ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಜಾಗತಿಕ ಮಟ್ಟದ ಒಲಿಂಪಿಕ್ ಕ್ರೀಡೆಗಳಲ್ಲಿ ಚೀನಾ, ಜಪಾನ್‌ನಂತಹ ರಾಷ್ಟ್ರಗಳು ಚಿನ್ನದ ಪದಕವನ್ನು ಬಾಚಿಕೊಂಡು ಸದಾ ಮೊದಲೆ ರಡು ಸ್ಥಾನಗಳನ್ನು ಬೇರೆ ಯಾವುದೇ ದೇಶಗಳಿಗೆ ಬಿಟ್ಟುಕೊಡುತ್ತಿಲ್ಲ. ಭಾರತದ ಸ್ಥಾನ ಸದಾ ಕೊನೆಯ ನಾಲ್ಕೈದು ಸ್ಥಾನಗಳ ಮೇಲಿರುವುದನ್ನು ಕಾಣುತ್ತೇವೆ.
ಕ್ರೀಡೆ ಎಂಬುವುದು ಕೇವಲ ಮನೋರಂಜನಾ ಕಲೆಯಲ್ಲ. ಕ್ರೀಡೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾದ ಮದ್ದು. ಶರೀರವು ಉಲ್ಲಾಸ ಮತ್ತು ಲವಲವಿಕೆಯಿಂದ ಕೂಡಿರಲು ಕ್ರೀಡೆ ಅಥವಾ ಆಟ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.ದೇಶೀಯ ಕ್ರೀಡೆ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳೆಂಬ ಎರಡು ಪ್ರಕಾರಗಳಲ್ಲಿ ಕ್ರಿಕೆಟ, ಕಬಡ್ಡಿ, ಹಾಕಿ,ವಾಲಿಬಾಲ, ಟೆನಿಸ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಲಗೋರಿ, ಹೈ-ಜಂಪ್, ಲಾಂಗ್
ಜಂಪ್, ಶೂಟಿಂಗ್, ವೈಟ್ ಲಿಫ್ಟಿಂಗ್, ಕುಸ್ತಿ, ಚೆಸ್, ಪವರ್ ಲಿಫ್ಟಿಂಗ್, ಫುಟ್ಬಾಲ್, ಖೋ ಖೋ, ಗಾಲ್ಫ್, ಬಾಕ್ಸಿಂಗ್, ಬಾಸ್ಕೆಟ್ ಬಾಲ, ಕರಾಟೆ, ಸ್ನೂಕರ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಭಾರತ ತಂಡವು ಒಲಿಂಪಿಕ್ ನಲ್ಲಿ ಪಾಲುಪಡೆಯುತ್ತಿದೆ.
ಈ ಕ್ರೀಡೆಗಳ ಪೈಕಿ ಕೆಲವೊಂದು ಆಟಗಳು ಕೇವಲ ಭಾರತದೊಳಗಿನ ಆಂತರಿಕ ಮಟ್ಟದಲ್ಲಿ ಸ್ಪರ್ದೆಗೆ ಸೀಮಿತವಾಗಿದೆ. ಇನ್ನು ಕೆಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ನಡೆದು ಕ್ರೀಡೆಯನ್ನು ದೂರ ದರ್ಶನ, ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವನ್ನು ಕಾಣಬಹುದಾದ ಅವಕಾಶವಿದೆ.
ಈ ಹಿಂದೆಲ್ಲ ದೂರದರ್ಶನ ಮನೆಗಳಿಗೆ ತಲುಪುವ ಮುಂಚೆ ಪ್ರತಿ ಮನೆಗಳಲ್ಲಿ ರೇಡಿಯೋಗಳು ಕಾಣಸಿಗುತ್ತಿದ್ದವು. ರೇಡಿಯೋ ಮೂಲಕ ಕಾಮೆಂಟರಿ ಕೇಳುವ ಅವಕಾಶಗಳಷ್ಟೇ ಕ್ರೀಡಾ ಪ್ರೇಮಿಗಳಿಗಿತ್ತು. ಇವುಗಳ ಪೈಕಿ ಕ್ರಿಕೆಟ್, ಫುಟ್ಬಾಲ್, ಹಾಕಿ ಆಟಗಳಿಗೆ ಅತಿ ಹೆಚ್ಚು ಅಭಿಮಾನಿ ವರ್ಗ ವೀಕ್ಷಕ ವರ್ಗವನ್ನು ಕಾಣಬಹುದು. ಈ ಆಟಗಳಿಗೆ ಅಭಿಮಾನಿಗಳ ಕ್ರೇಜ್ ಈಗಲೂ ಹಾಗೆಯೇ ಇದೆ.
