Wednesday, 11th December 2024

ರಾಷ್ಟ್ರೀಯ ಪೌರತ್ವ ಕಾಯಿದೆ ಜಾರಿಯಾದರೆ ಇವರಿಗೇಕೆ ಆತಂಕ?

ಪ್ರಚಲಿತ

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು 

ದೇಶದಾದ್ಯಂತ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಯ ವಿಚಾರ ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿರುವುದು ಗಮನಾರ್ಹ. ಮೂರು ನೆರೆ ರಾಷ್ಟ್ರಗಳಾದ ಪಾಕಿಸ್ತಾಾನ, ಬಾಂಗ್ಲಾಾದೇಶ ಹಾಗೂ ಅಫಘಾನಿಸ್ತಾಾನ ದೇಶಗಳಲ್ಲಿ ಮತೀಯ ಗಲಭೆಗಳಿಗೆ ಸಿಲುಕಿ ನಿರಾಶ್ರಿಿತರಾದ ಹಿಂದೂ, ಸಿಖ್, ಬೌದ್ಧ ಹಾಗೂ ಜೈನ ಮತೀಯರಿಗೆ ನಮ್ಮ ದೇಶವೊಂದನ್ನುಳಿದು ಬೇರಾವ ನೆಲೆಗಳೂ ಇಲ್ಲದ ಕಾರಣ ಅವರೆಲ್ಲರಿಗೂ ಈ ಪೌರತ್ವ ಕಾಯಿದೆ ಅಡಿ ನಮ್ಮ ದೇಶದಲ್ಲಿ ನೆಲೆಸಿ, ಬದುಕು ಕಟ್ಟಿಿಕೊಳ್ಳಲು ಅವಕಾಶ ಕಲ್ಪಿಿಸಿಕೊಡುವ ವಿಧೆಯಕವಿದು. ಕಳೆದ ಅಧಿವೇಶನದಲ್ಲಿಯೇ ಲೋಕಸಭೆಯಲ್ಲಿ ಅಂಗೀಕಾರವಾದ ಈ ವಿಧೆಯಕ. ರಾಜ್ಯಸಭೆಯಲ್ಲಿ ಮಂಡನೆಯಾಗುವ ಮುಂಚೆಯೇ ಸರಕಾರದ ಅವಧಿ ಪೂರ್ಣಗೊಂಡಿದ್ದರಿಂದ, ಮರಳಿ ಮಂಡನೆಯಾಗುವ ಸನ್ನಿಿವೇಶ ಎದುರಾಗಿದೆ. ಈ ವಿಧೆಯಕದಡಿ 2014ರ ಡಿ. 31ರೊಳಗಾಗಿ ಭಾರತಕ್ಕೆೆ ಬಂದು ನೆಲೆಸಿದ ಹಿಂದೂ, ಸಿಖ್, ಬೌದ್ಧ ಹಾಗೂ ಜೈನ ವಲಸಿಗರು ಭಾರತೀಯ ಪ್ರಜೆಗಳೆಂದೇ ಗುರುತಿಸಲ್ಪಡುತ್ತಾಾರೆ. ಈವರೆಗೆ ಹನ್ನೆೆರಡು ವರ್ಷಗಳವರೆಗೆ ನಮ್ಮ ದೇಶದಲ್ಲಿ ನೆಲೆಸಿದ ವಿದೇಶಿಯರಿಗೆ ಸೂಕ್ತ ದಾಖಲೆ ಹಾಗೂ ಅರ್ಜಿಗಳನ್ನು ಸಲ್ಲಿಸಿ ಪೌರತ್ವ ಪಡೆಯಬಹುದಾಗಿತ್ತು. ಹೊಸ ಪೌರತ್ವ ವಿಧೇಯಕ ಜಾರಿಯಾದರೆ, ಅದು ಆರು ವರ್ಷಕ್ಕಿಿಳಿಯಲಿದೆ. ಈಗಾಗಲೇ ಅಸ್ಸಾಾಂನಲ್ಲಿ ಚಾಲನೆಯಲ್ಲಿರುವ ಈ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆಯನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಚಿತಪಡಿಸಿದ್ದಾಾರೆ. ಇಷ್ಟು ಮಾತ್ರವಲ್ಲ, ಅಸ್ಸಾಾಂನಲ್ಲಿ ಎನ್‌ಆರ್‌ಸಿ ಪಟ್ಟಿಿಯಿಂದ ಹೊರಗುಳಿದ 19 ಲಕ್ಷಕ್ಕೂ ಅಧಿಕ ಜನರಿಗೆ ತಮ್ಮ ಪೌರತ್ವ ಸಾಬೀತುಪಡಿಸಲು ರಾಜ್ಯ ಸರಕಾರದ ಸಹಕಾರದೊಂದಿಗೆ ನೆರವು ಕಲ್ಪಿಿಸಿಕೊಡುವುದಾಗಿ ಭರವಸೆ ನೀಡಿದ್ದಾಾರೆ.

