್ದೇಶದಿಂದ ಗುರೂಜಿ ಕ್ಷಮೆ ಯಾಚಿಸಿದರು. ಇವೆಲ್ಲವೂ ಬ್ರಾಾಹ್ಮಣ ಮುಖಂಡರ, ಧರ್ಮಗುರುಗಳ ಸಮ್ಮುಖದಲ್ಲಿ ನಡೆದುಹೋಯಿತು. ಅಲ್ಲಿದ್ದ ಒಬ್ಬರೇ ಒಬ್ಬರು ಗುರೂಜಿ ಸಹಾಯಕ್ಕೆೆ ಬರಲಿಲ್ಲ. ಇಪ್ಪತ್ತು- ಇಪ್ಪತ್ತೈದು ಮಂದಿ (ಬ್ರಾಾಹ್ಮಣರು) ಸನಿಹ ಬಂದು ಮೇಲು ದನಿಯಲ್ಲಿ ‘ಗುರೂಜಿ, ನೀವು ಬರೆದಿದ್ದರಲ್ಲಿ ಕಿಂಚಿತ್ತೂ ತಪ್ಪಿಿಲ್ಲ. ಕಟುವಾದ ಸತ್ಯ ಬರೆದಿದ್ದೀರಿ’ ಎಂದು ಹೇಳಿದರೇ ಹೊರತು, ಅವರ ನೆರವಿಗೆ ಬರಲಿಲ್ಲ.

ಇವೆಲ್ಲವನ್ನೂ ಅಲ್ಲಿಯೇ ನಿಂತು ನೋಡುತ್ತಿಿದ್ದ ನನಗೆ ಬಹಳ ವಿಚಿತ್ರವೆನಿಸಿತು. ಸ್ವತಃ ಬ್ರಾಾಹ್ಮಣರೇ ಆದ ಗುರೂಜಿ ಅವರಿಗೆ ತಮ್ಮ ಸಮುದಾಯದವರ ದುರ್ವರ್ತನೆಯನ್ನು ಟೀಕಿಸುವ ಅಧಿಕಾರ ಇಲ್ಲವಾ? ಪುರೋಹಿತರ ತಪ್ಪನ್ನು ಎತ್ತಿಿ ತೋರಿಸಿದರೆ ಕ್ಷಮೆ ಕೇಳಬೇಕಾ? ಪೊಲೀಸ್ ಕೇಸು ಜಡಿಸಿಕೊಳ್ಳಬೇಕಾ? ಇಷ್ಟೂ ಸಾಲದೆಂಬಂತೆ ಇದಕ್ಕೆೆಲ್ಲ ಜಾತಿ ಸಮರ್ಥನೆ ಕೊಟ್ಟು ಬಾಯಿ ಮುಚ್ಚಿಿಸಬೇಕಾ? ನನ್ನೊೊಳಗೆ ಈ ಪ್ರಶ್ನೆೆಗಳು ಕಾಡಲಾರಂಭಿಸಿದವು. ಪಾಪ, ಏನು ತಪ್ಪುು ಮಾಡಿದ್ದಾರೆಂದು ಗುರೂಜಿಯವರನ್ನು ಇವರೆಲ್ಲ ಸೇರಿಕೊಂಡು ಗೆಬರುತ್ತಿಿದ್ದಾರೆ? ಹಾಗಾದರೆ ಯಾರೂ ಪುರೋಹಿತರನ್ನು ಟೀಕಿಸಲೇಬಾರದಾ? ಅವರ ವೃತ್ತಿಿ ದೋಷವನ್ನು ಎತ್ತಿಿ ತೋರಿಸಲೇಬಾರದಾ? ಇದನ್ನೇ ನಾನು ಮೊದಲು ಪ್ರಶ್ನಿಿಸಿ, ‘ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿಿ ಅಂದ್ರೆೆ ಬ್ರಾಾಹ್ಮಣ್ಯವನ್ನು ಟೀಕಿಸಿದಂತಲ್ಲ’ ಎಂಬ ಲೇಖನವನ್ನು ಬರೆದಿದ್ದು. ಆದರೆ, ಯಾರೂ ನನ್ನ ಮೇಲೆ ಕೇಸು ಹಾಕಲಿಲ್ಲ. ಆ ಲೇಖನ ಪ್ರಕಟಿಸಿದ ಸಂಪಾದಕರನ್ನೂ ಪಾರ್ಟಿ ಮಾಡಲಿಲ್ಲ. ಆದರೆ, ಗುರೂಜಿಯವರನ್ನು ಮಾತ್ರ ಹಿಡಿದು ಜಗ್ಗಾಾಡಿದರು. ಅವರಿಗೆ ಮಾನಸಿಕ ಹಿಂಸೆ ಕೊಟ್ಟರು. ಇವೆಲ್ಲವನ್ನೂ ಸಮರ್ಥಿಸಿಕೊಳ್ಳಲು ‘ಬ್ರಾಾಹ್ಮಣರೆಂದರೆ ಏನು ಅಂತ ಭಾವಿಸಿದ್ದೀರಿ, ನಮ್ಮ ಕುಲ ಶ್ರೇಷ್ಠವಾದುದು, ಬ್ರಾಾಹ್ಮಣರಿಗಿಂತ ಮಿಗಿಲಾದವರು ಯಾರೂ ಇಲ್ಲ, ಅಂಥವರನ್ನು ನೀವು ಹೀಯಾಳಿಸುತ್ತೀರಾ?’ ಎಂದು ಗುರೂಜಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದು ನನಗೆ ಯಾಕೋ ಅತಿ ಎಂದೆನಿಸಿತು. ಯಾರನ್ನೂ ಪ್ರಶ್ನಿಿಸಲೇ ಬಾರದು ಎಂಬ ಮನಸ್ಥಿಿತಿಯೇ ಅತಿ ಡೇಂಜರಸ್. ಯಾರೂ ಪ್ರಶ್ನಾಾತೀತರಲ್ಲ. ನಾವು ದೇವರನ್ನೂ ಪ್ರಶ್ನೆೆ ಮಾಡದೇ ಒಪ್ಪಿಿಕೊಂಡವರಲ್ಲ. ಹೀಗಿರುವಾಗ ಪುರೋಹಿತರನ್ನು ಅಥವಾ ಬ್ರಾಾಹ್ಮಣರನ್ನು ಯಾಕೆ ಪ್ರಶ್ನೆೆ ಮಾಡಬಾರದು ಎಂದು ನನಗೆ ಅನಿಸಿತು. ಇದರಲ್ಲಿ ತಪ್ಪೇನು ಬಂತು ಬದನೇಕಾಯಿ? ಅದರ ಫಲವೇ ಹಿಂದಿನ ವಾರದ ನನ್ನ ಅಂಕಣ- ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’

