Thursday, 12th December 2024

‌A K Khandelwal Column: ಹಿಂದೆಂದಿಗಿಂತಲೂ ಸುರಕ್ಷಿತ ಭಾರತೀಯ ರೈಲ್ವೆ

ಸಾಧನಾ ಪಥ

ಎ.ಕೆ.ಖಂಡೇಲ್ವಾಲ್

ಭಾರತೀಯ ರೈಲ್ವೆಗೆ ಪ್ರಯಾಣಿಕರ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ. 2023-24ರಲ್ಲಿ, ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಲ್ಲಿ 1 ಲಕ್ಷ ಕೋಟಿ ರು.ಗಳಿಗಿಂತ ಹೆಚ್ಚಿನ ಹೂಡಿಕೆಯಾಗಿರುವುದು ಇದನ್ನು ಒತ್ತಿ ಹೇಳುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದಕ್ಕಾಗಿ ಇನ್ನೂ ಹೆಚ್ಚು ಮೊತ್ತವನ್ನು ವಿನಿಯೋಗಿಸುವ ಯೋಜನೆಗಳಿವೆ.

ಭಾರತೀಯ ರೈಲುಗಳಲ್ಲಿ ಪ್ರಯಾಣಿಕರು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತರಾಗಿದ್ದಾರೆ. ಕಳೆದ ದಶಕದಲ್ಲಿ ಉತ್ತಮವಾಗಿ ಯೋಜಿಸಿ ಜಾರಿಗೆ ತಂದ ಉಪಕ್ರಮಗಳೇ ಇದಕ್ಕೆ ಕಾರಣವೆನ್ನಬೇಕು. ಏಕೆಂದರೆ ಅವು ಗಮನಾರ್ಹ ಫಲಿತಾಂಶಗಳನ್ನು ನೀಡಿವೆ. ವಾರ್ಷಿಕವಾಗಿ 1 ಲಕ್ಷ ಕೋಟಿ ಪ್ಯಾಸೆಂಜರ್ ಕಿಲೋಮೀಟರ್ (ಪಿಕೆಎಂ) ಮತ್ತು ಸುಮಾರು 685 ಕೋಟಿ ಪ್ರಯಾಣಿಕರನ್ನು ದಾಖಲಿಸುವ ಭಾರತಕ್ಕಿಂತ ಬೇರಾವುದೇ ದೇಶವೂ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನ ರೈಲುಗಳ ಮೂಲಕ ಸಾಗಿಸುವುದಿಲ್ಲ ಹೆಚ್ಚು ವ್ಯಾಪಕವಾದ ರೈಲುಜಾಲ ಮತ್ತು ಹೋಲಿಸಬಹುದಾದ ಜನಸಂಖ್ಯೆಯ ಗಾತ್ರದ ಹೊರತಾಗಿಯೂ, ಸರಿಸುಮಾರು ಇದರ ಅರ್ಧದಷ್ಟು ಪ್ರಯಾಣಿಕರನ್ನು (ವಾರ್ಷಿಕವಾಗಿ ಸುಮಾರು 300 ಕೋಟಿ) ಸಾಗಿಸುವ ನೆರೆಯ ಚೀನಾ ಕೂಡ ನಮ್ಮ ಈ ಸಾಧನೆಗೆ ಸಾಟಿಯಿಲ್ಲ.

2000-01ರ ವರ್ಷದಲ್ಲಿ 473ರಷ್ಟಿದ್ದ ರೈಲು ಅಪಘಾತಗಳ ಸಂಖ್ಯೆ 2023-24ರಲ್ಲಿ ಕೇವಲ 40ಕ್ಕೆ ಇಳಿದಿದೆ. ಇದು ಸುರಕ್ಷತೆಯಲ್ಲಾದ ಗಮನಾರ್ಹ ಬದಲಾವಣೆಗೆ ಸಾಕ್ಷಿ. ಹಳಿಗಳನ್ನು ಸುಧಾರಿಸಲು,ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲು, ಸೇತುವೆಗಳ ಆರೋಗ್ಯವನ್ನು ನಿಯತವಾಗಿ ಮೇಲ್ವಿಚಾರಣೆ ಮಾಡಲು ಕೈಗೊಂಡ ಕ್ರಮಗಳಿಂದಾಗಿ ಮತ್ತು ನಿಲ್ದಾಣಗಳನ್ನು ಡಿಜಿಟಲೀಕರಣಗೊಳಿಸುವ ಕೇಂದ್ರೀಕೃತ ಪ್ರಯತ್ನಗಳ ಮೂಲಕ ಈ ಪ್ರಗತಿ ಸಾಧಿಸಲಾಗಿದೆ.