ನಮ್ಮ ದೇಶದ ಪ್ರತಿ ಗ್ರಾಮದ ಶಾಲಾ ಕಾಲೇಜುಗಳಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾ ಪಟುಗಳು ಕಾಣಸಿಗುತ್ತಾರೆ. ಇಂತಹ ಕ್ರೀಡಾ ಪಟುಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳು, ಕ್ರೀಡಾ ಪರಿಕರಗಳ ಕೊರತೆ ಎದ್ದು ಕಾಣುತ್ತದೆ. ಇನ್ನು ಕೆಲ ಶಾಲಾ
ಕಾಲೇಜುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ಇದ್ದರೆ ಕ್ರೀಡಾಪಟುಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿರುವುದಿಲ್ಲ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣದವರೆಗೆ ಪಠ್ಯಪುಸ್ತಕ ಕಲಿಕೆಯೊಂದೇ ವಿದ್ಯಾರ್ಥಿಗಳಿಗೆ ಶಿಕ್ಷಣವಲ್ಲ.
ಪಠ್ಯೇತರ ಚಟುವಟಿಕೆಗಳು ಕೂಡ ಕಲಿಕೆಯ ಒಂದು ಭಾಗ. ಜಾಗತಿಕ ಮಟ್ಟದ ಒಲಿಂಪಿಕ್ ಕ್ರೀಡೆಗಳಲ್ಲಿ ಚೀನಾ, ಜಪಾನ್‌ನಂತಹ ರಾಷ್ಟ್ರಗಳು ಚಿನ್ನದ
ಪದಕವನ್ನು ಬಾಚಿಕೊಂಡು ಸದಾ ಮೊದಲೆರಡು ಸ್ಥಾನಗಳನ್ನು ಬೇರೆ ಯಾವುದೇ ದೇಶಗಳಿಗೆ ಬಿಟ್ಟುಕೊಡುತ್ತಿಲ್ಲ. ಭಾರತದ ಸ್ಥಾನ ಸದಾ ಕೊನೆಯ ನಾಲ್ಕೈದು ಸ್ಥಾನಗಳ ಮೇಲಿರುವು ದನ್ನು ಕಾಣುತ್ತೇವೆ. ಚೀನಾ, ಜಪಾನ್ ಅಥವಾ ಇನ್ನಿತರ ಕ್ರೀಡೆಯಲ್ಲಿ ಸಾಧನೆ ಮೆರೆದ ದೇಶಗಳು ಅಲ್ಲಿನ ಕ್ರೀಡಾಳುಗಳನ್ನು ಗುರುತಿಸಿ ಬಾಲ್ಯ ದಿಂದಲೇ ಇದಕ್ಕೊಂದು ವಿಶೇಷ ತರಬೇತಿ, ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಆ ದೇಶಗಳನ್ನು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ಕಾಣುವಂತೆ ಮಾಡಿದೆ.
ನಮ್ಮ ದಿನಪತ್ರಿಕೆ, ವಾರ್ತಾವಾಹಿನಿಗಳಲ್ಲಿ ಕ್ರೀಡಾಪಟುಗಳಿಗೆ ಸಂಬಂಧಿಸಿದ ಹಲವಾರು ವಿಶೇಷ ವರದಿಗಳನ್ನು ಕಾಣುತ್ತೇವೆ. ಅವುಗಳಲ್ಲಿ ಪ್ರಮುಖವಾಗಿ ಪ್ರತಿಭಾನ್ವಿತ ಕ್ರೀಡಾಪಟುವಿಗೆ ಬಡತನ ಅಡ್ಡಿ, ಸರಕಾರದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು, ದೂರದ ರಾಜ್ಯಗಳಿಗೆ ತರಬೇತಿಗೆ ತೆರಳಿದ ಕ್ರೀಡಾಪಟುವಿಗೆ ಊರಮಂದಿಯ ಆರ್ಥಿಕ ನೆರವು, ಉದ್ಯೋಗದ ನಿರೀಕ್ಷೆಯಲ್ಲಿ ರಾಷ್ಟ್ರಮಟ್ಟದ ಆಟಗಾರ ಹೀಗೆ ಹಲವಾರು ಕ್ರೀಡಾ ಪಟುಗಳ ಸಮಸ್ಯೆಗಳ ಬಗ್ಗೆ ಸರಕಾರ ಹಾಗೂ ಸಮಾಜದ ಕಣ್ಣು ತೆರೆಸುವ ವರದಿಗಳನ್ನು ಪತ್ರಕರ್ತರು ಮಾಡುತ್ತಲೇ ಬಂದಿದ್ದಾzರೆ. ದೇಶದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾಪಟುವಿಗೆ ಉನ್ನತ ತರಬೇತಿಯನ್ನು ಪಡೆಯಲು, ಸರಕಾರದ ಆರ್ಥಿಕ ನೆರವನ್ನು ಪಡೆಯಲು ಅಂಗಲಾಚುವ ಸ್ಥಿತಿಗಳು ಕೂಡ ಕ್ರೀಡಾಪಟುಗಳಿಗೆ ಎದುರಾದ ನಿದರ್ಶನಗಳಿವೆ. ಇನ್ನು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯುವ ಜನ ಮತ್ತು ಕ್ರೀಡಾ
ಇಲಾಖೆಯೆಂಬುವುದಿದೆ. ಈ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಕಷ್ಟು ಅನುದಾನಗಳಿದ್ದರೂ ಇಚ್ಛಾಶಕ್ತಿಯ
ಕೊರತೆಯ ಕಾರಣಕ್ಕೆ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಒಲಿಂಪಿಕ್ ಕ್ರೀಡೆಯಲ್ಲಿ ಸಾಧನೆ ಮೆರೆದ ಪಿ.ಟಿ ಉಷಾ, ಮೇರಿ ಕೋಂ, ಅಶ್ವಿನಿ ಅಕ್ಕುಂಜೆ, ರೇವತಿ ವೀರಮಣಿ, ಸಲೀಮ ಟೆಟೆಗೆ, ಸೈನಾ ನೆಹ್ವಾಲ, ನೀರಜ್ ಚೋಪ್ರಾ, ಅಶ್ವಿನಿ ಪೊನ್ನಪ್ಪ, ಪಿ.ವಿ ಸಿಂಧುರಂತಹ ಕ್ರೀಡಾಪಟುಗಳು ಗ್ರಾಮೀಣ ಭಾಗದಲ್ಲಿ ಕಡು ಬಡತನ, ಟೀಕೆ, ಅವಮಾನವನ್ನು ಎದುರಿಸಿ ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮೆರೆದವರು. ದೇಶದಲ್ಲಿ ಬಡತನವನ್ನು ಮೆಟ್ಟಿ ಸಾಧನೆ ತೋರಿದ ಮಹನೀಯರು ಅನೇಕ ಮಂದಿಯಿದ್ದಾರೆ. ಸಾಧನೆಗೆ ಬಡತನ ಎಂಬುದು ಅಡ್ಡಿಯಾದ ನಿದರ್ಶನಗಳಿಲ್ಲ. ಕ್ರೀಡೆಯೆಂಬುವುದು ಶಾಂತಿ ಸೌಹಾರ್ದತೆಯ ಕೇಂದ್ರ ಬಿಂದು.
ನಮ್ಮ, ಗ್ರಾಮ, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಕ್ರೀಡಾಕೂಟಗಳು, ಕ್ರೀಡಾ ಸ್ಪರ್ಧೆಗಳನ್ನು ವಿವಿಧ ಸಂಘಟನೆಗಳು ಆಯೋಜಿಸುತ್ತವೆ. ಪಂದ್ಯಾಕೂಟಗಳ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ ಹಲವಾರು ಹಲವಾರು ಸಂಘಟನೆಗಳು, ಯುವಕಮಂಡಲ, ಸ್ಪೋಟ್ಸ್ ಕ್ಲಬ್‌ಗಳು ನಮ್ಮ ಕಣ್ಣ ಮುಂದಿವೆ. ಪಂದ್ಯಾಕೂಟವನ್ನು ಅದ್ದೂ ರಿಯಾಗಿ ಆಯೋಜಿಸಿ ಅದರ ಉಳಿಕೆಯ ಹಣವನ್ನು ಬಡಕುಟುಂಬದ ಮನೆ ನಿರ್ಮಾಣಕ್ಕೆ, ಅಶಕ್ತರ ಅನಾರೋಗ್ಯ ಪೀಡಿತ ಕುಟುಂಬದ ಚಿಕಿತ್ಸಾ ವೆಚ್ಚಕ್ಕೆ ಸಹಕಾರ, ಬಡ ವಿದ್ಯಾರ್ಥಿಗಳ ವಿದ್ಯಾ ಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಮೂಲಕ
ಕ್ರೀಡೆ ಮಾನವೀಯ ಹಾಗೂ ಸಾಮಾಜಿಕ ಚಿಂತನೆಯಲ್ಲಿ ಹೆಜ್ಜೆ ಇಟ್ಟಿರುವುದನ್ನು ಕಾಣಬಹುದು.
ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶದ ಗದ್ದೆಗೆ, ಶಾಲಾ ಮೈದಾನಕ್ಕೆ ಸೀಮಿತಗೊಂಡು ಹಳ್ಳಿಗಾಡಿನ ಜನರಿಗೆ ಮನರಂಜನೆ ನೀಡುತ್ತಿದ್ದ ಪಕ್ಕಾ ದೇಶೀಯ ಕ್ರೀಡೆ ಕಬಡ್ಡಿ ಈ ಮಣ್ಣಿನ ಸಂಸ್ಕೃತಿಯು ಕೂಡ ಹೌದು. ಇಂದು ಕಬಡ್ಡಿ ಕೂಡ ಆಧುನಿಕ ಸ್ಪರ್ಶ ಪಡೆದು ಮ್ಯಾಟ್ ಅಂಕಣದಲ್ಲಿ ಪ್ರೋ ಮಾದರಿಯ ಐಪಿಎಲ್ ಪಂದ್ಯಾಟದ ಮೂಲಕ ದೇಶವಿದೇಶಗಳಲ್ಲಿ ಸದ್ದು ಮಾಡಿದೆ. ಈ ಐಪಿಎಲ್ ಕಬಡ್ಡಿ ಟೂರ್ನಮೆಂಟ್ ಮೂಲಕ ದೇಶದ ಅದೆಷ್ಟೋ
ಪ್ರತಿಭಾನ್ವಿತ ಕಬಡ್ಡಿ ಪಟುಗಳಿಗೆ ವೇದಿಕೆ ಲಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಯಾವುದೇ ಕ್ರೀಡಾ ಪರಿಕರಗಳ ಅವಶ್ಯಕತೆಯಿಲ್ಲದ ಈ ಆಟವು ಆಟಗಾರನ ದೈಹಿಕ, ಶಾರೀರಿಕ ಹಾಗೂ ಮನಸ್ಸನ್ನು ವೃದ್ಧಿಗೊಳಿಸುವ ಸಾಧನವೆಂದೇ ಪರಿಗಣಿತವಾಗಿದೆ. ಹಲವಾರು ವರ್ಷಗಳ ಇತಿಹಾಸವಿರುವ ಈ ಆಟದಲ್ಲಿ ಎದುರಾಳಿ ತಂಡದ ವಿರುದ್ಧ ದಾಳಿ ಮಾಡುವಾಗ ಈ ಮಣ್ಣನ್ನು ಮುಟ್ಟಿ ಭೂಮಿ ತಾಯಿಗೆ ನಮಸ್ಕರಿಸಿ ಮುಂದುವರೆಯುವ ಮೂಲಕ ಈ ಮಣ್ಣಿನೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿರುವ ಕ್ರೀಡೆ ಎನ್ನಬಹುದು. ಕ್ರೀಡಾ ಕ್ಷೇತ್ರಕ್ಕೆ ಮೀಸಲಾತಿ ಎಂಬುವುದು ಇನ್ನಷ್ಟು ವಿಸ್ತಾರಗೊಳ್ಳಬೇಕಾದ ಅವಶ್ಯಕತೆಯ ಜೊತೆಗೆ ಒಂದು ಕ್ರೀಡೆಯಲ್ಲಿ ರಾಷ್ಟ್ರಮಟ್ಟ, ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾಪಟುವಿಗೆ ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಉದ್ಯೋಗ ನೇಮಕಾತಿಯಲ್ಲಿ ಕ್ರೀಡಾ ಕೋಟಾದಲ್ಲಿ ಉದ್ಯೋಗ ಅವಕಾಶ ವನ್ನು ವಿಸ್ತಾರಗೊಳಿಸುವುದು, ಉಚಿತ ಶಿಕ್ಷಣಕ್ಕೆ ಆದ್ಯತೆ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೈಹಿಕ ಶಿಕ್ಷಕ ನೇಮಕಾತಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಕ್ರೀಡಾಳುಗಳಿಗೆ ತರಬೇತಿ ಅವಧಿಯಲ್ಲಿ ಸರಕಾರ ಗುರುತಿನ ಚೀಟಿ ನೀಡಿ ಅಂತಾರಾಜ್ಯ ಹಾಗೂ ವಿದೇಶ ಪ್ರಯಾಣ ಸಂದರ್ಭ ಉಚಿತ ರೈಲ್ವೆ, ವಿಮಾನ ಪ್ರಯಾಣ, ಆಹಾರ, ವಸತಿ, ಊಟೋಪಚಾರ, ಕ್ರೀಡಾ ಪರಿಕರಗಳನ್ನು ಒದಗಿಸುವಂತಾಗಬೇಕು.