ಈ ಲೇಖನ ಪ್ರಕಟವಾಯಿತಲ್ಲ, ವಿಪ್ರ ಬಾಂಧವರು ರಘುನಾಥ ಗುರೂಜಿ ಅವರಿಗೆ ಏನು ಮಾಡಿದ್ದರೋ, ನನಗೂ ಅದನ್ನೇ ಮಾಡಲು ಪ್ರಯತ್ನಿಿಸಿದರು. ‘ಬ್ರಾಾಹ್ಮಣರ ವಿರುದ್ಧ ಬರೆಯಲು ಇವನ್ಯಾಾವ ಸೀಮೆ ಗೌಡ? ದಮ್ಮಿಿದ್ದರೆ ಈತ ತನ್ನ ಜಾತಿ ವಿರುದ್ಧ ಬರೀತಾನಾ? ತಾಕತ್ತಿಿದ್ದರೆ ಮುಸಲ್ಮಾಾನರ ವಿರುದ್ಧ ಬರೆಯಲಿ, ದಲಿತರ ವಿರುದ್ಧ ಬರೆಯಲಿ, ಅದು ಬಿಟ್ಟು ತಮ್ಮ ಪಾಡಿಗೆ ತಾವಿರುವ ಬ್ರಾಾಹ್ಮಣರ ವಿರುದ್ಧ ಇವನಿಗೇಕೆ ಕೋಪ? ಬ್ರಾಾಹ್ಮಣರ ವಿರುದ್ಧ ಬರೆದರೆ ಏನೂ ಮಾಡುವುದಿಲ್ಲ ಎಂಬ ಕಾರಣಕ್ಕೆೆ ಈತ ಬರೆದಿದ್ದಾನೆ, ಇವನನ್ನು ಬಿಡಬಾರದು, ಇವನ ವಿರುದ್ಧ ಕೇಸು ಹಾಕಬೇಕು, ಪತ್ರಿಿಕೆ ಬಹಿಷ್ಕರಿಸಬೇಕು …’ ಎಂದೆಲ್ಲಾ ಬೊಬ್ಬೆೆ ಹೊಡೆಯಲು ಆರಂಭಿಸಿದರು.

ದುರಂತವೇನೆಂದರೆ, ಯಾರೂ ಸಹ ನಾನು ಬರೆದಿದ್ದು ತಪ್ಪುು, ಸುಳ್ಳು ಎಂದು ತರ್ಕಬದ್ಧವಾಗಿ ಬರೆಯಲಿಲ್ಲ. ಸಮಚಿತ್ತದ ವಾದ ಮಂಡಿಸಲಿಲ್ಲ. ತಥಾಕಥಿತ ಸಂವಾದ ಮಾಡಲಿಲ್ಲ. ಎಲ್ಲರೂ ಸೋಶಿಯಲ್ ಮೀಡಿಯಾ ಎಂಬ ಪೊದೆಯ ಮರೆಯಲ್ಲಿ ನಿಂತು ಕಲ್ಲೆಸೆಯುವವರೇ. ನಾನು ಈ ಮೊದಲೇ ಅಂದರೆ ‘ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿಿ ಅಂದ್ರೆೆ ಬ್ರಾಾಹ್ಮಣ್ಯವನ್ನು ಟೀಕಿಸಿದಂತಲ್ಲ’ ಎಂಬ ಅಂಕಣದಲ್ಲೇ ಕರೆದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಸವಾಲು ಹಾಕಿದ್ದೆ. (ಬೇಕಾದರೆ ನನ್ನ ಆ ಅಂಕಣವನ್ನು ಈಗಾದರೂ ಓದಿ. ನೆಟ್‌ನಲ್ಲಿ ಸಿಗುತ್ತದೆ.) ಆಗ ಒಬ್ಬೇ ಒಬ್ಬ ನನ್ನ ಪಂಥಾಹ್ವಾಾನವನ್ನು ಸ್ವೀಕರಿಸಲಿಲ್ಲ. ಮುಂದೆ ಬರಲೂ ಇಲ್ಲ. ಅದು ಬಿಟ್ಟು, ಜಯವೀರ ವಿಕ್ರಮ್ ಸಂಪತ್ ಗೌಡ ಎಂಬ ವ್ಯಕ್ತಿಿ ಇಲ್ಲವೇ ಇಲ್ಲ, ಅದು ಭಟ್ಟರ ಸೃಷ್ಟಿಿ, ಅವರು ಆತನ ಹೆಸರಿನಲ್ಲಿ ಬರೆಯುತ್ತಾಾರೆ, ಜಯವೀರ ಗೌಡ ಎಂಬಾತ ಈ ಭೂಮಿ ಮೇಲೆ ಇದ್ದಿದ್ದು ನಿಜವೇ ಆಗಿದ್ದರೆ ಆತ ಫೇಸ್‌ಬುಕ್‌ನಲ್ಲಿ ಇರಬೇಕಿತ್ತು, ಟ್ವಿಿಟ್ಟರ್‌ನಲ್ಲಿ ಖಾತೆ ಹೊಂದಿರಬೇಕಿತ್ತು, ಅದ್ಯಾಾವವೂ ಇಲ್ಲ ಅಂದ್ರೆೆ ಆತ ಭೂಮಿ ಮೇಲೆ ಇರಲಿಕ್ಕಿಿಲ್ಲ, ಗೌಡರ ಹೆಸರನ್ನು ಭಟ್ಟರು ಬ್ರಾಾಹ್ಮಣ ನಿಂದನೆಗೆ ಬಳಸಿಕೊಂಡಿದ್ದಾರೆ… ಎಂದೆಲ್ಲಾ ಕೆಲವರು ಅವಿವೇಕವನ್ನು ಗುತ್ತಿಿಗೆಗೆ ಪಡೆದವರಂತೆ ವಾದ ಮಾಡಲು ಆರಂಭಿಸಿದರು. ಮೂರ್ನಾಲ್ಕು ದಿನ ಬರೀ ಜಯವೀರ ಗೌಡನ ಬಗ್ಗೆೆಯೇ ಚರ್ಚೆ, ಟ್ರೋೋಲ್!