ಭಾರತ ದೇಶ ವಿಭಜನೆಯಾದ ಸಮಯದಿಂದಲೇ ಗಡಿಯಾಚೆಯ ಪಾಕಿಸ್ತಾಾನದಲ್ಲಿ ಹಿಂದುಗಳು ಧಾರ್ಮಿಕ ಕಾರಣಗಳಿಗಾಗಿ ದಿನನಿತ್ಯ ಕಿರುಕುಳಕ್ಕೊೊಳಗಾಗುತ್ತಿಿದ್ದಾಾರೆ. ಭಾರತ ದೇಶದಲ್ಲಿ ಜನಿಸಿ, ಬೆಳೆದು ಭಾರತೀಯ ಪೌರರಾಗಿರುವ ಹಾಗೂ ನೆಮ್ಮದಿಯ ಬದುಕು ಸಾಗಿಸುತ್ತಿಿರುವ ಭಾರತೀಯ ಪ್ರಜೆಗಳಾದ ನಾವುಗಳೆಲ್ಲ, ಅನ್ಯಧರ್ಮೀಯರು ಬಹುಸಂಖ್ಯಾಾತರಾಗಿರುವ ದೇಶಗಳಲ್ಲಿ ಹಿಂಸೆ ಅನುಭವಿಸುತ್ತಾಾ ಜೀವಭಯದಿಂದ ನಮ್ಮ ದೇಶದೆಡೆಗೆ ಧಾವಿಸಿಬಂದವರ ಸಂಕಟ, ನೋವುಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಹಿಂದು, ಸಿಖ್, ಬೌದ್ಧ, ಜೈನ ಧರ್ಮೀಯರು ವೃತ್ತಿಿಯನ್ನರಿಸಿಯೋ ಅಥವಾ ಬೇರಾವುದೋ ಕಾರಣದಿಂದ ಬೇರೆ ದೇಶಗಳಲ್ಲಿ ನೆಲೆಸಿದ್ದರೂ ಅವರ ಬೇರುಗಳು ನಮ್ಮ ದೇಶದಲ್ಲಿಯೇ, ಇಲ್ಲಿಯೇ ಇರುವುದೆಂಬ ಮಾತು ನಿರ್ವಿವಾದ. ಇಲ್ಲಿಗೆ ವಲಸೆ ಬಂದಿರುವ ಬಹಳಷ್ಟು ಜನರಲ್ಲಿ ಮತಾಂಧತೆ, ಭಯೋತ್ಪಾಾದನೆಗೆ ಅಂಜಿಕೊಂಡು ಬಂದಿರುವ ನಿರಾಶ್ರಿಿತರ ಸಂಖ್ಯೆೆಯೇ ಅಧಿಕ. ಇಂತಹ ನಿರಾಶ್ರಿಿತರಿಗೆ ಇಲ್ಲಿ ಬದುಕಲು ಅವಕಾಶ ಮಾಡಿಕೊಡುವುದು ಸಹೃದಯಿಗಳೆನಿಸಿದ ಭಾರತೀಯರಿಗೆ ಅಸಾಧ್ಯವೆನಿಸದೆಂಬ ಮಾತಿನಲ್ಲಿ ಸತ್ಯಾಾಂಶವಿಲ್ಲದಿಲ್ಲ.