ಪ್ರಯಾಣಿಕರ ಸಂಖ್ಯೆ ಮತ್ತು ಒಳಗೊಂಡಿರುವ ಟ್ರ್ಯಾಕ್‌ನ (ರೈಲುಮಾರ್ಗದ) ಉದ್ದವನ್ನು ಪರಿಗಣಿಸಿದಾಗ ಈ ಸಾಧನೆಗಳು ಇನ್ನಷ್ಟು ಉಜ್ವಲ ವಾಗಿ ಕಾಣುತ್ತವೆ. 70000 ರೂಟ್ ಕಿಲೋಮೀಟರ್ (ಆರ್‌ಕೆಎಂ) ಉದ್ದದ ಜಾಲದಲ್ಲಿ ದಿನಕ್ಕೆ ಸರಾಸರಿ 2 ಕೋಟಿಗೂ ಹೆಚ್ಚು ಜನರು
ಪ್ರಯಾಣಿಸುತ್ತಾರೆ. ಪೀಕ್ ಸೀಸನ್‌ನಲ್ಲಿ ಈ ಸಂಖ್ಯೆ ದಿನಕ್ಕೆ 3 ಕೋಟಿಯನ್ನು ತಲುಪುತ್ತದೆ. ಇದು ಮತ್ತೊಂದು ವಿಶ್ವದಾಖಲೆಯನ್ನು ಸೃಷ್ಟಿಸುತ್ತದೆ!
ಇದರರ್ಥ, ಭಾರತವು ಪ್ರತಿದಿನ ತನ್ನ ಜನಸಂಖ್ಯೆಯ ಸುಮಾರು ಶೇ.2ರಷ್ಟು ಜನರನ್ನು ರೈಲುಮಾರ್ಗದಲ್ಲಿ ಸುರಕ್ಷಿತವಾಗಿ ಸಾಗಿಸುತ್ತದೆ.

ಭಾರತಕ್ಕೆ ಹೋಲಿಸಿದಾಗ ಇದು ಚೀನಾದಲ್ಲಿ ಕೇವಲ ಶೇ.0.58ರಷ್ಟು ಮತ್ತು ಅಮೆರಿಕದಲ್ಲಿ ಶೇ.0.09ರಷ್ಟು ಇದೆ ಎಂಬುದು ಗಮನಾರ್ಹ.
ಭಾರತೀಯ ರೈಲ್ವೆಗೆ ಪ್ರಯಾಣಿಕರ ಸುರಕ್ಷತೆ ಯು ಮೊದಲ ಆದ್ಯತೆಯಾಗಿದೆ. 2023-24ರಲ್ಲಿ, ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಲ್ಲಿ 1 ಲಕ್ಷಕೋಟಿ ರು.ಗಳಿಗಿಂತ ಹೆಚ್ಚಿನ ಹೂಡಿಕೆಯಾಗಿರುವುದು ಇದನ್ನು ಒತ್ತಿ ಹೇಳುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದಕ್ಕಾಗಿ ಇನ್ನೂ ಹೆಚ್ಚು ಮೊತ್ತವನ್ನು ವಿನಿಯೋಗಿಸುವ ಯೋಜನೆಗಳಿವೆ. ಇದರರ್ಥ, ರೈಲುಗಳು, ಸೇತುವೆ ಗಳು, ಹಳಿಗಳು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳ ಸುಧಾರಿತ ನಿರ್ವಹಣೆ, ಜತೆಗೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣದ ಮೂಲಕ ಹಳಿಗಳ ಬಳಿ ಸುಧಾರಿತ ರಸ್ತೆ ಸುರಕ್ಷತೆಯನ್ನು ಒದಗಿಸಲಾಗುತ್ತದೆ.