ನನಗೆ ಅನೇಕ ಬ್ರಾಾಹ್ಮಣ ಸ್ನೇಹಿತರಿದ್ದಾರೆ. ನಾನು ಬ್ರಾಾಹ್ಮಣರ ಅಗ್ರಹಾರದಲ್ಲೇ ಬೆಳೆದವ. ನನ್ನನ್ನು ಅನೇಕರು ‘ಇವನೊಬ್ಬ ನಾಮಕೇವಾಸ್ತೆೆ ಗೌಡ, ಆದರೆ, ಕೆಂಪು ಬ್ರಾಾಹ್ಮಣ’ ಅಂತ ಕಿಚಾಯಿಸುವುದು ಹೊಸತೇನಲ್ಲ. ನಾನೇನು ಬ್ರಾಾಹ್ಮಣ ವಿರೋಧಿಯಲ್ಲ. ಗೌಡರು ತಪ್ಪುು ಮಾಡಿದಾಗಲೂ ನಾನು ಬಿಟ್ಟವನಲ್ಲ. ನಾಳೆ ಬೇರೆ ಕೋಮಿನವರು ತಪ್ಪುು ಮಾಡಿದರೂ ಹೇಳುತ್ತೇನೆ. ಮುಸಲ್ಮಾಾನರ ವಿರುದ್ಧವೂ ಬರೆದಿದ್ದೇನೆ, ಬರೆಯುತ್ತೇನೆ. ಸಂದೇಹ ಬೇಡ. ಅದಕ್ಕೆೆ ಯಾವ ತಲೆ ಮತ್ತು ದಂಡ ತೆರಲೂ ಸಿದ್ಧ. ನಾನು ಹೇಡಿಯಾಗಿ ಒಂದು ನಿಮಿಷವೂ ಬದುಕಲಾರೆ. ಅದೇ ಬೇರೆ ವಿಷಯ ಬಿಡಿ.