ಅಕ್ರಮ ವಲಸಿಗರ ಸಮಸ್ಯೆೆ ಹಲವು ದಶಕಗಳ ಹಿಂದಿನದು. 1950ರ ದಶಕದಿಂದಲೇ ಆರಂಭವಾದ ಅಕ್ರಮ ಬಾಂಗ್ಲಾಾ ವಲಸಿಗರ ಸಂಖ್ಯೆೆ ಹಲವಾರು ಲಕ್ಷಗಳಷ್ಟು. ಅಕ್ರಮ ವಲಸಿಗರಲ್ಲಿ ಮುಸಲ್ಮಾಾನರ ಸಂಖ್ಯೆೆಯೇ ಹೆಚ್ಚು ಎಂಬ ಸಂಗತಿಯೂ ಗಮನಾರ್ಹ. ಅಕ್ರಮ ವಲಸಿಗರ ಸಮಸ್ಯೆೆ ಬೃಹದಾಕಾರವಾಗಿ ಬೆಳೆದುದು ಬೋಡೋ ಪ್ರಾಾಬಲ್ಯದ ಜಿಲ್ಲೆೆಗಳಲ್ಲಿ. ಬಂಗಾಳಿ ಮುಸ್ಲಿಿಮರು ಹಾಗೂ ಆದಿವಾಸಿಗಳ ನಡುವೆ ಘರ್ಷಣೆಗಳು, ಕೊಲೆ, ಸುಲಿಗೆಗಳು ನಡೆಯುತ್ತಲೇ ಇತ್ತು. ಅಕ್ರಮ ವಲಸಿಗರ ಸಮಸ್ಯೆೆಯಿಂದ ರಾಜ್ಯದ ಜನತೆಗೆ ಪರಿಹಾರ ದೊರಕಿಸುವ ಮಾತಂತಿರಲಿ, ಅಕ್ರಮ ಮುಸ್ಲಿಿಂ ವಲಸಿಗರನ್ನೇ ತಮ್ಮ ಮತ ಪೆಟ್ಟಿಿಗೆಯಾಗಿಸಿಕೊಂಡು ಇಲ್ಲಿಯ ರಾಜಕೀಯ ನಾಯಕರು ಹಲವಾರು ದಶಕಗಳವರೆಗೆ ಆಡಳಿತ ನಡೆಸಿರುವುದು ತೀರ ದುರಾದೃಷ್ಟಕರ. ರಾಜಕೀಯ ನಾಯಕರ ಈ ತೆರನಾದ ನಡೆಯಿಂದ ಕೇವಲ ಆಸ್ಸಾಾಂ ರಾಜ್ಯ ಮಾತ್ರವಲ್ಲ, ಇಡೀ ದೇಶದ ಏಕತೆ ಹಾಗೂ ಹಿತಾಸಕ್ತಿಿಗಳಿಗೆ ಅನಾರೋಗ್ಯಕರ ಬೆಳವಣಿಗೆಯಾಗಿದೆಯೆಂಬ ಮಾತಿನಲ್ಲಿ ಸತ್ಯಾಾಂಶವಿಲ್ಲದಿಲ್ಲ.

ವಲಸೆಗಾರರನ್ನು ಗುರುತಿಸುವ ಪ್ರಕ್ರಿಿಯೆ 1985ರಲ್ಲಿಯೇ ಆರಂಭವಾದರೂ ಅಂದಿನ ಸರಕಾರಗಳ ಬದ್ಧತೆಯ ಕೊರತೆಯಿಂದ
ಯಾವ ಪ್ರಗತಿಯೂ ಗೋಚರಿಸಲಿಲ್ಲವೆನ್ನಬಹುದು. ನಂತರ ಈ ಸಮಸ್ಯೆೆಯ ಪರಿಹಾರಕ್ಕಾಾಗಿ, ಸರ್ವೋಚ್ಚ ನ್ಯಾಾಯಾಲಯ ಮಧ್ಯ ಪ್ರವೇಶಿಸಿ ಕಟ್ಟುನಿಟ್ಟಿಿನ ನಿರ್ದೇಶನ ಹೊರಡಿಸುವುದರೊಂದಿಗೆ ರಾಷ್ಟ್ರೀಯ ಪೌರತ್ವ ಪರಿಷ್ಕರಣೆಗೆ ಕಾಲಮಿತಿಯನ್ನು ಗೊತ್ತುಪಡಿಸಿತು. ಸರ್ವೋಚ್ಚ ನ್ಯಾಾಯಾಲಯದ ಉಸ್ತುವಾರಿಯಲ್ಲಿಯೇ ಬಾಂಗ್ಲಾಾ ವಲಸಿಗರನ್ನು ಗುರುತಿಸುವ ಪೌರತ್ವ ಕರಡು ಪ್ರಕಟಿಸುವ ಪ್ರಕ್ರಿಿಯೆ ವೇಗ ಪಡೆದುಕೊಂಡಿದೆ. ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಅನುಚಿತವಾಗಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಾಯಾಲಯ ನಿರ್ದೇಶಿಸಿದೆ.

