Friday, 29th March 2024

ಬಾರತದಲ್ಲಿ ಶೇ.40ರಷ್ಟು ಆಹಾರ ತಿಪ್ಪೆಗೆ ಹೋಗುತ್ತದೆ!

ಖ್ಯಾತ ಉದ್ಯಮಿ ರತನ ಟಾಟಾ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಸಂಗವೊಂದು ನೆನಪಾಗುತ್ತಿದೆ. ಟಾಟಾ ಅವರು ಕೈಗಾರಿಕೆಯಲ್ಲಿ ಅತೀವ ಅಭಿವೃದ್ಧಿಿ ಸಾಧಿಸಿದ ಜರ್ಮನಿಯ ಹ್ಯಾಾಂಬರ್ಗ್ ನಗರಕ್ಕೆ ಹೋಗಿದ್ದರು. ಜತೆಯಲ್ಲಿ ಅವರ ಸ್ನೇಹಿತರೂ ಇದ್ದರು. ಅವರಿಬ್ಬರೂ ಅಲ್ಲಿನ ರೆಸ್ಟೋರೆಂಟ್‌ಗೆ ಊಟಕ್ಕೆೆ ಹೋದರು. ಅಲ್ಲಿ ಹಲವು ಟೇಬಲ್‌ಗಳು ಖಾಲಿಯಾಗಿದ್ದವು. ಒಂದು ಟೇಬಲ್‌ನಲ್ಲಿ ಒಂದು ಯುವ ಜೋಡಿಯಿತ್ತು. ಅವರ ಟೇಬಲ್ ಮೇಲೆ ಎರಡು ಕ್ಯಾನ್ ಬಿಯರ್ ಹಾಗೂ ಒಂದು ಪ್ಲೇಟ್ ತಿಂಡಿಯಿತ್ತು. ಅವರಿಬ್ಬರನ್ನು ದಿಟ್ಟಿಸುತ್ತಿದ್ದ ರತನ ಟಾಟಾಗೆ ಇದೇನು ಏನನ್ನೂ ಸೇವಿಸುತ್ತಿಲ್ಲವಲ್ಲ, ಏನನ್ನೂ ಆರ್ಡರ್ ಮಾಡದ ತನ್ನ ಪ್ರಿಯಕರ ಮಹಾ ಜುಗ್ಗನಿರಬಹುದು ಎಂದು ಹುಡುಗಿ ಯೋಚಿಸುತ್ತಿರಬಹುದಾ ಎಂದು ಟಾಟಾ ಅಂದುಕೊಂಡರಂತೆ.

ಈ ಜೋಡಿಯ ಸನಿಹದ ಟೇಬಲ್‌ನಲ್ಲಿ ಕೆಲವು ವಯಸ್ಸಾಾದ ಮಹಿಳೆಯರು ಕುಳಿತಿದ್ದರು. ಅವರ ಪೈಕಿ ಒಬ್ಬಳು ಒಂದೇ ಆಹಾರವನ್ನು ಆರ್ಡರ್ ಮಾಡುತ್ತಿದ್ದಳು. ನಂತರ ವೇಟರ್ ಒಂದೇ ಐಟೆಮ್‌ನ್ನು ತರುತ್ತಿದ್ದ. ಅದನ್ನು ಅವರೆಲ್ಲರೂ ಸೇವಿಸುತ್ತಿದ್ದರು. ಅದಾದ ಬಳಿಕವೇ ಅವರು ಮತ್ತೊೊಂದು ಪದಾರ್ಥಕ್ಕೆೆ ಆರ್ಡರ್ ಮಾಡುತ್ತಿದ್ದರು. ಆರ್ಡರ್ ಮಾಡಿದ ತಿಂಡಿಯನ್ನು ಎಲ್ಲರೂ ತಿಂದು ಖಾಲಿ ಮಾಡಿದ್ದನ್ನು ಖಾತ್ರಿ ಮಾಡಿಕೊಂಡ ಬಳಿಕವೇ ಎಲ್ಲರ ಸಮ್ಮತಿ ಪಡೆದು ಅವಳು ಮುಂದಿನ ಐಟೆಂ ಕೊಡುವಂತೆ ಹೇಳುತ್ತಿದ್ದಳು. ಒಂದೇ ಸಲ ನಾಲ್ಕೈದು ಪದಾರ್ಥಗಳಿಗೆ ಆರ್ಡರ್ ಮಾಡುತ್ತಿರಲಿಲ್ಲ. ಸುಮಾರು ಒಂದೂವರೆ ಗಂಟೆಗಳ ಕಾಲ ಖುಷಿಖುಷಿಯಾಗಿ ಹರಟೆ ಹೊಡೆದು, ಊಟ ಮಾಡಿದ ಅವರ್ಯಾಾರೂ ತಮ್ಮ ತಾಟಿನಲ್ಲಿ ಒಂದು ಸಣ್ಣ ತಿಂಡಿ ಅಥವಾ ಆಹಾರ ಪದಾರ್ಥವನ್ನು ಸೇವಿಸದೇ ಬಿಟ್ಟಿರಲಿಲ್ಲ. ಬ್ರೆೆಡ್‌ನ ಅಂಚನ್ನೂ ಉಳಿಸಿರಲಿಲ್ಲ. ಇದನ್ನು ರತನ ಟಾಟಾ ಕುತೂಹಲದಿಂದ ದಿಟ್ಟಿಸುತ್ತಿದ್ದರು.

ಈ ಮಧ್ಯೆೆ ಟಾಟಾ ಸ್ನೇಹಿತ ವೇಟರ್‌ನನ್ನು ಕರೆದು, ಒಂದೇ ಸಲ ಏಳು ಐಟೆಮ್‌ಗಳನ್ನು ತರುವಂತೆ ಹೇಳಿದ. ಆ ಪ್ರಕಾರ ವೇಟರ್ ಆರ್ಡರ್ ಮಾಡಿದ ಫುಡ್ ಐಟೆಮ್‌ಗಳನ್ನು ಟೇಬಲ್‌ಗೆ ತಂದಿಟ್ಟ. ಒಂದೊಂದು ಐಟೆಮ್ ಪ್ರಮಾಣ ಎಷ್ಟಿಿರಬಹುದು ಎಂಬುದು ತಿಳಿಯದೇ ಒಂದೇ ಸಲಕ್ಕೆೆ ಎಲ್ಲಾಾ ಏಳು ಐಟೆಮ್‌ಗಳನ್ನು ತರುವಂತೆ ಹೇಳಿದ್ದರಿಂದ, ಅವರಿಬ್ಬರಿಗೂ ಆರ್ಡರ್ ಮಾಡಿದ್ದರಲ್ಲಿ ಅರ್ಧದಷ್ಟನ್ನೂ ಸೇವಿಸಲು ಆಗಲಿಲ್ಲ. ಹೊಟ್ಟೆೆ ತುಂಬಿ ಹೋಗಿತ್ತು. ಬಿಲ್ ತರುವಂತೆ ಟಾಟಾ ಅವರ ಸ್ನೇಹಿತ ಹೇಳಿದ.