ರೈಲ್ವೆ ಸುರಕ್ಷತಾ ಕಾರ್ಯ ಕ್ಷಮತೆಯ ಸೂಚ್ಯಂಕ ವಾದ ಪ್ರತಿ ಮಿಲಿಯನ್ ರೈಲು ಕಿಲೋಮೀಟರ್‌ಗೆ (ಎಂಪಿಎಂಟಿಕೆ) ಅಪಘಾತದ ಸಂಖ್ಯೆ 2000-01 ರಲ್ಲಿ ೦.೬೫ರಿಂದ ೨೦೨೩-೨೪ರಲ್ಲಿ ೦.೦೩ಕ್ಕೆ ಇಳಿದಿದೆ. ಆಧುನಿಕ, ಅತ್ಯಾಧುನಿಕ ಟ್ರ್ಯಾಕ್ ನಿರ್ವಹಣೆ ಮತ್ತು ನವೀಕೃತ ಯಂತ್ರಗಳನ್ನು ಬಳಸಿಕೊಂಡು ವಽತ ಟ್ರ್ಯಾಕ್ ನಿರ್ವಹಣೆ, ಸುಧಾರಿತ ಟ್ರ್ಯಾಕ್ ದೋಷ ಪತ್ತೆ ಮತ್ತು ಮಾನವ ದೋಷಗಳನ್ನು ಕಡಿಮೆ
ಮಾಡಲು ಸುಧಾರಿತ ತಂತ್ರಜ್ಞಾನ ಸೇರಿದಂತೆ ಹಲವಾರು ಹೆಚ್ಚುವರಿ ಕ್ರಮಗಳು ಇದಕ್ಕೆ ಕಾರಣವಾಗಿವೆ. ಹಳಿಗಳ ನಿರ್ವಹಣೆಯನ್ನು
ಸುಧಾರಿಸಲು ಭಾರತೀಯ ರೈಲ್ವೆ ಆಧುನಿಕ ಟ್ರ್ಯಾಕ್ ನಿರ್ವಹಣಾ ಯಂತ್ರಗಳ ನಿಯೋಜನೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

