Wednesday, 9th October 2024

13,086 ಕೋವಿಡ್ ಪ್ರಕರಣಗಳು ದೃಢ

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ದೇಶಾದ್ಯಂತ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಾವನ್ನಪ್ಪಿ ವವರ ಒಟ್ಟು ಸಂಖ್ಯೆ 4,35,31,650ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,14,475ಕ್ಕೆ ಏರಿಕೆಯಾಗಿದೆ. 24ಗಂಟೆಯಲ್ಲಿ 19 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,25,242ಕ್ಕೆ ತಲುಪಿದೆ ಎಂದು ಸಚಿವಾಲಯ ಹೇಳಿದೆ.

ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.53ರಷ್ಟಿದೆ. ಒಂದೇ ದಿನದಲ್ಲಿ 611 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 24ಗಂಟೆಯಲ್ಲಿ 4,51,312 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ದೇಶಾದ್ಯಂತ ಒಟ್ಟು 86.44 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಭಾರತದಲ್ಲಿ ಪ್ರತಿದಿನದ ಪಾಸಿಟಿವಿಟಿ ದರ ಶೇ.2.90ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.3.81ರಷ್ಟಿದೆ. 2021ರ ಮೇ 4ರಂದು ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2 ಕೋಟಿ ದಾಟಿತ್ತು. 2022ರ ಜನವರಿ 25ರಂದು ಕೋವಿಡ್ ಪ್ರಕರಣಗಳ ಸಂಖ್ಯೆ 4 ಕೋಟಿ ಗಡಿ ದಾಟಿರುವುದಾಗಿ ಅಂಕಿಅಂಶ ವಿವರಿಸಿದೆ.