ಆಗ ಅಲ್ಲಿಗೆ ಬಂದ ವಯಸ್ಸಾಾದ ಮಹಿಳೆಯೊಬ್ಬಳು, ‘ಇದೇನು ಎಲ್ಲ ಆಹಾರಗಳನ್ನು ತಿನ್ನದೇ ಬಿಟ್ಟು ಎದ್ದು ಹೋಗುತ್ತಿಿದ್ದೀರಲ್ಲ? ನಿಮಗೆ ಇಷ್ಟು ಹೆಚ್ಚಾಾಗುತ್ತದೆ ಅಂತ ಅನಿಸಿದ್ದರೆ, ಕಡಿಮೆ ಆರ್ಡರ್ ಮಾಡಬೇಕಿತ್ತು. ಈ ರೀತಿ ಆಹಾರವನ್ನು ಪೋಲು ಮಾಡೋದು ಸರಿ ಅಲ್ಲ’ ಎಂದು ಏರಿದ ದನಿಯಲ್ಲಿ ಹೇಳಿದಳು.

ಅದಕ್ಕೆೆ ಟಾಟಾ ಅವರ ಸ್ನೇಹಿತ, ‘ನಾವು ಆರ್ಡರ್ ಮಾಡಿದ ಆಹಾರವನ್ನು ಖುಷಿಯಿದ್ದರೆ ತಿನ್ನುತ್ತೇವೆ ಅಥವಾ ಬಿಡ್ತೇವೆ. ಅದು ನಮ್ಮ ಖಾಸಗಿ ವಿಷಯ. ಅದನ್ನು ಕೇಳೋಕೆ ನೀವ್ಯಾಾರು? ಅಷ್ಟಕ್ಕೂ ನಾವು ಪುಕ್ಕಟೆ ತಿಂದಿಲ್ಲ. ನಮ್ಮ ಜೇಬಿನಿಂದ ಹಣ ಕೊಟ್ಟಿಿದ್ದೇವಲ್ಲ?’ ಎಂದು ಆ ಮಹಿಳೆಗೆ ಖಡಕ್ಕಾಾಗಿ ಹೇಳಿದ.

ಆಗ ಪಕ್ಕದ ಟೇಬಲ್‌ನಲ್ಲಿದ್ದ ಎಲ್ಲ ಮಹಿಳೆಯರೂ ಎದ್ದು ಬಂದರು. ಅವರೆಲ್ಲ ಟಾಟಾ ಸ್ನೇಹಿತನ ಉತ್ತರದಿಂದ ಆಕ್ರೋೋಶಭರಿತರಾಗಿದ್ದರು. ಅವರಲ್ಲೊೊಬ್ಬ ಮಹಿಳೆ ಪರ್ಸ್‌ನಿಂದ ಮೊಬೈಲ್ ತೆಗೆದು ಯಾರಿಗೋ ಕರೆ ಮಾಡಿದಳು. ಅದಾಗಿ ಕೆಲ ನಿಮಿಷಗಳಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿದರು. ಮಹಿಳೆಯರು ನಡೆದ ಘಟನೆಯನ್ನೆೆಲ್ಲ ವಿವರಿಸಿದರು. ಟಾಟಾ ಅವರ ಸ್ನೇಹಿತನನ್ನು ಕೇಳಿದರು. ಆತನೂ ಘಟನೆಯ ಬಗ್ಗೆೆ ತನ್ನ ಸಮರ್ಥನೆ ನೀಡಿದ. ಆದರೆ ಪೊಲೀಸರು ಸಮಾಧಾನವಾಗಲಿಲ್ಲ. ಕೊನೆಗೆ ಟಾಟಾ ಸ್ನೇಹಿತನಿಗೆ 50 ಯುರೋ ದಂಡ ವಿಧಿಸಿದ. ಟಾಟಾ ಹಾಗೂ ಅವರ ಸ್ನೇಹಿತ ಮರು ಮಾತಾಡದೇ ದಂಡ ತೆತ್ತರು.
ದಂಡದ ಹಣವನ್ನು ಸ್ವೀಕರಿಸಿ, ರಸೀದಿ ನೀಡುವ ಮುನ್ನ ಪೊಲೀಸ್ ನಮಗೆ ಹೇಳಿದ- ‘ನಿಮಗೆ ಬೇಕಾದ ಆಹಾರಗಳನ್ನು ಸೇವಿಸಲು ನೀವು ಸ್ವತಂತ್ರರು. ಆದರೆ ಆಹಾರಗಳನ್ನು ಬಿಸಾಡಲು ನೀವು ಯಾರು? ಆಹಾರ ದೇಶದ ಸಂಪನ್ಮೂಲ. ಅದನ್ನು ಹಾಳು ಮಾಡುವಂತಿಲ್ಲ. ಹಾಳು ಮಾಡಿದರೆ, ಪೋಲು ಮಾಡಿದರೆ ಅದು ಅಪರಾಧ. ಜಗತ್ತಿಿನಲ್ಲಿ ಕೋಟ್ಯಂತರ ಜನರಿಗೆ ಎರಡು ಹೊತ್ತಿಿನ ಊಟವಿಲ್ಲದೇ, ಹಸಿವಿನಿಂದ ಮಲಗುತ್ತಾಾರೆ. ಆದರೆ ನೀವು ಹೀಗೆ ನಿರರ್ಥಕವಾಗಿ ಪೋಲು ಮಾಡುತ್ತೀರಿ. ಹಣ ಕೊಟ್ಟರೂ ಸಂಪನ್ಮೂಲ ಸಿಗುವುದಿಲ್ಲ. ಆದ್ದರಿಂದ ನಿಮಗೆ ದಂಡ ವಿಧಿಸುತ್ತಿಿದ್ದೇವೆ. ಆಹಾರ ವೇಸ್‌ಟ್‌ ಮಾಡುವುದನ್ನು ನಾವು ಸಹಿಸುವುದಿಲ್ಲ.’