ಆದರೆ ಅಸಲಿ ಸಂಗತಿ ಏನು ಗೊತ್ತಾಾ? ಭಟ್ಟರು ನನ್ನ ಹೆಸರಲ್ಲಿ ಏಕೆ ಬರೆಯಬೇಕು? ಅವರಿಗೆ ಅಂಥ ಸ್ಥಿಿತಿ ಯಾಕೆ ಬಂದಿದೆ ಎಂದು ಭಾವಿಸಬೇಕು? ಈಗ ಅವರೇ ಪತ್ರಿಿಕೆಯ ಸಂಪಾದಕರು, ಮಾಲೀಕರು. ಕನ್ನಡದ ಎಲ್ಲಾ ಮುಖ್ಯವಾಹಿನಿ ಪತ್ರಿಿಕೆಗಳ ಸಂಪಾದಕರು, ಆಡಳಿತ ಮಂಡಳಿ ಅಥವಾ ಮಾಲೀಕನ ಮುಂದೆ ಕೈಕಟ್ಟಿಿ ನಿಲ್ಲುತ್ತಾಾರಲ್ಲ, ಆ ಸ್ಥಿಿತಿ ಭಟ್ಟರಿಗೇನೂ ಇಲ್ಲ. ಅವರು ಇಂದು ವಿಜಯ ಸಂಕೇಶ್ವರ ಮತ್ತು ರಾಜೀವ ಚಂದ್ರಶೇಖರ ಅವರನ್ನು ಕೇಳಿ ಲೇಖನ ಪ್ರಕಟಿಸಬೇಕಿಲ್ಲ. ಇವರ ಮಾಲೀಕತ್ವದಲ್ಲಿ ಸಂಪಾದಕರಾಗಿದ್ದಾಗಲೂ ಭಟ್ಟರು ಯಾರ ಮುಲಾಜಿಗೂ ಒಳಗಾಗದೇ ಇಂಥ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ, ವೃತ್ತಿಿ ಹಿರಿಮೆ ಮೆರೆದಿದ್ದಾರೆ. ಸಂಪಾದಕನ ದಿಟ್ಟತನ ಪ್ರದರ್ಶಿಸಿದ್ದಾರೆ. ಅದನ್ನು ಕರ್ನಾಟಕದ ಜನತೆ ನೋಡಿದ್ದಾರೆ. ಅಲ್ಲದೇ ಇಂದಿಗೂ ನೆನೆಯುತ್ತಾಾರೆ. ಅದಿಲ್ಲದಿದ್ದರೆ ಪ್ರತಾಪ ಸಿಂಹ ಹೇಳಿದರು, ಕೇಳಿದರು, ನೋಡಿದರು, ಕಿಸಿದರು ಎಂದು ಬರೆದುಕೊಂಡು ಇರುತ್ತಿಿದ್ದರು. ಪ್ರತಾಪ ಸಿಂಹ, ಮಾಲೀಕರಾದ ಸಂಕೇಶ್ವರರ ವ್ಯಾಾಪಾರ ಹಿತಾಸಕ್ತಿಿಗೆ ಧಕ್ಕೆೆಯಾಗುವಂಥ ಲೇಖನ ಬರೆದಾಗಲೂ ಭಟ್ಟರು ಅದನ್ನು ಪ್ರಕಟಿಸಿದ್ದರು. ಸ್ವತಃ ಸಂಕೇಶ್ವರರು ಪ್ರತಾಪ ಸಿಂಹನನ್ನು ‘ಆಚೆ ಕಳಿಸಿ’ ಎಂದಾಗಲೂ ಭಟ್ಟರು, ಪ್ರತಾಪ ಸಿಂಹ ಅವರನ್ನು ರಕ್ಷಿಸಿದ್ದರು, ಪೊರೆದಿದ್ದರು. ಪ್ರತಾಪ ಸಿಂಹ ಅವರನ್ನು ನಿರ್ಭೀತವಾಗಿ ಬರೆಯಲು ಬಿಟ್ಟು, ಅದರಿಂದ ಬರುವ ಎಲ್ಲಾ ಒತ್ತಡ, ಬೆದರಿಕೆಗಳನ್ನು ಮೆಟ್ಟಿಿ ನಿಲ್ಲದಿದ್ದರೆ, ಟೀಕೆಗಳನ್ನೆೆಲ್ಲ ವಿಷಕಂಠನಾಗಿ ಕುಡಿಯದಿದ್ದರೆ, ಇಂದು ಪ್ರತಾಪ ಸಿಂಹ ಈ ಎತ್ತರಕ್ಕೆೆ ಏರುತ್ತಿಿರಲಿಲ್ಲ. ಓದುಗರಿಗೆ ಒಂದಷ್ಟು ಒಳ್ಳೆೆಯ ಪತ್ರಿಿಕೋದ್ಯಮವೂ ಸಿಗುತ್ತಿಿರಲಿಲ್ಲ. ಈ ಸಂಗತಿ ಎಲ್ಲರಿಗೂ ತಿಳಿಯಲೆಂದೇ ಹೇಳುತ್ತಿಿದ್ದೇನೆ. ಭಟ್ಟರ ನಿರ್ಭೀತ ಪತ್ರಿಿಕೋದ್ಯಮಕ್ಕೆೆ ಅವರಿಗೆ ಭಯೋತ್ಪಾಾದಕ ಸಂಘಟನೆಯಿಂದ ಎದುರಾಗಿದ್ದ ಹತ್ಯೆೆ ಬೆದರಿಕೆಯೇ ಸಾಕ್ಷಿ.

ಅಂಥ ಭಟ್ಟರಿಗೆ ಈಗ ಅರಸನ ಅಂಕೆಯಿಲ್ಲ, ದೆವ್ವಗಳ ಕಾಟವಿಲ್ಲ, ಮಾಲೀಕನ ಮುಲಾಜಿಲ್ಲ. ಯಾವ ಮರದ ತೊಪ್ಪಲೂ ಅವರನ್ನು ‘ಮಿಣ್ಗ್ಯಾಾ’ ಎನ್ನುವುದಿಲ್ಲ. ಹೀಗಿರುವಾಗ ಅವರಿಗೆ *ಎಟಠಿ ್ಟಜಿಠಿಜ್ಞಿಿಜ ಮಾಡುವ ಅಗತ್ಯವೇನಿದೆ? ತಮಗೆ ಸಿಗುವ ಕ್ರೆೆಡಿಟ್ಟನ್ನು ಯಾರೂ ಬೇರೆಯವರಿಗೆ ಕೊಡಲು ಬಯಸುವುದಿಲ್ಲ. ನನ್ನ ಹೆಸರಲ್ಲಿ ಭಟ್ಟರು ಬರೆದರೆ ಅದರಿಂದ ಅವರಿಗೇ ನಷ್ಟವಲ್ಲವೇ? ಅನೇಕರು ಅಂದುಕೊಂಡಂತೆ, ಇಲ್ಲದಿರುವ ಜಯವೀರ ಗೌಡನ ಹೆಸರಿನಲ್ಲಿ ಅವರು ಬರೆದರೆ ಅದರಿಂದ ಅವರಿಗೆ ಏನು ಸಿಗುತ್ತದೆ? ಅದರಿಂದ ಅವರು ಗಳಿಸುವುದಕ್ಕಿಿಂತ ಕಳೆದುಕೊಳ್ಳುವುದೇ ಹೆಚ್ಚಲ್ಲವೇ? ಇಂದು ನಾವು ನೋಡುತ್ತಿಿದ್ದೇವೆ, ಬೇರೆಯವರು ಬರೆದ ಲೇಖನ, ಬರಹವನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವ ಸಂಪಾದಕರಿದ್ದಾರೆ, ಹೀಗಿರುವಾಗ ತಾವು ಬರೆದಿದ್ದನ್ನು ಬೇರೆಯವರ ಹೆಸರಿನಲ್ಲಿ ಭಟ್ಟರು ಯಾಕಾಗಿ ಪ್ರಕಟಿಸುತ್ತಾಾರೆ? ಅಂಥ ಅಕ್ಷರ ಧಾರಾಳತನವನ್ನು ಯಾಕಾಗಿ ಪ್ರದರ್ಶಿಸಬೇಕು? ನಾನ್ಸೆೆನ್‌ಸ್‌.