೨೦೧೩-೧೪ರವರೆಗೆ ಬಳಕೆಯಲ್ಲಿದ್ದ ಇಂಥ ಕೇವಲ ೭೦೦ರಷ್ಟು ಯಂತ್ರಗಳಿಗೆ ಹೋಲಿಸಿದರೆ ಈಗ ಆ ಸಂಖ್ಯೆ ೧೬೬೭ಕ್ಕೆ ಹೆಚ್ಚಳಗೊಂಡಿದೆ. ಹೆಚ್ಚುವರಿಯಾಗಿ, ಆಸ್ತಿ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಲು ಇಡೀ ರೈಲ್ವೆ ಜಾಲದಾದ್ಯಂತ ‘ರೈಲ್ ಗ್ರೈಂಡಿಂಗ್’ ಅನ್ನು ಜಾರಿಗೆ ತರಲಾಗಿದೆ. ಇದಲ್ಲದೆ, ದುಷ್ಕರ್ಮಿಗಳ ಚಟುವಟಿಕೆಯನ್ನು ತಡೆಯಲು, ಅಂದರೆ, ರೈಲು ಕಾರ್ಯಾಚರಣೆಗಳಿಗೆ ಗಂಭೀರ ಸುರಕ್ಷತಾ ಅಪಾಯಗಳನ್ನು ಉಂಟುಮಾಡುವ ವಿಧ್ವಂಸಕತೆ, ಹಳಿಗಳ ತಿರುಚುವಿಕೆ ಮತ್ತು ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇರಿಸುವಿಕೆ ಮುಂತಾದ ಸಮಸ್ಯೆ ಗಳನ್ನು ಪರಿಹರಿಸಲು ಟ್ರ್ಯಾಕ್ ಗಸ್ತನ್ನು ನಿರಂತರ ವಾಗಿ ಕೈಗೊಳ್ಳಲಾಗುತ್ತದೆ. ಈ ಫಲಿತಾಂಶಗಳನ್ನು ಕಾಪಾಡಿಕೊಂಡು ಬರಲು ಮತ್ತು ಸುಧಾರಿಸಲು ತಾಂತ್ರಿಕ ಮಧ್ಯಸ್ಥಿಕೆಗಳು ಹಾಗೂ ಉದ್ದೇಶಿತ ತರಬೇತಿಯ ಮಿಶ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಮಂಜುಪೀಡಿತ ಪ್ರದೇಶಗಳಲ್ಲಿ ಚಾಲನೆ ಮಾಡುವುದಕ್ಕೆ ನೆರವಾಗಲೆಂದು ಲೋಕೋ ಪೈಲಟ್‌ಗಳಿಗೆ ಜಿಪಿಎಸ್ ಆಧಾರಿತ ‘-ಗ್ -ಸ್’ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವುದು ಈ ಉಪಕ್ರಮದ ಒಂದು ಮೂಲಾಧಾರವಾಗಿದೆ; ೨೦೧೪-೧೫ರಲ್ಲಿ ಕೇವಲ ೯೦ರಷ್ಟು ಇದ್ದ ಇವುಗಳ ಸಂಖ್ಯೆ ಈಗ ೨೧,೭೪೨ಕ್ಕೆ ಏರಿದೆ. ಪೈಲಟ್ ಜಾಗರೂಕತೆಯನ್ನು ಹೆಚ್ಚಿಸಲು ಎಲ್ಲಾ ಲೋಕೊಮೋಟಿವ್‌ಗಳಲ್ಲಿ ವಿಚಕ್ಷಣಾ ನಿಯಂತ್ರಣ
ಸಾಧನಗಳನ್ನು (ವಿಸಿಡಿ) ಸ್ಥಾಪಿಸಲಾಗಿದೆ. ಇವುಗಳ ಸಂಖ್ಯೆ ೨೦೧೩-೧೪ರಲ್ಲಿ ೧೦,೦೦೦ಕ್ಕಿಂತ ಕಡಿಮೆ ಇದ್ದುದು ಪ್ರಸ್ತುತ ೧೬,೦೨೧ಕ್ಕೆ ಏರಿದೆ. ಬ್ರಾಡ್ ಗೇಜ್ ಮಾರ್ಗಗಳಲ್ಲಿನ ೬೬೩೭ ನಿಲ್ದಾಣಗಳ ಪೈಕಿ ೬೫೭೫ರಲ್ಲಿ ಪ್ಯಾನಲ್ ಇಂಟರ್‌ಲಾಕಿಂಗ್, ರೂಟ್ ರಿಲೇ ಇಂಟರ್‌ಲಾಕಿಂಗ್ ಮತ್ತು ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಂಥ ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ಇದಲ್ಲದೆ, ಲೋಕೋಪೈಲಟ್‌ಗಳ ಚಾಲನಾ ಕೌಶಲ ಮತ್ತು ಪ್ರತಿಕ್ರಿಯೆಯ ಸಮಯವನ್ನು ಸುಧಾರಿಸಲು ಸಿಮ್ಯುಲೇಟರ್ ಆಧಾರಿತ ತರಬೇ
ತಿಗೆ (ಕ್ಷೇತ್ರ ಅನುಭವವನ್ನು ಅನುಕರಿಸುವಿಕೆ) ಅವರನ್ನು ತೊಡಗಿಸಲಾಗಿದೆ. ಮುಂಚೂಣಿಸಿಬ್ಬಂದಿ, ಅಗ್ನಿಶಾಮಕ ಸಾಧನಗಳ ಬಳಕೆಯಲ್ಲಿ
ತರಬೇತಿ ಪಡೆದಿದ್ದಾರೆ. ಒಟ್ಟಾರೆಯಗಿ, ೨೦೨೩- ೨೪ರ ಅವಽಯಲ್ಲಿ ೬ ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರು ವಿವಿಧ ರೀತಿಯ ತರಬೇತಿಗೆ, ಅಂದರೆ ಆರಂಭಿಕ, ಭಡ್ತಿ ಸಂಬಂಽತ, ಪುನರ್‌ಮನನ (ರಿಫೆರ್ಷರ್) ಹಾಗೂ ವಿಶೇಷ ತರಬೇತಿಗೆ ಒಳಗಾಗಿದ್ದಾರೆ.‌