ರತನ ಟಾಟಾ ಅವರು ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತಿದ್ದರು. ಜೀವನದಲ್ಲಿ ಎಂದೆಂದೂ ಒಂದು ಅಗುಳು ಅನ್ನವನ್ನು ಪೋಲು ಮಾಡಬಾರದು ಎಂದು ಅಲ್ಲಿಯೇ ನಿರ್ಧರಿಸಿದರು. ‘ನಾವು ಬೆಳೆದ ಬೆಳೆಯನ್ನು, ನಮ್ಮ ಹಣದಲ್ಲಿ ಖರೀದಿಸಿದ ಆಹಾರವನ್ನು ನಿರರ್ಥಕಗೊಳಿಸಲು ನಮಗೆ ಹಕ್ಕಿಿಲ್ಲ. ಅದು ದೇಶದ ಸಂಪನ್ಮೂಲ’ ಎಂದು ಪೊಲೀಸ್ ಕೊಟ್ಟ ಉಪದೇಶ ತಮ್ಮ ಕಿವಿಯಲ್ಲಿ ಈಗಲೂ ಮಾರ್ದನಿಯಾಗುತ್ತಿಿದೆ ಎಂದು ಟಾಟಾ ಬರೆದುಕೊಂಡಿದ್ದರು. ಈ ಪ್ರಸಂಗವನ್ನು ಅವರು ಹಲವು ವೇದಿಕೆಗಳಿಂದ ಹೇಳಿದ್ದಾಾರೆ. ‘ಆಹಾರವನ್ನು ಪೋಲು ಮಾಡುವುದೆಂದರೆ, ರಾಷ್ಟ್ರೀಯ ಸಂಪತ್ತನ್ನು ಹಾಳು ಮಾಡಿದಂತೆ’ ಎಂದು ಅವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾಾರೆ. ಹ್ಯಾಾಂಬರ್ಗ್‌ನಲ್ಲಿ ನಡೆದ ಘಟನೆಯಿಂದ ತಾವು ಬದುಕಿನಲ್ಲಿ ಎಂದೂ ಮರೆಯದ, ಪಾಠವನ್ನೇ ಕಲಿತಿದ್ದಾಾಗಿ ಅವರು ಹೇಳಿದ್ದಾಾರೆ.

ಟಾಟಾ ಅವರ ಈ ಪ್ರಸಂಗ ಅವರ ಒಡೆತನದ ಸಂಸ್ಥೆೆಗಳಲ್ಲಿ ಪ್ರಚಾರ ಪಡೆಯಿತು. ಆಹಾರ ಪೋಲು ಮಾಡದಿರುವಂತೆ ಎಲ್ಲಾಾ ಸಿಬ್ಬಂದಿಯೂ ಜಾಗೃತವಾದರು. ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿಿ ಸರ್ವೀಸ್‌ನಲ್ಲಿರುವ ಫುಡ್‌ಕೋರ್ಟಿನಲ್ಲಿ ಒಂದು ಹೊಸ ಪ್ರಯೋಗ ಆರಂಭಿಸಿದರು. ಫುಡ್‌ಕೋರ್ಟಿನ ಕೌಂಟರ್ ಬಳಿ, ‘ ಛಿ ್ಝ್ಝ ಟ್ಠ ್ಚ್ಞ ಛಿಠಿ, ಚ್ಠಿಿಠಿ ಛಿಠಿ ್ಝ್ಝ ಟ್ಠ ಠಿಛಿ ’ ಎಂದು ದಪ್ಪಕ್ಷರಗಳಲ್ಲಿ ಬರೆದು, ಅದರ ಕೆಳಗೆ ್ಗಛಿಠಿಛ್ಟಿಿ’ ಊಟಟ ಡಿಠಿಜಛಿ ಡಿ 45 ಓಎ ಡಿಜ್ಚಿಿ ್ಚ್ಞ ಊಛಿಛಿ 180 ಛಿಟ್ಝಛಿ ಎಂಬ ಬೋರ್ಡ್ ಹಾಕಿದ್ದರು. ಪ್ರತಿದಿನವೂ ನಿನ್ನೆೆ ಬಿಸಾಡಲಾದ ಆಹಾರದ ಪ್ರಮಾಣ ಹಾಗೂ ಅದರಿಂದ ಎಷ್ಟು ಜನರಿಗೆ ಊಟ ನೀಡಬಹುದಿತ್ತು ಎಂಬ ಅಂಕಿ-ಸಂಖ್ಯೆೆಗಳನ್ನು ನೋಡಿದ ಸಿಬ್ಬಂದಿಯಲ್ಲಿ ಆಹಾರ ವೇಸ್ಟೇಜ್ ಬಗ್ಗೆೆ ತಕ್ಷಣ ಜಾಗೃತಿ ಮೂಡಿತು. ದಿನದಿಂದ ದಿನಕ್ಕೆೆ ಆಹಾರ ಪೋಲಾಗುವ ಪ್ರಮಾಣ ಕಡಿಮೆಯಾಗುತ್ತಾಾ, ಸುಮಾರು ಒಂದು ತಿಂಗಳ ಅವಧಿಯಲ್ಲಿ ಆಹಾರ ಬಿಸಾಡುವ ಪ್ರವೃತ್ತಿಿಯಲ್ಲಿ ಗಣನೀಯ ಬದಲಾವಣೆ ಕಂಡುಬಂದಿತು.

ಆಗ ಅಷ್ಟು ಆಹಾರವನ್ನು ಯಾರು ಬಿಸಾಡುತ್ತಿಿದ್ದಾಾರೆ ಎಂದು ಪತ್ತೆೆ ಹಚ್ಚಲು ಸಾಧ್ಯವಾಯಿತು. ದಿನವೂ ಸ್ವಲ್ಪ ಸ್ವಲ್ಪ ಆಹಾರ ಬಿಸಾಡುತ್ತಿಿದ್ದವರನ್ನು ಕರೆದು ಮಾತಾಡಿಸಲಾಯಿತು. ‘ಯಾಕೆ ಬಿಸಾಡುತ್ತಿಿದ್ದೀರಿ? ಬೇಕಾದಷ್ಟೇ ಆಹಾರ ಹಾಕಿಸಿಕೊಳ್ಳಬಹುದಲ್ಲ? ಆಹಾರ ಬಿಸಾಡಿದರೆ ಅದು ದೇಶದ ಸಂಪನ್ಮೂಲವನ್ನು ನಾಶ ಮಾಡಿದಂತೆ, ನಿಮ್ಮ ಹಣವನ್ನು ವ್ಯರ್ಥ ಮಾಡಿದಂತೆ. ಬೇರೆಯವರ ಅನ್ನಕ್ಕೆೆ ಕಲ್ಲು ಹಾಕಿದಂತೆ. ಯಾಕೆ ಹೀಗೆ ಮಾಡ್ತೀರಿ?’ ಎಂದು ಕೇಳಿದಾಗ ಅವರಲ್ಲೂ ಅಸಾಧಾರಣ ಪರಿವರ್ತನೆ ಕಂಡು ಬಂತು. ಕ್ರಮೇಣ ಆಹಾರ ವೇಸ್ಟೇಜ್ ನಿಂತಿತು.