ಇಲ್ಲಿ ಇನ್ನೂ ಒಂದು ಸಂಗತಿಯಿದೆ. ನಾನು ಈ ಅಂಕಣವನ್ನು ಆರಂಭಿಸುವಾಗ ಹೇಳಿದ ಮೊದಲ ಕೆಲವು ಮಾತುಗಳನ್ನು ಮತ್ತೊೊಮ್ಮೆೆ ದಯವಿಟ್ಟು ಓದಿ. ಅದೇನೆಂದರೆ, ಕಳೆದ ವಾರ ‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಎಂಬ ಅಂಕಣವನ್ನು ಸಿದ್ಧಪಡಿಸಿದಾಗ ನನಗೊಂದು ಅನುಮಾನವಿತ್ತು. ಭಟ್ಟರು ಈ ಅಂಕಣವನ್ನು ಪ್ರಕಟಿಸುವುದಿಲ್ಲ ಎಂದು ತೀರ್ಮಾನಿಸಿದ್ದೆ. ಕಾರಣ ಒಬ್ಬ (ಮಹಾ?!) ಬ್ರಾಾಹ್ಮಣರಾಗಿ, ಬ್ರಾಾಹ್ಮಣರ ವಿರುದ್ಧ ಬರೆದ ಲೇಖನವನ್ನು ತಮ್ಮ ಪತ್ರಿಿಕೆಯಲ್ಲಿ ಭಟ್ಟರು ಪ್ರಕಟಿಸಲಿಕ್ಕಿಿಲ್ಲ ಎಂಬುದು ನನ್ನ ಲೆಕ್ಕಾಾಚಾರವಾಗಿತ್ತು. ಅದಕ್ಕಾಾಗಿ ಯಾವತ್ತೂ ಮಂಗಳವಾರ ಸಾಯಂಕಾಲ ಕಳಿಸುವ ಬದಲು ಬೆಳಗ್ಗೆೆಯೇ ಕಳಿಸಿದ್ದೆ. ನನ್ನ ಲೇಖನವನ್ನು ಪ್ರಕಟಿಸದೇ ಬೇರೆ ಲೇಖನಕ್ಕೆೆ ಅನುವು ಮಾಡಿಕೊಳ್ಳಲು ಸಹಾಯಕವಾಗಲಿ ಎಂದು ಮುಂಚೆಯೇ ಕಳಿಸಿದ್ದೆ.

ಒಂದು ವೇಳೆ ಭಟ್ಟರು ಪ್ರಕಟಿಸದಿದ್ದರೆ, ಇನ್ನು ಮುಂದೆ ‘ವಿಶ್ವವಾಣಿ’ಗೆ ಬರೆಯಬಾರದು ಎಂಬುದು ನನ್ನ ದೃಢ ನಿರ್ಧಾರವಾಗಿತ್ತು. ಇಲ್ಲಿಯ ತನಕ ಅವರು ನಾನು ಬರೆದುದೆಲ್ಲವನ್ನೂ ಒಂದೇ ಒಂದು ಪದವನ್ನು ಕತ್ತರಿಸದೇ ಯಥಾವತ್ತು ಪ್ರಕಟಿಸಿದ್ದರು. ‘ವಿಶ್ವವಾಣಿ’ ಸಂಪಾದಕೀಯ ನಿಲುವಿಗೆ ವ್ಯತಿರಿಕ್ತವಾದ ಅಂಕಣ ಬರೆದಾಗಲೂ ಅದನ್ನು ಪ್ರಕಟಿಸಿದ್ದರು. ಆದರೆ, ಬ್ರಾಾಹ್ಮಣರ ಕುರಿತಾದ ಈ ಲೇಖನವನ್ನು ಖಂಡಿತವಾಗಿಯೂ ಅವರು ಪ್ರಕಟಿಸಲಿಕ್ಕಿಿಲ್ಲ, ಒಂದು ವೇಳೆ ಪ್ರಕಟಿಸಿದರೂ ಕೆಲವು ಭಾಗ ಎಡಿಟ್ ಮಾಡಲು ಹೇಳಬಹುದು ಎಂದು ನಾನು ನಿರೀಕ್ಷಿಸಿದ್ದೆ. ಆ ದಿನವಿಡೀ ಪತ್ರಿಿಕೆಯಿಂದ ನನಗೆ ಫೋನ್ ಬರಲಿಲ್ಲ. ನನ್ನ ಲೇಖನ ಕಸದ ಬುಟ್ಟಿಿ ಸೇರಿತೆಂದೇ ಭಾವಿಸಿದೆ. ಮರುದಿನ ‘ವಿಶ್ವವಾಣಿ’ ತೆರೆದಾಗ ಅಚ್ಚರಿಯಾಯಿತು. ಲೇಖನ ಯಥಾವತ್ತು ಪ್ರಕಟವಾಗಿತ್ತು. ಒಂದೇ ಒಂದು ಪದ ಆಚೀಚೆ ಆಗಿರಲಿಲ್ಲ. ಸಂಪಾದಕರ ಬಗೆಗಿನ ನನ್ನ ಗೌರವ ಇಮ್ಮಡಿಯಾಯಿತು. ತಮ್ಮ ಪತ್ರಿಿಕೆಯಲ್ಲಿ ಬರೆಯುವ ಅಂಕಣಕಾರರಿಗೆ ಸಂಪೂರ್ಣ ಸ್ವಾಾತಂತ್ರ್ಯ ಕೊಡುತ್ತಾಾರೆ ಮತ್ತು ಅವರನ್ನು * ್ಛಛಿಜ್ಠ್ಟ ಮಾಡುತ್ತಾಾರೆ ಎಂದು ನಾನು ಕೇಳಿದ್ದು ನಿಜ ಎಂದು ಮನವರಿಕೆಯಾಯಿತು. ಈ ಲೇಖನ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದಿದ್ದರೆ ಅದರಲ್ಲಿ ಆಶ್ಚರ್ಯ ಇರಲಿಲ್ಲ. (ಈಗ ಇಂಥ ಲೇಖನ ಅಲ್ಲೂ ಪ್ರಕಟವಾಗಲಿಕ್ಕಿಿಲ್ಲ) ‘ವಿಶ್ವವಾಣಿ’ಯಲ್ಲಿ ಪ್ರಕಟವಾಗಿದ್ದು ವಿಶೇಷವೇ.