ಆಸ್ಸಾಾಂ ಮಾತ್ರವಲ್ಲ, ಇಂದಿನ ದಿನಗಳಲ್ಲಿ ಇಡೀ ದೇಶವೇ ಒಂದು ಧರ್ಮಛತ್ರದಂತಾಗಿದೆ. ಬಾಂಗ್ಲಾಾ ದೇಶ, ಅಫಘಾನಿಸ್ತಾಾನ್, ಪಾಕಿಸ್ತಾಾನ ಹಾಗೂ ಮ್ಯಾಾನ್ಮಾಾರ್‌ಗಳಿಂದ ಅಕ್ರಮವಾಗಿ ಭಾರತವನ್ನು ಪ್ರವೇಸಿಸುವ ವಲಸಿಗರಿಂದ ರಾಜ್ಯದ ಗಡಿ ಪ್ರದೇಶಗಳಲ್ಲಿ ಜನಸಂಖ್ಯೆೆಯ ಸ್ವರೂಪವೇ ಬದಲಾಗಿದೆ. ಸ್ಥಳಿಯ ನಿವಾಸಿಗಳ ಸಂಸ್ಕೃತಿ, ಭಾಷೆಗಳ ಮೇಲೆ ಪ್ರಹಾರ ನಡೆಯುತ್ತಿಿದ್ದು ಮೂಲ ನಿವಾಸಿಗಳು ಅಭದ್ರತೆಯನ್ನು ಅನುಭವಿಸುತ್ತಿಿದ್ದಾಾರೆ. ಸ್ವತಂತ್ರ ಬಾಂಗ್ಲಾಾ ದೇಶದ ಹೋರಾಟ ಆರಂಭವಾದಂದಿನಿಂದಲೂ ವಲಸೆ ಬಂದಿರುವ ಮುಸ್ಲಿಿಮರು ತಮ್ಮ ಪ್ರದೇಶದ ಗುಣಲಕ್ಷಣಗಳನ್ನೇ ಬದಲಿಸಿ, ತಮ್ಮದೇ ಸಂಪ್ರದಾಯಗಳನ್ನು ಹುಟ್ಟುಹಾಕಿದ್ದಾಾರೆಂದು ಅಲ್ಲಿಯ ಆದಿವಾಸಿಗಳು ನಿರಂತರವಾಗಿ ನೋವು ಅನುಭವಿಸುತ್ತಿಿದ್ದಾಾರೆ. ಮೂಲ ನಿವಾಸಿಗರ ಮತ್ತು ವಲಸಿಗರ ಹೋರಾಟದಿಂದ ಸಾವಿರಾರು ಜನರು ಪ್ರಾಾಣ ಕಳೆದುಕೊಂಡಿದ್ದಾಾರೆ. ವಿಪರ್ಯಾಸದ ಸಂಗತಿಯೆಂದರೆ, ಅಂದಿನ ಸರಕಾರಗಳು ಅಕ್ರಮ ವಲಸಿಗರಿಗೆ ಎಲ್ಲಾಾ ಅನುಕೂಲತೆಗಳನ್ನು ಮಾಡಿಕೊಟ್ಟಿಿವೆ. ಬಹುತೇಕ ಎಲ್ಲಾಾ ಈಶಾನ್ಯ ರಾಜ್ಯಗಳಲ್ಲಿಯೂ ವೈವಿಧ್ಯಮಯ ಜನಾಂಗೀಯ, ಧಾರ್ಮಿಕ ಹೀಗೆ ಹತ್ತು ಹಲವು ಗುಂಪುಗಳಿವೆ. ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾಾರೋಪ, ಆಟೋಪಾಟಗಳೇನಿದ್ದರೂ ಈಶಾನ್ಯ ರಾಜ್ಯಗಳ ಮಹಿಳೆಯರು ಹಾಗೂ ಮಕ್ಕಳು ಹಿಂಸೆಯ ದಳ್ಳುರಿಗೆ ಸಿಲುಕಿ ನರಳಿದ್ದಂತೂ ಸರ್ವವಿದಿತ.