ನನಗೆ ಇದೇ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ನಾನು ಅಜೆರ್‌ಬೈಜನ್‌ಗೆ ಹೋದಾಗ ಅಲ್ಲಿ ನಡೆದ ಪ್ರಸಂಗವೊಂದು ನೆನಪಿಗೆ ಬರುತ್ತಿಿದೆ. ಅಪ್ಪಟ ಸ್ಥಳೀಯ ಆಹಾರಗಳನ್ನು ಸೇವಿಸಬೇಕೆಂದು ನಾನು ಅಲ್ಲಿನ ಹೋಟೆಲ್‌ಗೆ ಹೋಗಿದ್ದೆೆ. ನನ್ನ ಜತೆ ಸ್ನೇಹಿತನಿದ್ದ. ಇಬ್ಬರೂ ಸೇರಿ ಐದು ಐಟೆಮ್‌ಗಳನ್ನು ಆರ್ಡರ್ ಮಾಡಿದೆವು. ಒಂದೊಂದು ಐಟೆಮ್‌ನಲ್ಲಿ ಆಹಾರ ಪ್ರಮಾಣ ಎಷ್ಟಿಿರುತ್ತದೆ ಎಂಬುದನ್ನು ವೇಟರ್ ಬಳಿ ಕೇಳಿ ಆರ್ಡರ್ ಮಾಡಬೇಕಿತ್ತು. ಅದೇ ನಾವು ಮಾಡಿದ ಪ್ರಮಾದ. ಅವನು ಅವೆಲ್ಲವನ್ನೂ ಟೇಬಲ್ ಮೇಲೆ ತಂದಿಟ್ಟಾಾಗ, ಜಾಸ್ತಿಿಯಾಗುತ್ತದೆ ಎಂದು ಅನಿಸಿತು. ಆದರೆ ಸ್ನೇಹಿತನ ಮುಂದೆ ಹೇಳಲಿಲ್ಲ. ಕಾರಣ ಆತ ಸೇವಿಸಬಹುದು ಎಂದು ಭಾವಿಸಿದ್ದೆೆ. ನಾವು ಆರ್ಡರ್ ಮಾಡಿದ ಆಹಾರಗಳ ಪೈಕಿ ಶೇ. ಅರವತ್ತರಷ್ಟು ಖಾಲಿ ಮಾಡಿದ ನಂತರ, ಇಬ್ಬರಿಗೂ ಜಾಸ್ತಿಿಯಾಯಿತು ಎಂದು ಅನಿಸಿತು. ಅವೆಲ್ಲ ಪೋಲಾಗುತ್ತದೆಂದು, ಪ್ಯಾಾಕ್ ಮಾಡಿಕೊಂಡು ಹೋಗೋಣ ಅಂದ್ರೆೆ ಬೆಳಗಾಗುವುದರೊಳಗೆ ಅವೆಲ್ಲ ಹಾಳಾಗುವ ಸಾಧ್ಯತೆಯಿತ್ತು. ಹೀಗಾಗಿ ಅವೆಲ್ಲವನ್ನೂ ಊಟದ ಟೇಬಲ್ ಮೇಲೆಯೇ ಬಿಡುವುದು ಅನಿವಾರ್ಯವಾಯಿತು.

ಊಟದ ವಿಷಯದಲ್ಲಿ ನಾನು ಬಹಳ ಕಟ್ಟುನಿಟ್ಟು. ನಾನು ಉಂಡ ಬಾಳೆ ಎಲೆಯ ಮೇಲೆ ಬೇರೆಯವರು ಊಟ ಮಾಡಬಹುದು, ಅಷ್ಟು ನೀಟಾಗಿ, ಕ್ಲೀನ್ ಆಗಿ ಊಟ ಮಾಡಿರುತ್ತೇನೆ. ಬೇವಿನ ಸೊಪ್ಪುು ಸಹಿತ ಯಾವುದನ್ನೂ ಬಾಳೆ ಎಲೆ ತುದಿಗೆ ಬಿಡುವುದಿಲ್ಲ. ಮಾವಿನ ವರಟೆಯನ್ನೂ ಬಿಡುವುದಿಲ್ಲ ಎಂದು ತಮಾಷೆ ಮಾಡುವುದುಂಟು. ಇತ್ತೀಚಿನವರೆಗೆ ಉಪ್ಪುು, ಉಪ್ಪಿಿನಕಾಯಿಯನ್ನೂ ಬಿಡುತ್ತಿಿರಲಿಲ್ಲ. ಇತ್ತಿಿತ್ತಲಾಗಿ ಉಪ್ಪುು ಸೇವನೆ ಒಳ್ಳೆೆಯದಲ್ಲವೆಂದು ಬಿಡುತ್ತೇನೆ. ಹೀಗಾಗಿ ಹಾಕಿಸಿಕೊಳ್ಳುವಾಗಲೇ ತೀರಾ ಕಡಿಮೆ ಹಾಕಿಸಿಕೊಳ್ಳುತ್ತೇನೆ. ಇದು ಇಂದು, ನಿನ್ನೆೆ ರೂಢಿಸಿಕೊಂಡದ್ದಲ್ಲ. ಬಾಲ್ಯದಿಂದಲೂ ಇದೇ ಅಭ್ಯಾಾಸವಾಗಿ ಹೋಗಿದೆ. ಬಾಳೆ ಎಲೆಯಲ್ಲಿ, ಪ್ಲೇಟಿನಲ್ಲಿ ಒಂದು ಅಗುಳು ಅನ್ನ ಬಿಟ್ಟರೆ ಮನೆಯಲ್ಲಿ ಬೈಯ್ಯುತ್ತಿಿದ್ದರು. ‘ಎಲ್ಲಾಾ ಪದಾರ್ಥಗಳನ್ನು ಹಾಕಿಸಿಕೊಳ್ಳಬೇಕು. ಯಾವುದನ್ನೂ ಬೇಡ ಅಂತ ಹೇಳಬಾರದು. ಆದರೆ ಯಾವುದನ್ನೂ ಬಿಡಬಾರದು. ಸಾಧ್ಯವಾದರೆ ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳಬೇಕು. ಒಂದು ವೇಳೆ ಬಡಿಸುವವರು ವರಾತ ಮಾಡಿ ಹೆಚ್ಚು ಬಡಿಸಿದರೂ, ಜಾಸ್ತಿಿಯಾಯಿತೆಂದು ಬಾಳೆಲೆಯಲ್ಲಿ ಬಿಡಬಾರದು. ಎಲ್ಲವನ್ನೂ ಸೇವಿಸಲೇಬೇಕು.