‘ಪ್ರಶ್ನೆೆ ಮಾಡದಿರಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ ?’ ಎಂಬ ಬರಹದಲ್ಲಿ ನಾನೇನೂ ಸಂಶೋಧನೆ ಮಾಡಿ ಹೊಸ ಸಂಗತಿಯನ್ನೇನನ್ನೂ ಹೇಳಿರಲಿಲ್ಲ. ಬಹುತೇಕರಿಗೆ ಗೊತ್ತಿಿರುವ ಸಂಗತಿಯನ್ನೇ ಪ್ರಸ್ತಾಾಪಿಸಿ ನೆನಪಿಸಿದ್ದೆ. ಪ್ರಾಾಯಶಃ ಪಾವೆಂ ಆಚಾರ್ಯರೇ ಇರಬೇಕು, ಐವತ್ತು ವರ್ಷಗಳ ಹಿಂದೆಯೇ ಈ ವಿಷಯವನ್ನು ‘ಕಸ್ತೂರಿ’ ಮಾಸಿಕದಲ್ಲಿ ಬರೆದಿದ್ದನ್ನು ಓದಿದ ನೆನಪು. ಅದು ನನ್ನ ತಲೆಮಾರಿನ, ಸೋಶಿಯಲ್ ಮೀಡಿಯಾ ತಲೆಮಾರಿನವರಿಗೆ ಹೊಸ ಸಂಗಾತಿಯಾಗಿ ಕಂಡಿರಬಹುದು. ಹೀಗಾಗಿ ಅವರು ಪೊರ್ಕಿಚೇಳು ಕಡಿದವರಂತೆ ವರ್ತಿಸಿರಬಹುದು. ಹಿರಿಯ, ಬಹುಶ್ರುತ ವಿದ್ವಾಾಂಸ ಶತಾವಧಾನಿ ಗಣೇಶ ಅವರು ಸದರಿ ಲೇಖನ ಓದಿ, ನನ್ನ ಬರಹದಲ್ಲಿ ಆಕ್ಷೇಪಾರ್ಹ ಸಂಗತಿಗಳೇನೂ ನನ್ನ ಬರಹದಲ್ಲಿ ಇಲ್ಲ ಎಂದು ಹೇಳಿದರೆಂದು ಕೇಳಿದೆ. ಅಷ್ಟಾಾಗಿಯೂ ನನ್ನ ಬರಹದಲ್ಲಿ ಆಕ್ಷೇಪಾರ್ಹ, ಸತ್ಯಕ್ಕೆೆ ದೂರವಾದ, ನಿಂದನಾತ್ಮಕ ಸಂಗತಿಗಳಿದ್ದರೆ, ಅದನ್ನು ಪ್ರಾಾಜ್ಞರಾದವರು ನನಗೆ ಮನವರಿಕೆ ಮಾಡಿಕೊಟ್ಟರೆ, ನಾನು ತಿದ್ದಿಕೊಳ್ಳಲು ಸಿದ್ಧ. ಎಲ್ಲ ತಿಳಿದ ಬೃಹಸ್ಪತಿ ಎಂಬ ಮಸ್ತಕಾಹಂಕಾರ ನನಗಿಲ್ಲ. ಕೆಲವರು ಹೇಳಿದಂತೆ ನಾನು ಬಚ್ಚ! ಆದರೆ, ಸೋಶಿಯಲ್ ಮೀಡಿಯಾ ಕೂಗುಮಾರಿಗಳ ಚೀರಾಟಕ್ಕೆೆಲ್ಲ ಹೆದರುವ ಎಳಸುಪಿರ್ಕಿ ನಾನಲ್ಲ. ನಾನು ವಿಷಯವಿಲ್ಲದೇ, ಆಧಾರವಿಲ್ಲದೇ ಏನನ್ನೂ ಬರೆಯುವುದಿಲ್ಲ. ಬ್ರಾಾಹ್ಮಣರ ಬಗ್ಗೆೆ ಬರೆದ ಪ್ರತಿ ವಾಕ್ಯವನ್ನು * ್ಜ್ಠಠಿಜ್ಛಿಿ ಮಾಡಲು ಆಧಾರಗಳನ್ನು ಕೊಡುತ್ತೇನೆ. ಕೂಗುಮಾರಿಗಳು ಸಿದ್ಧರಿದ್ದಾರಾ?!