ಸರಕಾರದ ಯೋಜನೆಗಳು ಜನಹಿತಕ್ಕಾಾಗಿಯೇ ಎನಿಸಿದರೂ, ಅನುಷ್ಠಾಾನದಲ್ಲಿ ಕಾಣಸಿಗುವ ಬಲವಾದ ಇಚ್ಚಾಾಶಕ್ತಿಿಯೇ ಯೋಜನೆಯನ್ನು ಸಕಾರಾತ್ಮಕವಾಗಿಯೇ ರೂಪುಗೊಳಿಸುತ್ತದೆ. ರಾಷ್ಟ್ರೀಯ ಪೌರರನ್ನು ಗುರುತಿಸುವ ಪ್ರಕ್ರಿಿಯೆ ಮಾತ್ರವಲ್ಲ, ವಲಸಿಗರನ್ನು ಗುರುತಿಸಿ, ಅವರನ್ನು ಮಾತೃದೇಶಗಳಿಗೆ ಮರಳಿ ಕಳುಹಿಸುವ ಗುರುತರ ಜವಾಬ್ದಾಾರಿಯೂ ಸರಕಾರದ ಮೇಲಿದೆ. ರಾಷ್ಟ್ರೀಯ ಪೌರರ ಕಾನೂನು ತಿದ್ದುಪಡಿ ವಿಧೇಯಕದಿಂದ, ಕೇಂದ್ರ ಸರಕಾರ, ಆಸ್ಸಾಾಂ ರಾಜ್ಯದ ಪ್ರಮುಖ ವಿರೋಧ ರಾಜಕೀಯ ಪಕ್ಷಗಳ ಜತೆಜತೆಗೆ, ತನ್ನ ಮಿತ್ರಪಕ್ಷಗಳ ಕೆಂಗಣ್ಣಿಿಗೂ ಗುರಿಯಾಗಬೇಕಿದೆ. ವಿಧೆಯಕದಲ್ಲಿ ಮುಸ್ಲಿಿಂ ಜನಾಂಗವನ್ನು ಸೇರಿಸದಿರುವುದಕ್ಕಾಾಗಿ ವಿರೋಧ ಪಕ್ಷಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಲಿವೆ. 2016ರಲ್ಲಿ ಈ ವಿಧೇಯಕ ಮಂಡನೆಯಾದ ದಿನದಿಂದ ಆಸ್ಸಾಾಂ, ಮೇಘಾಲಯ, ಮಣಿಪುರ ರಾಜ್ಯಗಳಲ್ಲಿ ಅಶಾಂತಿ, ತಲ್ಲಣಗಳು ಹೆಚ್ಚಾಾಗಿ ಉಗ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಲಿವೆ. ಈ ವಿಧೇಯಕ ಜಾರಿಯಾದರೆ ಈಶಾನ್ಯ ರಾಜ್ಯಗಳ ಸಾಮಾಜಿಕ ಸ್ವರೂಪಕ್ಕೆೆ ಧಕ್ಕೆೆಯುಂಟಾಗಲಿದೆಯೆಂದು ಪ್ರತಿಭಟನೆಕಾರರು ಅಭಿಪ್ರಾಾಯ ಪಡುತ್ತಿಿದ್ದಾಾರೆ. ಬಾಂಗ್ಲಾಾ ದೇಶ, ಅಫಘಾನಿಸ್ತಾಾನ, ಪಾಕಿಸ್ತಾಾನ ಮುಂತಾದ ದೇಶಗಳಲ್ಲಿ ಮುಸ್ಲಿಿಂ ಧರ್ಮದ ಅನುಯಾಯಿಗಳು ಬಹುಸಂಖ್ಯಾಾತರಾಗಿರುವ ಕಾರಣ, ಅವರು ನಿರ್ವಸಿತರಾಗಿ ಬರುವ ಪ್ರಮೇಯವೇ ಇಲ್ಲ. ಆದರೆ, ಹಿಂದೂ ಧರ್ಮದ ಅನುಯಾಯಿಗಳು, ದೌರ್ಜನ್ಯಕ್ಕೆೆ ತುತ್ತಾಾಗಿರುವುದರಿಂದ ಅವರಿಗೆ ಭಾರತದಲ್ಲಿಯೇ ನೆಲೆ ಕಲ್ಪಿಿಸುವುದರ ಜತೆಜತೆಗೆ ಇನ್ನು ಮುಂದೆ ಆಕ್ರಮ ವಲಸಿಗರನ್ನು ಭಾರತದೊಳಗೆ ನುಸುಳದಂತೆ ತಡೆದು ಈಶಾನ್ಯ ರಾಜ್ಯಗಳನ್ನು ಸುರಕ್ಷಿತವಾಗಿಸುವ ಹೊಣೆಗಾರಿಕೆ ತನ್ನದು ಎಂದು ಬಿಜೆಪಿ ಸರಕಾರ ಪ್ರತಿಪಾದಿಸುತ್ತಿಿದೆ. ಜನತೆಗೆ ರಾಷ್ಟ್ರೀಯ ಪೌರತ್ವ ಕಾಯದೆಯ ವಿಧೇಯಕವನ್ನು ಅನುಷ್ಠಾಾನಗೊಳಿಸುವದಾಗಿ 2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೇ ಭರವಸೆ ನೀಡಿರುವುದಾಗಿ, ಬಿಜೆಪಿ, ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಲಿದೆ.