ಬೇಕಾದರೆ ರಾತ್ರಿಿ ಊಟ ಮಾಡದೇ ಉಪವಾಸ ಮಾಡಿ’ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿಿದ್ದರು. ಅಷ್ಟಾಾಗಿಯೂ ತಿನ್ನದೇ ಸ್ವಲ್ಪ ಬಿಸಾಡಿದರೂ ತಿಂದಿದ್ದೆೆಲ್ಲ ಕಕ್ಕಬೇಕು, ಆ ರೀತಿ ಬಯ್ಯುತ್ತಿಿದ್ದರು. ‘ಯಾರಿಗೆ ಹಸಿವಿನ ಮಹತ್ವ ಗೊತ್ತಿಿರುತ್ತದೋ, ಅವರಿಗೆ ಆಹಾರದ ಮಹತ್ವ ಗೊತ್ತಿಿರುತ್ತದೆ. ನಿಮ್ಮನ್ನೆೆಲ್ಲ ನಾಲ್ಕು ದಿನ ಆಹಾರ ಕೊಡದೇ ಉಪವಾಸ ಕೆಡವಬೇಕು. ಆಗ ನಿಮಗೆ ಊಟ, ಅನ್ನದ ಮಹತ್ವ ತಿಳಿಯುತ್ತದೆ’ ಎಂದು ಹಿರಿಯರು ಗದರುತ್ತಿಿದ್ದರು.

ಅನ್ನವೆಂದರೆ ದೇವರು ಎಂದು ಹೇಳಿಕೊಟ್ಟರು. ಊಟ ಮಾಡುವಾಗ ಸುಮ್ಮನೆ ಗಬಗಬ ತಿನ್ನಬಾರದು, ಊಟಕ್ಕಿಿಂತ ಮೊದಲು ಅನ್ನಪೂರ್ಣೇಶ್ವರಿಯನ್ನು ನೆನೆದು, ಮಂತ್ರ ಹೇಳಿ, ದೇವರಿಗೊಂದು ತುತ್ತು ತೆಗೆದಿಟ್ಟು ಊಟ ಸೇವಿಸಬೇಕೆಂದು ಹೇಳಿಕೊಟ್ಟಿಿದ್ದರಿಂದ, ಅನ್ನವೆಂದರೆ ಕೇವಲ ಆಹಾರವಷ್ಟೇ ಅಲ್ಲ, ಅದು ಜೀವಾಮೃತ. ಅನ್ನವೆಂದರೆ ಅನ್ನಬ್ರಹ್ಮ. ಅಂದರೆ ಆಹಾರದಲ್ಲಿ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಹೀಗಿರುವಾಗ ಅನ್ನವನ್ನು ತಿಪ್ಪೆೆಗೆ ಎಸೆಯುವುದೆಂದರೆ, ದೇವರಿಗೆ ಆ ಗತಿ ತೋರಿಸಿದಂತೆ! ಇಂದಿಗೂ ಕೆಲವುಕಡೆ ಊಟ ಮಾಡುವ ಮುನ್ನ ಗೋವಿಗೆ ಅನ್ನ ತೆಗೆದಿಟ್ಟು(ಗೋಗ್ರಾಾಸ) ಅನಂತರ ಊಟ ಮಾಡುವ ಸಂಪ್ರದಾಯವಿದೆ. ಕಾಲವಾದ ಅಪ್ಪ, ಅಜ್ಜ, ಮುತ್ತಜ್ಜರನ್ನು ನೆನೆದು ಊಟ ಮಾಡುವ ಪದ್ಧತಿಯಿದೆ. ಊಟ ಮಾಡುವ ಮೊದಲು ಸಕಲ ಜೀವಾತ್ಮರನ್ನು ನೆನೆದು, ಪ್ರಾಾಣಿ-ಪಕ್ಷಿಿಗಳಿಗೆ ಮೂರುತುತ್ತು ತೆಗೆದಿಟ್ಟು ಆಹಾರ ಸೇವಿಸುವ ಕ್ರಮವಿದೆ. ಅನ್ನವೆಂದರೆ ಜೀವಾತ್ಮ ಹಾಗೂ ಜಿಹ್ವಾಾತ್ಮ! ಅನ್ನವೆಂದರೆ ಆಹಾರ ಎಂದರ್ಥ. ಯಾವುದೇ ಆಹಾರ ಸೇವನೆಗೆ ಮುಂಚೆ ಇಷ್ಟೆೆಲ್ಲ ಕೈಂಕರ್ಯಗಳನ್ನು ಮಾಡುವ ಪರಿಪಾಠ ಇಂದಿಗೂ ಚಾಲ್ತಿಿಯಲ್ಲಿದೆ.

ಸಕಲ ಜೀವಿಗಳಿಗೂ ಜೀವಾತ್ಮವೇ ಆಗಿರುವ ಆಹಾರವನ್ನು ತಿಪ್ಪೆೆಗೆ ಎಸೆಯಲು ಮನಸ್ಸಾಾದರೂ ಹೇಗೆ ಬರುತ್ತದೆ? ಹೀಗಾಗಿ ನಾನು ಮಾಡುವಾಗ, ನನ್ನ ಊಟದ ವೈಖರಿ ಬಲ್ಲ ಆಪ್ತ ಸ್ನೇಹಿತರು, ‘ಊಟದ ಕೊನೆಯಲ್ಲಿ ಬಾಳೆಲೆಯನ್ನು ಬಿಡಬಹುದು’ ಎಂದು ವ್ಯಂಗ್ಯವಾಡುವುದುಂಟು. ಅಂದರೆ ನಾನು ಅಷ್ಟು ‘ಸ್ವಚ್ಛ’ವಾಗಿ ಊಟ ಮಾಡುತ್ತೇನೆ. ಮನೆಯಲ್ಲಿ ಯಾರಾದರೂ ಪ್ಲೇಟಿನಲ್ಲಿ ಆಹಾರ ಬಿಟ್ಟರೆ ಪಿತ್ತ ನೆತ್ತಿಿಗೇರುತ್ತದೆ. ನನಗೆ – ನನ್ನ ಮಗನಿಗೆ ವರ್ಷಕ್ಕೆೆ ಮೂರ್ನಾಲ್ಕು ಬಾರಿ ಈ ವಿಷಯವಾಗಿ ಕಾಳಗವಾಗುವುದುಂಟು. ಈ ವಿಷಯದಲ್ಲಿ ನಾನು ಜಗಳಗಂಟನೇ. ಯಾರೇ ತಾಟಿನಲ್ಲಿ ಅನ್ನಬಿಟ್ಟರೂ ಸಂಕಟವಾಗುತ್ತದೆ. ಹೋಗಿ ಚೆನ್ನಾಾಗಿ ತದುಕಿಬಿಡಬೇಕು ಅನ್ನುವಷ್ಟು ಸಿಟ್ಟು ಬರುತ್ತದೆ.