ಇನ್ನೂ ಒಂದು ಅಂಶ. ನಾನು ಬ್ರಾಾಹ್ಮಣರ ಮೇಲಿನ ಕಾಳಜಿಯಿಂದಲೇ ಆ ಲೇಖನ ಬರೆದಿದ್ದು ಎಂಬುದನ್ನೂ ಸ್ಪಷ್ಟಪಡಿಸುತ್ತೇನೆ. ಆ ಲೇಖನದ ಕೊನೆಯ ಪ್ಯಾಾರಾವನ್ನು ಓದಿದರೆ ಎಂಥವರಿಗಾದರೂ ಮಿದುಳು ಪ್ರಚ್ಛನ್ನವಾಗುತ್ತದೆ. ಆ ಪ್ಯಾಾರಾವನ್ನು ಮತ್ತೊೊಮ್ಮೆೆ ಪರಾಂಬರಿಸಿ- ‘ಪವಿತ್ರವಾದ ಪೌರೋಹಿತ್ಯ ವೃತ್ತಿಿಯನ್ನು ವ್ಯಾಾಪಾರಕ್ಕಿಿಳಿಸಿ ಅಪವಿತ್ರಗೊಳಿಸಿದರೆ ಅದನ್ನೂ ಪ್ರಶ್ನಿಿಸಬಾರದೇ? ಇದೂ ಒಂದು ಮಹಾಪರಾಧವೇ ? ಪ್ರಾಾಜ್ಞರೇ, ಮೌನ ಮುರಿದು ಚರ್ಚಿಸಿ, ಬ್ರಾಾಹ್ಮಣ್ಯವನ್ನು ಉಳಿಸಿ.’ ಅದು ನನ್ನ ಕಾಳಜಿ. ‘ಬ್ರಾಾಹ್ಮಣ್ಯವನ್ನು ಉಳಿಸಿ’ ಎಂಬುದು ನನ್ನ ಬರಹದ ಮೂಲಧಾತು. ಇದನ್ನು ಖುದ್ದು ಬ್ರಾಾಹ್ಮಣರು ಅರಿಯದಾದರೇ? ನಾನು ಬರೆದಿದ್ದೆಲ್ಲ ಸುಳ್ಳು ಎಂದಾದರೂ ಬರೆಯಬಹುದಿತ್ತು. ತಮ್ಮ ವಾದ ಮಂಡಿಸಬಹುದಿತ್ತು. ಒಂದು ಒಳ್ಳೆೆಯ ಶಿಖರಶ್ರೇಯ ವಾದ-ಸಂವಾದ ಓದುವ ಅವಕಾಶವಾದರೂ ಓದುಗರಿಗೆ ಸಿಕ್ಕಂತಾಗುತ್ತಿಿತ್ತು.

ಶತಶತಮಾನಗಳಿಂದ ಬ್ರಾಾಹ್ಮಣರ ಮೇಲೆ ಕಾಲಕಾಲಕ್ಕೆೆ ಆಕ್ರಮಣಗಳು ಆಗುತ್ತಲೇ ಬಂದಿವೆ. ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಆದರೆ ಬ್ರಾಾಹ್ಮಣರು ಅದಕ್ಕೆೆ ಸಮರ್ಪಕವಾದ ಉತ್ತರವನ್ನು ನೀಡುತ್ತಲೇ ಬಂದಿದ್ದಾರೆ. ಬ್ರಾಾಹ್ಮಣರು ಬುದ್ಧಿಿಪ್ರಿಿಯರು, ವಿವೇಕಶೀಲರು. ಈ ಬಲದಿಂದಲೇ ಇಂದಿಗೂ ದೇಶಾದ್ಯಂತ ಅಲ್ಪಸಂಖ್ಯಾಾತರಾದರೂ ತಮ್ಮ ಪಾರಮ್ಯ ಮೆರೆಯುತ್ತಾಾ ಬಂದಿದ್ದಾರೆ. ಸರ್ವರ ಗೌರವ-ಆದರಗಳಿಗೆ ಪಾತ್ರರಾಗಿದ್ದಾರೆ. ಕಿರುಚಾಟ, ಧಮಕಿ, ಹರಿಹಾಯುವುದು, ಸೊಣಕುಬಾಜಿತನ, ಕೇಸು, ಕಟ್ಟಳೆ ಅವರ ಅಂಗೋಸ್ತ್ರವಲ್ಲ. ಅವರದ್ದೇನಿದ್ದರೂ ಬುದ್ಧಿಿಬಲ. ಇಂದಿಗೂ ಈ ಸಮುದಾಯ ಶ್ರೇಷ್ಠತೆಯನ್ನು ಗಳಿಸಿದ್ದರೆ ಅದಕ್ಕೆೆ ಇದೊಂದೇ ಕಾರಣ.