ಸರ್ವೋಚ್ಚ ನ್ಯಾಾಯಾಲಯದ ನಿರ್ದೇಶನದಂತೆ, ಈ ವಿಧೇಯಕವನ್ನು ಎರಡೂ ಸದನಗಳಲ್ಲಿ ಜಾರಿಗೊಳಿಸಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ನ. 18ರಂದು, ಆರಂಭವಾದ ಚಳಿಗಾಲದ ಅಧಿವೇಶನ, 2019ರಲ್ಲಿ ನಡೆಯುತ್ತಿಿರುವ ಕೊನೆಯ ಅಧಿವೇಶನವಾಗಿದೆ. ಆಸ್ಸಾಾಂ ರಾಜ್ಯದಲ್ಲಿ, ಎಲ್ಲಾಾ ಭಾರತೀಯ ನಾಗರಿಕರ ಹೆಸರು, ವಿಳಾಸ, ಭಾವಚಿತ್ರಗಳ ಪ್ರಕಟಣೆಯ ನಂತರ ನಿಜವಾದ ಭಾರತೀಯ ಪ್ರಜೆಗಳ ಹೆಸರು ಬಿಟ್ಟುಹೋಗದಂತೆ ಸರಕಾರ ಗಮನ ವಹಿಸುವುದು ಅಗತ್ಯ. ಅಕ್ರಮ ವಲಸಿಗರ ಪತ್ತೆೆ ಕಾರ್ಯದಲ್ಲಿ, ಮಾನವೀಯ ನಿಲುವು ತಾಳಬೇಕು ಮತ್ತು ಈ ಮಸೂದೆಯನ್ನು ಜಂಟಿ ಸಮಿತಿಯ ಅವಗಾಹನೆಗಾಗಿ ಕಳುಹಿಸಬೇಕೆಂದು ವಿರೋಧ ಪಕ್ಷಗಳು ಸರಕಾರವನ್ನು ಒತ್ತಾಾಯಿಸುತ್ತಲಿವೆ. ಕೇವಲ ರಾಜಕೀಯ ಲಾಭಕ್ಕಾಾಗಿ, ದೇಶದ ಭದ್ರತೆಯನ್ನು ಅಪಾಯಕ್ಕೆೆ ಒಡ್ಡುವುದು ಸರ್ವಥಾ ಸಮ್ಮತವಲ್ಲವೆಂಬ ಮಾತು ವಿಚಾರಾರ್ಹ. ಶರಣು ಬಂದವರಿಗೆ ಮರಣ ವಿಧಿಸಲಾಗದೆಂಬ ಮಾತು ಸರ್ವವಿದಿತವೆನಿಸಿದರೂ ವಲಸೆ ಬಂದವರ ಉದ್ದೇಶ-ದುರುದ್ದೇಶ ಮತ್ತು ವಲಸಿಗರಿಂದ ದೇಶದ ಏಕತೆ-ಅಖಂಡತೆ-ಸಮಗ್ರತೆಗಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆೆ ಪಕ್ಷಬೇಧ ಮರೆತು ಎಲ್ಲ ರಾಜಕೀಯ ನಾಯಕರೂ ಒಮ್ಮತದ ನಿಲುವು ತೆಗೆದುಕೊಳ್ಳುವು ದು ಅಗತ್ಯ.