ಆದರೆ ಅಂದು ಅಜೆರ್‌ಬೈಜನ್‌ನಲ್ಲಿ ಆರ್ಡರ್ ಮಾಡಿದ ಆಹಾರವನ್ನೆೆಲ್ಲ ಊಟ ಮಾಡಲು ಸಾಧ್ಯವಾಗದೇ, ನನ್ನ ಬಗ್ಗೆೆ ನನಗೇ ವಿಪರೀತ ಬೇಸರವಾಯಿತು. ಎಂದೂ ಅಷ್ಟೊೊಂದು ಆಹಾರವನ್ನು ಸೇವಿಸದೇ ಬಿಟ್ಟವನಲ್ಲ.

ವೇಟರ್ ಬಿಲ್ ತಂದು, ಟೇಬಲ್ ಮೇಲಿಟ್ಟ. ಮೆನು ನೋಡಿ ಫುಡ್ ಆರ್ಡರ್ ಮಾಡುವಾಗ, ಬಿಲ್ ಎಷ್ಟಾಾಗಬಹುದು ಎಂಬ ಅಂದಾಜಿತ್ತು. ಅದಕ್ಕಿಿಂತ ಸುಮಾರು ಒಂದು ಸಾವಿರ ರುಪಾಯಿ (ನಮ್ಮ ಕರೆನ್ಸಿಿಯಲ್ಲಿ ಪರಿವರ್ತಿಸಿದಾಗ) ಹೆಚ್ಚು ಬಿಲ್‌ನಲ್ಲಿ ಸೇರ್ಪಡೆಯಾಗಿದೆಯೆಂದು ಅನಿಸಿತು. ವೇಟರ್‌ನನ್ನು ಕರೆದು ಜಾಸ್ತಿಿ ಬಿಲ್ ನೀಡಿದ್ದಕ್ಕೆೆ ಕಾರಣ ಕೇಳಿದೆ. ಬಿಲ್ ಸ್ಥಳೀಯ ಭಾಷೆಯಲ್ಲಿದ್ದುದರಿಂದ ಒಂದು ಸಾವಿರ ರುಪಾಯಿಯನ್ನು ಹೆಚ್ಚುವರಿಯಾಗಿ ಯಾಕೆ ಸೇರಿಸಿದ್ದಾಾನೆಂಬುದು ತಿಳಿದಿರಲಿಲ್ಲ. ಅದಕ್ಕೆೆ ಆತ ಹೇಳಿದ ಉತ್ತರ ಕೇಳಿ, ಒಂದು ಕ್ಷಣ ಏನು ಹೇಳಬೇಕು, ಯಾವ ರೀತಿ ಪ್ರತಿಕ್ರಿಿಯಿಸಬೇಕು ಎಂಬುದೇ ತಿಳಿಯಲಿಲ್ಲ. ‘ಫೈಡ್’ ಎಂದು ಕೆನ್ನೆೆಗೆ ಬಾರಿಸಿದಂತಾಯಿತು. ಅಷ್ಟೇ ಅಲ್ಲ, ಮಾಡಿದ ತಪ್ಪಿಿಗೆ ಪ್ರಾಾಯಶ್ಚಿಿತವಾದ ಸಮಾಧಾನವೂ ಆಯಿತು.

ವೇಟರ್ ಹೇಳಿದ- ‘ನೋಡಿ, ನಮ್ಮ ಹೋಟೆಲ್‌ನಲ್ಲಿ ಒಂದು ನಿಯಮವಿದೆ. ಅದೇನೆಂದರೆ, ಗ್ರಾಾಹಕರು ನಮ್ಮಲ್ಲಿನ ಆಹಾರ ಸರಿಯಾಗಿಲ್ಲವೆಂದು ದೂರಿದರೆ, ಅವರಿಗೆ ಮತ್ತೊೊಮ್ಮೆೆ ಅದೇ ಆಹಾರ ಮಾಡಿಕೊಡುತ್ತೇವೆ ಅಥವಾ ಹಣ ವಾಪಸ್ ಕೊಡುತ್ತೇವೆ. ಆದರೆ ಯಾವ ಕಾರಣಕ್ಕೂ ಆಹಾರ ಪೋಲಾಗುವುದನ್ನು ಸಹಿಸುವುದಿಲ್ಲ. ಒಂದು ಪ್ರಮಾಣಕ್ಕಿಿಂತ ಹೆಚ್ಚು ಆಹಾರವನ್ನು ಬಿಸಾಡಿದರೆ, ದಂಡ ವಿಧಿಸುತ್ತೇವೆ. ನಮ್ಮ ದೇಶದಲ್ಲಿ ಭೂಮಿಯಲ್ಲಿ ಪುಕ್ಕಟೆಯಾಗಿ ಪೆಟ್ರೋೋಲ್ ಹಾಗೂ ಅನಿಲ ಸಿಗುತ್ತದೆ. ಆದರೆ ಭತ್ತವನ್ನು ನಾವೇ ಬೆಳೆಯಬೇಕು. ಆರ್ಡರ್ ಮಾಡಿದ ಆಹಾರಗಳಿಗೆ ನೀವು ಹಣ ಕೊಡಬಹುದು. ಆದರೆ ವೇಸ್‌ಟ್‌ ಆದ ಆಹಾರಕ್ಕೆೆ ಬೆಲೆ ಕಟ್ಟಲಾಗುವುದಿಲ್ಲ. ಹೀಗಾಗಿ ನಮ್ಮ ಪಾಲಿಸಿ ಪ್ರಕಾರ, ನಾವು ದಂಡ ವಿಧಿಸಿದ್ದೇವೆ, ತಪ್ಪಾಾಗಿ ಭಾವಿಸಬೇಡಿ, ಕ್ಷಮಿಸಿ.’