ಅಷ್ಟಕ್ಕೂ ಬ್ರಾಾಹ್ಮಣರು ಶಂಕರಾಚಾರ್ಯರನ್ನೂ ಬಿಟ್ಟವರಲ್ಲ. ಆದರೆ ಇವೆಲ್ಲವನ್ನೂ ಬುದ್ಧಿಿಯ ಗರಡಿಯಲ್ಲಿ ಆಡಿದವರು. ಕೂಗುಮಾರಿತನ ಬ್ರಾಾಹ್ಮಣ ಗುಣವಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿಷಯ, ವಸ್ತುವಿಗೆ ವಿರೋಧ ಬಂದಾಗ ಕುಳಿತು ಚರ್ಚಿಸುವುದು ಬ್ರಾಾಹ್ಮಣ ಗುಣ. ವಂಡರಗಪ್ಪೆೆಗಳಂತೆ ಕೂಗುವುದು, ಬಾಲವಿಧವೆಯಂತೆ ಸಣ್ಣ ಪುಟ್ಟ ಸಂಗತಿಗಳಿಗೆಲ್ಲ ರೋಧಿಸುವುದು ಒಳ್ಳೆೆಯ ಲಕ್ಷಣವಲ್ಲ. ಜಯವೀರ ಗೌಡನ ಬಾಯಿ ಮುಚ್ಚಿಿಸುವುದು ಬ್ರಾಾಹ್ಮಣ ವಿಜಯವಲ್ಲ. ಬ್ರಾಾಹ್ಮಣಿಕೆಯ ಬಹುತ್ವ ಮೆರೆದು, ಅದರಲ್ಲಿರುವ ಶ್ರೇಷ್ಠತೆಯನ್ನು ಎತ್ತಿಿಹಿಡಿದು ಜಗಕ್ಕೆೆ ಬೆಳಕಾಗುವ ಉದಾತ್ತ ಆಶಯ ಈ ಸಮೂದಾಯದ್ದು ಎಂಬುದನ್ನು ನಾನು ಬಲ್ಲೆ. ನನ್ನ ವಯಸ್ಸು ಚಿಕ್ಕದಿರಬಹುದು ಆದರೆ ವಿಷಯದಲ್ಲಿ ಹುಡುಗಾಟಿಕೆ ಇಲ್ಲ. ನನ್ನದೇನಿದ್ದರೂ ಹುಡುಕಾಟ. ಹಾಗಾಗಿಯೇ ನನ್ನದು ‘ಬೇಟೆ’. ನನ್ನ ಹೆಸರಿನಲ್ಲಿರುವ ಕೊನೆಯ ಎರಡು ಅಕ್ಷರಗಳನ್ನು ನೋಡಿ ಜನಿವಾರದ ಮಗ್ಗುಲು ಬದಲಿಸುವುದು ಬೇಡ.

ಜಯವೀರ ಗೌಡ ಎಂಬ ನಾನು ಇದ್ದೇನೋ ಇಲ್ಲವೋ ಎಂಬ ಚರ್ಚೆ, ಜಿಜ್ಞಾಸೆ ನನಗೆ ಬಹಳ ಮಜಾ ನೀಡಿತು. ಆದರೆ ಈ ಪ್ರಶ್ನೆೆಗೆ ಕಾಲವೇ ಉತ್ತರ ನೀಡಲಿದೆ. ನಿಮ್ಮೆೆಲ್ಲರ ಕುತೂಹಲ ತಣಿಸುವ ಸಂತಸದ ವಿಚಾರವೇನೆಂದರೆ ಸದ್ಯದಲ್ಲಿ ನಿಮ್ಮ ಈ ಗೌಡ ನಿಮ್ಮೆೆಲ್ಲರೊಟ್ಟಿಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಸಂದರ್ಭ ಸನ್ನಿಿಹಿತವಾದಂತೆ ತೋರುತ್ತಿಿದೆ.

ಈ ವಾರ ಗುಡ್ ಬೈ ಹೇಳುವ ಮುನ್ನ ಒಂದು ಮಾತು. ನನ್ನ ಬರಹದಿಂದಾಗಿ ಭಟ್ಟರು ಕೆಲವರ ಕೋಪಕ್ಕೆೆ, ವೃಥಾ ನಿಂದನೆಗೆ ಗುರಿಯಾಗಬೇಕಾಯಿತು. ಅದಕ್ಕೆೆ ನಾನು ಕಾರಣನಾದೆ ಎಂಬ ನೋವು ನನಗಿದೆ. ಅವರಿಗೆ ಇವೆಲ್ಲ ಹೊಸತಲ್ಲ. ಸ್ವತಃ ಮುಖ್ಯಮಂತ್ರಿಿ ಮಗನ ವಿರುದ್ಧವೇ ಬರೆದು ಅರಗಿಸಿಕೊಂಡವರು ಅವರು. ಅವರು ‘ಸಂತೆಯೊಳಗೆ ನಿಂತ ಸಂತ’ ಎಂಬುದು ಗೊತ್ತಿಿದೆ. ‘ಬನ್ರೀ ಜಯವೀರ್, ಬ್ರಾಾಹ್ಮಣ ಕಾಫಿ ಬಾರ್ ಗೆ ಹೋಗಿ ಉದ್ದಿನ ವಡೆ ತಿನ್ನೋೋಣ ’ ಎಂದು ಕಿಚಾಯಿಸಿ ಎಲ್ಲವನ್ನೂ ಮರೆಯುತ್ತಾಾರೆ ಎಂಬುದೂ ಗೊತ್ತಿಿದೆ.

ಕೊನೆಯಲ್ಲಿ ನನ್ನ ಟೀಕಿಸಿದವರಿಗೆ, ಮೆಚ್ಚಿಿದವರಿಗೆ, ಅಸ್ತಿಿತ್ವವನ್ನೇ ಪ್ರಶ್ನಿಿಸಿ ತಲೆಕೆಡಿಸಿಕೊಂಡವರಿಗೆ ನಮಸ್ಕಾಾರಗಳು. ಸದ್ಯದಲ್ಲೇ ಭೇಟಿಯಾಗೋಣ!