ಇದನ್ನೂ ಓದಿ: Ranjith H Ashwath Column: ಪ್ರತಿಷ್ಠೆಯೇ ಈ ಉಪಸಮರದ ಮೂಲ

ಮಾನವ ಸುರಕ್ಷತೆಯ ಹೊರತಾಗಿ, ಭಾರತೀಯ ರೈಲ್ವೆಯು ೨೦೨೪-೨೫ರಲ್ಲಿ ಹಳಿಗಳ ಉದ್ದಕ್ಕೂ ೬೪೩೩ ಕಿ.ಮೀ.ನಷ್ಟು ಬೇಲಿಯನ್ನು ನಿರ್ಮಿಸುವ ಮೂಲಕ ವನ್ಯಜೀವಿ ಮತ್ತು ಜಾನುವಾರು ರಕ್ಷಣೆಯ ಸಮಸ್ಯೆಯನ್ನು ಪರಿಹರಿಸುತ್ತಿದೆ. ೨೦೨೪ರ ಆಗಸ್ಟ್ ವೇಳೆಗೆ ೧೩೯೬ ಕಿ.ಮೀ. ಬೇಲಿ ಪೂರ್ಣಗೊಂಡಿದ್ದು, ಇದು ಈ ಮಾರ್ಗಗಳಲ್ಲಿನ ಜಾನುವಾರು ಡಿಕ್ಕಿ ಪ್ರಕರಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ಕ್ರಮಗಳಿಗೆ
ಪೂರಕವಾಗಿ, ಎಲ್‌ಎಚ್‌ಬಿ ಬೋಗಿಗಳತ್ತ ಗಮನವನ್ನು ಕೇಂದ್ರೀಕರಿಸಲಾಗಿದ್ದು, ಅವು ಅಪಘಾತ- ನಿರೋಧಕ ವೈಶಿಷ್ಟ್ಯಗಳನ್ನು ಹೊಂದಿವೆ. ರೈಲುಗಳು ಹಳಿತಪ್ಪುವ ಮತ್ತು ಪ್ರಯಾಣಿಕರು ಗಾಯಗೊಳ್ಳುವ ಸಾಧ್ಯತೆಗಳನ್ನು ಇವು ಕಡಿಮೆ ಮಾಡುತ್ತವೆ. ಅಪಘಾತ ಸಂದರ್ಭಗಳಲ್ಲಿ ಒಂದರ ಮೇಲೊಂದು ಏರುವುದನ್ನು ತಪ್ಪಿಸುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದ್ದು, ಗಂಟೆಗೆ ೧೬೦ ಕಿ.ಮೀ. ವೇಗದಲ್ಲಿ ಚಲಿಸುವಾಗಲೂ ಸುರಕ್ಷಿತವಾಗಿರುವಂತೆ ಇವನ್ನು ನಿರ್ಮಿಸಲಾಗಿದೆ. ೨೦೨೩-೨೪ ರಲ್ಲಿ ೪೯೭೭ ಎಲ್‌ಎಚ್‌ಬಿ ಕೋಚ್‌ಗಳನ್ನು ತಯಾರಿಸಲಾಗಿದ್ದು, ಇದು ೨೦೧೩-೧೪ರಲ್ಲಿ ಉತ್ಪಾದಿಸಲಾದ ಕೋಚ್ ಗಳಿಗಿಂತ (೨೪೬೭) ಎರಡು ಪಟ್ಟು ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಭಾರತೀಯ ರೈಲುಗಳು ಪ್ರಯಾಣಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ.

(ಲೇಖಕರು ಇನ್- ರೈಲ್ವೆ ಮಂಡಳಿಯ ನಿವೃತ್ತ ಸದಸ್ಯರು, ಪದನಿಮಿತ್ತ ಕಾರ್ಯದರ್ಶಿ, ಭಾರತ ಸರಕಾರ)