ನನಗೆ ದಂಡತೆತ್ತಿ ಬಂದಿದ್ದಕ್ಕಾಗಿ ಸಮಾಧಾನವಾಯಿತು.
‘ಈ ಹಣವನ್ನು ನಾವು ಬಳಸುವುದಿಲ್ಲ. ಇದನ್ನು ಸರಕಾರಕ್ಕೆೆ ಕಳಿಸಿಕೊಡುತ್ತೇವೆ’ ಎಂದು ವೇಟರ್ ವಿನಮ್ರವಾಗಿ ಹೇಳಿದ. ನನಗೆ ಅಲ್ಲಿನ ವ್ಯವಸ್ಥೆೆ ಕಂಡು ಖುಷಿಯಾಯಿತು. ನಮ್ಮ ದೇಶದಲ್ಲೂ ಇಂಥ ವ್ಯವಸ್ಥೆೆಯನ್ನು ಜಾರಿಗೆ ತಂದರೆ, ಎಷ್ಟು ಒಳ್ಳೆೆಯದಿತ್ತಲ್ಲ, ಪ್ರತಿದಿನ ನೂರಾರು ಕೋಟಿರುಪಾಯಿ ಪೋಲಾಗುವುದಾದರೂ ತಪ್ಪುುತ್ತಿಿತ್ತು ಎಂದೆನಿಸಿತು. ಅಜೆರ್‌ಬೈಜನ್‌ನಲ್ಲಿ ಮೂರು-ನಾಲ್ಕು ಸಂದರ್ಭಗಳಲ್ಲಿ ಬ್ರೆೆಡ್ ಅಥವಾ ಇನ್ನಿಿತರ ಆಹಾರ ಪದಾರ್ಥಗಳು ಕೈತಪ್ಪಿಿ ಕೆಳಗೆ ಬಿದ್ದರೆ, ಜನ ಅದನ್ನು ಕಣ್ಣಿಿಗೊತ್ತಿಿಕೊಂಡು ತಿಪ್ಪೆೆಗೆ ಎಸೆಯುವುದನ್ನು ನೋಡಿದ್ದೇನೆ. ತಾವು ಯಾವುದೋ ಪ್ರಮಾದ ಮಾಡಿದ್ದೇವೆಂಬ ಅಪರಾಧಿ ಭಾವನೆ.

ನನಗೆ ಆಗ ನೆನಪಾಗಿದ್ದು ಸುಮಾರು ಆರೇಳು ವರ್ಷಗಳ ಹಿಂದೆ, ಬೆಂಗಳೂರಿನ ಪತ್ರಿಿಕೆಯೊಂದರಲ್ಲಿ ಪ್ರಕಟವಾದ ವರದಿ. ಬೆಂಗಳೂರು ನಗರವೊಂದರಲ್ಲೇ ಪ್ರತಿವರ್ಷ ಮದುವೆ ಛತ್ರಗಳಲ್ಲಿ ಜನ ಅರ್ಧ ಸೇವಿಸಿ ಬಿಸಾಡುವ ಆಹಾರದ ವೆಚ್ಚ 400 ಕೋಟಿ ರುಪಾಯಿಗೂ ಅಧಿಕ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಅದನ್ನು ಓದಿದರೆ ಎಂಥವರಿಗಾದರೂ ಅಜೀರ್ಣವಾಗಬೇಕು! ಆ ಪ್ರಮಾಣದಲ್ಲಿ ನಮ್ಮ ಜನ ಫುಡ್ ವೇಸ್‌ಟ್‌ ಮಾಡುತ್ತಾಾರೆ. ಮದುವೆ, ಮುಂಜಿ, ಗೃಹಪ್ರವೇಶ ಹಾಗೂ ಇನ್ನಿಿತರ ಕಾರ್ಯಕ್ರಮಗಳಲ್ಲಿ ಜೇಬಿನಿಂದ ಹಣ ಖರ್ಚು ಮಾಡಿ ಊಟ ಮಾಡುವುದಿಲ್ಲವಲ್ಲ. ಹೀಗಾಗಿ ಬೇಕಾಬಿಟ್ಟಿಿ ಆಹಾರವನ್ನು ಪೋಲು ಮಾಡುತ್ತಾಾರೆ. ಮೂರ್ನಾಲ್ಕು ರೀತಿಯ ದೋಸೆ ಐಟೆಮ್‌ಗಳಿದ್ದರೆ, ಅರ್ಧ ದೋಸೆ ತಿಂದು ಬಿಸಾಡಿ, ಮತ್ತೊೊಂದು ದೋಸೆ ಹಾಕಿಸಿಕೊಂಡು, ಅದನ್ನೂ ಎರಡು ತುತ್ತು ತಿಂದು, ಮೂರನೇ ದೋಸೆಯನ್ನೂ ಅರ್ಧ ತಿಂದು ಬಿಸಾಡುತ್ತಾಾರೆ. ಊಟಕ್ಕೆೆ ಕುಳಿತವರೂ ಎಲ್ಲಾಾ ಐಟೆಮ್‌ಗಳನ್ನು ಹಾಕಿಸಿಕೊಂಡು ಸ್ವಲ್ಪ ಸ್ವಲ್ಪ ರುಚಿ ನೋಡಿ, ಬಾಳೆ ತುಂಬಾ ಆಹಾರ ಬಿಸಾಡಿ ಹೋಗುತ್ತಾಾರೆ. ಬಾಳೆಲೆಯಲ್ಲಿ ನನ್ನಂತೆ ಊಟ ಮಾಡಿ ಎದ್ದು ಹೋಗುವವರು ನೂರರಲ್ಲಿ ಹತ್ತು ಮಂದಿ ಸಿಗಬಹುದು. ಅದೇ ಇವರು ಹೋಟೆಲ್‌ಗೆ ಹೋದಾಗ ತಮ್ಮ ಹಣದಿಂದ ಆಹಾರ ಆರ್ಡರ್ ಮಾಡಿ ಎರಡು ತುತ್ತು ತಿಂದು ಬೇಕಾಬಿಟ್ಟಿಿ ಆಹಾರ ಪೋಲು ಮಾಡುವುದಿಲ್ಲ.