ಕ್ರಿಕೆಟ್ ಪಂದ್ಯಾಟಗಳಿಗೆ ದೊರಕುವ ಸೌಲಭ್ಯ, ಸೌಕರ್ಯ, ಪ್ರೋತ್ಸಾಹಗಳು ದೇಹವನ್ನು ದಂಡಿಸಿ ಆಡುವ ಇನ್ನಿತರ ಆಟಗಳಿಗೆ ನಮ್ಮ ದೇಶದಲ್ಲಿ
ದೊರಕುತ್ತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಬಿಸಿಸಿಐ ಮೂಲಕ ಕ್ರಿಕೆಟ್‌ನಲ್ಲಿ ಭಾರತ ಒಂದು ಸರಣಿಯನ್ನು ಗೆದ್ದರೆ ತಲಾ ಒಬ್ಬೊಬ್ಬ ಆಟಗಾರನಿಗೆ ಸಿಗುವ ಮೊತ್ತ ಅಷ್ಟಿಷ್ಟಲ್ಲ. ಇತ್ತೀಚಿಗೆ ಟಿ-೨೦ ವಿಶ್ವಕಪ್ ದ. ಆಫ್ರಿಕಾದ ವಿರುದ್ದ ಗೆದ್ದಾಗ ಐಸಿಸಿ ೧೨೦ ಕೋಟಿಗೂ ಅಽಕ ಮೊತ್ತವನ್ನು ಭಾರತ ತಂಡಕ್ಕೆ ನೀಡಿದೆ.
ಇನ್ನು ಬಿಸಿಸಿಐ ನೀಡುವ ಮೊತ್ತ ಹಾಗೂ ಆಟಗಾರರ ರಾಜ್ಯ ಸರಕಾರ ನೀಡುವ ಮೊತ್ತ ಬೇರೆಯೇ ಇದೆ. ಕ್ರಿಕೆಟ್ ಕೂಡ ದೇಶದ ಜನರಲ್ಲಿ ರಾಷ್ಟ್ರಾಭಿ ಮಾನವನ್ನು ಮೂಡಿಸುವ ಕ್ರೀಡೆಯಾಗಿದ್ದು, ಅದು ಪಾಕಿಸ್ತಾನ ಹಾಗೂ ಭಾರತ ಹಣಾಹಣಿಯೆಂದರೆ ಭಾರತ ಪಾಕ್ ನಡುವಣ ಯುದ್ಧ ಸಂಭವಿಸಿ ದಂತೆಯೇ ಸರಿ. ನಮ್ಮ ದೇಶದ ಶತ್ರು ರಾಷ್ಟ್ರ ಪಾಕ್ ವಿರುದ್ಧ ಭಾರತ ಗೆದ್ದರೆ ಪಟಾಕಿ ಸಿಡಿಸುವ, ಸಿಹಿ ಹಂಚಿ ಸಂಭ್ರಮಿಸುವ ಕ್ರಿಕೆಟ್ ಪ್ರೇಮಿಗಳನ್ನು ಕೂಡ ಕಾಣಬಹುದು. ಪಾಕ್ ವಿರುದ್ಧ ಭಾರತ ಸೋತ ದಿನಗಳಲ್ಲಿ ಅಭಿಮಾನಿಗಳು ಆಟಗಾರರ ಮನೆಗೆ ಕಲ್ಲು ತೂರಿ ದಾಂಧಲೆ ನಡೆಸುವ ಘಟನೆಗಳು ಹಾಗೂ ಸೋಲುವ ಸಂಭವವಿರುವ ದಿನಗಳಲ್ಲಿ ಆಟಗಾರರ ಮನೆಗೆ ಪೋಲಿಸ್ ಭದ್ರತೆ ಒದಗಿಸುವ ಸನ್ನಿವೇಶಗಳು ಕೂಡ ನಿರ್ಮಾಣವಾಗುವು ದಿದೆ.