ಕೆಲವರಂತೂ ಒತ್ತಾಾಯ ಮಾಡಿ ಬಡಿಸುವಾಗ, ‘ಎಷ್ಟು ಬೇಕೋ ಅಷ್ಟು ತಿನ್ನಿಿ, ಆದರೆ ಎಲ್ಲವನ್ನೂ ರುಚಿ ನೋಡಿ, ಅರ್ಧ ತಿಂದು ಬಿಸಾಡಿದರೂ ಪರವಾಗಿಲ್ಲ’ ಎಂದು ಹೇಳುವುದನ್ನು ಕೇಳಿರಬಹುದು. ಇದೊಂಥರ ಒಣ ಶ್ರೀಮಂತಿಕೆಯ ಪ್ರದರ್ಶನ ಚಪಲ!

ಭಾರತದಲ್ಲಿ ಎಷ್ಟು ಫುಡ್ ವೇಸ್‌ಟ್‌ ಆಗುತ್ತಿಿದೆ ಎಂಬುದನ್ನು ವಿಶ್ವಸಂಸ್ಥೆೆ ಸಮೀಕ್ಷೆೆ ಮಾಡಿದೆ. ಅದನ್ನು ಓದುವಾಗ ಆಹಾರವನ್ನು ಬಾಯಿಗಿಟ್ಟುಕೊಂಡರೆ ಎಂಥವರಿಗಾದರೂ‘ವ್ಯಾಾಕ್’ ಎಂದು ಹೊರಬರುತ್ತದೆ. ಭಾರತದಲ್ಲಿ ಬೆಳೆಯುವ, ತಯಾರಿಸುವ, ಉತ್ಪಾಾದಿಸುವ ಆಹಾರಗಳಲ್ಲಿ ಶೇ.40ರಷ್ಟು ಆಹಾರ ತಿಪ್ಪೆೆಗುಂಡಿಗೆ ಹೋಗುತ್ತದೆ!! ಪ್ರತಿ ವರ್ಷ 21 ದಶಲಕ್ಷ ಟನ್ ಗೋದಿ ಉತ್ಪನ್ನಗಳು ಪೋಲಾಗುತ್ತವೆ.

ಜನರ ಹೊಟ್ಟೆೆಗೆ ಸೇರಬೇಕಾದ ಆಹಾರಪದಾರ್ಥಗಳು ನೇರವಾಗಿ ತಿಪ್ಪೆೆಗೆ ಹೋಗುತ್ತವೆ. ವರ್ಷವಿಡೀ ಬೆವರು ಸುರಿಸಿ ದುಡಿದ ರೈತನ ಉತ್ಪನ್ನಗಳು ಹಸಿದ ಹೊಟ್ಟೆೆ ಸೇರುವ ಬದಲು, ಈ ರೀತಿ ಪೋಲಾಗುವುದು ನಿಜಕ್ಕೂ ದುರ್ದೈವವೇ ಸರಿ. ಒಂದೆಡೆ ಕೋಟ್ಯಂತರ ಜನರಿಗೆ ಎರಡು ಹೊತ್ತಿಿನ ಊಟಕ್ಕೆೆ ಗತಿಯಿಲ್ಲ, ಇನ್ನೊೊಂದೆಡೆ ಜನ ತಿಂದು, ತೇಗಿ ಅದಕ್ಕಿಿಂತ ಹತ್ತುಪಟ್ಟು ಹೆಚ್ಚು ಆಹಾರವನ್ನು ತಿಪ್ಪೆೆಗೆ ಎಸೆಯುತ್ತಾಾರೆ. ಇದೆಂಥ ವೈರುಧ್ಯ?! ನಮ್ಮ ದೇಶದಲ್ಲಿ ವ್ಯರ್ಥವಾಗುವ ಆಹಾರವನ್ನು ಹಸಿದವರಿಗೆ ಕೊಟ್ಟಿಿದ್ದೇ ಆದರೆ, ದೇಶದಲ್ಲಿ ಹಸಿವಿನಿಂದ ಬಳಲುವವರೇ ಇರುವುದಿಲ್ಲ. ಪೌಷ್ಟಿಿಕಾಂಶ ಕೊರತೆಯಿಂದ ನರಳುವವರೂ ಇರುವುದಿಲ್ಲ. ಭಾರತದಲ್ಲಿ ಪ್ರತಿದಿನ ಬಿಸಾಡುವ ಆಹಾರ ಪದಾರ್ಥಗಳಿಂದ ಫ್ರಾಾನ್‌ಸ್‌, ಜರ್ಮನಿ ದೇಶಗಳ ಜನರ ಹೊಟ್ಟೆೆ ತುಂಬಿಸಬಹುದು ಅಂದ್ರೆೆ ನಾವು ಅದೆಷ್ಟು ಪ್ರಮಾಣದಲ್ಲಿ ಆಹಾರ ಪೋಲು ಮಾಡುತ್ತಿಿದ್ದೇವೆಂಬುದನ್ನು ಊಹಿಸಬಹುದು. ಕೆಲವರಿಗೆ ಒಂದು ಹೊತ್ತು ಉಪವಾಸವಿರಲು ಆಗುವುದಿಲ್ಲ. ಆದರೆ ಇಬ್ಬರ ಊಟಕ್ಕೆೆ ಸಾಕಾಗುವಷ್ಟು ಆಹಾರವನ್ನು ಊಟ ಮಾಡದೇ ಎಸೆಯುವಾಗ ಏನೂ ಅನಿಸುವುದಿಲ್ಲ. ಪ್ಲೇಟಿನಲ್ಲಿ ಆಹಾರ ಉಳಿಸಿ ಏಳುವುದು, ಪೂರ್ತಿ ಆಹಾರ ಸೇವಿಸದಿರುವುದು ಸಹ ಫ್ಯಾಾಶನ್ ಅಥವಾ ಶಿಷ್ಟಾಾಚಾರ ಎಂದು ಭಾವಿಸಿದವರಿಗೆ ಏನು ಹೇಳಬೇಕೋ ಗೊತ್ತಾಾಗುತ್ತಿಿಲ್ಲ.

ಬಾಯಲ್ಲಿ ಇಟ್ಟುಕೊಳ್ಳಬೇಕಾದುದನ್ನು ತಿಪ್ಪೆೆಗೆ ಎಸೆಯುವವರ ಪ್ಲೇಟಿಗೆ ಕಲ್ಲು ಬೀಳ! ಹಾಗಂತ ಹೇಳಿದರೆ ಬೇಸರಪಟ್ಟುಕೊಳ್ಳಬೇಕಿಲ್ಲ. ಕಾರಣ ಇವರು ಬೇರೆಯವರ ಅನ್ನ ಕಿತ್ತುಕೊಳ್ಳುವವರು.

Leave a Reply

Your email address will not be published. Required fields are marked *

error: Content is protected !!