ಇನ್ನು ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಟಿ-೨೦ ಬಂದ ಬಳಿಕವಂತೂ ಕ್ರಿಕೆಟ್ ಜ್ವರ ವ್ಯಾಪಕ ಪ್ರಮಾಣದಲ್ಲಿ ದೇಶವ್ಯಾಪಿ ಹಬ್ಬಿದೆ. ವಿರಾಟ್ ಕೋಹ್ಲಿ ಪ್ರತಿನಿಧಿಸುವ ಆರ್‌ಸಿಬಿ ಬೆಂಗಳೂರು ಹಾಗೂ ಚೆನ್ನೈ ತಂಡವನ್ನು ಪ್ರತಿನಿಧಿಸುವ ಮಹೇಂದ್ರ ಸಿಂಗ್ ಧೋನಿ ನಡುವಿನ ಅಭಿಮಾನಿಗಳ ತಿಕ್ಕಾಟಗಳು
ಹೊಡೆದಾಟ ಹಂತಕ್ಕೆ ತಲುಪಿದ, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಸರೆರೆಚಾಟಕ್ಕೂ ವೇದಿಕೆ ಕಲ್ಪಿಸಿರುವುದನ್ನು ಕಂಡಿದ್ದೇವೆ. ಕ್ರೀಡೆ ದೇಶದ ಐಕ್ಯತೆ, ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಯಾವ ಮಟ್ಟದಲ್ಲಿ ಮೂಡಿಸಿದೆ ಎಂಬುವುದಕ್ಕೆ ಇತ್ತೀಚೆಗೆ ನಡೆದ ಐಪಿಎಲ್ ವಿಶ್ವಕಪ್ ಟಿ-೨೦ ಪಂದ್ಯ ದಲ್ಲಿ ಭಾರತವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪವಾಡ ರೀತಿಯಲ್ಲಿ ರಣರೋಚಕ ಜಯಗಳಿಸಿರುವಾಗಿನ ದೇಶದಲ್ಲಿನ ಸಂಭ್ರಮ ಹಾಗೂ ಈ ಹಿಂದೆ ಟಿ-೨೦ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಇದೇ ಮಾದರಿಯಲ್ಲಿ ಭಾರತ ಜಯಗಳಿಸಿದಾಗ ದೇಶದಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಿದ್ದಂತೂ ಸುಳ್ಳಲ್ಲ. ಕೇಂದ್ರದ ನರೇಂದ್ರ ಮೋದಿ ಸರಕಾರವು ವಿಜೇತ ತಂಡಗಳಿಗೆ ಭವ್ಯ ಸ್ವಾಗತ ನೀಡುವ ಮೂಲಕ ಎಲ್ಲೂ ಭಾರತದ ತಿರಂಗಾ ಧ್ವಜ,ಭಾರತ್ ಮಾತ ಕೀ ಜೈ, ವಂದೇ ಮಾತರಂ ಘೋಷಣೆ ದೇಶವ್ಯಾಪಿ ಮುಗಿಲು ಮುಟ್ಟಿತ್ತು.
ಇನ್ನು ಗ್ರಾಮೀಣ ಭಾಗಗಳಲ್ಲಿ ಆಷಾಡ ಸಂದರ್ಭಗಳಲ್ಲಿ ಅಥವಾ ಇನ್ನಿತರ ಸಮಯಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತವೆ. ರೈತಾಪಿ ವರ್ಗದ ಬೇಸಾಯ ಪದ್ಧತಿಯೊಂದಿಗೆ ನಂಟು ಹೊಂದಿರುವ ಗ್ರಾಮೀಣ ಪ್ರದೇಶದ ದೇಶೀಯ ಕ್ರೀಡೆಗಳು ಹಳ್ಳಿಗಾಡಿನ ಜನರಿಗೆ ಮನೋರಂಜನಾ ಮತ್ತು ಸಂಘಟಿತ ಜೀವನಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುತ್ತಿದೆ. ಒಟ್ಟಾರೆ ಕ್ರೀಡೆ ಎಂಬುವುದು ಸಮಾಜದ ಸಂಘಟನೆ, ಸಾಮರಸ್ಯ, ದೇಶಾಭಿ ಮಾನದ ಧ್ಯೋತಕವೆಂದರೂ ತಪ್ಪಾಗಲಾರದು.
(ಲೇಖಕರು: ಹವ್ಯಾಸಿ ಬರಹಗಾರರು)